Home
ಸುದ್ದಿಜಾಲ

ಜಿಯೋ ಟೆಲಿಕಾಂನಿಂದ ಎರಡು ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್‌ ಬಿಡುಗಡೆ!

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್‌ ಜಿಯೋ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ತನ್ನ ಆಕರ್ಷಕ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಪ್ರಯೋಜನ ನೀಡುವ ಅನೇಕ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಗಾಗಿ ಎರಡು ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಎರಡು ಪ್ಲಾನ್‌ಗಳು ಜಿಯೋ ಸಂಖ್ಯೆಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರೀಮಿಯಂ ಸದಸ್ಯತ್ವವನ್ನು ನೀಡಲಿವೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ತನ್ನ ಗ್ರಾಹಕರಿಗೆ ಎರಡು ಹೊಸ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಪ್ರೀಮಿಯಂ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು ಒಂದು ವರ್ಷದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಪ್ರೀಮಿಯಂ ಪ್ರಯೋಜನವನ್ನು ನೀಡಲಿವೆ. ಈ ಪ್ಲಾನ್‌ಗಳ ಮೂಲಕ ನೀವು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸ್ಟ್ರೀಮಿಂಗ್‌ ಅನ್ನು ಒಂದು ವರ್ಷದ ಅವಧಿಯ ತನಕ ಪಡೆದುಕೊಳ್ಳಬಹುದಾಗಿದೆ. ಇವುಗಳಲ್ಲಿ ಮೊದಲನೆಯ ಪ್ಲಾನ್‌ 1,499ರೂ.ಬೆಲೆ ಹೊಂದಿದ್ದರೆ, ಎರಡನೇ ಪ್ಲಾನ್‌ 4,199ರೂ ಬೆಲೆಯನ್ನು ಹೊಂದಿರಲಿದೆ. ಹಾಗಾದ್ರೆ ಈ ಎರಡು ಪ್ಲಾನ್‌ಗಳ ವಿಶೇಷತೆ ಏನು? ಇದನ್ನು ಆಕ್ಟಿವೇಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಲಯನ್ಸ್ ಜಿಯೋ 1,499ರೂ. ಪ್ಲಾನ್‌

ರಿಲಯನ್ಸ್ ಜಿಯೋ 1,499ರೂ. ಪ್ಲಾನ್‌

ಜಿಯೋ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ ಎರಡು ಹೊಸ ಪ್ಲಾನ್‌ಗಳಲ್ಲಿ ಮೊದಲನೆಯ ಪ್ಲಾನ್‌ ಇದಾಗಿದೆ. ಈ ಪ್ಲಾನ್‌ ನಿಮಗೆ ಒಂದು ವರ್ಷದ ತನಕ ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ನೀವು ಜಿಯೋದ 719ರೂ. ಯೋಜನೆಯ ಪ್ರಯೋಜನಗಳನ್ನು ಒಂದು ತಿಂಗಳಿಗೆ ಪೂರಕವಾಗಿ ಪಡೆಯಬಹುದು. 719ರೂ. ಪ್ಲಾನ್‌ ನಿಮಗೆ ದೈನಂದಿನ 2GB ಡೇಟಾವನ್ನು ನೀಡಲಿದೆ. ಇದು 84 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿನಿತ್ಯ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಸೌಲಭ್ಯ ದೊರೆಯಲಿದೆ. ಹೆಚ್ಚಿವರಿಯಾಗಿ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

