Home
ಸುದ್ದಿಜಾಲ

ಇದೇ ಮೊದಲು! ಸ್ಮಾರ್ಟ್ ಟಿವಿಗಳಿಗೆ JioTele OS ಲಾಂಚ್.. ಯಾವ ಟಿವಿಗಳಲ್ಲಿ ಲಭ್ಯ?

ಸ್ಮಾರ್ಟ್ ಟಿವಿ ಬಳಕೆದಾರರಿಗೆ ಜಿಯೋ ಒಳ್ಳೆಯ ಸುದ್ದಿ ನೀಡಿದೆ. ವಿಶೇಷವೆಂದರೆ, ಇದು ಭಾರತದಲ್ಲೇ ಮೊದಲು! ಹೌದು, ಸ್ಮಾರ್ಟ್ ಟಿವಿಗಳಿಗಾಗಿ (Smart TV) ರಿಲಯನ್ಸ್ ಜಿಯೋದಿಂದ ಹೊಸ ಜಿಯೋ ಟೆಲಿ ಆಪರೇಟಿಂಗ್ ಸಿಸ್ಟಮ್ (Jio Tele OS) ಅನ್ನು ಲೋಕಾರ್ಪಣೆ ಮಾಡಿದೆ. ಇದೇ ಫೆಬ್ರವರಿ 21 ರಿಂದ ಜಿಯೋಟೆಲಿ ಓಎಸ್‌ನಿಂದ ನಡೆಸಲ್ಪಡುವ ಸ್ಮಾರ್ಟ್ ಟಿವಿ ಸೆಟ್‌ಗಳು ಲಭ್ಯವಿರಲಿವೆ. ಹೊಸ ಓಎಸ್‌ ಥಾಮ್ಸನ್, ಕೊಡಾಕ್, ಬಿಪಿಎಲ್ ಮತ್ತು ಜೆವಿಸಿ ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ಸ್ಪರ್ಧೆ ನೀಡುತ್ತಿದೆ. ಜಿಯೋಟೆಲಿ ಓಎಸ್‌ನ ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ರಿಲಯನ್ಸ್ ಜಿಯೋ ಭಾರತದಲ್ಲಿ ಇಂದು ಸ್ಮಾರ್ಟ್ ಟಿವಿಗಾಗಿ ಹೊಸ ಜಿಯೋ ಟೆಲಿ ಆಪರೇಟಿಂಗ್ ಸಿಸ್ಟಮ್ (Jio Tele OS) ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಜಿಯೋಟೆಲಿ ಓಎಸ್‌ ಟಿವಿ ಚಾನೆಲ್‌ಗಳು ಮತ್ತು ಜನಪ್ರಿಯ ಓಟಿಟಿ (OTT) ಆಪ್‌ಗಳನ್ನು ಸಪೋರ್ಟ್‌ ಮಾಡಲು ವಿನ್ಯಾಸಗೊಳಿಸಲಾಗಿದೆ. ಜಿಯೋಟೆಲಿ ಓಎಸ್‌ ಗೂಗಲ್ ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿ ಪರಿಚಯಿಸಲಾಗಿದೆಯೇ? ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಕಂಪನಿಯು ಹೊಸ ಸ್ಮಾರ್ಟ್ ಟಿವಿ ಆಪರೇಟಿಂಗ್ ಸಿಸ್ಟಮ್ (Jio Tele OS) ಅನ್ನು ಎಐ (AI) ಬೆಂಬಲಿತವಾದ ಕಂಟೆಂಟ್ ಶಿಫಾರಸುಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಿದೆ.

ಇದೇ ಮೊದಲು! ಸ್ಮಾರ್ಟ್ ಟಿವಿಗಳಿಗೆ JioTele OS ಲಾಂಚ್.. ಯಾವ ಟಿವಿಗಳಲ್ಲಿ ಲಭ್ಯ?

ವಿಶೇಷವೆಂದರೆ, ಇದು (ಜಿಯೋ ಟೆಲಿ ಓಎಸ್‌) ಆಪರೇಟಿಂಗ್ ಸಿಸ್ಟಮ್ ವೇದಿಕೆಯಲ್ಲಿ ಜಾಗತಿಕ ಮತ್ತು ಪ್ರಾದೇಶಿಕ ವಿಷಯ ಏಕೀಕರಣವನ್ನು ನೀಡುತ್ತದೆ. ಇದು ಸ್ಮಾರ್ಟ್ ಟಿವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ. ಇದಲ್ಲದೆ ಟಿವಿ ಒಇಎಂಗಳಿಗೆ ಕೈಗೆಟುಕುವ ಬೆಲೆಯಲ್ಲಿ ಅನುಭವವನ್ನು ಒದಗಿಸಲು ಅವಕಶಾ ಮಾಡಿಕೊಡಲಿದೆ. ಜಿಯೋ ಕಂಪನಿಯು ಇದನ್ನು 'ಮುಂದಿನ ಪೀಳಿಗೆಯ ವೇದಿಕೆ' ಎಂದು ಹೇಳಿದೆ. ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಮೂಲಕ ಮನರಂಜನಾ ಅನುಭವದ ವ್ಯಾಖ್ಯಾನವನ್ನೇ ಈ ಜಿಯೋಟೆಲಿ ಓಎಸ್‌ ಬದಲಿಸಿದೆ ಎಂದು ತಿಳಿಸಿದೆ.

