Home
ಸುದ್ದಿಜಾಲ

ಜಿಯೋ, ಮೈಕ್ರೋಮ್ಯಾಕ್ಸ್‌ನಿಂದ ಸಂಚಾರ ಕ್ರಾಂತಿ..! 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಣೆ..!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋದ ದಿಗ್ವಿಜಯದ ಓಟ ಮುಂದುವರದಿದ್ದು, ಟೆಲಿಕಾಂ ವಲಯಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಿದೆ. ಈಗ ಸರ್ಕಾರದ ಯೋಜನೆಗಳ ಜತೆ ಕಾರ್ಯನಿರ್ವಹಿಸುವ ಮೂಲಕ ಇನ್ನೊಂದು ಸ್ಥರದ ಸ್ಪರ್ಧೆಗೆ ವೇದಿಕೆಯನ್ನು ಅಣಿ ಮಾಡಿದೆ. ಹೌದು ಛತ್ತೀಸ್‌ಗರ್‌ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು, ತನ್ನ ರಾಜ್ಯದ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಿಸುವ ಗುರಿ ಹೊಂದಿದೆ.

ಜಿಯೋ, ಮೈಕ್ರೋಮ್ಯಾಕ್ಸ್‌ನಿಂದ ಸಂಚಾರ ಕ್ರಾಂತಿ, 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಣೆ

ಛತ್ತೀಸ್‌ಗರ್‌ ಸರ್ಕಾರದ ಜತೆ ಮೈಕ್ರೋಮ್ಯಾಕ್ಸ್‌ 1,500 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದು, ಈ ಯೋಜನೆಯಲ್ಲಿ ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ರಿಲಾಯನ್ಸ್‌ ಜಿಯೋ ಸಿಮ್ ಅಳವಡಿಸಲಾಗುತ್ತಿದೆ. ಈ ಮೂಲಕ ಜಿಯೋ ಮತ್ತು ಮೈಕ್ರೋಮ್ಯಾಕ್ಸ್‌ 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಣೆಯ ಹೊಣೆ ಹೊತ್ತುಕೊಂಡಿವೆ. ಸ್ಕೈ ಎಂದು ಕರೆಯಲ್ಪಡುತ್ತಿರುವ ಸ್ಮಾರ್ಟ್‌ಫೋನ್‌ ವಿತರಣೆ ಯೋಜನೆಯಲ್ಲಿ ವಿತರಣೆ ಕೂಡ ಪ್ರಾರಂಭವಾಗಿದ್ದು, ಯೋಜನೆ ಯಶಸ್ವಿಯಾಗುವ ಹಂತದಲ್ಲಿದೆ.

ಮಹಿಳೆಯರಿಗೆ 45 ಲಕ್ಷ ಸ್ಮಾರ್ಟ್‌ಫೋನ್‌

ಮಹಿಳೆಯರಿಗೆ 45 ಲಕ್ಷ ಸ್ಮಾರ್ಟ್‌ಫೋನ್‌

ಛತ್ತೀಸ್‌ಗರ್‌ ಸರ್ಕಾರದ ಹೊಸ ಯೋಜನೆಯಲ್ಲಿ 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ 45 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಹಿಳೆಯರಿಗೆ ಹಾಗೂ ಉಳಿದ 5 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಮೈಕ್ರೋಮ್ಯಾಕ್ಸ್‌ ಸಹ ಸಂಸ್ಥಾಪಕ್ ವಿಕಾಸ್‌ ಜೈನ್ ಹೇಳಿದ್ದಾರೆ.

10 ಸಾವಿರ ಕ್ಯಾಂಪ್ ಪ್ರಾರಂಭ

10 ಸಾವಿರ ಕ್ಯಾಂಪ್ ಪ್ರಾರಂಭ

ಯೋಜನೆಯಡಿ ಹೀಗಾಗಲೇ ವಿವಿಧ ಸ್ಥಳಗಳಲ್ಲಿ 10 ಸಾವಿರ ಕ್ಯಾಂಪ್‌ಗಳನ್ನು ಪ್ರಾರಂಭಿಸಿದ್ದು, ವಿತರಣೆಯನ್ನು ಹೀಗಾಗಲೇ ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬ ಫಲಾನುಭಯನ್ನು ಸ್ವತಃ ರಾಜ್ಯ ಸರ್ಕಾರ ಆಯ್ಕೆ ಮಾಡಲಿದ್ದು, ಆಯ್ಕೆಗೊಂಡ ಫಲಾನುಭವಿಗಳಿಗೆ ರಿಲಾಯನ್ಸ್‌ ಜಿಯೋ ಸಂಪರ್ಕದೊಂದಿಗೆ ಸ್ಮಾರ್ಟ್‌ಫೋನ್‌ನ್ನು ವಿತರಿಸಲಾಗುತ್ತಿದೆ. ಇಲ್ಲಿ ಆಧಾರ್‌ ಮೂಲಕ ಅಥಂಟಿಕೇಷನ್‌ ಮಾಡುವುದರಿಂದ ಯೋಜನೆಯ ದುರ್ಬಳಕೆ ಅಸಾಧ್ಯ ಎಂದು ವಿಕಾಸ್‌ ಹೇಳಿದ್ದಾರೆ.

