Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ 'ಪಬ್‌ಜಿ ಲೈಟ್' ಗಿಫ್ಟ್ ಆಫರ್!

ಪಬ್‌ಜಿ' ಎಂದೇ ಹೆಸರಾಗಿರುವ ಜನಪ್ರಿಯ ಗೇಮ್ 'ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್‌ಗ್ರೌಂಡ್ಸ್' ಇದೀಗ 'ಪಬ್‌ಜಿ ಲೈಟ್' ಆವೃತ್ತಿಯಲ್ಲಿ ಬಿಡುಗಡೆಯಾಗಿರುವುದು ಗೇಮಿಂಗ್ ಪ್ರಿಯರಿಗೆ ತಿಳಿಸಿದೆ ಎನ್ನಬಹುದು. ಆದರೆ, ಮತ್ತೊಂದು ಸಿಹಿಸುದ್ದಿ ಏನೆಂದರೆ, ಬಳಕೆದಾರರ ಪಾಲಿಗೆ ಆಟದ ಹೊಸ ಆವೃತ್ತಿಯ ಅನುಭವವನ್ನು ಉತ್ತಮಪಡಿಸುವ ಹಾಗೂ ಅದನ್ನು ಇನ್ನೂ ಆಕರ್ಷಕವಾಗಿಸುವ ಉದ್ದೇಶದಿಂದ, ಪಬ್‌ಜಿ ಲೈಟ್ ಹಾಗೂ ಜಿಯೋ ಪರಸ್ಪರ ಕೈಜೋಡಿಸಿವೆ.

ಜಿಯೋ ಗ್ರಾಹಕರಿಗೆ 'ಪಬ್‌ಜಿ ಲೈಟ್' ಗಿಫ್ಟ್ ಆಫರ್!

ಹೌದು, ಪಬ್‌ಜಿ ಲೈಟ್‌ಗಾಗಿ ನೋಂದಾಯಿಸಿಕೊಳ್ಳುವ ಜಿಯೋ ಬಳಕೆದಾರರು ತಮ್ಮ ಇನ್‌ಗೇಮ್ ಮರ್ಚಂಡೈಸ್‌ಗಾಗಿ ಉಚಿತವಾಗಿ ವಿಶಿಷ್ಟ ಕೊಡುಗೆಗಳನ್ನು ಆನಂದಿಸಬಹುದು. ಈ ಹೊಸ ಯುಗದ ಡಿಜಿಟಲ್ ಅನುಭವಗಳನ್ನು ಬಳಕೆದಾರರಿಗೆ ತಲುಪಿಸುವ ತಮ್ಮ ಉದ್ದೇಶಕ್ಕೆ ಪೂರಕವಾದ ಎರಡು ಅಪ್ರತಿಮ ಹಾಗೂ ಪ್ರೀತಿಪಾತ್ರ ಬ್ರಾಂಡ್‌ಗಳ ಜೊತೆಗೂಡುವಿಕೆಯನ್ನು ಭಾರತದಲ್ಲಿನ ಈ ವಿಶಿಷ್ಟ ಜತೆಗಾರಿಕೆ ಪ್ರತಿನಿಧಿಸುತ್ತಿದೆ ಎಂದು ಎರಡೂ ಸಂಸ್ಥೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಪಬ್‌ಜಿ ಲೈಟ್‌ನಲ್ಲಿ ಈ ವಿಶಿಷ್ಟ ಅನುಭವ ಪಡೆದುಕೊಳ್ಳಲು ಜಿಯೋ ಗ್ರಾಹಕರು https://gamesarena.jio.com ತಾಣಕ್ಕೆ ಭೇಟಿನೀಡಿ ಎರಡು ಹಂತದ ಸರಳ ನೋಂದಣಿ ನಮೂನೆಯನ್ನು ತುಂಬಿಸಬೇಕಾಗುತ್ತದೆ. ಆನಂತರ ಅವರು ತಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ವೆರಿಫಿಕೇಶನ್ ಲಿಂಕ್ ಅನ್ನು ಪಡೆಯಲಿದ್ದಾರೆ. ವೆರಿಫಿಕೇಶನ್ ಪೂರ್ಣಗೊಂಡ ನಂತರ ಇನ್ನೊಂದು ಇಮೇಲ್ ಸಂದೇಶದಲ್ಲಿ ವಿಶಿಷ್ಟ ರಿಡೆಂಪ್ಷನ್ ಕೋಡ್ ಅನ್ನು ಬಳಕೆದಾರರಿಗೆ ಕಳುಹಿಸಲಾಗುವುದು ಮತ್ತು ಅವರು ಅದನ್ನು ಆಟದೊಳಗೆ ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.

