Just In
- 1 hr ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 2 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 3 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 3 hrs ago
ಏರ್‌ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Movies
ಬಾಲಿವುಡ್ 'ಕ್ವೀನ್' ಕಂಗನಾ ಅಲ್ಲ ದೀಪಿಕಾ ಪಡುಕೋಣೆ: ಕತ್ರಿನಾ ಕೈಫ್, ಆಲಿಯಾ ಲೆಕ್ಕಕ್ಕಿಲ್ಲ!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದ ನಂ.1 ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿದ 'ಜಿಯೋ'!
ಭಾರತದ ನಂ. 1 ಟೆಲಿಕಾಂ ಕಂಪೆನಿಯಾಗಿ ಮುಖೇಶ್ ಅಂಬಾನಿ ನೇತೃತ್ವದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಹೊರಹೊಮ್ಮಿದೆ. ಇತ್ತೀಚಿಗಷ್ಟೇ ಏರ್‌ಟೆಲ್ ಕಂಪೆನಿಯನ್ನು ಹಿಂದಿಕ್ಕಿದ್ದ ಜಿಯೋ, ಇದೀಗ ವೊಡಾಫೋನ್-ಐಡಿಯಾ ಸಮೂಹದ ಅತಿಹೆಚ್ಚಿನ ಬಳಕೆದಾರರ ಸಮೂಹವನ್ನು ಸಹ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಅಂದರೆ, ರಿಲಯನ್ಸ್ ಜಿಯೋ ಈಗ ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದುವ ಮೂಲಕ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಹೊರಹೊಮ್ಮಿದೆ.

ಹೌದು, ದೇಶದಲ್ಲಿ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೇವಲ ಮೂರು ವರ್ಷಗಳಲ್ಲೇ ರಿಲಯನ್ಸ್ ಜಿಯೋ ಒಟ್ಟು 331.3 ಮಿಲಿಯನ್ (33.13 ಕೋಟಿ) ಚಂದಾದಾರರನ್ನು ಹೊಂದಿರುವ ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಮಾರ್ಪಟ್ಟಿದೆ. ಎರಡನೇ ತ್ರೈಮಾಸಿಕದ ಜೂನ್ ತಿಂಗಳ ವೇಳೆಗೆ ವೊಡಾಫೋನ್-ಐಡಿಯಾ ಗ್ರಾಹಕರ ಸಂಖ್ಯೆ ಕೇವಲ 32 ಕೋಟಿಗೆ ಕುಸಿದಿದೆ ಎಂದು ವೊಡಾಫೋನ್ ಐಡಿಯಾ ಕಂಪೆನಿಯು ಇದೇ ಶುಕ್ರವಾರದಂದು ಮಾಹಿತಿ ನೀಡಿದೆ.
ಕಳೆದ ಹಲವು ವರ್ಷಗಳಿಂದಲೂ ಮೊದಲ ಸ್ಥಾನದಲ್ಲಿದ್ದ ಏರ್‌ಟೆಲ್, ವೊಡಾಫೋನ್-ಐಡಿಯಾ ವಿಲೀನದ ಬಳಿಕ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಅದಾದ ಬಳಿಕ ರಿಲಯನ್ಸ್ ಜಿಯೋ ಏರ್‌ಟೆಲ್ ಅನ್ನು ಹಿಂದಿಕ್ಕಿ, ಎರಡನೇ ಸ್ಥಾನ ಭದ್ರಪಡಿಸಿಕೊಂಡಿತ್ತು. ಇದೀಗ ವೊಡಾಫೋನ್-ಐಡಿಯಾ ನೆಟ್‌ವರ್ಕ್ ಅನ್ನು ಹಿಂದಿಕ್ಕಿ ರಿಲಯನ್ಸ್ ಜಿಯೋ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಎರಡೂ ಕಂಪೆನಿಗಳಿಂದ ರಿಲಯನ್ಸ್ ಜಿಯೋಗೆ ಹೆಚ್ಚು ಗ್ರಾಹಕರು ವಲಸೆ ಹೋಗಿರುವುದನ್ನು ಟೆಲಿಕಾಂ ವರದಿಗಳು ತಿಳಿಸಿವೆ.

