Home
ಸುದ್ದಿಜಾಲ

Jio Recharge plan: ಜಿಯೋದಿಂದ ಹೊಸ ರೀಚಾರ್ಜ್‌ ಪ್ಲಾನ್‌ ಲಾಂಚ್‌! 84 ದಿನಗಳ ಮಾನ್ಯತೆ

ಟೆಲಿಕಾಂ ದೈತ್ಯ ಹೊಸ ವರ್ಷಕ್ಕೂ ಮುನ್ನವೇ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ. ತನ್ನ ಚಂದಾದಾರರಿಗಾಗಿ ಹೊಸ ಪ್ರೀಪೇಯ್ಡ್‌ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ಮೂಲಕ ಹೊಸ ರೀಚಾರ್ಜ್‌ ಪ್ಲಾನ್‌ ಬಯಸೋರಿಗೆ ಮತ್ತೊಂದು ಆಯ್ಕೆಯನ್ನು ನೀಡಿದೆ. ಇನ್ನು ಈ ಪ್ಲಾನ್‌ 84 ದಿನಗಳ ಮಾನ್ಯತೆಯನ್ನು ಹೊಂದಿದ್ದು, 5G ಡೇಟಾ ಸೇರಿದಂತೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಪ್ರಯೋಜನಗಳನ್ನು ನೀಡಲಿದೆ.

ಹೌದು, ರಿಲಯನ್ಸ್‌ ಜಿಯೋ 909ರೂ ಬೆಲೆಯ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಪ್ಲಾನ್‌ 100 SMS ಸಂದೇಶಗಳ ಜೊತೆಗೆ ಪ್ರತಿದಿನ 2GB ಹೆಚ್ಚಿನ ವೇಗದ ಡೇಟಾವನ್ನು ನೀಡುತ್ತದೆ. ಇದರೊಂದಿಗೆ ಹಲವು ಪ್ರಯೋಜನಗಳನ್ನು ಸಹ ಈ ಪ್ಲಾನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ರಿಲಯನ್ಸ್‌ ಜಿಯೋದ 909ರೂ ಪ್ರಿಪೇಯ್ಡ್‌ ಪ್ಲಾನ್‌ ಏನೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋದಿಂದ ಹೊಸ ರೀಚಾರ್ಜ್‌ ಪ್ಲಾನ್‌ ಲಾಂಚ್‌! 84 ದಿನಗಳ ಮಾನ್ಯತೆ

ರಿಲಯನ್ಸ್ ಜಿಯೋ 909ರೂ ಪ್ರಿಪೇಯ್ಡ್ ಪ್ಲಾನ್‌ ಪ್ರಯೋಜನಗಳು
ರಿಲಯನ್ಸ್ ಜಿಯೋ 909ರೂ ಪ್ರಿಪೇಯ್ಡ್ ಪ್ಲಾನ್‌ 84 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. ಈ ಅವಧಿಯಲ್ಲಿ ಪ್ರತಿನಿತ್ಯ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು ಹಾಗೂ ಡೈಲಿ 100 SMS ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಪ್ಲಾನ್‌ನಲ್ಲಿ Sony Liv ಮತ್ತು Zee5 ಸೇರಿದಂತೆ ವಿವಿಧ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಕೂಡ ದೊರೆಯಲಿದೆ. ಇದಲ್ಲದೆ, JioCinema, JioTV ಮತ್ತು JioCloud ಸೇರಿದಂತೆ Jio ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು.

ಇನ್ನು ದೈನಂದಿನ ಡೇಟಾ ಪ್ರಯೋಜನ ಮುಗಿದ ನಂತರ ಗ್ರಾಹಕರು 40Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಪ್ರವೇಶಿಸಬಹುದು. ಇದಲ್ಲದೆ ಹೊಸ ಜಿಯೋ ರೀಚಾರ್ಜ್ ಪ್ಲಾನ್‌ ಆಯ್ಕೆ ಮಾಡುವ ಗ್ರಾಹಕರು ಅನಿಯಮಿತ 5G ಕವರೇಜ್ ಅನ್ನು ಸಹ ಪಡೆಯುತ್ತಾರೆ.

