ಜಿಯೋ 'ಜಿರೋ-ಟಚ್': ಹೊಸ ಸೇವೆಗೆ ಬೆಚ್ಚಿಬಿದ್ದ ಏರ್‌ಟೆಲ್-ವೊಡಾ..!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಪೋಸ್ಟ್ ಪೇಯ್ಡ್ ಸೇವೆಗಳಿಗೆ ಹೊಸ ವ್ಯಾಖ್ಯಾನ ನೀಡಲು ಹೊರಟಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸ ಪೋಸ್ಟ್ ಪೇಯ್ಡ್ ಆಫರ್ ಗಳನ್ನು ಘೋಷಿಸಿದೆ. ಜಿಯೋ ಪೋಸ್ಟ್ ಪೇಯ್ಡ್ ಸೇವೆ 2018ರ ಮೇ 15ರಿಂದ ಚಂದಾದಾರರಿಗೆ ಲಭ್ಯವಾಗಲಿದೆ. ಪ್ರೀಪೇಯ್ಡ್ ಸೇವೆಗಳಲ್ಲಿ ಜಿಯೋ ತಂದಂತಹ ಕ್ರಾಂತಿಕಾರಕ ಬದಲಾವಣೆಯನ್ನು ಜಿಯೋ ಪೋಸ್ಟ್ ಪೇಯ್ಡ್ ಮೂಲಕ ಪೋಸ್ಟ್ ಪೇಯ್ಡ್ ಕ್ಷೇತ್ರದಲ್ಲೂ ಪರಿಚಯಿಸಲಾಗುತ್ತಿದೆ.
ಪೋಸ್ಟ್ ಪೇಯ್ಡ್ ಗ್ರಾಹಕರ ಅಗತ್ಯಗಳಿಗೆ ಹೊಂದುವಂತಹ ಸೌಲಭ್ಯಗಳನ್ನು ಜಿಯೋ ಪೋಸ್ಟ್ ಪೇಡ್ ಮೂಲಕ ನೀಡಲು ಕ್ರಾಂತಿಕಾರಕ 'ಜಿರೋ-ಟಚ್' ವ್ಯವಸ್ಥೆಯ ಮೂಲಕ ಇದು ಭಾರತೀಯ ಗ್ರಾಹಕರ ಪೋಸ್ಟ್ ಪೇಯ್ಡ್ ಅನುಭವಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿದೆ. ಅಲ್ಲದೇ ಸದ್ಯದ ನಂಬರ್ ಬದಲಿಸದೆಯೇ ಜಿಯೋ ಪೋಸ್ಟ್ ಪೇಯ್ಡ್ ಅನುಭವ ಪಡೆಯಬಹುದಾಗಿದೆ.

ಕಡಿಮೆ ಬೆಲೆಗೆ ಸೇವೆ:
ಸಾಮಾನ್ಯವಾಗಿ ಪ್ರೀಪೇಯ್ಡ್ ಗ್ರಾಹಕರಿಗಿಂತ ವಿಪರೀತ ಹೆಚ್ಚು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆಗೆ ಸಿಲುಕುವ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಕಡಿಮೆ ಶುಲ್ಕದ ಸೇವೆ ಒದಗಿಸುವ ಮೂಲಕ ಜಿಯೋ ಪೋಸ್ಟ್ ಪೇಯ್ಡ್ ವ್ಯಾಖ್ಯಾನವನ್ನು ಬದಲಾಯಿಸಲು ಜಿಯೋ ಮುಂದಾಗಿದೆ.

ಅಂತಾರಾಷ್ಟ್ರೀಯ ಕರೆಗಳು
ಅಂತಾರಾಷ್ಟ್ರೀಯ ಕರೆಗಳು ಹಾಗೂ ಅಂತಾರಾಷ್ಟ್ರೀಯ ರೋಮಿಂಗ್ ದರಗಳನ್ನು ಆಕರ್ಷಕ ಹಾಗೂ ಕಡಿಮೆಯಾಗಿ ನಿಗದಿಪಡಿಸುವ ಮೂಲಕ ಜಿಯೋ ತನ್ನ ಗ್ರಾಹಕರಿಗೆ ತಮ್ಮ ಆಪ್ತರೊಡನೆ ಸಂಪರ್ಕದಲ್ಲಿರುವ ಸ್ವಾತಂತ್ರ್ಯವನ್ನು ನೀಡಲಿದೆ ಎನ್ನಲಾಗಿದೆ.