ಜಿಯೋ ದೇಶದ ಟೆಲಿಕಾಂಗೆ ಕಾಲಿಡುವ ಮುನ್ನ ದೇಶದಲ್ಲಿ ಇದ್ದ ಟೆಲಿಕಾಂ ವ್ಯವಸ್ಥೆಗೂ ಹಾಗೂ ಜಿಯೋ ಬಂದ ನಂತರ ಬದಲಾದ ಈಗಿನ ಟೆಲಿಕಾಂ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಕೇವಲ ಈ ಮೂರು ವರ್ಷಗಳ ಹಿಂದೆ ಜಿಯೋ ಮಾಡಿದ ಮೋಡಿಗೆ ಗ್ರಾಹಕರು ತಲೆದೂಗಿದ್ದಾರೆ. ಒಂದು ಜಿಬಿಗೆ 300 ರೂ. ಪೀಕುತ್ತಿದ್ದ ಕೆಲವು ಟೆಲಿಕಾಂ ಕಂಪೆನಿಗಳು ಈಗ 300 ರೂ.ಗೆ ಒಂದು ತಿಂಗಳೆಲ್ಲಾ ಡೇಟಾವನ್ನು ನೀಡುತ್ತಿರಲು ಜಿಯೋ ಕೂಡ ಕಾರಣವೇ. ಹಾಗಾದರೆ, ಕಳೆದ ಎರಡು ವರ್ಷಗಳ ಹಿಂದೆ ದೇಶದ ಟೆಲಿಕಾಂ ಹೇಗಿತ್ತು ಎಂಬುದನ್ನು ನೋಡೋಣ ಬನ್ನಿ.

ಒಂದು ಜಿಬಿ ಡೇಟಾ ಬೆಲೆ 300 ರೂ.!
ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಒಂದು ಜಿಬಿ ಹೈಸ್ಪೀಡ್ ಡೇಟಾ ಪಡೆಯಲು ಪಾವತಿಸಬೇಕಿದ್ದ ಸರಾಸರಿ ಬೆಲೆ 300 ರೂ.ಗಳು ಎಂದರೆ ಈಗ ಆಶ್ಚರ್ಯವಾಗಬಹುದು. ಈಗ ಒಂದು ಜಿಬಿ ಹೈಸ್ಪೀಡ್ ಡೇಟಾ ಕೇವಲ ಮೂರರಿಂದ ನಾಲ್ಕು ರೂಪಾಯಿಗಳಲ್ಲಿ ಜನರಿಗೆ ಸಿಗುತ್ತಿದೆ. ಕೇವಲ ಡೇಟಾ ಮಾತ್ರವಲ್ಲದೆ, ಉಚಿತ ಕರೆ ಹಾಗೂ ಎಸ್‌ಎಮ್‌ಎಸ್‌ಗಳು ಕೂಡ ಇದೇ ಡೇಟಾದ ಜೊತೆಗೆ ಉಚಿತವಾಗಿದೆ. ಹಾಗಾಗಿಯೇ, ಒಂದು ಬಾಟಲಿ ತಂಪು ಪಾನೀಯಕ್ಕಿಂತ 1ಜಿಬಿ ಡೇಟಾ ಅಗ್ಗವೆಂದು 'ಮೋದಿ' ಹೇಳಿದ್ದು ನಿಜವೆನ್ನಲೇಬೇಕು.

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?
ಕಳೆದ ಎರಡು ವರ್ಷಗಳ ಹಿಂದೆ ಒಂದು ವರ್ಷಕ್ಕೆ ಭಾರತದ ಒಟ್ಟು ಟೆಲಿಕಾಂಗಳ ಆದಾಯ ಎಷ್ಟು ಎಂಬುದನ್ನು ನೀವು ಊಹೆ ಮಾಡಲು ಸಾಧ್ಯವಿಲ್ಲಾ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳ ಒಂದು ವರ್ಷದ ಆದಾಯ ಮೂರು ಲಕ್ಷಕೋಟಿಗೂ (3,00,000cR) ಹೆಚ್ಚು. ಭಾರತೀಯ ಟೆಲಿಕಾಂ ಪ್ರಪಂಚವನ್ನು ಏಕಸ್ವಾಮ್ಯ ಮಾಡಿಕೊಂಡಿದ್ದರ ಪರಿಣಾಮ ಇದು ಎಂದು ಆ ವರದಿ ಹೇಳಿದೆ.

