ಏರ್‌ಟೆಲ್-ವೊಡಾಗೆ ಶಾಕ್: ಜಿಯೋ ಲಾಂಚ್ ಮಾಡಿದೆ ವರ್ಷದ ಆಫರ್..!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿರುವ ಜಿಯೋ, ಮತ್ತೊಂದು ಸುತ್ತಿನಲ್ಲಿ ತನ್ನ ಬಳಕೆದಾರರಿಗೆ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನುವ ಆಫರ್ ಗಳನ್ನು ನೀಡಲಿದೆ. ಇಷ್ಟು ದಿನ ಕೇವಲ ಮೂರು ತಿಂಗಳಿಗೆ ರಿಚಾರ್ಜ್ ಮಾಡಿಸಿಕೊಳ್ಳುತ್ತಿದ್ಷವರಿಗೆ ವರ್ಷದ ಆಫರ್ ಘೋಷಣೆ ಮಾಡಿದ್ದು, ಈ ಮೂಲಕ ತನ್ನ ಬಳಕೆದಾರರನ್ನು ಹಿಡಿದಿಡುವ ಪ್ರಯತ್ನವನ್ನು ಜೋರಾಗಿ ಮಾಡುತ್ತಿದೆ. ಜಿಯೋ ಹೊಸದಾಗಿ ಲಾಂಚ್ ಮಾಡಲು ಮುಂದಾಗಿರುವ ಪ್ಲಾನ್‌ನಿಂದ ಇತರೆ ಕಂಪನಿಗಳಿಗೆ ಲಾಸ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧೆಯನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಎಲ್ಲಾ ಟೆಲಿಕಾಂ ಕಂಪನಿಗಳು ದೊಡ್ಡ ಮಟ್ಟದ ಆಫರ್ ಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಂಪನಿಗಳು ಸೆಡ್ಡು ಹೊಡೆಯುವ ಮಾದರಿಯಲ್ಲಿ ಜಿಯೋ ವರ್ಷದ ಸೇವೆಯನ್ನು ನೀಡುವ ಪ್ಲಾನ್‌ಗಳನ್ನು ಲಾಂಚ್ ಮಾಡಿದೆ. ಇದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ.

ನಾಲ್ಕು ಹೊಸ ಪ್ಲಾನ್‌ಗಳು:
ಜಿಯೋ ತನ್ನ ಬಳಕೆದಾರರಿಗೆ ಒಮ್ಮೆಗೆ ನಾಲ್ಕು ದೊಡ್ಡ ಪ್ಲಾನ್‌ಗಳನ್ನು ಪರಿಚಯ ಮಾಡಲು ಮುಂದಾಗಿದೆ. ಇದರಲ್ಲಿ ರೂ.999 ಪ್ಲಾನ್, ರೂ.1999 ಪ್ಲಾನ್, ರೂ.4999 ಪ್ಲಾನ್ ಹಾಗೂ ರೂ.9999 ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ಈ ಎಲ್ಲಾ ಪ್ಲಾನ್‌ಗಳು ಹೆಚ್ಚು ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಲಿದೆ.

ರೂ.999 ಜಿಯೋ ಪ್ಲಾನ್:
ಜಿಯೋ ಲಾಂಚ್ ಮಾಡಿರುವ ರೂ.999 ಪ್ಲಾನ್‌ನಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದ್ದು, ಇದರಲ್ಲಿ ಬಳಕೆದಾರರಿಗೆ 90 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಅಲ್ಲದೇ 60 GB ಡೇಟಾ ದೊರೆಯಲಿದ್ದು, ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

ರೂ.1999 ಜಿಯೋ ಪ್ಲಾನ್:
ಜಿಯೋ ಲಾಂಚ್ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 180 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಒಟ್ಟು 125 GB ಡೇಟಾ ಬಳಕೆಗೆ ಲಭ್ಯವಿರಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

ರೂ.4999 ಜಿಯೋ ಪ್ಲಾನ್:
ಜಿಯೋ ಲಾಂಚ್ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 360 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಒಟ್ಟು 350 GB ಡೇಟಾ ಬಳಕೆಗೆ ಲಭ್ಯವಿರಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

ರೂ.1999 ಜಿಯೋ ಪ್ಲಾನ್:
ಜಿಯೋ ಲಾಂಚ್ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 360 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಒಟ್ಟು 750 GB ಡೇಟಾ ಬಳಕೆಗೆ ಲಭ್ಯವಿರಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಲಭ್ಯವಿದೆ. ಇದಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ಮಾಡಿಕೊಡಲಾಗಿದೆ.

