ಜಿಯೋ ಮುಂದಿನ ಆಫರ್ ಯಾವುದು ಗೊತ್ತಾ?..ಮತ್ತೆ ನಡುಗಲಿದೆ ಟೆಲಿಕಾಂ ಪ್ರಪಂಚ!!
4ಜಿ ಸೇವೆಗಳು ಮತ್ತು ಜಿಯೋ ಫೋನಿನಿಂದ ಭಾರತದ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನು ಹುಟ್ಟಿಹಾಕಿದ್ದ ಜಿಯೋ ಇದೀಗ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲು ಸಜ್ಜಾಗಿದೆ.
4ಜಿ ಸೇವೆಗಳು ಮತ್ತು ಜಿಯೋ ಫೋನಿನಿಂದ ಭಾರತದ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನು ಹುಟ್ಟಿಹಾಕಿದ್ದ ಜಿಯೋ ಇದೀಗ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲು ಸಜ್ಜಾಗಿದೆ. ಬರುವ ಆಗಸ್ಟ್ ತಿಂಗಳ ವೇಳೆಗೆ ಸ್ಪೀಡ್ ಇಂಟರ್‌ನೆಟ್ ಫೈಬರ್ ಬ್ರಾಡ್'ಬ್ಯಾಂಡ್ ಸೇವೆಯನ್ನು ರಿಲಾಯನ್ಸ್ ಜಿಯೋ ಆರಂಭಿಸುತ್ತಿದೆ ಎಂಬ ಸಿಹಿಸುದ್ದಿ ಹೊರಬಿದ್ದಿದೆ.
ರಿಲಯನ್ಸ್ ಜಿಯೋ ತನ್ನ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ಸೆಪ್ಟೆಂಬರ್ 2016 ರಿಂದಲೇ ಪರೀಕ್ಷಿಸುತ್ತಿದ್ದು, ಕೆಲ ಆಯ್ದ ಗ್ರಾಹಕರಿಗೆ ಈಗಾಗಲೇ ಬ್ರಾಡ್ಬ್ಯಾಂಡ್ ಸೇವೆಯನ್ನು ಜಿಯೋ ಒದಗಿಸುತ್ತಿದೆ. ಜಿಯೋ ಬ್ರಾಡ್ಬ್ಯಾಂಡ್ ಯೋಜನೆಯು ಬಹುತೇಕ ಯಶಸ್ವಿಯಾಗಿದ್ದು, ತನ್ನ ಬಹುನಿರೀಕ್ಷೆಯ ಸೇವೆಯನ್ನು ದೇಶದಾಧ್ಯಂತ ಬಹುಬೇಗ ನೀಡಲು ಜಿಯೋ ಮುಂದಾಗಿದೆ.

ಆರು ತಿಂಗಳ ಕಾಲ ಉಚಿತ 4G ಸೇವೆಗಳೊಂದಿಗೆ ಟೆಲಿಕಾಂ ಜಗತ್ತಿನಲ್ಲಿ ಅಲೆಗಳನ್ನು ಸೃಷ್ಟಿಸಿ ಮತ್ತು ಇಲ್ಲಿಯವರೆಗೂ ಕೇಳರಿಯದ ರೀತಿಯಲ್ಲಿ ಅಗ್ಗದ ಯೋಜನೆಗಳನ್ನು ನೀಡಿದ್ದ ಜಿಯೋ ಈಗ ಕಡಿಮೆ ವೆಚ್ಚದ ಫೈಬರ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಮೂಲಕ ಸೇವೆ ನೀಡುತ್ತಿದೆ. ಹಾಗಾದರೆ, ಜಿಯೋ ಬ್ರಾಡ್‌ಬ್ಯಾಂಡ್ ಸೇವೆ ಹೇಗಿದರಲಿದೆ ಎಂಬ ಮಾಹಿತಿಯನ್ನು ಮುಂದೆ ತಿಳಿಯಿರಿ.

ಫೈಬರ್-ಟು-ದಿ-ಹೋಮ್!!
ಫೈಬರ್-ಟು-ದಿ-ಹೋಮ್ (FTTH) ಮಾದರಿಯ ಆಧಾರದ ಮೇಲೆ, ಜಿಯೋ ಫೈಬರ್ ಸೇವೆಗಳು VoIP (ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್) ಫೋನ್ ಮತ್ತು ಜಿಯೊ ಟಿವಿಗಳ ಜತೆಗೆ ಅನಿಯಮಿತ ಕರೆ ಮಾಡುವ ಸೇವೆ ಒಳಗೊಂಡಿರುತ್ತದೆ. ಹಾಗಾಗಿ, ಈ ಸೇವೆ ಟೆಲಿಕಾಂನಲ್ಲಿ ಮತ್ತೆ ಮಿಂಚಿನ ಸಂಚಾರವನ್ನು ಉಂಟುಮಾಡಲಿದೆ.

