Home
ಸುದ್ದಿಜಾಲ

ಜಿಯೋ ಗಿಗಾ ಫೈಬರ್: ಯಾವೆಲ್ಲಾ ರಾಜ್ಯದಲ್ಲಿ ಬಿಡುಗಡೆಗೊಳ್ಳಲಿದೆ ಗೊತ್ತಾ?

ರಿಲಯನ್ಸ್ ಜಿಯೋ ತನ್ನ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ನ್ನು ಭಾರತಾದ್ಯಂತ ನೀಡುವ ಬಗ್ಗೆ ಕಳೆದ ಕೆಲವು ತಿಂಗಳ ಹಿಂದೆ ಪ್ರಕಟಿಸಿದೆ. ಇದೀಗ ಕಂಪೆನಿಯು ಈ ಬ್ರಾಡ್ ಬ್ಯಾಂಡ್ ಕನೆಕ್ಷನ್ ನ ಅಂತಿಮ ಹಂತದ ಟೆಸ್ಟಿಂಗ್ ನ್ನು ಪೂರ್ಣಗೊಳಿಸುತ್ತಿದ್ದು ತನ್ನ ಬ್ರಾಡ್ ಬ್ಯಾಂಡ್ ಸೇವೆಯನ್ನು ದೇಶದ ಜನರಿಗೆ ನೀಡುವುದಕ್ಕೆ ಕ್ಷಣಗಣನೆ ಮಾಡುತ್ತಿದೆ.

ಜಿಯೋ ಗಿಗಾ ಫೈಬರ್: ಯಾವೆಲ್ಲಾ ರಾಜ್ಯದಲ್ಲಿ ಬಿಡುಗಡೆಗೊಳ್ಳಲಿದೆ ಗೊತ್ತಾ?

ಜಿಯೋ ಕಳೆದ ಎರಡು ವರ್ಷದಿಂದ FTTH ಸೇವೆಯನ್ನು ದೇಶದಲ್ಲಿ ಒದಗಿಸುವ ಬಗ್ಗೆ ಟೆಸ್ಟಿಂಗ್ ನಡೆಸುತ್ತಿದೆ ಮತ್ತು ಏರ್ ಟೆಲ್ ಬ್ರಾಡ್ ಬ್ಯಾಂಡ್ ಮತ್ತು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಗಳ ಜೊತೆಗೆ ಸ್ಪರ್ಧೆಗಿಳಿಯಲು ಸಿದ್ಧವಾಗುತ್ತಿದೆ. ಗಿಗಾಫೈಬರ್ ಬಿಡುಗಡೆಯ ನಂತರ ಕಂಪೆನಿಯು ಮನೆಮನೆಯಲ್ಲೂ ಅಂತರ್ಜಾಲ ಸೇವೆ ಒದಗಿಸಿ ಇತರೆ ಕಂಪೆನಿಗಳ ಜೊತೆಗೆ ಸ್ಪರ್ಧೆಯ ಮಟ್ಟವನ್ನು ಹೆಚ್ಚಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಸದ್ಯಕ್ಕೆ ಯಾವಾಗ ಕಂಪೆನಿಯು ತನ್ನ ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಆದರೆ ನಮ್ಮ ಬಳಿ ಯಾವ ರಾಜ್ಯಗಳಿಗೆ ಕಂಪೆನಿಯು ಪ್ರಾಮುಖ್ಯತೆಯನ್ನು ನೀಡಲಿದೆ ಮತ್ತು ಬ್ರಾಡ್ ಬ್ಯಾಂಡ್ ಸೇವೆಯನ್ನು ಜಿಯೋ ಯಾವ ರಾಜ್ಯಗಳಿಂದ ಆರಂಭಿಸುತ್ತದೆ ಎಂಬ ಬಗೆಗಿನ ಪಟ್ಟಿ ಇದೆ.

ಮೊದಲ ಗಿಗಾಫೈಬರ್ ಬಿಡುಗಡೆಯಾಗುವ ರಾಜ್ಯಗಳ ಪಟ್ಟಿಯಲ್ಲಿ ಈ ಕೆಳಗಿನವುಗಳಿವೆ :

ಮೊದಲ ಗಿಗಾಫೈಬರ್ ಬಿಡುಗಡೆಯಾಗುವ ರಾಜ್ಯಗಳ ಪಟ್ಟಿಯಲ್ಲಿ ಈ ಕೆಳಗಿನವುಗಳಿವೆ :

ಗುಜರಾತ್

ದೆಹಲಿ

ತೆಲಂಗಾಣ

ರಾಜಸ್ಥಾನ

ಪಶ್ಚಿಮ ಬಂಗಾಳ

ಆಂಧ್ರ ಪ್ರದೇಶ

ಮಹಾರಾಷ್ಟ್ರ

ಗಿಗಾಫೈಬರ್ ಬಿಡುಗಡೆಯಾಗುವ ರಾಜ್ಯಗಳ ಎರಡನೇ ಪಟ್ಟಿಯಲ್ಲಿ ಈ ಕೆಳಕಂಡ ರಾಜ್ಯಗಳು ಸೇರಿವೆ

ಗಿಗಾಫೈಬರ್ ಬಿಡುಗಡೆಯಾಗುವ ರಾಜ್ಯಗಳ ಎರಡನೇ ಪಟ್ಟಿಯಲ್ಲಿ ಈ ಕೆಳಕಂಡ ರಾಜ್ಯಗಳು ಸೇರಿವೆ

ಪಂಜಾಬ್

ಹರಿಯಾಣ

ಉತ್ತರ ಪ್ರದೇಶ

ತಮಿಳುನಾಡು

ಕರ್ನಾಟಕ

ಮೂರನೇ ಹಂತದ ರಿಲಯನ್ಸ್ ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಆರಂಭವಾಗುವ ರಾಜ್ಯಗಳ ಪಟ್ಟಿ ಈ ಕೆಳಕಂಡಂತಿದೆ

