Home
ಸುದ್ದಿಜಾಲ

ಮೈ ಜಿಯೋ ಆಪ್‌ನಲ್ಲಿಯೂ ಲಭ್ಯವಾಗಲಿದೆ ಜಿಯೋ ಮಾರ್ಟ್‌ ಸೇವೆ!

ದೇಶದ ಟೆಲಿಕಾಂ ವಲಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡುವ ಮೂಲಕ ಮುಂಚೂಣಿಯಲ್ಲಿರುವ ರಿಲಾಯನ್ಸ್ ಜಿಯೋ ಸಂಸ್ಥೆಯು ಹಲವು ಸೇವೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಷ್ಟೇ ಅಲ್ಲ ದೇಶದ ಇ-ಕಾಮರ್ಸ್‌ ವಲಯಕ್ಕೂ ಕೂಡ ಎಂಟ್ರಿ ನೀಡಿದ್ದ ಜಿಯೋ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ದೈತ್ಯ ಇ-ಕಾಮರ್ಸ್‌ ತಾಣಗಳಿಗೆ ನೇರ ಪೈಪೋಟಿ ನೀಡಲು ರಿಲಾಯನ್ಸ್‌ ಸಂಸ್ಥೆಯು ಜಿಯೋ ಮಾರ್ಟ್‌ ಅನ್ನು ಪ್ರಾರಂಭಿಸಿತು. ಇದೀಗ ಜಿಯೋ ಮಾರ್ಟ್‌ ರಿಟೇಲ್‌ ಸೇವೆಯು ಮೈಜಿಯೋ ಆಪ್‌ ನಲ್ಲಿಯೂ ಲಭ್ಯವಾಗಲಿದೆ.

ಜಿಯೋ ಮಾರ್ಟ್

ಹೌದು, ರಿಲಾಯನ್ಸ್‌ ಜಿಯೋ ಸಂಸ್ಥೆಯ ಜಿಯೋ ಮಾರ್ಟ್‌ ಆನ್‌ಲೈನ್‌ ರಿಟೇಲ್‌ ಸ್ಟೋರ್‌ ಸೇವೆಯು ಮೈ ಜಿಯೋ ಆಪ್‌ನಲ್ಲಿಯೂ ಲಭ್ಯವಾಗಲಿದೆ. ಜಿಯೋ ಮಾರ್ಟ್‌ ಫೀಚರ್ಸ್‌ ಅನ್ನು ಯುಪಿಐ ಪಕ್ಕದಲ್ಲಿರುವ ಅಪ್ಲಿಕೇಶನ್‌ನ ಮೇಲ್ಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಸದ್ಯ ಈ ಫೀಚರ್ಸ್‌ ಪ್ಲಾಟ್‌ಫಾರ್ಮ್ ಬೀಟಾ ಮೋಡ್‌ನಲ್ಲಿ ಲಭ್ಯವಿದೆ. ಇನ್ನು ಈ ಫೀಚರ್ಸ್‌ ಮೂಲಕ ನೀವು ವಿಶೇಷ ರಿಯಾಯಿತಿಯೊಂದಿಗೆ ದಿನಸಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಮಾರ್ಟ್

ಸದ್ಯ ಜಿಯೋ ಮಾರ್ಟ್‌ ಸೇವೆ ಮೈ ಜಿಯೋ ಆಪ್‌ನಲ್ಲಿಯೂ ಸಹ ಲಭ್ಯವಿದೆ. ಈ ಮೂಲಕ ನಿಮ್ಮ ಮೈಜಿಯೋ ಆಪ್‌ ನಲ್ಲಿಯೇ ಜಿಯೋ ಮಾರ್ಟ್‌ನಲ್ಲಿರುವ ದಿನಸಿ ವಸ್ತುಗಳನ್ನ ಖರೀದಿಸಬಹುದಾಗಿದೆ. ನಿಮಗೆ ಬೇಕಾದ ವಸ್ತುಗಳನ್ನು ಮೈ ಜಿಯೋ ಆಪ್‌ ಮೂಲಕವೇ ಆರ್ಡರ್‌ ಮಾಡಬಹುದಾಗಿದೆ. ಇಷ್ಟು ದಿನ ಜಿಯೋ ಮಾರ್ಟ್‌ ರಿಟೇಲ್‌ ಸೇವೆಗಾಗಿ ಇತರೆ ವೆಬ್‌ಸೈಟ್‌ಗೆ ಬೇಟಿ ನೀಡುತ್ತಿದ್ದ ಗ್ರಾಹಕರು ಇನ್ಮುಂದೆ ಮೈ ಜಿಯೋ ಆಪ್‌ನಲ್ಲಿಯೇ ಎಲ್ಲಾ ಸೇವೆಯನ್ನು ಪಡೆಯಬಹುದಾಗಿದೆ. ಈಗಾಗಲೇ ಜಿಯೋ ಬಳಕೆದಾರರು ಮೈಜಿಯೊ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಇದರಿಂದ ಜಿಯೋ ಸೇವೆಗಳಿಗೆ ಇದನ್ನು ಒಂದು-ಸ್ಟಾಪ್-ಶಾಪ್ ಆಗಿ ಬಳಸಬಹುದಾಗಿದೆ ಎನ್ನಲಾಗ್ತಿದೆ.