15 ವೇರ್‌ಹೌಸ್‌ ಸ್ಥಾಪನೆ

15 ವೇರ್‌ಹೌಸ್‌ ಸ್ಥಾಪನೆ

ಯೋಜನೆಯು ರಾಜ್ಯದ ದೊಡ್ಡ ಜನ ಸಮೂಹಕ್ಕೆ ತಲುಪುತ್ತಿರುವುದರಿಂದ ಸ್ಮಾರ್ಟ್‌ಫೋನ್ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಿರಲಿ ಎಂದು ಮೈಕ್ರೋಮ್ಯಾಕ್ಸ್‌ ಕಂಪನಿ ವಿವಿಧ ಸ್ಥಳಗಳಲ್ಲಿ 15 ವೇರ್‌ ಹೌಸ್‌ಗಳನ್ನು ಸ್ಥಾಪಿಸಿದೆ. 2011ರ ಜನಗಣತಿಯಂತೆ ಛತ್ತೀಸ್‌ಗರ್ ರಾಜ್ಯ 2.5 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಈ ಯೋಜನೆ 50 ಲಕ್ಷ ಜನರನ್ನು ತಲುಪುತ್ತಿದೆ ಎಂದು ಜೈನ್ ವಿವರಿಸಿದ್ದಾರೆ.

ವರ್ಷದ ಆರಂಭದಲ್ಲಿಯೇ ಒಪ್ಪಂದ

ವರ್ಷದ ಆರಂಭದಲ್ಲಿಯೇ ಒಪ್ಪಂದ

ಈ ಯೋಜನೆಗೆ ಮೈಕ್ರೋಮ್ಯಾಕ್ಸ್‌ ಮತ್ತು ಜಿಯೋ ವರ್ಷದ ಆರಂಭದಲ್ಲಿಯೇ ಸಹಿ ಹಾಕಿದ್ದು, ಜುಲೈ ಅಂತ್ಯದಿಂದ ಸ್ಮಾರ್ಟ್‌ಫೋನ್ ವಿತರಣೆಯನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ 2000 ದಿಂದ 2500 ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಕೆಲವೇ ವಾರಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಸ್ಮಾರ್ಟ್‌ಫೋನ್‌ ವಿತರಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

ಯಾವುದೇ ರಾಜಕೀಯ ಒತ್ತಡವಿಲ್ಲ

ಯಾವುದೇ ರಾಜಕೀಯ ಒತ್ತಡವಿಲ್ಲ

ಈ ಯೋಜನೆಯನ್ನು ಪಡೆಯಲು ಮೈಕ್ರೋಮ್ಯಾಕ್ಸ್‌ ಮತ್ತು ಜಿಯೋ ಯಾವುದೇ ರಾಜಕೀಯ ಅಸ್ತ್ರವನ್ನು ಬಳಸಿಲ್ಲ ಎಂದು ಮೈಕ್ರೋಮ್ಯಾಕ್ಸ್‌ ಹೇಳಿಕೊಂಡಿದೆ. ಈ ಯೋಜನೆಯು ಎಲ್ಲರನ್ನೂ ಒಳಗೊಂಡಿದ್ದು ಬಹಳ ತಿಂಗಳುಗಳ ಕಾಲ ಯೋಜನೆಯನ್ನು ರೂಪಿಸಲು ತೆಗೆದುಕೊಂಡಿದೆ. ಟೆಂಡರ್ ಮೂಲಕ ಈ ವರ್ಷದ ಆರಂಭದಲ್ಲಿ ಯೋಜನೆಯನ್ನು ನಾವು ಪಡೆದಿದ್ದೇವೆ ಎಂದು ಮೈಕ್ರೋಮ್ಯಾಕ್ಸ್‌f ಸಹ ಸಂಸ್ಥಾಪಕ ವಿಕಾಸ್‌ ಜೈನ್‌ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಏನೀದು ಯೋಜನೆ..?

ಏನೀದು ಯೋಜನೆ..?

ಛತ್ತೀಸ್‌ಗರ್ ಸರ್ಕಾರವು ಮೈಕ್ರೋಮ್ಯಾಕ್ಸ್‌ ಸಹಭಾಗಿತ್ವದಲ್ಲಿ ಸಂಚಾರ ಕ್ರಾಂತಿ ಯೋಜನೆ (Sanchar Kranti Yojana- SKY)ಯನ್ನು ಪ್ರಾರಂಭಿಸಿದ್ದು, ನಗರ ಹಾಗೂ ಗ್ರಾಮೀಣದ ಬಿಪಿಎಲ್‌ ಕುಟುಂಬದ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ ನೀಡುವ ಮೂಲಕ .ಅವರಿಗೆ ಜಾಗತಿಕ ಡಿಜಿಟಲ್‌ ಅನುಭವವನ್ನು ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಛತ್ತೀಸ್‌ಗರ್‌ ಇನ್ಫೋಟೆಕ್‌ ಪ್ರೊಮೋಷನ್‌ ಸೊಸೈಟಿ ಸಿಇಒ ಅಲೆಕ್ಸ್‌ ಪಾಲ್‌ ಮೆನನ್ ಹೇಳಿದ್ದಾರೆ.

