ಜಿಯೋ ಕಂಪೆನಿಯಿಂದ ಲೈಟ್‌ಕಮ್ಯೂನಿಟಿ ರೀಚಾರ್ಜ್ ಅಪ್ಲಿಕೇಶನ್ ಲಾಂಚ್!
ಜಿಯೋ ಭಾರತದ ಟೆಲಿಕಾಂ ಇತಿಹಾಸದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿದೆ. ಪ್ರತಿ ಭಾರಿಯು ಮೊದಲಿನಿಂದಲೂ ತನ್ನ ಬಳಕೆದಾರರಿಗೆ ಹೊಸತನದ ಫೀಚರ್ಸ್‌ಗಳನ್ನ, ಪ್ಲ್ಯಾನ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಅಲ್ಲದೆ ತನ್ನ ಬಳಕೆದಾರರಿಗೆ ಹೊಸ ಮಾದರಿಯ ರಿಚಾರ್ಜ್ ಪ್ಲ್ಯಾನ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಅಪ್ಲಿಕೇಶನ್ ಒಂದನ್ನ ಪರಿಚಯಿಸಿದೆ.

ಹೌದು, ಜಿಯೋ ಭಾರತದಲ್ಲಿ ಹೊಸ ಜಿಯೋಪೋಸ್ ಲೈಟ್ ಕಮ್ಯೂನಿಟಿ ರೀಚಾರ್ಜ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಮೂಲಕ ಯಾವುದೇ ವ್ಯಕ್ತಿಗೆ ಜಿಯೋ ಪಾಲುದಾರರಾಗಲು ಮತ್ತು ಇತರ ಜಿಯೋ ಚಂದಾದಾರರಿಗೆ ಪ್ರಿಪೇಯ್ಡ್ ರೀಚಾರ್ಜ್ ಮಾಡಲು ಅವಕಾಶವನ್ನ ಕಲ್ಪಿಸುತ್ತದೆ. ಜೊತೆಗೆ ಜಿಯೋ ಬಳಕೆದಾರರಿಗೆ ಸುಲಭವಾಗಿ ಹಣವನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ. ಅಷ್ಟಕ್ಕೂ ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೊಣ ಬನ್ನಿರಿ.

ಸದ್ಯ ಜಿಯೋ ಕಂಪೆನಿ ಭಾರತದಲ್ಲಿ ತನ್ನ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ ಕಮ್ಯೂನಿಟಿ ರೀಚಾರ್ಜ್ ಅಪ್ ಆಗಿದೆ. ಈ ಆಪ್ ಮೂಲಕ ಜಿಯೋ ಬಳಕೆದಾರರು ಇನ್ನೊಬ್ಬ ಜಿಯೋ ಬಳಕೆದಾರರನ್ನು ಅಹ್ವಾನಿಸಬಹುದು, ಅಲ್ಲದೆ ಜಿಯೋ ಚಂದಾದಾರರಿಗೆ ಪ್ರಪೇಯ್ಡ್ ರೀಚಾರ್ಜ್ ಮಾಡಲು ಅವಕಾಶ ನೀಡಿದೆ. ಈ ರೀತಿ ಒಬ್ಬರಿಂದ ಒಬ್ಬರನ್ನು ನೋಂದಣಿಸುತ್ತಾ ಸಾಗಿದರೆ ಅದಕ್ಕೆ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದಾಗಿದೆ. ಇನ್ನು ಈ ನೋಂದಣಿ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. ಇದರಲ್ಲಿ ನೋಂದಣಿ ಆಗುವುದಕ್ಕೆ ಯಾವುದೇ ದಾಖಲೆಗಳ ಹಾರ್ಡ್‌ಕೋಪಿ ಅಗತ್ಯವಿಲ್ಲ, ಇದಕ್ಕೆ ಯಾವುದೇ ಭೌತಿಕ ಪರಿಶೀಲನೆ ಅಗತ್ಯವಿಲ್ಲ.

