Home
ಸುದ್ದಿಜಾಲ

ಜಿಯೋ ಆಯ್ದ ಗ್ರಾಹಕರಿಗೆ ಉಚಿತ ಅನಿಯಮಿತ ಕರೆ ಮತ್ತು ಡೇಟಾವನ್ನು ನೀಡುತ್ತಿದೆ!

ದೇಶದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ರಿಲಯನ್ಸ್‌ ಜಿಯೋ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ತನ್ನ ಬಳಕೆದಾರರಿಗೆ ಎರಡು ದಿನಗಳ ಕಾಲ ಉಚಿತ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ಹಾಗಂತ ಇದು ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ. ಬದಲಿಗೆ ಈ ಪ್ರಯೋಜನ ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ಇನ್ನು ಈ ಉಚಿತ ಯೋಜನೆಗಳನ್ನು ನೀಡುವುದಕ್ಕೆ ಬಲವಾದ ಕಾರಣವೂ ಕೂಡ ಇದೆ. ಕಳೆದ ವಾರ ರಿಲಯನ್ಸ್‌ ಜಿಯೋ ಕಡೆಯಿಂದ ತನ್ನ ಬಳಕೆದಾರರಿಗೆ ಆಗಿದ್ದ ತೊಂದರೆಯನ್ನು ಸರಿಪಡಿಸಲು ಜಿಯೋ ಈ ಒಂದು ಘೋಷಣೆಯನ್ನು ಮಾಡಿದೆ.

ಜಿಯೋ

ಹೌದು, ರಿಲಯನ್ಸ್ ಜಿಯೋ ಆಯ್ದ ಪ್ರದೇಶದ ಕೆಲವು ಬಳಕೆದಾರರಿಗೆ ಎರಡು ದಿನಗಳ ಕಾಲ ಉಚಿತ ಕರೆ ಮತ್ತು ಡೇಟಾ ಪ್ರಯೋಜನ ನೀಡಲು ಮುಂದಾಗಿದೆ. ಕಳೆದ ವಾರ ಕೆಲವು ಪ್ರದೇಶಗಳಲ್ಲಿ ಜಿಯೋ ಕರೆ ಮತ್ತು ಡೇಟಾ ಸೇವೆಯಲ್ಲಿ ಉಂಟಾಗಿದ್ದ ಸಮಸ್ಯೆಯಿಂದ ಸಾಕಷ್ಟು ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಬಳಕೆದಾರರು ಅನುಭವಿಸಿದ ತೊಂದರೆಗಳ ಬಗ್ಗೆ ಜಿಯೋ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಜಿಯೋ ಎರಡು ದಿನಗಳ ಉಚಿತ ಕರೆ ಪ್ರಯೋಜನ ನೀಡುತ್ತಿದೆ. ಹಾಗಾದ್ರೆ ಜಿಯೋ ಎರಡು ದಿನಗಳ ಉಚಿತ ಪ್ರಯೋಜನಗಳಲ್ಲಿ ಏನೆಲ್ಲಾ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಕಳೆದ ವಾರ ಮುಂಬೈ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ವಲಯಗಳಲ್ಲಿ ಜಿಯೋ ಸೇವೆಗಳಲ್ಲಿ ಸಾಕಷ್ಟು ವ್ಯತಯ ಉಂಟಾಗಿದೆ. ಈ ಸಮಯದಲ್ಲಿ ಅಲ್ಲಿನ ಜನರು ಕರೆ ಮತ್ತು ಡೇಟಾ ಸೇವೆಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಲ್ಲದೆ ಇಲ್ಲಿನ ಬಳಕೆದಾರರು ಕರೆ ಮಾಡುವಾಗ "ನೆಟ್‌ವರ್ಕ್‌ನಲ್ಲಿ ನೋಂದಾಯಿಸಲಾಗಿಲ್ಲ" ಎಂಬ ಸಂದೇಶವನ್ನು ಪಡೆಯುತ್ತಿದ್ದರು ಎನ್ನಲಾಗಿತ್ತು. ಇದಕ್ಕಾಗಿ ಬಳಕೆದಾರರು ಜಿಯೋ ಟೆಲಿಕಾಂಗೆ ದೂರು ನೀಡಿದ್ದರು. ಅದರಂತೆ ಈ ಅನಾನುಕೂಲತೆಯನ್ನು ಸರಿದೂಗಿಸಲು, ರಿಲಯನ್ಸ್ ಜಿಯೋ ಈಗ ಅಂದು ಸಮಸ್ಯೆ ಅನುಭವಿಸಿದ ಬಳಕೆದಾರರಿಗೆ ಎರಡು ದಿನಗಳ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ನೀಡುತ್ತಿದೆ.