ಜಿಯೋದಿಂದ ಹೊಸ ರೀಚಾರ್ಜ್‌ ಪ್ಲಾನ್‌ ಲಾಂಚ್‌! 84 ದಿನಗಳ ಮಾನ್ಯತೆ

ಜಿಯೋ ಟೆಲಿಕಾಂ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2023ರ ಸಮಯದಲ್ಲಿ ಹೊಸದಾಗಿ 808ರೂ ಗಳ ಪ್ರಿಪೇಯ್ಡ್ ಪ್ಲಾನ್‌ ಪರಿಚಯಿಸಿತ್ತು. ಈ ಪ್ಲಾನ್‌ ಕೂಡ 84 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಅಲ್ಲದೆ ಮೂರು ತಿಂಗಳವರೆಗೆ Disney+Hotstar ಗೆ ಪೂರಕ ಚಂದಾದಾರಿಕೆಯನ್ನು ನೀಡುತ್ತದೆ. ಇನ್ನು ಜಿಯೋ ಬಳಕೆದಾರರು MyJio ಅಪ್ಲಿಕೇಶನ್, Jio ವೆಬ್‌ಸೈಟ್ ಮತ್ತು ಥರ್ಡ್-ಪಾರ್ಟಿ ಮೊಬೈಲ್ ವ್ಯಾಲೆಟ್‌ಗಳಿಗೆ ಭೇಟಿ ನೀಡುವ ಮೂಲಕ ಹೆಚ್ಚಿನ ರೀಚಾರ್ಜ್‌ ಪ್ಲಾನ್‌ಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಇತ್ತೀಚಿಗೆ ಜಿಯೋ 5G FWA ಸೇವೆಯ ಅಡಿಯಲ್ಲಿ 401 ರೂ.ಗಳ ಹೊಸ ರೀಚಾರ್ಜ್ ಪ್ಲ್ಯಾನ್‌ (Recharge Plan) ಅನ್ನು ಪ್ರಾರಂಭಿಸಿದೆ. ಈ ಪ್ಲಾನ್‌ ಬಳಕೆದಾರರಿಗೆ ಬರೋಬ್ಬರಿ 1TB ಡೇಟಾ ಪ್ರಯೋಜನವನ್ನು ನೀಡುತ್ತದೆ. ಆದರೆ ಈ ಯೋಜನೆಯ ಲಾಭ ಪಡೆಯಲು, ಬಳಕೆದಾರರು ಮೊದಲು ಜಿಯೋದ ಯಾವುದೇ ಮೂಲ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಿಕೊಂಡಿರಬೇಕು. ಅಂದರೆ ಜಿಯೋದ ಏರ್‌ಫೈಬರ್ ಯೋಜನೆಗಳಾದ (Jio AirFiber plan) 599 ರೂ.ಗಳು, 899 ರೂ.ಗಳು ಮತ್ತು 1199 ರೂ.ಗಳು. ಅಥವಾ 1499 ರೂ.ಗಳು, 2499 ರೂ.ಗಳು ಮತ್ತು 3999 ರೂ.ಗಳಲ್ಲಿ ಯಾವುದಾದರೂ ಒಂದು ಪ್ಲಾನ್‌ ಹೊಂದಿರಬೇಕಾಗುತ್ತದೆ.

ಜಿಯೋದಿಂದ ಹೊಸ ರೀಚಾರ್ಜ್‌ ಪ್ಲಾನ್‌ ಲಾಂಚ್‌! 84 ದಿನಗಳ ಮಾನ್ಯತೆ

ಜಿಯೋದ 401 ರೂ.ಗಳ ಪ್ಲ್ಯಾನ್‌ ನಿಮ್ಮ ಹೊಸ ಜಿಯೋ ಏರ್‌ಫೈಬರ್ ಸೇವೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುವುದಿಲ್ಲ. ಬದಲಾಗಿ ಈ ಪ್ಲ್ಯಾನ್‌ ಡೇಟಾ ಬೂಸ್ಟರ್‌ನಂತೆ ಮಾತ್ರ ಕೆಲಸ ಮಾಡುತ್ತದೆ. ಈ ಪ್ಲ್ಯಾನ್‌ ಒಂದು ಬಿಲ್ಲಿಂಗ್ ಚಕ್ರದ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದು ನಿಮಗೆ ಗೊತ್ತಿರಲಿ. ನೀವು ಹೊಸ ಬಿಲ್ ಅನ್ನು ರಚಿಸಿದಾಗ, ಅದರ ಮಾನ್ಯತೆ ಪೂರ್ಣಗೊಳ್ಳುತ್ತದೆ. ಈ ಅವಧಿಯಲ್ಲಿ ನಿಮ್ಮ ಬಳಿ ಬಳಕೆಯಾಗದೆ ಡೇಟಾ ಉಳಿದಿದ್ದರೆ, ಅದನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಯೋ ಮಾಹಿತಿ ನೀಡಿದೆ.

Best Mobiles in India

English summary
Jio Launches New Prepaid Recharge Plan of Rs 909 With 84 Days Validity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+