Home
ಸುದ್ದಿಜಾಲ

ಜಿಯೋ ಕಡೆಯಿಂದ ಗುಡ್‌ ನ್ಯೂಸ್‌; ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಜಿಯೋ 5G ಸ್ಮಾರ್ಟ್‌ಫೋನ್‌!

ರಿಲಯನ್ಸ್‌ ಜಿಯೋ ಕಂಪೆನಿ ಟೆಲಿಕಾಂ ವಲಯದಲ್ಲಿ ಮಾತ್ರವಲ್ಲದೇ ಸ್ಮಾರ್ಟ್‌ಫೋನ್‌ ವಲಯದಲ್ಲಿ ಕೂಡ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಇತ್ತೀಚಿಗೆ 2G ಮುಕ್ತ ಭಾರತ್‌ ಅಭಿಯಾನ ಶುರುಮಾಡುವುದಾಗಿ ಹೇಳಿದ್ದ ಜಿಯೋ ಹೊಸ ಫೋನ್‌ಗಳನ್ನು ಅನಾವರಣಗೊಳಿಸಿತ್ತು. ಇದೀಗ ಜಿಯೋ ಕಂಪೆನಿ ಶೀಘ್ರದಲ್ಲೇ ಮತ್ತೆ ಎರಡು ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡುವ ನಿರೀಕ್ಷೆಯಿದೆ.

ಹೌದು, ಜಿಯೋ ಕೆಲವೇ ದಿನಗಳಲ್ಲಿ ನಡೆಯಲಿರುವ ರಿಲಯನ್ಸ್‌ ಜಿಯೋದ ವಾರ್ಷಿಕ ಸಮ್ಮೇಳನದಲ್ಲಿ ಈ ಫೋನ್‌ಗಳು ಅನಾವರಣಗೊಳ್ಳುವ ಸಾದ್ಯತೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಜಿಯೋ 5G ಸ್ಮಾರ್ಟ್‌ಫೋನ್‌ಗಳಾಗಿರುವ ಸಾಧ್ಯತೆಯಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜಿಯೋ ಯಾವುದೇ ಮಾಹಿತಿ ಶೇರ್‌ ಮಾಡಿಲ್ಲವಾದರು ಹೊಸ BIS ಪಟ್ಟಿಯು ಈ ಫೋನ್‌ಗಳ ಬಗ್ಗೆ ಮಾಹಿತಿ ಹೊರಹಾಕಿದೆ. ಹಾಗಾದ್ರೆ ಜಿಯೋದ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಯಾವೆಲ್ಲಾ ಮಾಹಿತಿ ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಕಡೆಯಿಂದ ಗುಡ್‌ ನ್ಯೂಸ್‌; ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಜಿಯೋ 5G ಫೋನ್‌!

ಜಿಯೋ ಕಂಪೆನಿ ಹೊಸ 5G ಸ್ಮಾರ್ಟ್‌ಫೋನ್‌ಗಳನ್ನು ಇದೇ ಆಗಸ್ಟ್ 28 ರಂದು ಘೋಷಿಸಬಹುದು ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ BIS ಲಿಸ್ಟ್‌ನಲ್ಲಿ ಜಿಯೋದ ಎರಡು ಫೋನ್‌ಗಳ ಪೋಟೋಗಳು ರಿವೀಲ್‌ ಆಗಿವೆ. ಈ ಪಟ್ಟಿಯನ್ನು ಪ್ರಸಿದ್ಧ ಟಿಪ್‌ಸ್ಟರ್ ಮುಕುಲ್ ಶರ್ಮಾ ಅವರು ಟ್ವೀಟ್‌ನಲ್ಲಿ ಶೇರ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಜಿಯೋ ಫೋನ್‌ಗಳನ್ನು ನೋಯ್ಡಾದಲ್ಲಿ ತಯಾರಿಸಲಾಗಿದೆ ಅನ್ನೋದು ಕೂಡ ಬಿಐಎಸ್‌ ಲಿಸ್ಟ್‌ನಲ್ಲಿ ಬಹಿರಂಗವಾಗಿದೆ.