ಅಂಬಾನಿಯ ಒಂದು ದಿನದ ಆದಾಯ ಕೇಳಿ ಬೆಚ್ಚಿಬಿದ್ದ ಭಾರತೀಯರು!!
ಜಿಯೋ ಮೂಲಕ ಭಾರತದ ಟೆಲಿಕಾಂನಲ್ಲಿ ಚಂಡಮಾರುತವನ್ನೇ ಶುರುಮಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯ ಒಂದು ದಿನದ ಆದಾಯ ಎಷ್ಟು ಎಂದು ತಿಳಿದರೆ ಖಂಡಿತಾ ನೀವು ಶಾಕ್ ಆಗ್ತೀರಾ.ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಪಟ್ಟ ಪಡೆದುಕೊಂಡಿರುವ ಅಂಬಾನಿ ಈಗ ಒಂದು ದಿನದ ಆದಾಯದ ಲೆಕ್ಕದಲ್ಲಿ ಎಲ್ಲರಿಗೂ ದಿಗ್ಭ್ರಮೆಗೊಳಿಸಿದ್ದಾರೆ.
ಹೌದು, ಬಾರ್‌ಕ್ಲೇಸ್ ಹುರಾನ್ ಇಂಡಿಯಾ ಎಂಬ ಸಂಸ್ಥೆ ಸಿದ್ಧಪಡಿಸಿದ ಸಿರಿವಂತರ ಪಟ್ಟಿ ಈ ವಿಷಯ ಹೊರಬಿದ್ದಿದೆ. ಒಟ್ಟು 3,71,000 ಕೋಟಿ ರೂ. ಸಂಪತ್ತಿನೊಂದಿಗೆ ಅಂಬಾನಿ ಸತತ 7 ವರ್ಷಗಳಿಂದ ಭಾರತದ ನಂ.1 ಶ್ರೀಮಂತರೆನಿಸಿರುವ ಅಂಬಾನಿ ಕಳೆದ ಒಂದು ವರ್ಷದಿಂದೀಚೆಗೆ ಪ್ರತಿ ದಿನ 300 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಂಬಾನಿಯ ನಂತರದ ಸ್ಥಾನದಲ್ಲಿರುವ ಮೂವರ ಆದಾಯ ಒಟ್ಟುಗೂಡಿಸಿದರೂ, ಅದಕ್ಕಿಂತ ಹೆಚ್ಚು ಆಸ್ತಿ ಮುಖೇಶ್ ಅಂಬಾನಿಯವರದ್ದಾಗುತ್ತದೆ ಎಂದು ವರದಿ ಹೇಳಿದೆ. ಹಾಗಾದರೆ, ನಂತರದ ಮೂರು ಸ್ಥಾನಗಳಲ್ಲಿರುವ ಭಾರತೀಯರು ಯಾರು? ಮುಕೇಶ್ ಅಂಬಾನಿಯ ಬಗ್ಗೆ ಇರುವ ಇನ್ನಿತರ ಕುತೋಹಲಕಾರಿ ಅಂಶಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಭಾರತದ ಮೊದಲ 4 ಶ್ರೀಮಂತರು!
1,000 ಕೋಟಿ ರೂ.ಗೂ ಅಧಿಕ ನಿವ್ವಳ ಸಂಪತ್ತು ಇರುವ ಭಾರತೀಯರ ಪಟ್ಟಿಯನ್ನು ಬಾರ್‌ಕ್ಲೇಸ್ ಹುರಾನ್ ಇಂಡಿಯಾ ಸಂಸ್ಥೆ ಸಿದ್ಧಪಡಿಸಿದೆ. ಅದರಲ್ಲಿ ಅಂಬಾನಿ ಮೊದಲ ಸ್ಥಾನದಲ್ಲಿದ್ದರೆ, ಎಸ್‌ಪಿ ಹಿಂದೂಜಾ ಮತ್ತು ಕುಟುಂಬ (1,59,000 ಕೋಟಿ ರೂ.), ಎಲ್‌ಎನ್ ಮಿತ್ತಲ್ ಮತ್ತು ಕುಟುಂಬ (1,14,500 ಕೋಟಿ ರೂ.) ಮತ್ತು ಅಜೀಂ ಪ್ರೇಮ್‌ಜಿ (96,100 ಕೋಟಿ ರೂ.) ನಂತರದ ಮೂರು ಸ್ಥಾನಗಳಲ್ಲಿದ್ದಾರೆ.

