Just In
- 34 min ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 2 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 5 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
Don't Miss
- News
ಉಡುಪಿಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ: ಶಾಸಕ ಕೆ. ರಘುಪತಿ ಭಟ್ ಸಂದರ್ಶನ
- Movies
ಏಜೆಯನ್ನು ಮುದ್ದಾಗಿ ಕಾಡಿದ ಲೀಲಾಳನ್ನು ಕಂಡು ಹಲ್ಲು ಮಸೆಯುತ್ತಿರುವ ದುರ್ಗಾ!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು ಬಹಿರಂಗಗೊಳ್ಳಲಿವೆ ಜಿಯೋ ಗಿಗಾ ಫೈಬರ್ ಮತ್ತು ಜಿಯೋ ಫೋನ್ 3!
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 42 ನೇ ವಾರ್ಷಿಕ ಸಾಮಾನ್ಯ ಸಭೆಯು (ಐಪಿಒ ನಂತರದ) 2019 ರ ಆಗಸ್ಟ್ 12 ರ ಸೋಮವಾರ ಮುಂಬೈನ ಬಿರ್ಲಾ ಮಾತುಶ್ರಿ ಸಭಗರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ನಡೆಯಲಿದ್ದು, ಇಂದು ನಡೆಯುವ ಸಭೆಯಲ್ಲಿ ಜಿಯೋ ಫೋನ್ 3 ಮತ್ತು ಜಿಯೋ ಗಿಗಾ ಫೈಬರ್‌ನ ವಾಣಿಜ್ಯ ಬಿಡುಗಡೆ ಯೋಜನೆಗಳು ಇಂದು ಬಹಿರಂಗಗೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷದ ಎಜಿಎಂನಲ್ಲಿ ಜಿಯೋ ಗಿಗಾ ಫೈಬರ್ ಸೇವೆ ಇಂದು ವಾಣಿಜ್ಯವಾಗಿ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಹೇಳಲಾಗಿದೆ.

ಹೌದು, 42 ನೇ ರಿಲಯನ್ಸ್ ಇಂಡಸ್ಟ್ರೀಸ್ ಎಜಿಎಂ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶರಾದಕ ಮುಖೇಶ್ ಅಂಬಾನಿ ಷೇರುದಾರರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇದನ್ನು ದಿ ಫ್ಲೇಮ್ ಆಫ್ ಟ್ರುತ್ ಮತ್ತು ಜಿಯೋ ಚಾನೆಲ್‌ಗಳ ಮೂಲಕ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದು ಟ್ವಿಟರ್ ಮತ್ತು ಆರ್‌ಐಎಲ್ ಹಾಗೂ ಜಿಯೋ ಪುಟಗಳ ಮೂಲಕ ಫೇಸ್‌ಬುಕ್‌ನಲ್ಲಿ ಪ್ರಸಾರವಾಗಲಿದೆ.
ಯೂಟ್ಯೂಬ್ (https://www.youtube.com/user/flameoftruth), ಜಿಯೋಚಾನೆಲ್ (https://www.youtube.com/jio), ಫೇಸ್‌ಬುಕ್ (https://www.facebook.com/RelianceIndustriesLimited), ಜಿಯೋ (https://www.facebook.com/Jio), ಟ್ವಿಟರ್ (https://twitter.com/flameoftruth) ಮತ್ತು ಜಿಯೋ ಟಿವಿ RelianceJio (https://twitter.com/reliancejio) ಲಿಂಕ್‌ಗಳ ಮೂಲಕ ನೀವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 42 ನೇ ವಾರ್ಷಿಕ ಸಾಮಾನ್ಯ ಸಭೆ ಯನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

ನಾವು ಮೊದಲೇ ಹೇಳಿದಂತೆ, ಜಿಯೋ ತನ್ನ ಜಿಯೋ ಗಿಗಾ ಫೈಬರ್ ಫೈಬರ್-ಟು-ಹೋಮ್ (ಎಫ್‌ಟಿಟಿಎಚ್) ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮತ್ತು ಸ್ಮಾರ್ಟ್ ಹೋಮ್ ಸೊಲ್ಯೂಷನ್ಸ್ ಸೇವೆಯನ್ನು ಕಳೆದ ವರ್ಷದ ಎಜಿಎಂನಲ್ಲಿ ಅಧಿಕೃತವಾಗಿ ಘೋಷಿಸಿದೆ. ಆದರೆ, ಇದು 2016 ರಿಂದಲೂ ಪರೀಕ್ಷೆಯಲ್ಲಿದ್ದು, ಇಂದು ಗಿಗಾ ಫೈಬರ್ ಸೇವೆಯನ್ನು ದೇಶದ 1,100 ನಗರಗಳಿಗೆ ನೀಡುವುದಾಗಿ ಹೇಳಲಾಗುತ್ತಿದೆ. ಗಿಗಾ ಫೈಬರ್ ಮೂಲಕ ಮನೆಗಳು, ವ್ಯಾಪಾರಿಗಳು ಸೇರಿದಂತೆ ದೊಡ್ಡ ಉದ್ಯಮಗಳೆಲ್ಲವನ್ನೂ ಗುರಿಯಾಗಿರಿಸಿಕೊಳ್ಳಲಾಗಿದೆ.
ಕಳೆದೆರಡು ತಿಂಗಳ ಹಿಂದಷ್ಟೇ ಜಿಯೋ ಗಿಗಾ ಫೈಬರ್‌ನಲ್ಲಿ ಆಸಕ್ತಿಗಾಗಿ ನೋಂದಣಿಗಳನ್ನು ತೆರೆಯಲಾಗಿದೆ. ಇದು ಎಷ್ಟು ಆಸಕ್ತಿಯನ್ನು ಪಡೆಯುತ್ತದೆ ಎಂಬುದರ ಆಧಾರದ ಮೇಲೆ ಸೇವೆಯ ಸ್ಥಳವಾರು ಬಿಡುಗಡೆ ಮಾಡುವ ಆದ್ಯತೆ ನೀಡಲಾಗುತ್ತದೆ ಎಂದು ಜಿಯೋ ಹೇಳಿದೆ. ಇತ್ತೀಚಿನ ಪರೀಕ್ಷೆಯಲ್ಲಿ, ಗಿಗಾ ಫೈಬರ್ ಬಳಕೆದಾರರಿಗೆ ಬಳಕೆಗಾಗಿ ಶುಲ್ಕ ವಿಧಿಸಲಾಗುವುದಿಲ್ಲ,. ಆದರೂ ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ವಿಧಿಸಲಾಗುತ್ತಿದೆ - ಇದು 2.500 ರೂ. ಗಳಿಂದ ರೂ. 4,500 ರಿಂದ ರೂ. ಇರಬಹುದು ಎನ್ನುತ್ತಿವೆ ಮಾಧ್ಯಮ ವರದಿಗಳು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470