ರಿಲಯನ್ಸ್ ಜಿಯೋ 4,199ರೂ. ಪ್ಲಾನ್‌

ರಿಲಯನ್ಸ್ ಜಿಯೋ 4,199ರೂ. ಪ್ಲಾನ್‌

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ಗಾಗಿ ಜಿಯೋ ಪರಿಚಯಿಸಿರುವ ಎರಡನೇ ಪ್ಲಾನ್‌ ಇದಾಗಿದೆ. ಈ ಪ್ಲಾನ್‌ 4,199 ರೂ.ಬೆಲೆಯನ್ನು ಹೊಂದಿದ್ದ, ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಸೌಲಭ್ಯ ನೀಡಲಿದೆ. ಜೊತೆಗೆ ಅನಿಯಮಿತ ಡೇಟಾದೊಂದಿಗೆ ಜಿಯೋದ ಸ್ವಂತ ಸೆಲ್ಯುಲಾರ್ ಪ್ಲಾನ್‌ ಒಳಗೊಂಡಿದೆ. ಇದು ಒಂದು ವರ್ಷದ ಮಾನ್ಯತೆಯೊಂದಿಗೆ ಪ್ರತಿನಿತ್ಯ 3GB ಡೇಟಾವನ್ನು ನೀಡಲಿದೆ. ಅಲ್ಲದೆ ಇದು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಪ್ಲಾನ್‌ಗಳನ್ನು ಸಕ್ರಿಯಗೊಳಿಸುವುದು ಹೇಗೆ?

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಪ್ಲಾನ್‌ಗಳನ್ನು ಸಕ್ರಿಯಗೊಳಿಸುವುದು ಹೇಗೆ?

ಜಿಯೋ ಟೆಲಿಕಾಂ ಪರಿಚಯಿಸಿರುವ ಹೊಸ 1,499ರೂ. ಅಥವಾ 4,199ರೂ.ಪ್ಲಾನ್‌ಗಳನ್ನು ಬಳಕೆದಾರರು ರೀಚಾರ್ಜ್ ಮಾಡಿದರೆ ಅವರು ತಮ್ಮ MyJio ಖಾತೆಯಲ್ಲಿ ವಿಶಿಷ್ಟವಾದ ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಕೂಪನ್ ಕೋಡ್ ಅನ್ನು ಸ್ವೀಕರಿಸುತ್ತಾರೆ. ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸದಸ್ಯತ್ವವನ್ನು ಪಡೆಯಲು ಬಳಕೆದಾರರು ನಂತರ ಈ ಕೂಪನ್ ಅನ್ನು ಬಳಸಬಹುದು. ಇದನ್ನು ಸಕ್ರಿಯಗೊಳಿಸಲು, ಬಳಕೆದಾರರು Hotstar ವೆಬ್‌ಸೈಟ್‌ಗೆ ಹೋಗಬೇಕು ಮತ್ತು ಅವರ Jio ಸಂಖ್ಯೆಗಳೊಂದಿಗೆ ಸೈನ್ ಇನ್ ಮಾಡಬಹುದು. ನಂತರ ಅವರು ತಮ್ಮ ಕೂಪನ್ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಇದರ ಮೂಲಕ ಸಕ್ರಿಯಗೊಳಿಸುವಿಕೆಯ ದೃಢೀಕರಣವನ್ನು ಒದಗಿಸಿದ ನಂತರ ಚಂದಾದಾರಿಕೆ ಪ್ಲಾನ್‌ ಸಕ್ರಿಯಗೊಳ್ಳಲಿದೆ.

ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಎಂದರೇನು?

ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಎಂದರೇನು?

ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರೀಮಿಯಂ ಚಂದಾದಾರಿಕೆಯು ಬಳಕೆದಾರರು ತಮ್ಮ ಮೆಚ್ಚಿನ ವಿಷಯವನ್ನು ಏಕಕಾಲದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ 4K ಯಲ್ಲಿ ಆನಂದಿಸಲು ಅನುಮತಿಸುತ್ತದೆ. ಈ ಸೇವೆಯನ್ನು ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸಂಪರ್ಕಿತ ಟಿವಿಗಳಲ್ಲಿ ಬಳಸಬಹುದು. ಈ ಸೇವೆಯಲ್ಲಿ ಲೈವ್ ಸ್ಪೋರ್ಟ್ಸ್‌ , ಹಾಟ್‌ಸ್ಟಾರ್ ವಿಶೇಷ ವಿಷಯ, ಡಿಸ್ನಿ+ ಚಲನಚಿತ್ರಗಳು ಮತ್ತು ಡಿಸ್ನಿ+ ಮೂಲ ವಿಷಯವನ್ನು ಒಳಗೊಂಡಿದೆ. ಇವೆಲ್ಲವೂ 4K ಗುಣಮಟ್ಟದಲ್ಲಿ ಮತ್ತು ಒಂದು ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Jio has introduced new plans for the Disney+ Hotstar premium subscription
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+