3 ತಿಂಗಳ ಉಚಿತ ಸೇವೆ!!
ಜಿಯೋಫೈಬರ್ ಕಡಿಮೆ ವೆಚ್ಚದ ಫೈಬರ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಇದಾಗಿರುವುದರಿಂದ ಜಿಯೋ ಇಲ್ಲಿಯೂ ಕೆಲ ತಿಂಗಳೂ ಉಚಿತ ಸೇವೆಯನ್ನು ನೀಡಲಿದೆ ಎಂದು ತಿಳಿದುಬಂದಿದೆ. ಈ ಸೇವೆಯನ್ನು ಪ್ರಾರಂಭಿಸುವ ಮೂಲಕ ಮೊದಲ ಕೆಲವು ತಿಂಗಳು ಉಚಿತ ಇಂಟರ್ನೆಟ್ ಸೇವೆಗಳನ್ನು ಹೆಚ್ಚಿನ ವೇಗದಲ್ಲಿ ಪೂರೈಸಲು ಜಿಯೋ ತಯಾರಿಯನ್ನು ನಡೆಸಿದೆ.

ಶೇ. 20ರಷ್ಟು ಅಗ್ಗದಲ್ಲಿ ಡೇಟಾ!!
ಮಾರುಕಟ್ಟೆಯಲ್ಲಿ ಈಗಿರುವ ಬ್ರಾಡ್ ಬ್ಯಾಂಡ್ ಸೇವೆಗಳಿಗಿಂತ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಶೇ. 20ರಷ್ಟು ಅಗ್ಗವಾಗಿರಲಿದೆ ಎನ್ನಲಾಗಿದೆ! ಅಂದರೆ ಇ ಯೋಜನೆ ಬೆಲೆ ಒಂದು ಸಾವಿರಗಿಂತ ಕಡಿಮೆಯಿರುವ ಸಾಧ್ಯತೆಯಿದೆ. 100MBPS ವೇಗದಲ್ಲಿ 100 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಡೇಟಾ ದೊರೆಯಲಿದೆ.

ಕುಸಿಯುತ್ತಿವೆ ಬ್ರಾಡ್ಬ್ಯಾಂಡ್ ಬೆಲೆ!!
ರಿಲಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಶುರುವಾಗಲಿದೆ ಎನ್ನುವಾಗಲೇ ಇತರೆ ಬ್ರಾಡ್ ಬ್ಯಾಂಡ್ ಸೇವಾ ಕಂಪೆನಿಗಳೂ ತಮ್ಮ ಚಂದಾದಾರರನ್ನು ಉಳಿಸಿಕೊಳ್ಳಲು ತಮ್ಮ ಪ್ಲಾನ್ ಗಳ ಬೆಲೆಯನ್ನು ಕಡಿತಗೊಳಿಸಲು ಪ್ರಾರಂಭಿಸಿದ್ದಾರೆ. ಜಿಯೋಫೈಬರ್ ಬ್ರಾಡ್ಬ್ಯಾಂಡ್ ಸೇವೆ ಬ್ರಾಡ್ಬ್ಯಾಂಡ್ ವಲಯದಲ್ಲಿ ಅಲೆಯನ್ನು ತರಲಿದೆ ಎಂಬ ವಿಷಯ ಎಲ್ಲಾ ಕಂಪನಿ ಗಳಿಗೂ ತಿಳಿದಿದೆ.


ಮಾರುಕಟ್ಟೆ ತಲ್ಲಣ!
ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಏಕಸ್ವಾಮ್ಯದತ್ತ ಹೆಜ್ಜೆ ಹಾಕುತ್ತಿದ್ದು, ಇದೀಗ ಬ್ರಾಡ್ ಬ್ಯಾಂಡ್ ಸೇವೆ ಮಾರುಕಟ್ಟೆಯಲ್ಲಿ ತಲ್ಲಣ ಉಂಟುಮಾಡಲಿದೆ! ಗ್ರಾಹಕರು ಇಂಟರ್ನೆಟ್ ಸೇವೆ, ಕರೆ, ವಿಡಿಯೋ ಕಾಲಿಂಗ್ ಜೊತೆ ಟಿವಿಯನ್ನು ಕೂಡ ನೋಡಬಹುದಾದ ಈ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಬಂದರೆ ಭಾರತದ ಇಂಟರ್‌ನೆಟ್ ಕ್ಷೇತ್ರ ಮತ್ತೆ ಬದಲಾಗಲಿದೆ.


Click it and Unblock the Notifications