ಇನ್ನು ಈ ಜಿಯೋಪೋಸ್ ಲೈಟ್ ಅಪ್ಲಿಕೇಶನ್ ಮೂಲಕ ಜಿಯೋ ಪಾಲುದಾರರಾದ ನಂತರ, ಯಾವುದೇ ಬಳಕೆದಾರರು ಇತರ ಜಿಯೋ ಗ್ರಾಹಕರ ಖಾತೆಗಳನ್ನು ರೀಚಾರ್ಜ್ ಮಾಡಬಹುದು ಮತ್ತು ಕಮಿಷನ್ ಅನ್ನು ಗಳಿಸಬಹುದಾಗಿದೆ. ಅಲ್ಲದೆ ನೀವು ಈಗಾಗಲೇ ಮೈಜಿಯೊ ಅಪ್ಲಿಕೇಶನ್ ಅಥವಾ ಜಿಯೋ ವೆಬ್‌ಸೈಟ್ ಬಳಸಿ ಇತರ ಜನರ ಜಿಯೋ ಪ್ರಿಪೇಯ್ಡ್ ಖಾತೆಗಳನ್ನು ರೀಚಾರ್ಜ್ ಮಾಡಬಹುದು ಆದರೆ ಆ ರೀಚಾರ್ಜ್‌ಗಳಲ್ಲಿ ಜಿಯೋ ನಿಮಗೆ ಯಾವುದೇ ಕಮಿಷನ್ ಮಾದರಿಯಲ್ಲಿ ಹಣ ಸಿಗುವುದಿಲ್ಲ. ಆದರೆ ಕಮ್ಯೂನಿಟ್ ರೀಚಾರ್ಜ್ ಅಪ್ಲಿಕೇಶನ್ ಅಲ್ಲಿ ಕಮಿಷನ್ ಅನ್ನು ಪಡೆಯಬಹುದಾಗಿದೆ.

ಅಲ್ಲದೆ ಜಿಯೋಪೋಸ್ ಲೈಟ್ ಅಪ್ಲಿಕೇಶನ್ ಇತರ ಸಂಖ್ಯೆಗಳನ್ನು ರೀಚಾರ್ಜ್ ಮಾಡಲು ಜಿಯೋ ಪಾಲುದಾರರಿಗೆ 4.16 ಶೇಕಡಾ ಕಮಿಷನ್ ಅನ್ನು ನೀಡುತ್ತದೆ. ಇದು ಪಾಸ್‌ಬುಕ್ ಫೀಚರ್ಸ್‌ಅನ್ನು ಹೊಂದಿದ್ದು, ಇದರಲ್ಲಿ ಜಿಯೋ ಪಾಲುದಾರರಿಗೆ ತಮ್ಮ ಗಳಿಕೆಯನ್ನು ನೋಡಲು ಮತ್ತು ಕಳೆದ 20 ದಿನಗಳಲ್ಲಿ ಅವರ ವಹಿವಾಟುಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಅದಕ್ಕೆ ಅಗತ್ಯವಾದ ಅನುಮತಿಗಳನ್ನು ನೀಡಿದರೆ, ಜಿಯೋಪೋಸ್ ಲೈಟ್ ನಿಮ್ಮನ್ನು ನೋಂದಾಯಿಸಲು ಮತ್ತು ಜಿಯೋ ಪಾಲುದಾರರಾಗಲು ಕೇಳುತ್ತದೆ. ಜಿಯೋ ಪಾಲುದಾರರಾಗ ಬೇಕಾದರೆ ನೀವು ಜಿಯೋ ಸಂಖ್ಯೆಯನ್ನು ಹೊಂದಿರಬೇಕು. ನೋಂದಣಿ ಪ್ರಕ್ರಿಯೆ ಮುಗಿದ ನಂತರ, ನಿಮ್ಮ ವ್ಯಾಲೆಟ್‌ಗೆ ಹಣವನ್ನು ಲೋಡ್ ಮಾಡಲು ಅಪ್ಲಿಕೇಶನ್ ಕೇಳುತ್ತದೆ. ನಂತರ ರೂ. 500, ರೂ. 1,000, ಮತ್ತು ರೂ. 2,000. ರೂ. ಆಪ್ ಮೂಲಕ 100 ಖರ್ಚು ಮಾಡಲಾಗಿದ್ದು, ಏಜೆಂಟರಿಗೆ ರೂ. 4.166 ಹೆಚ್ಚುವರಿ ಅಂದರೆ ರೀಚಾರ್ಜ್ ಮೊತ್ತದ 4.16 ಪ್ರತಿಶತ ದೊರೆಯಲಿದೆ.

ಇದರ ಮೂಲಕ ತಮ್ಮ ಸ್ನೇಹಿತರು, ಕುಟುಂಬ ಮತ್ತು ಗ್ರಾಹಕರಿಗೆ ಹೆಚ್ಚು ಸೂಕ್ತವಾದ ಯೋಜನೆಗಳನ್ನು ರೀಚಾರ್ಜ್ ಮಾಡಲು ಸಹಾಯ ಮಾಡಲು ಜಿಯೋ ಪಾಲುದಾರರಿಗೆ ಜನಪ್ರಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಅಪ್ಲಿಕೇಶನ್ ತೋರಿಸುತ್ತದೆ. ಲಭ್ಯವಿರುವ ಎಲ್ಲಾ ರೀಚಾರ್ಜ್‌ಗಳ ಬಳಕೆದಾರರಿಗೆ ತಿಳಿಸುವ FAQ ವಿಭಾಗವೂ ಇದೆ. ಜಿಯೋಪೋಸ್ ಲೈಟ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಆಂಡ್ರಾಯ್ಡ್‌ಗಾಗಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.


Click it and Unblock the Notifications