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು
ಇಂದು ಟ್ರಾಯ್ ಕೇವಲ ಒಂದು ಟೆಲಿಕಾಂ ಕಂಪೆನಿಗೆ ಸಹಾಯ ಮಾಡುತ್ತಿದೆ ಎಂಬ ಆರೋಪವಿದೆ. ಆದರೆ, ಎರಡು ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಟ್ರಾಯ್ ಅನ್ನು ಸಹ ಮೀರಿ ಬೆಳೆದಿದ್ದವು. ಟೆಲಿಕಾಂ ಕಂಪೆನಿಗಳ ಮೇಲೆ ಟ್ರಾಯ್ ನಿಯಂತ್ರಣವಿದ್ದರೂ ಸಹ ಎಲ್ಲಾ ಟೆಲಿಕಾಂಗಳು ಟ್ರಾಯ್ ಅನ್ನು ದಿಕ್ಕುತಪ್ಪಿಸುತ್ತಿದ್ದವು. ತನ್ನ ಗ್ರಾಹಕರಿಗೆ ಇತರ ಉತ್ತಮ ಸೇವೆಗಳನ್ನು ನೀಡುವುದಾಗಿ ಹೇಳಿ ಅವರಿಂದ ಟೆಲಿಕಾಂ ಕಂಪೆನಿಗಳು ಹೆಚ್ಚು ಹಣ ಪೀಕುತ್ತಿದ್ದವು ಎಂದು ಸ್ವತಃ ಟ್ರಾಯ್ ಹೇಳಿಕೊಂಡಿದ್ದು ನಿಮಗೆ ತಿಳಿದಿರಬಹುದು.

ಗ್ರಾಹಕರ ಜೇಬಿಗೆ ಕನ್ನ
ಮೊಬೈಲ್ ಬಳಕೆದಾರರ ರೀಚಾರ್ಜ್ ಮಾಡಿಸುವಾಗ ತೆರಬೇಕಿದ್ದ ಹಣ ಒಂದೆಡೆಯಾದರೆ, ಮೊಬೈಲ್‌ನಲ್ಲಿ ಮಾತನಾಡುವಾಗ ಕರೆಕಡಿತದಂತಹ ಲೋಪಗಳಿಂದಲೂ ಟೆಲಿಕಾಂ ಕಂಪೆನಿಗಳು ದುಡ್ಡು ಮಾಡಿಕೊಳ್ಳುತ್ತಿದ್ದವು. ಆಗಿದ್ದ ರೇಡಿಯೋ ಲಿಂಕ್ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡ ಟೆಲಿಕಾಂ ಕಂಪೆನಿಗಳು ಕರೆ ಕಡಿತವಾಗಿದ್ದರೂ ಅದು ಚಾಲನೆಯಲ್ಲೇ ಇರುವಂತೆ ತೋರಿಸಿ ಗ್ರಾಹಕರ ಜೇಬಿಗೆ ಕನ್ನ ಹಾಕುತದತಿದ್ದವು. ಒಂದು ಮಾಹಿತಿಯಂತೆ ಇದರಿಂದ ಅವುಗಳಿಗೆ ಸಿಗುತ್ತಿದ್ದ ಆದಾಯವೇ ಪ್ರತಿದಿನ 50 ಕೋಟಿಗೂ ಹೆಚ್ಚಿತ್ತಂತೆ.

