ಟೆಲಿಕಾಂ ಕಂಪನಿಗೆ ನಡುಕ ಹುಟ್ಟಿಸಿದ ಜಿಯೋ ಹೊಸ ಪ್ಲಾನ್...! ರೂ.199 ಎಷ್ಟೆಲ್ಲಾ ಇದೆ..?
ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸದೊಂದು ಹೆಜ್ಜೆಯನ್ನು ಮಾರುಕಟ್ಟೆಯಲ್ಲಿ ಇರಿಸಿದೆ. ಇಷ್ಟು ದಿನ ಪ್ರೀಪೇಯ್ಡ್ ಬಳಕೆದಾರರನ್ನು ಆಕರ್ಷಿಸುತ್ತಿದ್ದ ಜಿಯೋ, ಇನ್ನು ಮುಂದೆ ತನ್ನಲ್ಲಿಯೇ ಉಳಿಯುವ ಪೋಸ್ಟ್ ಪೇಯ್ಡ್ ಬಳಕೆದಾರರನ್ನು ಸೆಳೆಯಲು ಯೋಜನೆಯನ್ನು ರೂಪಿಸಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಜಿಯೋ ಇರಿಸಿರುವ ಹೆಜ್ಜೆಯೂ ಕ್ರಾಂತಿಕಾರವಾಗಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಪೋಸ್ಟ್ ಪೇಯ್ಡ್ ಸೇವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ ಜಿಯೋ ಸಹ ಪೋಸ್ಟ್ ಪೇಯ್ಡ್ ಬಳಕೆದಾದರಿಗೆ ಆಫರ್ ನೋಡಲು ಮುಂದಾಗಿದೆ. ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳಿಂತ ಉತ್ತಮವಾದ ಆಫರ್ ಅನ್ನು ನೀಡಲು ಮುಂದಾಗಿದ್ದು, ಬಳಕೆದಾರರು ಒಮ್ಮೆ ಜಿಯೋ ಸೇವೆಯನ್ನು ಪಡೆದುಕೊಂಡರೆ ಬೇರೆ ಟೆಲಿಕಾಂ ಕಡೆಗೆ ಮುಖ ಮಾಡಲು ಮುಂದಾಗುವುದಿಲ್ಲ ಎನ್ನಲಾಗಿದೆ.

ರೂ.199 ಪ್ಲಾನ್:
ಜಿಯೋ ಬಳಕೆದಾರರಿಗೆ ರೂ.199ಕ್ಕೆ ತಿಂಗಳ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಈ ಪ್ಲಾನ್ ಹತ್ತಿರವಾಗುವ ನಿರೀಕ್ಷೆ ಇದೆ.

25GB ಡೇಟಾ:
ಜಿಯೋ ರೂ.199ಕ್ಕೆ ಪೋಸ್ಟ್ ಪೇಯ್ಡ್ ಪ್ಲಾನ್ ಅನ್ನು ನೀಡುವುದರೊಂದಿಗೆ ಬಳಕೆದಾರರಿಗೆ ತಿಂಗಳಿಗೆ 25GB 4G ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಬೇರೆ ಟೆಲಿಕಾಂ ಕಂಪನಿಗಿಂತಲೂ ಇಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಉಚಿತ ಕರೆ ಮಾಡುವ ಅವಕಾಶ:
ಈಗಾಗಲೇ ಪ್ರೀ ಪೇಯ್ಡ್ ಬಳಕೆದಾರರಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಇದೇ ಮಾದರಿಯಲ್ಲಿ ಜಿಯೋ ತನ್ನ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಸಂಪೂರ್ಣ ವಾಗಿ ಉಚಿತ ಕರೆ ಮಾಡುವ ಮತ್ತು ಮೇಸೆಜ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಮೇ 15 ರಿಂದ ಆರಂಭ:
ಜಿಯೋ ಲಾಂಚ್ ಮಾಡಲು ಮುಂದಾಗಿರುವ ರೂ.199 ಪೋಸ್ಟ್ ಪೇಯ್ಡ್ ಪ್ಲಾನ್ ಮೇ 15 ರಿಂದ ಲಭ್ಯವಿರಲಿದೆ ಎನ್ನಲಾಗಿದ್ದು, ಅಂದಿನಿಂದಲೇ ಬಳಕೆದಾರರು ಹೊಸ ಪ್ಲಾನ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇಂಟರ್ನ್ಯಾಷನಲ್ ಕಾಲ್:
ಜಿಯೋ ಫೋಸ್ಟ್ ಪೇಯ್ಡ್ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೇಂದರೆ ಇಂಟರ್ನ್ಯಾಷನಲ್ ಕರೆಗಳು ಪ್ರತಿ ನಿಮಿಷಕ್ಕೆ 50 ಪೈಸೆಯಿಂದ ಶುರುವಾಗಲಿದೆ. ದೂರದ ದೇಶದಲ್ಲಿ ಇರುವವರೊಂದಿಗೆ ಮಾತನಾಡಲು ಇದು ಉತ್ತಮ ಸಂಪರ್ಕ ಸೇತುವೆಯಾಗಲಿದೆ.

ಇನ್ನು ಪ್ಲಾನ್‌ಗಳಿದೆ:
ಇದಲ್ಲದೇ ಜಿಯೋರೂ.575 ಮತ್ತು ರೂ.2874 ಮತ್ತು ರೂ.5751 ರೋಮಿಂಗ್ ಪ್ಲಾನ್ ಗಳನ್ನು ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರಗೆ ಹೆಚ್ಚಿನ ಲಾಭಗಳು ದೊರೆಯಲಿದೆ. ಜಿಯೋ ಪ್ರೀಪೆಯ್ಡ್ ಬಳಕೆದಾರರಿಗಿಂತಲೂ ಪೋಸ್ಟ್ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ಏರ್‌ಟೆಲ್-ವೊಡಾಗೆ ನಷ್ಟ:
ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲ ಪ್ರೀಪೇಯ್ಡ್ ಬಳಕೆದಾರರನ್ನು ಕಳೆದುಕೊಂಡ ಏರ್‌ಟೆಲ್-ವೊಡಾ ಸಾಕಷ್ಟು ನಷ್ಟ ಅನುಭವಿಸಿದ್ದವು, ಇದಾದ ನಂತರದಲ್ಲಿ ಪೋಸ್ಟ್ ಪೇಯ್ಡ್ ಬಳಕೆದಾರರನ್ನು ಸೆಳೆಯಲು ಮುಂದಾಗಿದ್ದವು.

ಮತ್ತೊಂದು ನಷ್ಟ:
ಜಿಯೋ ಫೋಸ್ಟ್ ಪೇಯ್ಡ್ ಬಳಕೆದಾರರಿಗೂ ಗಾಳ ಹಾಕಿರುವುದು ಮತ್ತೇ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿವೆ. ಪೋಸ್ಟ್ ಪೇಯ್ಡ್ ಬಳಕೆದಾರರು ಜಿಯೋ ಕಡೆಗೆ ಮುಖ ಮಾಡಿದರೆ ಈ ಕಂಪನಿಗಳು ಬಾಗಿಲು ಹಾಕುವುದು ಖಂಡಿತ.


Click it and Unblock the Notifications








