Home
ಸುದ್ದಿಜಾಲ

ಹೊಸ ಪ್ರಿಪೇಯ್ಡ್‌ರಿಚಾರ್ಜ್‌ಪ್ಲ್ಯಾನ್‌ ಪರಿಚಯಿಸಿದ ಜಿಯೋ!

ದೇಶದ ಟೆಲಿಕಾಂ ವಲಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ರಿಲಾಯನ್ಸ್‌ ಜಿಯೋ ಸದ್ಯ ಗ್ರಾಹಕರ ನೆಚ್ಚಿನ ಆಯ್ಕೆಯ ಸಂಸ್ಥೆಯಾಗಿದೆ. ಪ್ರಾರಂಭದಿಂದಲೂ ಇಲ್ಲಿಯವರೆಗೂ ಹೊಸತನದ ಆಕರ್ಷಕ ಆಫರ್‌ಗಳನ್ನ ನೀಡಿದ್ದ ಜೊಯೋ ಡೇಟಾ ಪ್ಲ್ಯಾನ್‌ಗಳಲ್ಲಿ ಹೊಸ ಪರಂಪರೆಯನ್ನೇ ಶುರು ಮಾಡಿತ್ತು. ಕಡಿಮೆ ವೆಚ್ಚದಲ್ಲಿ 1GB ಡೇಟಾ ನೀಡುವ ಮೂಲಕ ಬಿರುಗಾಳಿಯನ್ನೇ ಎಬ್ಬಿಸಿದ್ದ ಜಿಯೋ ಇದೀಗ ಪ್ರತಿದಿನ 3GB ಡೇಟಾ ಪ್ರಯೋಜನ ಒದಗಿಸುವ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಸಹ ನೀಡಿದೆ.

ಇನ್ನು

ಇನ್ನು ಕಳೆದ ವರ್ಷ ಬದಲಾದ ಟ್ರಾಯ್‌ ನಿಯಮದಿಂದ ಟೆಲಿಕಾಂ ಕ್ಷೇತ್ರದಲ್ಲಿ ಪ್ರಿಪೆಯ್ಡ್‌ ಪ್ಲ್ಯಾನ್‌ಗಳು ಕೂಡ ಬಲದಾಗಿವೆ. ಇದಕ್ಕೆ ತಕ್ಕಂತೆ ಟೆಲಿಕಾಂ ಕಂಪೆನಿಗಳು ಸಹ ತಮ್ಮ ಗ್ರಾಹಕರನ್ನು ಸೆಳೆಯಲು ಹೊಸಹೊಸ ಪ್ಲ್ಯಾನ್‌ಗಳನ್ನ ಪರಿಚಯಿಸುತ್ತಿವೆ. ಸದ್ಯ ಇದೀಗ ಜಿಯೋ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಅನ್ನು ನೀಡಿದೆ. ಈ ಪ್ಲ್ಯಾನ್‌ ಒಂದು ವರ್ಷದ ಅವಧಿಯದ್ದಾಗಿದ್ದು, ಗ್ರಾಹಕರಿಗೆ ವರ್ಷ ಪೂರ್ತಿ ಪ್ರತಿದಿನ 1.5 ಜಿಬಿ ಹೈಸ್ಪೀಡ್ ಡೇಟಾ ಹಾಗೂ ಉಚಿತ ಕರೆಗಳನ್ನ ಮಾಡಲು ಅವಕಾಶ ನೀಡಲಿದೆ