ಜಿಯೋ ಗ್ರಾಹಕರಿಗೆ 'ಪಬ್‌ಜಿ ಲೈಟ್' ಗಿಫ್ಟ್ ಆಫರ್!

ಪಬ್‌ಜಿ ಲೈಟ್ ಅನ್ನು ಡೌನ್‌ಲೋಡ್ ಮಾಡಿ ನೋಂದಾಯಿಸಿಕೊಂಡ ನಂತರ ರಿಡೆಂಪ್ಷನ್ ಕೋಡ್ ಬಳಸುವುದು ಹೇಗೆ? ಎಂಬುದು ಸಹ ಸುಲಭವಾಗಿದೆ. ಜಿಯೋ ಬಳಕೆದಾರರು ಮೆನು ಸ್ಟೋರ್‌ಗೆ ಹೋಗಬಹುದು. ಮೆನು ಆಯ್ಕೆಗಳಲ್ಲಿ ಅವರು 'Add Bonus / Gift Code' ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿರುವ ಖಾಲಿ ಜಾಗದಲ್ಲಿ ರಿಡೆಂಪ್ಷನ್ ಕೋಡ್ ಅನ್ನು ಹಾಕಿ 'redeem' ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ತಮ್ಮ ರಿಡೆಂಪ್ಷನ್ ಕೋಡ್ ಬಳಸಬಹುದು ಎಂದು ಜಿಯೋ ಸಲಹೆ ನೀಡಿದೆ.

ಭಾರತದ ಜನಪ್ರಿಯ ಗೇಮ್ ಆಗಿರುವ ಪಬ್‌ಜಿ ಗೇಮ್ ಬಗ್ಗೆ ಬಹುತೇಕ ಗೇಮಿಂಗ್ ಪ್ರಿಯರಿಗೆ ತಿಳಿದಿರುತ್ತದೆ. ಯಶಸ್ವಿ ಗೇಮ್ ಆಗಿರುವ ಪಬ್‌ಜಿ ಗೇಮ್ ಇದೀಗ 'ಪಬ್‌ಜಿ ಲೈಟ್' ಆವೃತ್ತಿಯಾಗಿ ತನ್ನ ಬೀಟಾ ಸೇವೆಯ ಪ್ರಾರಂಭವನ್ನು ಆರಂಭಿಸಸಿದೆ. ಉಚಿತವಾಗಿ ಆಡಬಹುದಾದ 'ಪಬ್‌ಜಿ ಲೈಟ್' ಗೇಮ್ ಕಡಿಮೆ ಸಾಮರ್ಥ್ಯದ ಕಂಪ್ಯೂಟರುಗಳಿಗೂ ಸೂಕ್ತವಾಗಿದ್ದು, ಆಪ್ಟಿಮೈಸ್ಡ್ ಗೇಮ್‌ಪ್ಲೇ ಹಾಗೂ ಗ್ರಾಫಿಕ್ಸ್‌ನೊಂದಿಗೆ ತಲ್ಲೀನಗೊಳಿಸುವ ಹಾಗೂ ವಿಶಾಲವಾದ ಗೇಮಿಂಗ್ ಅನುಭವವನ್ನು ನೀಡುತ್ತದೆ.

Best Mobiles in India

English summary
Jio gives free gifts to PUBG LITE players: Jio subscribers can get free in-game skins. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+