ಜಿಯೋ ಜಿಯೋ ಟೆಲಿ ಓಎಸ್‌ ವಿಶೇಷತೆ

ಜಿಯೋ ಟೆಲಿ ಓಎಸ್‌ ನಿಯಮಿತ ಸಾಫ್ಟ್ವೇರ್ ನವೀಕರಣಗಳನ್ನು ಸಹ ಪಡೆಯುತ್ತದೆ. ಹೀಗಾಗಿ ಹೊಸ ಅಪ್ಲಿಕೇಶನ್‌ಗಳಿಗೆ ಬೆಂಬಲ ಮತ್ತು ವಿಷಯ ಸ್ವರೂಪಗಳಿಗೆ ಸಪೋರ್ಟ್ ಮಾಡಲಿದೆ. ಈ ನವೀಕರಣಗಳು ಹೊಸ ಓಎಸ್‌ನಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್ ಟಿವಿಗಳಿಗೆ ಭದ್ರತಾ ಪ್ಯಾಚ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಆದರೆ, ಜಿಯೋ ಸಂಸ್ಥೆಯು ಜಿಯೋ ಟೆಲಿ ಓಎಸ್‌ (Jio Tele OS) ಗೂಗಲ್ ಆಂಡ್ರಾಯ್ ಟಿವಿಯ ಆಪರೇಟಿಂಗ್ ಸಿಸ್ಟಂ ಅನ್ನು ಆಧರಿಸಿದ್ಯಾ ಅಥವಾ ಇಲ್ಲವೇ ಎಂಬುವುದನ್ನು ಈವರೆಗೆ ಸ್ಪಷ್ಟಪಡಿಸಿಲ್ಲ.

ಕ್ಲೌಡ್ ಗೇಮಿಂಗ್ ಸಪೋರ್ಟ್‌

ಜಿಯೋ ಟೆಲಿ ಓಎಸ್ ಟಿವಿ ಚಾನೆಲ್ ಅನ್ನು ಜನಪ್ರಿಯ ಒಟಿಟಿ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ ಎಂದು ರಿಲಯನ್ಸ್‌ ಜಿಯೋ ಮಾಹಿತಿ ನೀಡಿದೆ. ಇದಲ್ಲದೆ, ಜಿಯೋ ಘೋಷಿಸಿದಂತೆ ಜಿಯೋ ಟೆಲಿ ಓಎಸ್‌ನಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್ ಟಿವಿಗಳು ಕ್ಲೌಡ್ ಆಧಾರಿತ ಗೇಮಿಂಗ್ ಅನ್ನು ಸಹ ಸಪೋರ್ಟ್ ಮಾಡುತ್ತವೆ. ಸ್ಮಾರ್ಟ್‌ ಟಿವಿ ಬಳಕೆದಾರರು ಕೇವಲ ಒಂದು ರಿಮೋಟ್ ಮೂಲಕ ಎಲ್ಲ ಫೀಚರ್ಸ್‌ಗಳನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳಬಹುದು.

ಲ್ಯಾಗ್ ಫ್ರೀ 4K ಕಾರ್ಯಕ್ಷಮತೆ

ಜಿಯೋಟೆಲ್ ಓಎಸ್ ಪ್ಲಾಟ್‌ಫಾರ್ಮ್‌ನಿಂದ ಚಾಲಿತವಾದ (ಬೆಂಬಲ) ಸ್ಮಾರ್ಟ್ ಟಿವಿಗಳು ಲ್ಯಾಗ್ ಫ್ರೀ (ವಿಳಂಬ ಮುಕ್ತ) 4K ಕಾರ್ಯಕ್ಷಮತೆಯನ್ನು ನೀಡುತ್ತವೆ. ಹೆಚ್ಚುವರಿಯಾಗಿ ಜಿಯೋ ಟೆಲಿ ಓಎಸ್ (Jio Tele OS) ನಿಮಗೆ ಅತ್ಯುತ್ತಮ ಕಂಟೆಂಟ್ ಎಐ (AI) ಚಾಲಿತ ಶಿಫಾರಸುಗಳಿಗೆ ಪ್ರವೇಶ ಕಲ್ಪಿಸುತ್ತದೆ. ಜಿಯೋ ಸಂಸ್ಥೆಯು ಈ ವಿಷಯದ ಬಗ್ಗೆ ವಿವರವಾದ ಮಾಹಿತಿ ನೀಡಿಲ್ಲ. ಜಿಯೋ ತನ್ನ ಹೊಸ ಜಿಯೋ ಟೆಲಿ ಓಎಸ್‌ ಅನ್ನು ಸ್ಮಾರ್ಟ್ ಟಿವಿ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಸ್ಥಳೀಯ ಮತ್ತು ಜಾಗತಿಕ ವಿಷಯವನ್ನು ಸರಾಗವಾಗಿ ಸಂಯೋಜಿಸುವ ಸಾಮರ್ಥ್ಯದೊಂದಿಗೆ ಪರಿಚಯಿಸಿದೆ.

Best Mobiles in India

English summary
JioTele OS Smart TV Opearting System Launched in India: Know Key features of JioTele OS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+