Home
ಸುದ್ದಿಜಾಲ

'ಜಿಯೋ' ಬಳಕೆದಾರರಿಗೆ ಮನೆಯಲ್ಲೇ ಕುಳಿತು ಕೋಟಿ ಗೆಲ್ಲುವ ಬಂಪರ್ ಆಫರ್!!

By Bhaskar N J
41st Reliance AGM: WhatsApp for JioPhone, JioPhone 2, and Jio Giga Fiber

ಗ್ರಾಹಕರಿಗೆ ಸದಾ ಒಂದಿಲ್ಲೊಂದು ಬಂಪರ್ ಆಫರ್ ಅನ್ನು ಘೋಷಿಸಸುವ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಈಗ ಮತ್ತೊಂದು ಸಿಹಿಸುದ್ದಿ ನೀಡಿದೆ. ಜಿಯೋ ಸೇವೆಯನ್ನು ಬಳಸುವವರಿಗೆ ಕೋಟ್ಯಾಧಿಪತಿಯಾಗುವ ಅವಕಾಶವನ್ನು ಜಿಯೋ ನೀಡಿದ್ದು, ಜಿಯೋ ನಂಬರ್ ಇದ್ದಲ್ಲಿಮನೆಯಲ್ಲೇ ಕುಳಿತು ಲಕ್ಷಾಂತರ ರೂ. ಬಹುಮಾನವನ್ನು ಸಹ ಗಳಿಸಬಹುದಾಗಿದೆ.

ಹೌದು, ಬಾಲಿವುಡ್‌ನ ಜನಪ್ರಿಯ ಶೋ ಕೌನ್ ಬನೇಗ ಕರೋಡ್‌ಪತಿ(KBC 10) ಕಾರ್ಯಕ್ರಮದ 10ನೇ ಸೀಸನ್ ಶೀಘ್ರವೇ ಆರಂಭವಾಗಲಿದ್ದು, ಈ ಶೋ ಜತೆಯಲ್ಲಿಯೇ ಜಿಯೋ ಗ್ರಾಹಕರು ಕೋಟಿ ಗೆಲ್ಲುವ ಆಯ್ಕೆಯನ್ನು ಜಿಯೋ ನೀಡಿದೆ. ಇದಕ್ಕಾಗಿ ಜಿಯೋ ಬಳಕೆದಾರರು ಪ್ರಶಸ್ತಿಯನ್ನು ಗೆಲ್ಲಲು ಜಿಯೋ ಕೆಬಿಸಿ ಪೇ(Jio KBC Pay Along) ಅನ್ನು ಮೊಬೈಲ್‌ನಲ್ಲೇ ಆಡಬೇಕಿದೆ.

'ಜಿಯೋ' ಬಳಕೆದಾರರಿಗೆ ಮನೆಯಲ್ಲೇ ಕುಳಿತು ಕೋಟಿ ಗೆಲ್ಲುವ ಬಂಪರ್ ಆಫರ್!!

ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮ ಸಂದರ್ಭದಲ್ಲಿ 'ಜಿಯೋಚಾಟ್ ಆಪ್' ಮೂಲಕ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಹಾಟ್ ಸೀಟ್ ಅನ್ನು ತಲುಪುವ ಮೂಲಕ ನೀವು ಬಹುಮಾನ ಗೆಲ್ಲಬಹುದು. ಹಾಟ್ ಸೀಟ್ ನಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕೋಟ್ಯಾಧಿಪತಿಯಾಗಬಹುದು. ಹಾಗಾದರೆ, ಈ ಹೊಸ ಕೊಡುಗೆ ಏನು ಎಂಬುದನ್ನು ಮುಂದೆ ತಿಳಿಯಿರಿ.

ಜಿಯೋ ಮೂಲಕ ಕೋಟ್ಯಾಧಿಪತಿ.

ಜಿಯೋ ಮೂಲಕ ಕೋಟ್ಯಾಧಿಪತಿ.

ಮೊದಲೇ ಹೇಳಿದಂತೆ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮ ಸಂದರ್ಭದಲ್ಲಿ ನೀವು ಜಿಯೋ ಕೆಬಿಸಿ ಪೇ(Jio KBC Pay Along) ಮೂಲಕ ಲಕ್ಷಾಂತರ ರೂ. ಬಹುಮಾನವನ್ನು ಗಳಿಸಬಹುದಾಗಿದೆ. ಕಾರ್ಯಕ್ರಮ ಸಂದರ್ಭದಲ್ಲಿ 'ಜಿಯೋಚಾಟ್ ಆಪ್' ಮೂಲಕ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಅಮಿತಾಬ್ ಜೊತೆ ಹಾಟ್ ಸೀಟ್ ಹಂಚಿಕೊಳ್ಳಬಹುದು.

ಮನೆಯಲ್ಲೇ ಜಾಕ್‌ಪಾಟ್!

ಮನೆಯಲ್ಲೇ ಜಾಕ್‌ಪಾಟ್!