ಜಿಯೊ ಚಂಡಮಾರುತ!
ಮುಖೇಶ್ ಅಂಬಾನಿ ಜಿಯೊವನ್ನು ಪ್ರಾರಂಭಿಸಿದಾಗ, ಭಾರತದ ಟೆಲಿಕಾಂ ವಲಯವು ಚಂಡಮಾರುತಕ್ಕೆ ಸಿಲುಕಿದಂತಾಯಿತು. ಜಿಯೋ ಶುರುವಾದ ಒಂದು ತಿಂಗಳೊಳಗೆ 16 ದಶಲಕ್ಷ ಚಂದಾದಾರರನ್ನು ಗಳಿಸಿ ದಾಖಲೆ ಸೃಷ್ಟಿಸಿತು. ಸ್ಪರ್ಧಾತ್ಮಕ ಟೆಲಿಕಾಂ ಬೆಲೆ ಯುದ್ಧವನ್ನು ಹೆಚ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿರುವ ಜಿಯೋ ಈಗಲೂ ಗ್ರಾಹಕರ ಅತ್ಯುತ್ತಮ ಟೆಲಿಕಾಂ ಕಂಪೆನಿಯಾಗಿದೆ.

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!
ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಮಾಲಿಕತ್ವ ಹೊಂದಿರುವ ಅಂಬಾನಿ ಮುಂಬಯಿ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಆದರೆ, ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೆಚ್ಚಾಗಿ ಹಾಕಿಯನ್ನು ಆಡುತ್ತಿದ್ದರು ಮತ್ತು ಹಾಕಿ ಆಟದ ಕಾರಣದಿಂದಾಗಿ ಅವರು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!
ಐಟಿ ಉದ್ಯಮೇತರನಾಗಿ ಮುಖೇಶ್ ಅಂಬಾನಿ ಯಾವಾಗಲೂ ಒಳ್ಳೆಯ ಉದ್ಯಮಿ ಎನ್ನುತ್ತವೆ ವರದಿಗಳು. ಇದಕ್ಕೆ ಪೂರಕವೆಂಬಂತೆ ಮುಖೇಶ್ ಅಂಬಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಂಸ್ಕರಣಾಗಾರವನ್ನು ಹೊಂದಿದ್ದಾರೆ. ಪ್ರಪಂಚದ ಅತಿದೊಡ್ಡ ಸಂಸ್ಕರಣಾಗಾರವಾದ ದಿನಕ್ಕೆ 6,68,000 ಬ್ಯಾರೆಲ್ ರಿಫೈನರಿ ನಡೆಯುತ್ತದಂತೆ.

ವಿಶ್ವದ ಅತ್ಯಂತ ದುಬಾರಿ ಮನೆ!!
ಮುಖೇಶ್ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಮನೆಯ ಮಾಲಿಕತಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಇರುವ ಅಂಟಿಲಿಯಾ ಮನೆಯ ಅಂದಾಜು ಮೌಲ್ಯ ಸುಮಾರು 1 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಈ ಮನೆ 27 ಅಂತಸ್ತುಗಳನ್ನು ಹೊಂದಿದ್ದು, 600 ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದೆ ಎನ್ನಲಾಗಿದೆ.

