ಬೆಂಗಳೂರು ನಗರದಲ್ಲಿ ''ಉಚಿತ ವೈಫೈ'' ಭಾಗ್ಯ ಕರುಣಿಸಿದ ಜಿಯೋ!!

ನಗರದ ವಸತಿ ಪ್ರದೇಶವೊಂದರಲ್ಲಿ ಇದೇ ಮೊದಲ ಬಾರಿಗೆ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, ಆ ಪ್ರದೇಶದ ಜನರು ಉಚಿತ ಅಂತರ್ಜಾಲವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.!!

|

ಯಶಸ್ಸಿನ ಅಲೆಯಲ್ಲಿತೇಲಾಡುತ್ತಿರುವ ರಿಲಾಯನ್ಸ್ ಜಿಯೋ ಕಂಪೆನಿ ಬೆಂಗಳೂರು ನಗರಕ್ಕೆ ಉಚಿತ ವೈಫೈ ಭಾಗ್ಯವನ್ನು ಕರುಣಿಸಿದೆ.! ನಗರದ ವಸತಿ ಪ್ರದೇಶವೊಂದರಲ್ಲಿ ಇದೇ ಮೊದಲ ಬಾರಿಗೆ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, ಆ ಪ್ರದೇಶದ ಜನರು ಉಚಿತ ಅಂತರ್ಜಾಲವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.!!

ಹೌದು, ಬಿಬಿಎಂಪಿಯ ಗೋವಿಂದರಾಜನಗರ ವಾರ್ಡ್‌ನ ನಾಗರಬಾವಿ ಪ್ರದೇಶಕ್ಕೆ ಜಿಯೋ ಉಚಿತ ವೈಫೈ ಅನ್ನು ನೀಡಿದೆ. ನಾಗರಬಾವಿ ಮುಖ್ಯರಸ್ತೆಯ ಟೆಲಿಫೋನ್‌ ಎಕ್ಸ್‌ಚೇಂಜ್‌ನಿಂದ ರಾಷ್ಟ್ರೀಯ ಕಾನೂನು ಶಾಲೆಯವರೆಗೆ ಉಚಿತ ವೈಫೈ ಸೇವೆ ಒದಗಿಸಲಾಗುತ್ತಿದೆ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ.!!

ಬೆಂಗಳೂರು ನಗರದಲ್ಲಿ ''ಉಚಿತ ವೈಫೈ'' ಭಾಗ್ಯ ಕರುಣಿಸಿದ ಜಿಯೋ!!

ಉಚಿತ ವೈಫೈ ಸೇವೆ ಒದಗಿಸಲೆಂದೇ ಜಿಯೋ ಈ ಯೋಜನೆಗಾಗಿ ಭಾರೀ ಬಂಡವಾಳವನ್ನು ಸಹ ಹೂಡಿದ್ದು, ಹಾಗಾದರೆ, ಜಿಯೋ ಎಷ್ಟು ಉಚಿತ ವೈಫೈ ಅನ್ನು ನೀಡಿದೆ? ಉಚಿತ ವೈಫೈ ಸೌಲಭ್ಯ ಬಳಕೆ ಮಾಡಿಕೊಳ್ಳುವುದು ಹೇಗೆ? ಇದರಿಂದ ಜಿಯೋಗೇನು ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನಾಗರಬಾವಿ ರಸ್ತೆಯಲ್ಲಿ ವೈಫೈ!!

ನಾಗರಬಾವಿ ರಸ್ತೆಯಲ್ಲಿ ವೈಫೈ!!

ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ನಾಗರಬಾವಿ ಮುಖ್ಯರಸ್ತೆಯಲ್ಲಿ ನಿತ್ಯ ಸಾವಿರಾರು ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರು ಓಡಾಡುವುದರಿಂದ ಅವರಿಗೂ ಮತ್ತು ಅಲ್ಲಿನ ನಿವಾಸಿಗಳಿಗೂ ಜಿಯೋ ಉಚಿತ ವೈಫೈ ಲಭ್ಯವಾಗಲಿದೆ.!!

2.50 ಕೋಟಿ ರೂ.ವೆಚ್ಚ!!

2.50 ಕೋಟಿ ರೂ.ವೆಚ್ಚ!!