ದಿನವೊಂದರ ಗಳಿಕೆ 250 ಕೋಟಿ ರೂ.
ಇಂದು ನಿವ್ವಳ ಲಾಭದಲ್ಲಿ ಸಾವಿರಾರು ಕೋಟಿ ಇಳಿಕೆ ಕಂಡಿರುವ ಟೆಲಿಕಾಂ ಕಂಪೆನಿಗಳು ಅಂದು ಒಂದು ದಿನಕ್ಕೆ ಗಳಿಸುತ್ತಿದ್ದ ಆದಾಯ ಎಷ್ಟು ಎಂಬುದನ್ನು ಕೇಳಿದರೆ ನೀವು ದಂಗಾಗಬಹುದು. ಏಕೆಂದರೆ, ಕರೆ ಕಡಿತದ ಕ್ರಮಕ್ಕೆ ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ದಂಡ ವಿಧಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ಅವರು ನೀಡಿದ ಮಾಹಿತಿಯಂತೆ, ಟೆಲಿಕಾಂ ಕಂಪೆನಿಗಳ ದಿನವೊಂದರ ಸರಾಸರಿ ಗಳಿಕೆ 250 ಕೋಟಿ ರೂಪಾಯಿಗಳಿಗೂ ಹೆಚ್ಚು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!
ಇಂದು ಜಿಯೋ ಭಾರತದ ಟೆಲಿಕಾಂ ಅನ್ನು ಏಕಸ್ವಾಮ್ಯ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಎರಡು ವರ್ಷಗಳ ಹಿಂದೆ ಒಂದೇ ಒಂದು ಟೆಲಿಕಾಂ ಕಂಪೆನಿ ತನ್ನ ತೆಕ್ಕೆಯಲ್ಲಿ ಭಾರತದ ಟೆಲಿಕಾಂ ಅನ್ನು ಹಿಡಿದಿಟ್ಟುಕೊಂಡಿತ್ತು. ಈ ಒಂದು ಕಂಪೆನಿಯನ್ನೇ ಹಹಿಂಬಾಲಿಸುತ್ತಿದ್ದ ಇತರೆ ಟೆಲಿಕಾಂ ಕಂಪೆನಿಗಳು ಸಹ ಸೇವೆಯ ಹೆಸರಿನಲ್ಲಿ ಒಂದೇ ಬಗೆಯಲ್ಲಿ ಕಾರ್ಯನಿರ್ವಹಣೆ ನೀಡುತ್ತಿದ್ದವು. ಇದರಿಂದ ಗ್ರಾಹಕನಿಗೆ ಆಯ್ಕೆಗಳೇ ಇಲ್ಲದ ಸ್ಥಿತಿ ಎದುರಾಗಿತ್ತು ಎಂದರೆ ತಪ್ಪಾಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!
ಎರಡು ವರ್ಷಗಳ ಹಿಂದೆಯೇ ಭಾರತದಲ್ಲಿದ್ದ ಮೊಬೈಲ್ ಸಂಪರ್ಕಗಳ ಸಂಖ್ಯೆ 96.2 ಕೋಟಿಯಾಗಿತ್ತು. ಆದರೆ, ಇಷ್ಟು ದೊಡ್ಡದ ಟೆಲಿಕಾಂ ಇದ್ದರೂ ಕೂಡ ಯಾವುದೇ ಟೆಲಿಕಾಂ ಕಂಪೆನಿ ಕೂಡಾ ಕರೆಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಹೂಡಿಕೆಗೆ ಸಿದ್ಧವಿಲ್ಲ ಎಂದು ವರದಿಯೊಂದು ಹೇಳಿತ್ತು. 300ರಿಂದ 900 ಮೆಗಾಹರ್ಟ್ಸ್ ಕಂಪನಾಂಕದ ತರಂಗಗಳಲ್ಲಿ ಕರೆಯಗುಣಮಟ್ಟ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ ಆ ತರಂಗಗಳ ಖರೀದಿಗೆ ಯಾವ ಟೆಲಿಕಾಂ ಕಂಪೆನಿಯೂ ಮುಂದೆ ಬರಲಿಲ್ಲ. ಏಕೆಂದರೆ, ಗ್ರಾಹಕರಿಂದ ಹಣ ಪೀಕಲು ಹೆಚ್ಚು ವೆಚ್ಚ ಮಾಡಲು ಯಾವ ಟೆಲಿಕಾಂ ಕಂಪೆನಿಗಳಿಗೂ ಇಷ್ಟವಿರಲಿಲ್ಲ.

ಶೇ. 80% ರಷ್ಟು ಬೆಲೆ ಇಳಿಕೆ
ಎರಡು ವರ್ಷಗಳ ಹಿಂದೆ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟಿತು. ಟೆಲಿಕಾಂಗೆ ಜಿಯೋ ಪ್ರವೇಶ ಮಾಡಿದ ನಂತರ ಜನರ ದುಡ್ಡನ್ನು ನುಂಗಿ ನೀರುಕುಡಿಯುತ್ತಿದ್ದ ಉಳಿದ ಟೆಲಿಕಾಂ ಕಂಪೆನಿಗಳ ಸೇವೆಗಳ ಬೆಲೆಗಳು ಶೇ 80% ರಷ್ಟು ಇಳಿಕೆಯಾಯಿತು. ಒಂದು GB ಡೇಟಾಗೆ 300 ರಿಂದ 400ರೂಪಾಯಿಗಳನ್ನು ಪೀಕುತ್ತಿದ್ದ ಕಂಪೆನಿಗಳು ಇದೀಗ 2 ರಿಂದ 3 ರೂಪಾಯಿಗೆ ಒಂದು GB ಡೇಟಾ ನೀಡುತ್ತಿವೆ.ಈಗ ಏನಿದ್ದರೂ ಅನ್‌ಲಿಮಿಟೆಡ್ ಸೇವೆಗಳದ್ದೇ ಜಮಾನವಾಗಿದ್ದು, ಗ್ರಾಹಕರು ಅತ್ಯುತ್ತಮ ದರದಲ್ಲಿ ಹೆಚ್ಚು ಸೇವೆಯನ್ನು ಪಡೆಯುತ್ತಿರುವುದನ್ನು ನೀವು ನೋಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470