ಅಂಬಾನಿ ಸ್ನೇಹಿತರು ಯಾರು ಗೊತ್ತಾ?
ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೊಂದಿದ್ದ ಬಾಲ್ಯ ಸ್ನೇಹಿತರನ್ನೇ ಮುಂದೆಯೂ ಸ್ನೇಹಿತರನ್ನಾಗಿಯೇ ಕಾಪಾಡಿಕೊಂಡುಬಂದಿದ್ದಾರೆ. ಉದ್ಯಮಿಗಳಾದ ಆದಿ ಗೋದ್ರೆಜ್ ಮತ್ತು ಆನಂದ್ ಮಹೀಂದ್ರಾ ಅವರು ಅಂಬಾನಿ ಅವರ ಶಾಲೆಯ ಸಹವರ್ತಿಗಳು ಮತ್ತು ಅವರು ಈಗಲೂ ಅತ್ಯುತ್ತಮ ಸ್ನೇಹಿತರು.

ಮದ್ಯಪಾನ ಮಾಡಲೇ ಇಲ್ಲ!!
ಇಂದಿನ ಶ್ರೀಮಂತ ಮಕ್ಕಳಂತೆ ಮುಖೇಶ್ ಅಂಬಾನಿ ಎಂದಿಗೂ ಮದ್ಯಪಾನ ಮಾಡಲೇ ಇಲ್ಲವಂತೆ. ಕಾಲೇಜು ದಿನಗಳಿಂದಲೂ ಮದ್ಯಪಾನದಿಂದ ದೂರವೇ ಉಳಿದಿದ್ದ ಮುಖೇಶ್ ಅಂಬಾನಿ ಅವರು ಮಾಂಸವನ್ನು ತಿನ್ನುವುದಿಲ್ಲವಂತೆ. ಮೊಟ್ಟೆಯನ್ನು ತನ್ನದಂತಹ ಶುದ್ಧ ಸಸ್ಯಾಹಾರಿ ಅವರಂತೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!
ಮುಖೇಶ್ ಅಂಬಾನಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂಬಾನಿ ಬಳಿಯಲ್ಲಿ 168 ಕ್ಕಿಂತಲೂ ಹೆಚ್ಚು ಕಾರುಗಳಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಹಾಗೂ ಬಾಂಬ್ ಸ್ಫೋಟವನ್ನು ತಡೆಯುವಷ್ಟು ರಕ್ಷಾಕವಚ ಹೊಂದಿರುವ BMW 760LI ಕಾರು ಬಳಕೆಯಲ್ಲಿದೆ. ಮರ್ಸಿಡಿಸ್-ಮೇಬ್ಯಾಚ್ ಬೆಂಜ್ S660 ಗಾರ್ಡ್, ಆಯ್ಸ್ಟನ್ ಮಾರ್ಟಿನ್ ರ್ಯಾಪಿಡ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುಗಳೂ ಕೂಡ ಅಂಬಾನಿ ಬತ್ತಳಿಕೆಯಲ್ಲಿವೆ.

15 ಕೋಟಿ ವಾರ್ಷಿಕ ವೇತನ!!
ಇಷ್ಟೆಲ್ಲಾ ಸಂಪತ್ತಿಗೆ ಒಡೆಯನಾಗಿರುವ ಮುಖೇಶ್ ಅಂಬಾನಿ ಅವರು ವಾರ್ಷಿಕವಾಗಿ ಕೇವಲ 15 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಇದು ಕಳೆದ ಒಂಬತ್ತು ವರ್ಷಗಳಿಂದ ಬದಲಾಗದೆ ಉಳಿದಿರುವುದು ವಿಶೇಷವಾಗಿದೆ. ಅಂಬಾನಿಯ ಇನ್ನೆಲ್ಲಾ ಆದಾಯವು ಅವರ ಶೇರುಗಳಿಂದಲೇ ಅವರಿಗೆ ಬಂದು ಸೇರಲಿದೆ.

5% ಮಾತ್ರ ತೆರಿಗೆ ಕಟ್ಟುತ್ತಾರೆ.!!
ಪ್ರಸ್ತುತ 40.1 ಬಿಲಿಯನ್ ಆಸ್ತಿಯನ್ನು ಹೊಂದಿರುವ ಮುಖೇಶ್ ಅಂಬಾನಿಯ ಅವರ ಕಂಪೆನಿಯು ಭಾರತದ ಒಟ್ಟು ತೆರಿಗೆ ಆದಾಯದ ಸುಮಾರು 5% ರಷ್ಟು ಕೊಡುಗೆಯನ್ನು ನಿಡುತ್ತಿದೆ.


Click it and Unblock the Notifications