ಪ್ರಿಪೇಯ್ಡ್

ಇದಕ್ಕಾಗಿ ಸಮಸ್ಯೆ ಅನುಭವಿಸಿದ ಬಳಕೆದಾರರಿಗೆ ಜಿಯೋ ಸಂದೇಶವನ್ನು ಕಳುಹಿಸುತ್ತಿದೆ. ನಿಮ್ಮ ಪ್ರಿಪೇಯ್ಡ್ ಯೋಜನೆಯ ಮಾನ್ಯತೆಯನ್ನು ವಿಸ್ತರಿಸುತ್ತಿರುವುದಾಗಿದೆ ಹೇಳಿದೆ. ಅಲ್ಲದೆ ಕಳೆದ ವಾರ ನೆಟ್‌ವರ್ಕ್ ಅಡಚಣೆಯಿಂದ ಪ್ರಭಾವಿತರಾದ ಗ್ರಾಹಕರ ಪೋಸ್ಟ್‌ಪೇಯ್ಡ್ ಬಿಲ್‌ಗೆ ಎರಡು ದಿನಗಳ ಕ್ರೆಡಿಟ್ ಅನ್ನು ಸೇರಿಸುವುದಾಗಿ ಹೇಳಿದೆ. ಇನ್ನು ಕಳೆದ ವಾರ ಜಿಯೋ ಟೆಲಿಕಾಂನಿಂದ ಉಂಟಾದ ತೊಂದರೆಯ ಬಗ್ಗೆ ಸಾಕಷ್ಟು ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲದೆ ಜಿಯೋ ಟೆಲಿಕಾಂ ಅನ್ನು ಇತರ ನೆಟ್‌ವರ್ಕ್‌ಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಾರ್ಯವೈಖರಿಯ ಜೊತೆಗೆ ಹೋಲಿಕೆ ಮಾಡಿದ್ದರು.

ಜಿಯೋ

ಇನ್ನು ಕೆಲವು ವಲಯಗಳಲ್ಲಿ ಜಿಯೋ ಬಳಕೆದಾರರು ತಮ್ಮ ಜಿಯೋ ಫೈಬರ್ ಕನೆಕ್ಟಿವಿಟಿ ಆಯ್ಕೆಯು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ. ಆದರೆ ರಿಲಯನ್ಸ್ ಜಿಯೋ ತನ್ನ ಫೈಬರ್ ಬಳಕೆದಾರರಿಗೆ ಪರಿಹಾರ ನೀಡುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕೇವಲ ಎರಡು ವಲಯಗಳಲ್ಲಿ ಮೊಬೈಲ್ ಸೇವೆಗಳಿಗೆ ಅಡ್ಡಿಯುಂಟಾಗಲು ಕಾರಣವೇನು ಎಂಬುದರ ಬಗ್ಗೆ ಜಿಯೋ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಉಳಿದ ವಲಯಗಳಲ್ಲಿನ ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಜಿಯೋ

ಇದಲ್ಲದೆ ಜಿಯೋ ಟೆಲಿಕಾಂ ಇತ್ತೀಚಿಗೆ ಮುಂಬೈನಲ್ಲಿ ನಡೆಸಿದ ಸರ್ವರ್ ಆಧಾರಿತ ಪರೀಕ್ಷೆಯಲ್ಲಿ ಜಿಯೋ 5G ನೆಟ್‌ವರ್ಕ್‌ ವೇಗದ ಮಾಹಿತಿ ಲೀಕ್‌ ಆಗಿದೆ. ರಿಲಯನ್ಸ್ ಜಿಯೋದ 5G ಮತ್ತು 4G ನೆಟ್‌ವರ್ಕ್‌ಗಳ ನಡುವಿನ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದ ವ್ಯತ್ಯಾಸದ ನಡುವಿನ ಹೋಲಿಕೆ ಬಹಿರಂಗವಾಗಿದೆ. ಅದರಂತೆ ರಿಲಯನ್ಸ್‌ ಜಿಯೋ 5G ಡೌನ್‌ಲೋಡ್ ವೇಗವು 4G ನೆಟ್‌ವರ್ಕ್‌ನಲ್ಲಿನ ಡೌನ್‌ಲೋಡ್ ವೇಗಕ್ಕಿಂತ ಸುಮಾರು ಎಂಟು ಪಟ್ಟು ಹೆಚ್ಚು ಎನ್ನಲಾಗಿದೆ. ಹಾಗೆಯೇ ರಿಲಯನ್ಸ್ ಜಿಯೋದ 5G ನೆಟ್‌ವರ್ಕ್‌ನಲ್ಲಿ ಅಪ್‌ಲೋಡ್ ವೇಗವು 4G ನೆಟ್‌ವರ್ಕ್‌ಗಿಂತ ಸುಮಾರು 15 ಪಟ್ಟು ವೇಗವಾಗಿದೆ.

Best Mobiles in India

English summary
Reliance Jio is now giving two days of free calling and data services to impacted users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+