ಜಿರೋ-ಟಚ್;
ಭಾರತದ ಮೊದಲ 'ಜಿರೋ-ಟಚ್' ಸೇವೆಯ ಅನುಭವ ನೀಡುತ್ತಿದ್ದು, ವಾಯ್ಸ್, ಇಂಟರ್‌ನೆಟ್, ಎಸ್ಸೆಮ್ಮೆಸ್, ಅಂತಾರಾಷ್ಟ್ರೀಯ ಕರೆ ಮುಂತಾದ ಎಲ್ಲ ಪೋಸ್ಟ್ ಪೇಯ್ಡ್ ಸೇವೆಗಳಲ್ಲಿ ಪಡೆಯಬಹುದಾಗಿದೆ. ಅನಿರೀಕ್ಷಿತ ಹಾಗೂ ದುಬಾರಿ ಬಿಲ್‌ಗಳಿಂದ ಮುಕ್ತಿಯೂ ದೊರೆಯಲಿದೆ.

ಆಟೋ-ಪೇ:
ಬಿಲ್ ಪಾವತಿ ಬಗ್ಗೆ ಚಿಂತೆ ಬಿಡಿ; ಬಾರಿಂಗ್ ಅಥವಾ ಬಿಲ್ಲಿಂಗ್ ಸಮಸ್ಯೆಗಳಿಂದ ಪಾರಾಗಿ - ಜಿರೋ ಕ್ಲಿಕ್ ಪಾವತಿ, ಪ್ರತಿ ತಿಂಗಳು ಆರಾಮಾವಾಗಿ ಬಿಲ್ ಪೇಮೆಂಟ್ ಅನ್ನು ಆಟೋಮೆಟಿಕ್ ಆಟೋ-ಪೇ ಆಗಿ ಮಾಡಿರಿ. ನಿಮ್ಮ ಬಿಲ್ ಅನ್ನು ಬೇಕಾದಾಗ ಪರೀಕ್ಷಿಸಿಕೊಳ್ಳಿ, ತಿಂಗಳ ಕೊನೆಯಲ್ಲಿ ಇಮೇಲ್ ಮೂಲಕವೂ ಪಡೆಯಿರಿ!

ಮಾಸಿಕ ರೂ. 199
ಅನ್‌ಲಿಮಿಟೆಡ್ ಇಂಡಿಯಾ ಪ್ಲಾನ್ ಎಂದು ಹೆಸರಿಟ್ಟಿರುವ ರೂ.199 ಪ್ಲಾನ್‌ನಲ್ಲಿ ಅಂತಾರಾಷ್ಟ್ರೀಯ ಕರೆ ದರಗಳು ಪ್ರತಿ ನಿಮಿಷಕ್ಕೆ 50 ಪೈಸೆಯಿಂದ ಪ್ರಾರಂಭವಾಗಲಿದೆ. ಸ್ಥಳೀಯ ದರಗಳಂತಹ ಬೆಲೆಯಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಪಡೆಯಬಹುದಾಗಿದೆ.

ಅತೀ ಕಡಿಮೆ ದರ;
ರೂ. 2-2-2ರಿಂದ ಪ್ರಾರಂಭವಾಗುವ ವಾಯ್ಸ್-ಡೇಟಾ- SMS ದರ (ವಾಯ್ಸ್ ಪ್ರತಿ ನಿಮಿಷಕ್ಕೆ ರೂ. 2, ಡೇಟಾ ಪ್ರತಿ MBಗೆ ರೂ. 2, ಪ್ರತಿ SMSಗೆ ರೂ. 2) ಅಥವಾ ದಿನಕ್ಕೆ ರೂ. 500ರಿಂದ ಪ್ರಾರಂಭವಾಗುವ ಅಪರಿಮಿತ ಸೇವೆ (ತೆರಿಗೆ ಪ್ರತ್ಯೇಕ) ಅಲ್ಲದೇ ಅಂತಾರಾಷ್ಟ್ರೀಯ ಸೇವೆಗಳನ್ನು ಪ್ರಾರಂಭಿಸಲು ಯಾವುದೇ ಸುರಕ್ಷತಾ ಠೇವಣಿಯ ಅಗತ್ಯವಿಲ್ಲ