ಮಧ್ಯ ಪ್ರದೇಶ

ಕೇರಳ

ಜಮ್ಮು ಮತ್ತು ಕಾಶ್ಮೀರ

ಬಿಹಾರ

ಗೋವಾ

ಜಾರ್ಖಂಡ್

ಉತ್ತರಾಖಂಡ

ಓರಿಸ್ಸಾ

ಹಿಮಾಚಲ ಪ್ರದೇಶ

ಛತ್ತೀಸ್ ಗಢ

3 ತಿಂಗಳ ಅವಧಿಗೆ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಜಿಯೋ ಗಿಗಾಫೈಬರ್ ಮೂಲಕ ಗ್ರಾಹಕರು ಎಂಜಾಯ್ ಮಾಡಬಹುದು. ಒಂದು ವೇಳೆ ನೀವು ಕೂಡ ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲು ಆಸಕ್ತರಾಗಿದ್ದಲ್ಲಿ ಪ್ರಾಥಮಿಕವಾಗಿ 4,500 ರುಪಾಯಿ ಡೆಪಾಸಿಟ್ ಇಡಬೇಕು. ಅದು ಜಿಯೋ ಗಿಗಾಫೈಬರ್ ರೂಟರ್ ಗಾಗಿ ಮತ್ತು ಜಿಯೋಟಿವಿ ರೂಟರ್ ಗಾಗಿ. ಈ ಮೊತ್ತವನ್ನು ನಿಮಗೆ ಕನೆಕ್ಷನ್ ಹಿಂಪಡೆದಾಗ ಮರುಪಾವತಿ ಮಾಡಲಾಗುತ್ತದೆ.

ಪ್ಲಾನ್ ಗಳ ಬಗ್ಗೆ ಮಾತನಾಡುವುದಾದರೆ, ಇದುವರೆಗೂ ಯಾವ ರೀತಿಯ ಗಿಗಾಫೈಬರ್ ಪ್ಲಾನ್ ಗಳು ಇರಲಿವೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ ಕಂಪೆನಿಯು ಆರಂಭಿಕವಾಗಿ 500 ರುಪಾಯಿಯಿಂದ ಪ್ಲಾನ್ ನ್ನು ಆರಂಭಿಸುತ್ತದೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವೇ ಆದರೆ ಇತರೆ ಬ್ರಾಡ್ ಬ್ಯಾಂಡ್ ಸೇವಾ ನಿರತರು ಈಗ ಸ್ಪರ್ಧೆಗೆ ಸಿದ್ಧಗೊಳ್ಳಲೇಬೇಕಾಗಿದೆ ಮತ್ತು ತಮ್ಮನ್ನ ತಾವು ರಕ್ಷಿಸಿಕೊಳ್ಳಬೇಕಾಗಿದೆ ಇಲ್ಲದೇ ಇದ್ದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ.

ಜಿಯೋ ಗಿಗಾಫೈಬರ್ ಸೇವೆಯನ್ನು ಪಡೆಯಲು ಅರ್ಹತೆ ಪಡೆದಿರುವ ನಗರಗಳ ಪಟ್ಟಿ ಈ ಕೆಳಗಿದೆ

ಜಿಯೋ ಗಿಗಾಫೈಬರ್ ಸೇವೆಯನ್ನು ಪಡೆಯಲು ಅರ್ಹತೆ ಪಡೆದಿರುವ ನಗರಗಳ ಪಟ್ಟಿ ಈ ಕೆಳಗಿದೆ

ಬೆಂಗಳೂರು

ಚೆನೈ

ಪುಣೆ

ಲಕ್ನೋ

ಕಾನ್ಫುರ

ರಾಯ್ ಪುರ

ನಾಗಪುರ

ಇಂಡೋರ್

ತಾಣೆ

ಭೋಪಾಲ್

ಗಾಝಿಯಾಬಾದ್

ಲುದಿಯಾನ

ಕೋಯಂಬತ್ತೂರ್

ಆಗ್ರಾ

ಮಧುರೈ

ನಾಸಿಕ್

ಫರಿದಾಬಾದ್

ಮೀರತ್

ರಾಜ್ ಕೋಟ್

ಶ್ರೀನಗರ

ಅಮೃತ್ ಸರ

ಪಾಟ್ನಾ

ಅಲಹಾಬಾದ್

ರಾಂಚಿ

ಜೋಧ್ ಪುರ

ಕೋಟಾ

ಗೌಹಾಟಿ

ಚಂಡೀಗಡ

ಸೋಲಾಪುರ

Best Mobiles in India

English summary
Jio GigaFiber: List of states in which it will be launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+