ಇತ್ತೀಚಿನ

ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಟೆಲಿಕಾಂ ಕಂಪೆನಿಗಳ ನಡುವೆ ಭಾರಿ ಪೈಪೋಟಿ ಕಂಡು ಬರುತ್ತಿದೆ. ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜ ಎನಿಸಿಕೊಳ್ಳುತ್ತಿರುವ ಜಿಯೋ ಗೆ ಇತರೆ ಕಂಪೆನಿಗಳು ಸೆಡ್ಡು ಹೊಡೆಯಲು ಮುಂದಾಗುವ ವೇಳೆಗೆ ಮತ್ತೆ ರಿಲಯನ್ಸ್ ಜಿಯೋ ಹೊಸ ಹೊಸ ಪ್ಲ್ಯಾನ್‌ಗಳನ್ನ ಪರಿಚಯಿಸುತ್ತಲೇ ಮುನ್ನುಗ್ಗುತ್ತಿದೆ. ಸದ್ಯ ಇದೀಗ ಜಿಯೋ 336 ದಿನಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ ಅನ್ನು ಕೇವಲ 2,121 ರೂ ವೆಚ್ಚದಲ್ಲಿ ಘೋಷಿಸಿದ್ದು, ಸಂಚಲನ ಸೃಷ್ಟಿಸಿದೆ.

ಹೊಸ

ಹೊಸ ರೀಚಾರ್ಜ್ ಯೋಜನೆಯು ಪ್ರತಿದಿನ 1.5 ಜಿಬಿ ಹೈಸ್ಪೀಡ್ ಡೇಟಾ ವನ್ನು ನೀಡಲಿದ್ದು. ಜೊತೆಗೆ, ಹೊಸ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಜಿಯೋ-ಟು-ಜಿಯೋ ಮತ್ತು ಲ್ಯಾಂಡ್‌ಲೈನ್ ಧ್ವನಿ ಕರೆಗಳನ್ನು ಮತ್ತು ಜಿಯೋ ಅಲ್ಲದ ಕರೆಗಾಗಿ 12,000 ನಿಮಿಷಗಳನ್ನು ಒದಗಿಸುತ್ತದೆ. ಈ ಯೋಜನೆಯು ಪ್ರತಿದಿನ 100 ಎಸ್‌ಎಂಎಸ್ ಸಂದೇಶಗಳನ್ನು ಸಹ ಒಳಗೊಂಡಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಮತ್ತು ಜಿಯೋ ನ್ಯೂಸ್‌ ನಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಯನ್ನು ಸಹ ನೀಡುತ್ತದೆ.

ಜಿಯೋ

ಸದ್ಯ ಜಿಯೋ 2,121 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ. ಜಿಯೋ ಸೈಟ್‌, ಗೂಗಲ್ ಪೇ ಮತ್ತು ಪೇಟಿಎಂ ಸೇರಿದಂತೆ ಇತರೆ ಎಲ್ಲಾ ರೀಚಾರ್ಜ್ ಆಪ್ಲಿಕೇಶನ್‌ಗಳಲ್ಲೂ ಲಭ್ಯವಿದೆ. ಹಾಗೇ ನೋಡಿದ್ರೆ ಇದೇ ಮಾದರಿಯ ಯೋಜನೆಯನ್ನ ಜಿಯೋ ಕಳೆದ ಡಿಸೆಂಬರ್‌ನಲ್ಲಿ 2020 ಹ್ಯಾಪಿ ನ್ಯೂ ಇಯರ್ ಆಫರ್ ಅಡಿಯಲ್ಲಿ 2,020 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನ ಪ್ರಾರಂಭಿಸಿತ್ತು. 2,020ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾ, ಅನಿಯಮಿತ ಜಿಯೋ-ಟು-ಜಿಯೋ ಮತ್ತು ಲ್ಯಾಂಡ್‌ಲೈನ್ ಕರೆಗಳು ಮತ್ತು 365 ದಿನಗಳವರೆಗೆ ಪ್ರತಿದಿನ 100 ಎಸ್‌ಎಂಎಸ್ ಸಂದೇಶಗಳನ್ನು ಒದಗಿಸುತ್ತದೆ. ಆದರೆ ಇದು ಸೀಮಿತ ಅವಧಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಆಗಿತ್ತು. ಆದರೆ 2,121 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಯಾವುದೇ ಸೀಮಿತ ಅವಧಿಯನ್ನ ಹೊಂದಿಲ್ಲ.

Best Mobiles in India

English summary
Jio Launches Rs. 2,121 Prepaid Recharge Plan With 1.5GB Daily High-Speed Data for 336 Days.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+