ಜಿಯೋ ರೈಲ್ ಆಪ್ ಬಿಡುಗಡೆ!..ಉಪಯೋಗ ಗೊತ್ತಾದ್ರೆ ಈಗಲೇ ಡೌನ್‌ಲೋಡ್!!
ರೈಲ್ವೆ ಟಿಕೆಟ್ ಬುಕ್ ಮಾಡುವುದು ಇನ್ನು ಜನ ಸಾಮಾನ್ಯರಿಗೂ ಕಷ್ಟವೇನಲ್ಲ. ಏಕೆಂದರೆ, ರಿಯಲನ್ಸ್ ಜಿಯೋ ಕಂಪೆನಿ ಇದೇ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗಾಗಿ ರೈಲ್ ಆಪ್ವೊಂದನ್ನು ಪರಿಚಯಿಸಿದೆ. ಈ ರೈಲ್ ಆಪ್ ಮೂಲಕ ಇನ್ಮುಂದೆ ಜಿಯೋಫೋನ್ ಮತ್ತು ಜಿಯೋ ಫೋನ್ 2 ಬಳಕೆದಾರರು ಸುಲಭವಾಗಿ ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದೆ.
ಹೌದು, ಜಿಯೋ ಫೋನ್ ಬಳಕೆ ಮಾಡುವ ಜನಸಾಮಾನ್ಯರೂ ಕೂಡ ಆನ್‌ಲೈನಿನಲ್ಲೇ ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಲು ಜಿಯೋ ಅವಕಾಶ ಒದಗಿಸಿದ್ದು, IRCTC ಅಕೌಂಟ್ ಇಲ್ಲದೆ ಇರುವವರು ಸಹ ಈ ಜಿಯೋ ರೈಲ್ ಆಪ್ ಮೂಲಕ ಅಕೌಂಟ್ ಕ್ರಿಯೇಟ್ ಮಾಡಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದರಿಂದ ಜನಸಾಮಾನ್ಯರಿಗೆ ಸುಲಭ ಆಯ್ಕೆಯೊಂದು ದೊರೆಯುತ್ತಿದೆ.

ಈ ಜಿಯೋ ರೈಲ್ ಆಪ್ ಬಳಕೆಯಿಂದ ಇನ್ನು ಮುಂದೆ ಟಿಕೆಟ್ಗಾಗಿ ಕ್ಯೂ ನಿಲ್ಲುವಂತಹ ಸಮಸ್ಯೆಗಳು ದೂರವಾಗಲಿದೆ. ಜೊತೆಗೆ ಈ ಆಪ್ ಮೂಲಕ ಜಿಯೋಫೋನ್ ಬಳಕೆದಾರರು PNR ಸ್ಟೇಟಸ್ ಸಹ ನೋಡುವ ಅವಕಾಶವನ್ನು ಸಹ ಪಡೆದುಕೊಳ್ಳಲಿದ್ದಾರೆ. ಅಂದರೆ ಈ ಆಪ್ನಲ್ಲೇ ಟಿಕೆಟ್ ಬುಕ್ ಮಾಡಿ, ಅದರ ಸ್ಥಿತಿಗತಿಯನ್ನು ಆಪ್‌ನಲ್ಲೆ ಸುಲಭವಾಗಿ ತಿಳಿಯಬಹುದಾಗಿದೆ.
ಇನ್ನು ಇದಕ್ಕಿಂತಲೂ ವಿಶೇಷವಾಗಿ ಈ ಆಪ್‌ನಲ್ಲಿ ಟ್ರೈನ್ ಎಲ್ಲಿ ಚಲಿಸುತ್ತಿದೆ ಎಂಬುದನ್ನು ತಿಳಿಯಬಹುದಾಗಿದ್ದು, ಫುಡ್ ಆರ್ಡರ್ ಮಾಡುವ ವ್ಯವಸ್ಥೆ ಇದೆ. ಹೊಸದಾಗಿ ಲಾಂಚ್ ಆಗಿರುವ ಜಿಯೋ ರೈಲ್ ಆಪ್ ಆಪ್ ಸ್ಟೋರಿನಲ್ಲಿ ಲಭ್ಯವಿದ್ದು, ಬಳಕೆದಾರರು ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ಲೈಫ್ ಅನ್ನು ಮತ್ತಷ್ಟು ಎಂಜಾಯ್ ಮಾಡಬಹುದು.

ಜಿಯೋ ಟೆಲಿಕಾಂ ತನ್ನ ಬಳಕೆದಾರರಿಗೆ ಅನುಕೂಲವಾಗುವಂತಹ ಅನೇಕ ಫೀಚರ್ಗಳನ್ನು ರಿಲಯನ್ಸ್ ಪರಿಚಯಿಸುತ್ತಿದೆ. ಇದೀಗ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗುವಂತಹ ಈ ಹೊಸ ಆಯ್ಕೆಯನ್ನು ಕಂಪೆನಿ ಒದಗಿಸಿದೆ. ಈ ಆಪ್ ಮೂಲಕ ಇನ್ನು ಮುಂದೆ ಜಿಯೋ ಫೋನ್ ಬಳಕೆದಾರರು ಸುಲಭವಾಗಿ ರೈಲು ಟಿಕೆಟ್ ಬುಕಿಂಗ್ ಮಾಡಿಕೊಂಡು ಪ್ರಯಾಣಿಸಬಹುದು.


Click it and Unblock the Notifications








