ಬಿಎಸ್ಎನ್ಎನ್‌ನ ಪ್ರಮುಖ ಆರು ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳಲ್ಲಿ ಬದಲಾವಣೆ!
ಜಿಯೋ ಗಿಗಾಫೈಬರ್ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್ಎನ್ಎಲ್) ಇದೀಗ ತನ್ನ FTTH ಬ್ರಾಡ್ ಬ್ಯಾಂಡ್ ಪ್ಲಾನ್ ಗಳಲ್ಲಿ ಬದಲಾವಣೆ ಮಾಡಿದ್ದು ಹೆಚ್ಚು ಡಾಟಾವನ್ನು ನೀಡಲು ಮುಂದಾಗಿದೆ.

ಈ ಪ್ಲಾನ್ ಗಳು Rs.777, Rs.1277,Rs 3,999, Rs 5,999, Rs 9,999 ಮತ್ತು Rs 16,999 ಬೆಲೆಯ ಪ್ಲಾನ್ ಗಳಾಗಿದೆ.

ಬಿಎಸ್ಎನ್ಎಲ್ Rs.777 ಪ್ಲಾನ್
ಆರಂಭಿಕ ಬೆಲೆ Rs.777 ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಈ ಮೊದಲು ಬಿಎಸ್ಎನ್ಎಲ್ ಫೈಬ್ರೋ ಕೋಂಬೋ ULD 777 ಎನ್ನಲಾಗುತ್ತಿತ್ತು ಇದೀಗ 18ಜಿಬಿ ಪ್ಲಾನ್ ಎಂದು ಹೇಳಲಾಗುತ್ತದೆ. ಈ ಪ್ಲಾನ್ ಇದೀಗ 50Mbps ಸ್ಪೀಡ್ ನಲ್ಲಿ ಮತ್ತು FUP ಲಿಮಿಟ್ ಮುಗಿದ ನಂತರ 2Mbps ಸ್ಪೀಡ್ ನಲ್ಲಿ ಲಭ್ಯವಾಗುತ್ತದೆ.

ಬಿಎಸ್ಎನ್ಎಲ್ Rs.1,277 ಪ್ಲಾನ್
Rs. 1,277 ಬ್ರಾಡ್ ಬ್ಯಾಂಡ್ ಪ್ಲಾನ್ ಇದೀಗ 25ಜಿಬಿ ಡಾಟಾ ಪ್ರತಿದಿನ 100Mbps ಸ್ಪೀಡ್ ನಲ್ಲಿ ನೀಡುತ್ತದೆ. FUP ಲಿಮಿಟ್ ಮುಗಿದ ನಂತರ ಸ್ಪೀಡ್ 2Mbps ಗೆ ಇಳಿಮುಖವಾಗುತ್ತದೆ.

ಬಿಎಸ್ಎನ್ಎಲ್ Rs. 3,999 ಪ್ಲಾನ್
ಫೈಬ್ರೋ ಕೋಂಬೋ ULD 3999 ಇದೀಗ ಪ್ರತಿದಿನ 50GB ಡಾಟಾವನ್ನು 100Mbps ಸ್ಪೀಡ್ ನಲ್ಲಿ ಪ್ರತಿದಿನ ನೀಡುತ್ತದೆ ಮತ್ತು FUP ಲಿಮಿಟ್ ಮುಗಿದ ನಂತರ 4Mbps ಸ್ಪೀಡ್ ನಲ್ಲಿ ಲಭ್ಯವಾಗುತ್ತದೆ. ಅಂದರೆ ಈ ಪ್ಲಾನ್ ನಲ್ಲಿ 750 GB ಡಾಟಾ ಲಭ್ಯವಾಗುತ್ತದೆ.

ಬಿಎಸ್ಎನ್ಎಲ್ Rs. 5,999 ಪ್ಲಾನ್
Rs. 5,999 ಪ್ಲಾನ್ ನಿಮಗೆ 80GBವನ್ನು ನೀಡುತ್ತದೆ. ಈ ಮೊದಲು 1250GB ಡಾಟಾವನ್ನು 100Mbps ಸ್ಪೀಡ್ ನಲ್ಲಿ ನೀಡಲಾಗುತ್ತಿತ್ತು. ಆದರೆ FUPಲಿಮಿಟ್ ಅದೇ ರೀತಿ ಫಿಕ್ಸ್ ಆಗಿದ್ದು 6Mbps ಸ್ಪೀಡ್ ಗೆ ನಿಗದಿಯಾಗಿದೆ.

ಬಿಎಸ್ಎನ್ಎಲ್ Rs. 9,999 ಪ್ಲಾನ್
ಈ ಪ್ಲಾನಿನ ಅಡಿಯಲ್ಲಿ ಪ್ರತಿದಿನ 120GB ಡಾಟಾವನ್ನು ಬಳಕೆ ಮಾಡಬಹುದು. ಅದರ ಸ್ಪೀಡ್ ಪ್ರತಿದಿನ 100Mbps ಆಗಿರುತ್ತದೆ ಮತ್ತು FUP ಲಿಮಿಟ್ ಮುಗಿದ ನಂತರ 8Mbps ಸ್ಪೀಡ್ ಗೆ ಇಳಿಮುಖವಾಗಲಿದೆ.

ಬಿಎಸ್ಎನ್ಎಲ್ Rs.1,6999
ಕೊನೆಯದಾಗಿ ಬದಲಾಗಿರುವ Rs. 16,999 ಪ್ಲಾನ್ 3500 GB ಡಾಟಾ ಬದಲಾಗಿ 170 GB ಡಾಟಾವನ್ನು ಪ್ರತಿದಿನ ನೀಡುತ್ತದೆ. ಇದರ ಜೊತೆಗೆ ಹೊಸದಾಗಿ 40ಜಿಬಿ ಪ್ಲಾನ್ ಬಿಡುಗಡೆಯನ್ನು ಕೂಡ ಬಿಎಸ್ಎನ್ಎಲ್ ಪ್ರಕಟಿಸಿದೆ.
ಹೊಸದಾಗಿ ಬಿಡುಗಡೆಗೊಂಡಿರುವ 40GB ಪ್ಲಾನ್ ಪ್ರತಿದಿನ 100 Mbps ಸ್ಪೀಡ್ ನಲ್ಲಿ ಮಾಸಿಕ Rs. 2,499 ನಲ್ಲಿ ನೀಡುತ್ತದೆ. ಆದರೆ ದಿನಿನಿತ್ಯದ FUP ಲಿಮಿಟ್ ಮುಗಿದ ನಂತರದ ಸ್ಪೀಡ್ ಇಳಿಮುಖವಾಗುತ್ತದೆ.ಬಿಎಸ್ಎನ್ಎಲ್ ದೇಶದಾದ್ಯಂತ FTTH ಸೇವೆಗಳನ್ನು ನೀಡುವ ಎಲ್ಲಾ ಪ್ರದೇಶಗಳಲ್ಲೂ ಈ ಪ್ಲಾನ್ ನ್ನು ನೀಡುತ್ತದೆ.


Click it and Unblock the Notifications