ಕೌನ್ ಬನೇಗ ಕರೋಡ್‌ಪತಿ ನಡೆಯುತ್ತಿರುವ ಸಮಯದಲ್ಲೇ ನೀವು ಕೂಡ ನಿಮ್ಮ ಮೊಬೈಲ್‌ನಲ್ಲಿ ಕೌನ್ ಬನೇಗ ಕರೋಡ್‌ಪತಿ ಆಡುತ್ತಿರುತ್ತೀರಾ. ನೀವು ಉತ್ತರವನ್ನು ಲಾಕ್ ಮಾಡಿದ ನಂತರ, ನಿಮ್ಮ ಮೊಬೈಲ್ ಮತ್ತು ಟಿವಿಗಳಲ್ಲಿ ಸರಿಯಾದ ಉತ್ತರವನ್ನು ಘೋಷಿಸಲಾಗುತ್ತದೆ. ನಿಮ್ಮ ಉತ್ತರ ಸರಿಯಾಗಿದ್ದರೆ, ನೀವು ಜಿಯೋ ಕೆಬಿಸಿ ಪ್ಲೇಯಲ್ಲಿ ಮುಂದುವರೆಯಬಹುದು.

Jio KBCಯಲ್ಲಿ ಪಾಲ್ಗೊಳ್ಳುವುದು ಹೇಗೆ? ಹಂತ 1

Jio KBCಯಲ್ಲಿ ಪಾಲ್ಗೊಳ್ಳುವುದು ಹೇಗೆ? ಹಂತ 1

ಮೊದಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜಿಯೋಚಾಟ್ ಆಪ್(Jiochat App) ಅನ್ನು ಡೌನ್ಲೋಡ್ ಮಾಡಿ.ಆಪ್ ಡೌನ್ಲೋಡ್ ಆದ ನಂತರ ಇದರಲ್ಲಿ ಹೆಸರು, ಜನ್ಮ ದಿನಾಂಕ ಮತ್ತು ಫೋಟೋ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ರಿಜಿಸ್ಟಾರ್ ಮಾಡಿಕೊಳ್ಳಿ. ಜಿಯೋ ಅಕೌಂಟ್‌ನಿಂದ ರಿಜಿಸ್ಟರ್ ಆದರೆ ಮಾತ್ರ ಹಣ ಗೆಲ್ಲಬಹುದಾದ ಗೇಮ್ ಆಡಬಹುದು.

Jio KBCಯಲ್ಲಿ ಪಾಲ್ಗೊಳ್ಳುವುದು ಹೇಗೆ? ಹಂತ 2

Jio KBCಯಲ್ಲಿ ಪಾಲ್ಗೊಳ್ಳುವುದು ಹೇಗೆ? ಹಂತ 2

ವಿವರಗಳನ್ನು ಭರ್ತಿ ಮಾಡಿದ ನಂತರ, ಜಿಯೋ ಕೌನ್ ಬನೇಗ ಕರೋಡ್‌ಪತಿಗೆ ನೀವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ. ಈ ಎಲ್ಲಾ ಉತ್ತರಗಳನ್ನು ನೀವು ಲೈವ್ ಪ್ರೋಗ್ರಾಂ ಸಮಯದಲ್ಲಿ ನೀಡಬೇಕಾಗಿದೆ. ಇಲ್ಲಿ ಸರಿಯಾದ ಉತ್ತರಗಳನ್ನು ಆಧರಿಸಿ, ಬಳಕೆದಾರರಿಗೆ ಅಂಕಗಳನ್ನು ನೀಡಲಾಗುತ್ತದೆ ಮತ್ತು ಬಹುಮಾನವನ್ನು ಪ್ರಕಟಿಸಲಾಗುತ್ತದೆ.

ಕೌನ್ ಬನೇಗ ಕರೋಡ್‌ಪತಿ

ಕೌನ್ ಬನೇಗ ಕರೋಡ್‌ಪತಿ

ಬಾಲಿವುಡ್‌ನ ಜನಪ್ರಿಯ ಶೋ ಕೌನ್ ಬನೇಗ ಕರೋಡ್‌ಪತಿ ಸೀಸನ್ 10 ರಲ್ಲಿ ಪಾಲ್ಗೊಳ್ಳಲು ಎಸ್‌ಎಂಎಸ್, ಕಾಲ್, ಕೆಬಿಸಿ ಮೊಬೈಲ್ ಆಪ್, ಆನ್ಲೈನ್ ಮೂಲಕ ನೋಂದಾಯಿಸಬಹುದು. ನೋಂದಾಯಿತರಿಗೆ ಇ-ಮೇಲ್ ಮತ್ತು SMS ಮೂಲಕ ಮುಂಬರಲಿರುವ ಕಾರ್ಯಕ್ರಮಗಳ ದಿನಾಂಕಗಳ ಬಗ್ಗೆ ತಿಳಿಸಲಾಗುವುದು. (https://kbcliv.in/online-registration/)

Best Mobiles in India

English summary
Registration for Jio KBC Play Along in 2018 is going to start very soon. So, we are here with all the details on how to register and play Jio KBC Play. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+