ಅಂತಾರಾಷ್ಟ್ರೀಯ ರೋಮಿಂಗ್:
ಜಿಯೋ ಫೋಸ್ಟ್ ಪೇಯ್ಡ್ ಬಳಕೆದಾರರಿಗೆ ಸ್ವದೇಶದಂತೆಯೇ ವಿದೇಶದಲ್ಲೂ ಸಂಚರಿಸುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಯನ್ನು ನೀಡುತ್ತದೆ. ಒಂದೇ ಕ್ಲಿಕ್‌ನಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಯನ್ನು ನೀಡಲಿದೆ. ಯಾವುದೇ ಮಾಸಿಕ ಶುಲ್ಕ ಅಥವಾ ಸುರಕ್ಷತಾ ಠೇವಣಿ ಇಲ್ಲದೆ ಅಂತಾರಾಷ್ಟ್ರೀಯ ರೋಮಿಂಗ್ ಸಕ್ರಿಯಗೊಳಿಸಿಕೊಳ್ಳಬಹುದು.

ನಂಬರ್ ಬದಲಿಸದೆಯೇ ಜಿಯೋ:
ಈಗ ಇರುವ ನಿಮ್ಮ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಂಡು ಜಿಯೋ ಸೇರಿ, ಮೊಬೈಲ್ ನಂಬರ್ ಪೋರ್ಟಬಿಲಿಟಿಯನ್ನು (ಎಂಎನ್‌ಪಿ) ಸುಲಭವಾಗಿ ಆಯ್ದುಕೊಳ್ಳಬಹುದಾಗಿದೆ. ಮನೆಬಾಗಿಲಲ್ಲೇ ಜಿಯೋ ಸಿಮ್ ಪಡೆದು ಆಕ್ಟಿವೇಟ್ ಮಾಡಿಸಿಕೊಳ್ಳುವ ಅನುಕೂಲಕರ ಸೌಲಭ್ಯವೂ ದೊರೆಯಲಿದೆ.


ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳು
ಅಪರಿಮಿತ ವಾಯ್ಸ್ (ಹೊರದೇಶದಲ್ಲಿ ಮಾಡುವ ಸ್ಥಳೀಯ ಕರೆಗಳು + ಭಾರತಕ್ಕೆ ಮಾಡುವ ಕರೆಗಳು), ಅಪರಿಮಿತ SMS ಹಾಗೂ ಅಪರಿಮಿತ ಡೇಟಾ (ಪ್ರತಿದಿನ 250 MB ಅತಿವೇಗದ ಡೇಟಾ ಹಾಗೂ ಅನಂತರ 64 KBPS ವೇಗದಲ್ಲಿ ಅಪರಿಮಿತ)

ರೂ. 2875 ಪ್ಲಾನ್
ಅಪರಿಮಿತ ವಾಯ್ಸ್ (ಹೊರದೇಶದಲ್ಲಿ ಮಾಡುವ ಸ್ಥಳೀಯ ಕರೆಗಳು + ಭಾರತಕ್ಕೆ ಮಾಡುವ ಕರೆಗಳು), ಅಪರಿಮಿತ SMS ಹಾಗೂ ಅಪರಿಮಿತ ಡೇಟಾ (ಪ್ರತಿದಿನ 250 MB ಅತಿವೇಗದ ಡೇಟಾ ಹಾಗೂ ಅನಂತರ 64 KBPS ವೇಗದಲ್ಲಿ ಅಪರಿಮಿತ)

ರೂ. 5751 ಪ್ಲಾನ್
ಅಪರಿಮಿತ ವಾಯ್ಸ್ (ಹೊರದೇಶದಲ್ಲಿ ಮಾಡುವ ಸ್ಥಳೀಯ ಕರೆಗಳು + ಭಾರತಕ್ಕೆ ಮಾಡುವ ಕರೆಗಳು), ಅಪರಿಮಿತ SMS ಹಾಗೂ ಅಪರಿಮಿತ ಡೇಟಾ (5 GB ಅತಿವೇಗದ ಡೇಟಾ ಹಾಗೂ ಅನಂತರ 64 KBPS ವೇಗದಲ್ಲಿ ಅಪರಿಮಿತ)


Click it and Unblock the Notifications