ಡಿಜಿಟಲ್ ಛತ್ತೀಸ್‌ಗರ್‌ಗೆ ಬಲ

ಡಿಜಿಟಲ್ ಛತ್ತೀಸ್‌ಗರ್‌ಗೆ ಬಲ

ಸಂಚಾರ ಕ್ರಾಂತಿ ಯೋಜನೆಯಿಂದ ಡಿಜಿಟಲ್‌ ಇಂಡಿಯಾದ ಜತೆಗೆ ಡಿಜಿಟಲ್ ಛತ್ತೀಸ್‌ಗರ್‌ಗೂ ಬಲ ಬರಲಿದ್ದು, ಸರ್ಕಾರದ ಅನೇಕ ಯೋಜನೆಗಳನ್ನು ಡಿಜಿಟಲ್ ಮಾಡಲು ಸಹಾಯವಾಗುತ್ತದೆ. ಹಾಗೂ ಡಿಜಿಟಲ್ ಬ್ಯಾಂಕಿಂಗ್‌ಗೆ ಸ್ಕೈ ಯೋಜನೆ ಸಹಾಯಕವಾಗಲಿದೆ ಎಂದು ಅಲೆಕ್ಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೇಗಿರಲಿವೆ ಸ್ಮಾರ್ಟ್‌ಫೋನ್‌..?

ಹೇಗಿರಲಿವೆ ಸ್ಮಾರ್ಟ್‌ಫೋನ್‌..?

ಸಂಚಾರ ಕ್ರಾಂತಿ ಯೋಜನೆಯನ್ವಯ ವಿತರಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಉತ್ತಮ ಫೀಚರ್‌ಗಳನ್ನು ಹೊಂದಿವೆ. ಮಹಿಳೆಯರಿಗೆ ವಿತರಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಮೈಕ್ರೋಮ್ಯಾಕ್ಸ್‌ ಭಾರತ್‌ 2+ ಮಾಡೆಲ್ ಆಗಿದ್ದು, 4 ಇಂಚ್‌ ಡಿಸ್‌ಪ್ಲೇ ಜತೆಗೆ 1GB RAM / 8GB ಮೆಮೊರಿ ಹೊಂದಿರಲಿವೆ. ವಿದ್ಯಾರ್ಥಿಗಳಿಗೆ ಮೈಕ್ರೋಮ್ಯಾಕ್ಸ್‌ ಭಾರತ್ 4 ಮಾಡೆಲ್ ವಿತರಿಸಲಾಗುತ್ತಿದ್ದು, 5 ಇಂಚಿನ್ ಡಿಸ್‌ಪ್ಲೇನೊಂದಿಗೆ 2GB RAM / 16GB ಮೆಮೊರಿ ಹೊಂದಿದ್ದು, ಉತ್ತಮವಾಗಿರಲಿವೆ.

ಜಿಯೋಗೆ ಸಂತಸ

ಜಿಯೋಗೆ ಸಂತಸ

ಸಂಚಾರ ಕ್ರಾಂತಿ ಯೋಜನೆಯು ಅಭಿವೃದ್ಧಿಯ ಪರಿಕಲ್ಪನೆ ಹೊಂದಿದ್ದು, ಡಿಜಿಟಲ್‌ ಜಗತ್ತನ್ನು ಅಂಗೈಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದಲ್ಲದೇ ಛತ್ತೀಸ್‌ಗರ್‌ದ ಇ-ಆಡಳಿತ ಹಾಗೂ ವೇಗದ ಆರ್ಥಿಕ ಬೆಳವಣಿಗೆಗೆ ಸ್ಕೈ ಯೋಜನೆ ಸಹಾಯಕವಾಗಿದೆ. ಈ ಯೋಜನೆಯ ಮೂಲಕ ಅಸಂಪರ್ಕಿತ ಜನರನ್ನು ಸ್ಮಾರ್ಟ್‌ಫೋನ್‌ನಿಂದ ಬೆಸೆದು ಡಿಜಿಟಲ್ ಜಗತ್ತಿನ ಕಡೆ ಕರೆದೊಯ್ಯಲು ಜಿಯೋ ಸಂತಸ ಪಡುತ್ತಿದೆ ಎಂದು ರಿಲಾಯನ್ಸ್‌ ಜಿಯೋ ಹೇಳಿದೆ.

Best Mobiles in India

English summary
Jio, Micromax bag Rs 1,500 cr order from Chhattisgarh govt. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+