ಜಿಯೋ ಎಫೆಕ್ಟ್..ಇದೇ ಮೊದಲು 3 ತಿಂಗಳ ವ್ಯಾಲಿಡಿಟಿ ಆಫರ್ ಘೋಷಿಸಿದ ಏರ್‌ಟೆಲ್!!
ಕೇವಲ 4G ಗ್ರಾಹಕರನ್ನು ಗುರಿಯಾಗಿಸಿಕೊಂಡು ಏರ್‌ಟೆಲ್ ಈ ಆಫರ್ ನೀಡಿದ್ದು, ನೇರವಾಗಿ ಜಿಯೋ ಜೊತೆ 4G ದರಸಮರದಲ್ಲಿ ಮಾತ್ರ ಭಾಗವಹಿಸಿದೆ.!
ಜಿಯೋ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಏರ್‌ಟೆಲ್ ಇದೀಗ ತನ್ನ ಬಳಕೆದಾರರಿಗೆ ಏರ್‌ಟೆಲ್ ಮಾನ್ಸೂನ್ ಆಫರ್ ಅನ್ನು ನೀಡಿದೆ.!! ಜುಲೈ ಒಂದನೇ ತಾರೀಖಿನಿಂದಲೇ ಏರ್‌ಟೆಲ್ ಮಾನ್ಯೂನ್ ಆಫರ್ ಲಭ್ಯವಿದ್ದು, ಮೂರುತಿಂಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ಅನ್ನು ಗ್ರಾಹಕರು ಪಡೆಯಬಹುದಾಗಿದೆ.!!
ಕೇವಲ 4G ಗ್ರಾಹಕರನ್ನು ಗುರಿಯಾಗಿಸಿಕೊಂಡು ಏರ್‌ಟೆಲ್ ಈ ಆಫರ್ ನೀಡಿದ್ದು, ನೇರವಾಗಿ ಜಿಯೋ ಜೊತೆ 4G ದರಸಮರದಲ್ಲಿ ಮಾತ್ರ ಭಾಗವಹಿಸಿದೆ.! ಹಾಗಾದರೆ, ಏರ್ಟೆಲ್ ನೀಡಿರುವ ಹೊಸ ಆಫರ್‌ನಲ್ಲಿ ಏನಿದೆ ? ಜಿಯೋಗೆ ಸೆಡ್ಡು ಹೊಡೆದಿದೆಯೇ? ಎಂಬೆಲ್ಲಾ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏರ್ಟೆಲ್ ಮಾನ್ಯೂನ್ ಆಫರ್ ಹೇಗಿದೆ!?
ಜಿಯೋ ಆಫರ್‌ಗಳಿಗೆ ವಿರುದ್ದವಾಗಿ ಏರ್‌ಟೆಲ್ ಈ ಆಫರ್ ನೀಡಿದ್ದು, ಏರ್‌ಟೆಲ್‌ನ 499 ರುಪಾಯಿ ಮೇಲ್ಪಟ್ಟ ಗ್ರಾಹಕರಿಗೆ ಈ ಆಫರ್ ಲಭ್ಯವಿದೆ.!! ರೂ. 499, ರೂ. 649 ಮತ್ತು ರೂ. 799 ಆಫರ್‌ಗಳನ್ನು ರೀಚಾರ್ಜ್ ಮಾಡಿಕೊಂಡರೆ ಮೂರು ತಿಂಗಳಿಗೆ 30GB ಹೆಚ್ಚು ಡೇಟಾ ಪಡೆಯಬಹುದಾಗಿದೆ.!!

ಅನ್‌ಲಿಮಿಟೆಡ್ ಕಾಲ್ ಸೇವೆ!!
ರೂ. 499, ರೂ. 649 ಮತ್ತು ರೂ. 799 ಮೂರ ಆಫರ್‌ಗಳು ಸಹ ಅನ್‌ಲಿಮಿಟೆಡ್ ಕಾಲ ಸೇವೆಯನ್ನು ಹೊಂದಿವೆ. ರೂ. 499,ಗೆ ಮೂರತಿಂಗಳಿಗೆ 45GB ಡೇಟಾ ಪಡೆಯಬಹುದು. ರೂ. 649 ಮತ್ತು ರೂ. 799ಗಳಿಗೆ ಕ್ರಮವಾಗಿ 52GB ಮತ್ತು 60GB ಡೇಟಾ ಪಡೆಯಬಹುದು.!!!

ಮೂರು ತಿಂಗಳ ವ್ಯಾಲಿಡಿಟಿ.!!
ಇದೇ ಮೊದಲ ಬಾರಿಗೆ ಏರ್ಟೆಲ್ ಮೂರು ತಿಂಗಳ ವ್ಯಾಲಿಡಿಟಿ ಆಫರ್ ಘೋಷಿಸಿದ್ದು, ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಈ ಬಗ್ಗೆ ಈ ಮೇಲ್ ಮೂಲಕ ಮಾಹಿತಿ ಬಿಡುಗಡೆ ಮಾಡಿದ್ದಾರೆ.!! ಮೂರು ತಿಂಗಳು ವ್ಯಾಲಿಡಿಟಿ ಹೊತ್ತು ಬರುತ್ತಿರುವ ಮೊದಲ ಆಫರ್ ಇದಾಗಿದೆ.!!

ಆಫರ್ ಪಡೆಯುವುದು ಹೇಗೆ?
ಏರ್‌ಟೆಲ್ ಮಾನ್ಯೂನ್ ಆಫರ್ ಪಡೆಯಲು ಏರ್‌ಟೆಲ್ ಗ್ರಾಹಕರು 'AIRTel TV' ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. 499 ರುಪಾಯಿ ಮೇಲ್ಪಟ್ಟ ರೀಚಾರ್ಜ್ ಮಾಡಿಸಿಕೊಂಡಿದ್ದರೆ ಆಪ್ ಮೂಲಕ ಕ್ಲೈಮ್ ಮಾಡಿಕೊಳ್ಳಬಹುದು.!!

ಪೋಸ್ಟ್‌ಪೇಡ್ ಗ್ರಾಹಕರಿಗೆ ಮಾತ್ರ!!
ಏರ್‌ಟೆಲ್ ಮಾನ್ಯೂನ್ ಆಫರ್ ಕೇವಲ ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ತನ್ನ ನೆಚ್ಚಿನ ಗ್ರಾಹಕರನ್ನು ಸಂತೈಸಲು ಮಾತ್ರ ಈ ಆಫರ್ ನೀಡಿದೆ ಎಂದು ಇಂಗ್ಲೀಷ್ ಪತ್ರಿಕೆಗಳು ವರದಿ ಮಾಡಿವೆ.!!


Click it and Unblock the Notifications