ನಾಗರಬಾವಿ ಮುಖ್ಯರಸ್ತೆಯಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಸಲುವಾಗಿ ರಿಲಯನ್ಸ್ ಜಿಯೋ ಕಂಪೆನಿ 2.50 ಕೋಟಿ ರೂ. ವೆಚ್ಚ ಮಾಡಿದೆ. ಇದಲ್ಲದೇ ಬೆಂಗಳೂರು ಮಹಾನಗರ ಪಾಲಿಕೆಗೆ 24 ಲಕ್ಷ ರೂ. ಶುಲ್ಕವನ್ನು ಕೂಡ ಜಿಯೋ ಪಾವತಿಸಿದೆ ಎಂದು ತಿಳಿದುಬಂದಿದೆ.!!

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಎಷ್ಟು ಉಚಿತ ವೈಫೈ ಲಭ್ಯ?

ಎಷ್ಟು ಉಚಿತ ವೈಫೈ ಲಭ್ಯ?

ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಸಲುವಾಗಿ 2.50 ಕೋಟಿ ರೂ. ವೆಚ್ಚ ಮಾಡಿರುವ ಜಿಯೋ ಮಿತಿಯಿಲ್ಲದ ಅಂತರ್ಜಾಲ ಸಂಪರ್ಕವನ್ನು ನೀಡಲು ಮುಂದಾಘಿದೆ. ಹಾಗಾಗಿ, ನಾಗರಭಾವಿ ಮುಖ್ಯ ರಸ್ತೆಯ ಮಧ್ಯದಿಂದ ಎರಡೂ ಬದಿಯ 50 ಮೀಟರ್‌ ವ್ಯಾಸದಲ್ಲಿ ಯಾರೂ ಬೇಕಾದರೂ ಅನ್‌ಲಿಮಿಟೆಡ್ ಡೇಟಾ ಬಳಕೆ ಮಾಡಿಕೊಳ್ಳಬಹುದು.!!

ಅಂತರ್ಜಾಲ ಬಳಕೆ ವೇಗ ಎಷ್ಟು?

ಅಂತರ್ಜಾಲ ಬಳಕೆ ವೇಗ ಎಷ್ಟು?

ದಿನದ 24 ಗಂಟೆಗಳ ಕಾಲ ಉಚಿತವಾಗಿ ವೈಫೈ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶವಿರುವ ಜಿಯೋ ವೈಫೈ ವೇಗ 3 ರಿಂದ 4 ಎಂಬಿಪಿಎಸ್ ಆಗಿದೆ. ವೈಫೈ ಸಂಪರ್ಕಕ್ಕಾಗಿ ಈಗಾಗಲೇ 15 ಸ್ಮಾರ್ಟ್‌ ಪೋಲ್‌ಗಳನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲಿಯೇ ಉಚಿತ ವೈಫೈ ನಾಗರಬಾವಿ ಮುಖ್ಯರಸ್ತೆಯ ಜನರಿಗೆ ದೊರೆಯಲಿದೆ.!!

ಜಿಯೋಗೆ ಏನು ಲಾಭ?

ಜಿಯೋಗೆ ಏನು ಲಾಭ?

ದಿನದ 24 ಗಂಟೆಗಳ ಕಾಲ ಉಚಿತವಾಗಿ ವೈಫೈ ನೀಡುವುದರಿಂದ ಜಿಯೋ ಕಂಪೆನಿ ತನ್ನ ಸೇವೆಗಳನ್ನು ಹೆಚ್ಚು ಜನರಿಗೆ ತಲುಪಿಸಲು ಮುಂದಾಗಿದೆ. ಜಿಯೋ ಉಚಿತ ವೈಫೈ ನೀಡುವ ಅತ್ಯಂತ ದೊಡ್ಡ ಪ್ರಯೋಜನವೆಂದರೆ, ವೈಫೈ ಮೂಲಕ ಜನರು ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಸಿದರೆ ಗ್ರಾಹಕರು ಮುಂದೆ ಉಳಿಯಲು ಒಲವು ತೋರುತ್ತಾರೆ. ಮತ್ತು ಜಾಹಿರಾತು ಆದಾಯ ಹೆಚ್ಚುತ್ತದೆ ಎಂದು ತಿಳಿಯಬಹುದಾಗಿದೆ.!!

Best Mobiles in India

English summary
Free WiFi hotspots called jio WiFi will be functional on agarbhavi road. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X