ಜಿಯೋದ ಯಾವ ಪ್ಲ್ಯಾನ್ ಜಾಸ್ತಿ ರೀಚಾರ್ಜ್ ಆಗಿದೆ, ಎಂದು ತಿಳಿಯೋದು ಈಗ ಸುಲಭ!
ದೇಶದ ಮುಂಚೂಣಿಯ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಹಲವು ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದೀಗ ಜಿಯೋ ತನ್ನ ಯೋಜನೆಗಳಿಗೆ ಹೊಸ ಬ್ಯಾನರ್‌ಗಳು ಅಥವಾ ಬೆಸ್ಟ್ ಸೆಲ್ಲರ್ಸ್, ಸೂಪರ್ ವ್ಯಾಲ್ಯೂ ಮತ್ತು ಟ್ರೆಂಡಿಂಗ್‌ನಂತಹ ಲೇಬಲ್‌ಗಳೊಂದಿಗೆ ಟ್ಯಾಗ್ ಮಾಡಲು ಪ್ರಾರಂಭಿಸಿದೆ. ಇತರೆ ಚಂದಾದಾರರು ಹೆಚ್ಚಾಗಿ ಯಾವ ಪ್ಲ್ಯಾನ್ ಖರೀದಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಬ್ಯಾನರ್‌ಗಳು ನೆರವಾಗಲಿವೆ.

ಜಿಯೋ ಟೆಲಿಕಾಂ ಪ್ಲ್ಯಾನ್‌ಗಳನ್ನು ಸೂಪರ್ ವ್ಯಾಲ್ಯೂ ಬ್ಯಾನರ್, ಬೆಸ್ಟ್ ಸೆಲ್ಲರ್ ಬ್ಯಾನರ್ ಮತ್ತು ಟ್ರೆಂಡಿಂಗ್ ಬ್ಯಾನರ್ ಎಂಬ ಮೂರು ಬ್ಯಾನರ್ ಹೆಸರಿನಿಂದ ಗುರುತಿಸಿದೆ. ಬೆಸ್ಟ್ ಸೆಲ್ಲರ್ ಬ್ಯಾನರ್ ಅಡಿಯಲ್ಲಿ ನಾಲ್ಕು ಪ್ರಿಪೇಯ್ಡ್ ಯೋಜನೆಗಳನ್ನು, ಸೂಪರ್ ವ್ಯಾಲ್ಯೂ ಬ್ಯಾನರ್‌ನಲ್ಲಿ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಮತ್ತು ಟ್ರೆಂಡಿಂಗ್ ಬ್ಯಾನರ್ ಅಡಿಯಲ್ಲಿ ಒಂದು ಪ್ರಿಪೇಯ್ಡ್ ಯೋಜನೆಯನ್ನು ಜಿಯೋ ಟ್ಯಾಗ್ ಮಾಡಿದೆ.

ಜಿಯೋ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಈ ಮೂರು ಹೊಸ ಬ್ಯಾನರ್‌ಗಳನ್ನು ಕೆಲವು ಯೋಜನೆಗಳಿಗೆ ತೋರಿಸಿದೆ. ಅವುಗಳಲ್ಲಿ ಜಿಯೋ 349ರೂ. ಯೋಜನೆಯು ಟ್ರೆಂಡಿಂಗ್ ಬ್ಯಾನರ್ ನಡಿ ಕಾಣಿಸಿಕೊಂಡಿದ್ದು, ಈ ಯೋಜನೆಯು ಪ್ರತಿದಿನ 3GB ಹೈಸ್ಪೀಡ್ ಡೇಟಾ, ಅನಿಯಮಿತ ವಾಯಿಸ್ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಮೆಸೆಜ್‌ಗಳ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಪಡೆದಿದೆ. ಹಾಗೆಯೇ JioTV, JioCinema, JioNews, JioSecurity ಮತ್ತು JioCloud ನಂತಹ ಅಪ್ಲಿಕೇಶನ್‌ಗಳು ಸಹ ಉಚಿತ ಚಂದಾದಾರಿಕೆಯಲ್ಲಿ ಸಿಗಲಿವೆ.

ಸೂಪರ್ ವ್ಯಾಲ್ಯೂ ಬ್ಯಾನರ್‌ನಡಿ ಎರಡು ಜಿಯೋ ಪ್ರಿಪೇಯ್ಡ್ ಯೋಜನೆಗಳನ್ನು ಗುರುತಿಸಲಾಗಿದೆ. ಅವುಗಳ ಕ್ರಮವಾಗಿ 249ರೂ ಮತ್ತು 2,599ರೂ. ಆಗಿವೆ. ಜಿಯೋ 249ರೂ. ಯೋಜನೆಯು 28 ದಿನಗಳ ಮಾನ್ಯತೆ ಪಡೆದಿದೆ. ಹಾಗೆಯೇ ಜಿಯೋ 2,599ರೂ. ಯೋಜನೆಯು 365 ದಿನಗಳ ಮಾನ್ಯತೆ ಪಡೆದಿದೆ. ಇದರೊಂದಿಗೆ ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ ಪ್ರಯೋಜನಗಳು ಸಿಗಲಿವೆ. ಹಾಗೆಯೇ ಜಿಯೋ ಬೆಸ್ಟ್ ಸೆಲ್ಲರ್ ಬ್ಯಾನರ್ ಅಡಿಯಲ್ಲಿ 199ರೂ, 555ರೂ. 599ರೂ. ಮತ್ತು 2,399ರೂ. ಯೋಜನೆಗಳು ಕಾಣಿಸಿಕೊಂಡಿವೆ.

ಜಿಯೋ 199ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 1.5 ಜಿಬಿ ಡೇಟಾ, ದಿನಕ್ಕೆ 100 ಎಸ್‌ಎಂಎಸ್ ಮತ್ತು 28 ದಿನಗಳವರೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ 555ರೂ. ಪ್ರಿಪೇಯ್ಡ್ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪಡೆದಿದೆ. 599ರೂ. ಪ್ರಿಪೇಯ್ಡ್ ಯೋಜನೆಯು 2 ಜಿಬಿ ದೈನಂದಿನ ಡೇಟಾ, ದಿನಕ್ಕೆ 100 ಎಸ್‌ಎಂಎಸ್ ಮತ್ತು 84 ದಿನಗಳ ವ್ಯಾಲಿಡಿಟಿ ಪಡೆದಿದೆ. ಆದರೆ 2,399 ಪ್ರಿಪೇಯ್ಡ್ ಯೋಜನೆಯು ವಾರ್ಷಿಕ ವ್ಯಾಲಿಡಿಟಿ ಪಡೆದಿದ್ದು, ಡೇಟಾ, ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯ ಹೊಂದಿದೆ.


Click it and Unblock the Notifications








