Home
ಸುದ್ದಿಜಾಲ

ಜಿಯೋದಿಂದ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌! ಸಿಗಲಿದೆ 20% ಕ್ಯಾಶ್‌ಬ್ಯಾಕ್‌ ಆಫರ್‌!

ದೇಶದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ಟೆಲಿಕಾಂ ತನ್ನ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಹೆಚ್ಚಳದ ನಂತರವೂ ಗ್ರಾಹಕರಿಗೆ ಹಲವು ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಜಿಯೋ ಟೆಲಿಕಾಂ 2999ರೂ.ಬೆಲೆಯ ಹೊಸ ವಾರ್ಷಿಕ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌ ಮಾಡಿದೆ. ಈ ಪ್ಲ್ಯಾನ್‌ ವಾರ್ಷಿಕ ಪ್ಲಾನ್‌ ಆಗಿದ್ದು,365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಅನಿಯಮಿತ ಕರೆ ಪ್ರಯೋಜನ ಹಾಗೂ ದೈನಂದಿನ 2.5GB ಡೇಟಾವನ್ನು ನೀಡಲಿದೆ.

ಜಿಯೋ

ಹೌದು, ಜಿಯೋ ಟೆಲಿಕಾಂ ತನ್ನ ಬಳಕೆದಾರರಿಗೆ 2999ರೂ.ಬೆಲೆಯಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಪರಿಚಯಿಸಿದೆ. ವರ್ಷ ಪೂರ್ತಿ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆಯಲು ಬಯಸುವವರಿಗೆ ಈ ಪ್ಲಾನ್‌ ಸೂಕ್ತವಾಗಿದೆ. ಈ ಪ್ಲಾನ್‌ನಲ್ಲಿ ಜಿಯೋಮಾರ್ಟ್‌ ಮತ್ತು ಇತರ ಜಿಯೋ ಸೇವೆಗಳಲ್ಲಿ ರಿಯಾಯಿತಿಗಳನ್ನು ನೀಡಲಿದೆ. ಅದರಲ್ಲೂ ಜಿಯೋಮಾರ್ಟ್‌ ಮೂಲಕ 20% ಕ್ಯಾಶ್‌ಬ್ಯಾಕ್‌ ಆಫರ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ 2,999ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ 2999ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 2999ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 2999ರೂ. ಪ್ರಿಪೇಯ್ಡ್‌ ಪ್ಲಾನ್‌ ವಾರ್ಷಿಕ ಪ್ಲಾನ್‌ ಆಗಿದ್ದು, 365ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಅವಧಿಯಲ್ಲಿ ಪ್ರತಿನಿತ್ಯ 100SMS ಜೊತೆಗೆ ದೈನಂದಿನ 2.5GB ಡೇಟಾ ಪ್ರಯೋಜನವನ್ನು ನೀಡಲಿದೆ. ಈ ಪ್ರಿಪೇಯ್ಡ್ ಪ್ಲಾನ್‌ ನಲ್ಲಿ ಜಿಯೋಮಾರ್ಟ್‌"20% ಕ್ಯಾಶ್‌ಬ್ಯಾಕ್" ಆಫರ್‌ ನೀಡಲಿದೆ. ಅಂದರೆ ಈ ಪ್ಲಾನ್‌ ಆಯ್ಕೆ ಮಾಡಿದ ಗ್ರಾಹಕರು ಜಿಯೋಮಾರ್ಟ್‌ನಲ್ಲಿ ಖರೀದಿಸುವ ವಸ್ತುಗಳ ಮೇಲೆ 20% ರಿಯಾಯಿತಿ ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ ಜಿಯೋಟಿವಿ, ಜಿಯೋಸಿನಿಮಾ, ಜಿಯೋಸೆಕ್ಯೂರಿಟಿ ಮತ್ತು ಜಿಯೋಕ್ಲೌಡ್‌ ಸೇರಿದಂತೆ ನಾಲ್ಕು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಸಿಗಲಿದೆ. ಇದಲ್ಲದೆ ಜಿಯೋ ಟೆಲಿಕಾಂ ಹಲವು ಆಯ್ಕೆಯ ವಾರ್ಷಿಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಹೊಂದಿದ್ದು, ಅವುಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಜಿಯೋದ 2545ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 2545ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಪ್ಲಾನ್‌ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಈ ಸಮಯದಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ನೀಡಲಿದೆ. ಹಾಗೆಯೇ ಪ್ರತಿನಿತ್ಯ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋದ 2879ರೂ. ಪ್ರೀಪೇಯ್ಡ್‌ ಪ್ಲಾನ್
ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ ಟೆಲಿಕಾಂ 3,119ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂ 3,119ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂ 3,119ರೂ. ಪ್ರಿಪೇಯ್ಡ್‌ ಪ್ಲಾನ್‌ ಕೂಡ 365 ದಿನಗಳ ಮಾನ್ಯತೆ ನೀಡಲಿದೆ. ಈ ಅವದಿಯಲ್ಲಿ ಪ್ರತಿನಿತ್ಯ 100 SMS, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಪ್ರಯೋಜನ ನೀಡಲಿದೆ. ಜೊತೆಗೆ ದೈನಂದಿನ 2GB ಡೇಟಾಗೆ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯಲ್ಲಿ 10GB ಹೆಚ್ಚುವರಿ ಡೇಟಾವನ್ನು ಕೂಡ ಲಭ್ಯವಿದೆ. ಇನ್ನು ಈ ಪ್ಲಾನ್‌ ನಿಮಗೆ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ನೀಡುತ್ತದೆ. ಅಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ನೀಡುತ್ತದೆ.