ಜಿಯೋ

ಇನ್ನು ನೀವು ಜಿಯೋ ಸಂಖ್ಯೆಯನ್ನು ಬಳಸಿಕೊಂಡು ಮೈ ಜಿಯೋ ಆಪ್‌ನಲ್ಲಿ ಸೈನ್ ಇನ್ ಮಾಡಿರುವುದರಿಂದ, ಸೇವೆಯು ಈಗಾಗಲೇ ವಿತರಣಾ ವಿಳಾಸ ಸೇರಿದಂತೆ ನಿಮ್ಮ ಎಲ್ಲಾ ವಿವರಗಳನ್ನು ಹೊಂದಿರಲಿದೆ. ಅಲ್ಲದೆ ಜಿಯೋ ಮಾರ್ಟ್ ವಿಭಾಗಕ್ಕೆ ಹೋಗಿ ಮತ್ತು ನೀವು ಪ್ರಾಡಕ್ಟ್‌ ಬ್ಯುಸಿನೆಸ್‌ ಮತ್ತು ಡೈಲಿ ಎಸೆನ್ಷಿಯಲ್ಸ್‌ನಲ್ಲಿನ ಕೊಡುಗೆಗಳಂತಹ ವಿಭಾಗಗಳನ್ನು ಸಹ ಇದರಲ್ಲಿ ಕಾಣಬಹುದಾಗಿದೆ. ಪ್ರಸ್ತುತ, ಜಿಯೋ ಮಾರ್ಟ್ ದೇಶದ 200 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದ್ದು, ಜಿಯೋ ಮಾರ್ಟ್ ಅಪ್ಲಿಕೇಶನ್ ಅನ್ನು 10 ಮಿಲಿಯನ್ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ ಎನ್ನಲಾಗಿದೆ.

ಮೈಜಿಯೊ ಆಪ್

ಮೈಜಿಯೊ ಆಪ್ ಜೊತೆಗೆ, ನೀವು ವಾಟ್ಸಾಪ್ ಮೂಲಕವೂ ಸಹ ಜಿಯೋ ಮಾರ್ಟ್‌ನಲ್ಲಿ ಶಾಪಿಂಗ್ ಮಾಡಬಹುದು. ಅಲ್ಲದೆ ವಾಟ್ಸಾಪ್‌ ಮೂಲಕವೂ ನಿಮಗೆ ಬೇಕಾದ ದಿನಸಿ ಪದಾರ್ಥಗಳನ್ನು ಆರ್ಡರ್‌ ಮಾಡಬಹುದಾಗಿದೆ. ಸದ್ಯ ಜಿಯೋ ಮಾರ್ಟ್ ಸ್ವತಂತ್ರ ಅಪ್ಲಿಕೇಶನ್‌ನಂತೆ ಕಾರ್ಯನಿರ್ವಹಿಸುತ್ತಿದೆ.ಅಲ್ಲದೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಮಿಲಿಯನ್ಗೂ ಅಧಿಕ ಡೌನ್‌ಲೋಡ್‌ಗಳನ್ನ ಹೊಂದಿದ್ದು,ರಿಟೇಲ್‌ ಪ್ಲಾಟ್‌ಫಾರ್ಮ್ ಒಟ್ಟಾರೆ ಶಾಪಿಂಗ್ ವಿಭಾಗದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಲಾಗ್ತಿದೆ. ಈ ಮೂಲಕ ಅಮೆಜಾನ್‌,ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್‌ ತಾಣಗಳಿಗೆ ಜಿಯೋ ಮಾರ್ಟ್‌ ಭರ್ಜರಿ ಫೈಪೋಟಿ ನೀಡುತ್ತಿದೆ.

Best Mobiles in India

English summary
Jio Mart, the online grocery service from Reliance is now available through the MyJio app.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+