ಏರ್‌ಟೆಲ್ 3,359ರೂ. ಪ್ರಿಪೇಯ್ಡ್ ಪ್ಲಾನ್‌

ಏರ್‌ಟೆಲ್ 3,359ರೂ. ಪ್ರಿಪೇಯ್ಡ್ ಪ್ಲಾನ್‌

ಏರ್‌ಟೆಲ್ ಟೆಲಿಕಾಂನ 3,359ರೂ. ಬೆಲೆಯ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಅನಿಯಮಿತ ಕರೆಗಳು, ದಿನಕ್ಕೆ 100 SMS ಜೊತೆಗೆ ದೈನಂದಿನ 2GB ಡೇಟಾವನ್ನು ನೀಡುತ್ತದೆ. ಇದಲ್ಲದೆ ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ಮೊಬೈಲ್ ಪ್ರಯೋಜನ, ಅಮೆಜಾನ್‌ ಪ್ರೈಮ್‌ ವೀಡಿಯೊ ಮೊಬೈಲ್‌ ಪ್ರಯೋಜನ, ಅಪೊಲೊ 24X7 ವಲಯ, ಉಚಿತ ಆನ್‌ಲೈನ್ ಕೋರ್ಸ್‌, ಫಾಸ್ಟ್ಯಾಗ್‌ನಲ್ಲಿ 100ರೂ. ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್‌ಗಳು ಮತ್ತು ಉಚಿತ ವಿಂಕ್‌ಮ್ಯೂಸಿಕ್ ಪ್ರಯೋಜನ ದೊರೆಯಲಿದೆ.

ಏರ್‌ಟೆಲ್ 2999ರೂ. ಪ್ರಿಪೇಯ್ಡ್‌ ಪ್ಲಾನ್‌
ಏರ್‌ಟೆಲ್ 2999ರೂ. ಪ್ರಿಪೇಯ್ಡ್‌ ಪ್ಲಾನ್‌ ವಾರ್ಷಿಕ ಪ್ಲಾನ್‌ ಆಗಿದ್ದು, 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಅನಿಯಮಿತ ಕರೆಗಳು ಮತ್ತು ದೈನಂದಿನ 100 SMS ಜೊತೆಗೆ 2GB ದೈನಂದಿನ ಡೇಟಾವನ್ನು ನೀಡುತ್ತದೆ. ಹೆಚ್ಚುವರಿ ಪ್ರಯೋಜನಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ಮೊಬೈಲ್ ಪ್ರಯೋಜನ, ಅಮೆಜಾನ್‌ ಪ್ರೈಮ್‌ ವೀಡಿಯೊ ಮೊಬೈಲ್‌ ಪ್ರಯೋಜನ, ಆಪೊಲೋ 24X7, ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ನೀಡಲಿದೆ.

ಏರ್‌ಟೆಲ್‌ನ 1799ರೂ. ಪ್ರೀಪೇಯ್ಡ್‌ ಪ್ಲಾನ್
ಏರ್‌ಟೆಲ್‌ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 24 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ವಿ ಟೆಲಿಕಾಂ 3,099ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂ 3,099ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂ 3,099ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್‌ 365 ದಿನಗಳ ಮಾನ್ಯತೆ ಪಡೆದಿದೆ. ಈ ಸಮಯದಲ್ಲಿ ಪ್ರತಿನಿತ್ಯ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100SMS ಪ್ರಯೋಜನ ನೀಡಲಿದೆ. ಜೊತೆಗೆ ದೈನಂದಿನ 1.5GB ಡೇಟಾ ಪ್ರಯೋಜನ ಕೂಡ ಸಿಗಲಿದೆ. ಇದಲ್ಲದೆ ಈ ಪ್ಲಾನ್‌ ರಾತ್ರಿಯಿಡೀ ಬಿಂಜ್‌ಗೆ ಪ್ರವೇಶವನ್ನು ನೀಡುತ್ತದೆ. ಇದರಲ್ಲಿ ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನ, ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶ ಕೂಡ ಸಿಗಲಿದೆ. ಇದರೊಂದಿಗೆ ಡೇಟಾ ಡಿಲೈಟ್‌ಗಳೊಂದಿಗೆ ಪ್ರತಿ ತಿಂಗಳು 2GB ವರೆಗಿನ ಬ್ಯಾಕಪ್ ಡೇಟಾವನ್ನು ನೀಡುತ್ತದೆ.

ವಿ ಟೆಲಿಕಾಂ 2899ರೂ ಪ್ರಿಪೇಯ್ಡ್‌ ಪ್ಲಾನ್‌
ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.

ವಿ ಟೆಲಿಕಾಂ 1799ರೂ. ಪ್ರೀಪೇಯ್ಡ್‌ ಪ್ಲಾನ್
ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಈ ಪ್ಲಾನ್‌ ಒಟ್ಟು 24 GB ಡೇಟಾ ಪ್ರಯೋಜನ ನೀಡಲಿದೆ. ವಿ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

Best Mobiles in India

English summary
Jio has launched a prepaid plan priced at Rs 2999 that gives 2.5GB daily data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+