JBV161W1 ಮತ್ತು JBV162W1 ಮಾದರಿ ಸಂಖ್ಯೆಗಳನ್ನು ಹೊಂದಿರುವ ಎರಡು ಮಾಡೆಲ್‌ಗಳು ಕೆಲಸದಲ್ಲಿವೆ ಎನ್ನಲಾಗಿದೆ. ಆದರೆ ಈ ಲಿಸ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌, ಬೆಲೆ ವಿವರಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇತ್ತೀಚಿಗೆ ಕೆಲವು ಆನ್‌ಲೈನ್‌ ಸೈಟ್‌ಗಳಲ್ಲಿ ಜಿಯೋದ ಹೊಸ ಫೋನ್ 5G ಯ ಬಗ್ಗೆ ಕೆಲವು ವಿವರಗಳು ಬಹಿರಂಗವಾಗಿವೆ. ಅದರಂತೆ ಈ ಸ್ಮಾರ್ಟ್‌ಫೋನ್‌ 6.5 ಇಂಚಿನ IPS LCD ಡಿಸ್‌ಪ್ಲೇಯೊಂದಿಗೆ ಬರುವ ನಿರೀಕ್ಷೆಯಿದೆ.

ಇನ್ನು ಹೊಸ ಜಿಯೋ 5G ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 480 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ ಸ್ಮಾರ್ಟ್‌ಫೋನ್‌ 4GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಮೇನ್‌ ಕ್ಯಾಮೆರಾ ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ ಜಿಯೋ ಕಂಪೆನಿ ಇತ್ತೀಚಿಗೆ ಭಾರತವನ್ನು 2G-ಮುಕ್ತ್ ಮಾಡುವುದಕ್ಕಾಗಿ ಜಿಯೋ ಹೊಸ 'ಜಿಯೋ ಭಾರತ್ ವಿ2' ಎಂಬ ಫೋನ್‌ ಪರಿಚಯಿಸಿದೆ. ಈ ಫೋನ್‌ ಅತಿ ಕಡಿಮೆ ಬೆಲೆ ಅಂದರೆ ಕೇವಲ 999 ರೂಪಾಯಿಗಳಿಗೆ ಲಭ್ಯವಾಗಲಿದೆ.ಈ ಫೋನ್‌ಗಳ ಮೂಲಕ ಭಾರತದಲ್ಲಿ ಡಿಜಿಟಲೀಕರಣ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಕೈ ಗೆಟಕುವ ಬೆಲೆಯಲ್ಲಿ ಮೊಬೈಲ್‌ ಖರೀದಿಸಲು ಬಯಸುವವರನ್ನು ಗುರಿಯಾಗಿಸಿಕೊಂಡಿದೆ.

ಇಂಟರ್‌ನೆಟ್‌ ಬಳಕೆಯಿಂದ ದೂರವಿರುವ ಜನರನ್ನು ಇಂಟರ್‌ನೆಟ್‌ ಯುಗಕ್ಕೆ ಎಳೆದು ತರಲಿದೆ ಎಂದು ಜಿಯೋ ಸಂಸ್ಥೆ ಹೇಳಿಕೊಂಡಿದೆ. ಇದಲ್ಲದೆ ಈ ಮೊಬೈಲ್‌ ಫೋನ್‌ಗಳ ಬೇಸ್‌ ರೀಚಾರ್ಜ್‌ ಪ್ಲಾನ್‌ ಅನ್ನು ಕೂಡ ಘೋಷಣೆ ಮಾಡಿದೆ. ಈ ರೀಚಾರ್ಜ್ ಪ್ಲಾನ್‌ ಬೆಲೆ ಕೇವಲ 123 ರೂ.ಆಗಿರಲಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 14GB ಡೇಟಾ ಪ್ರಯೋಜನವನ್ನು ನೀಡಲಿದೆ. ಈ ಮೂಲಕ ದೇಶದಲ್ಲಿ ಎಲ್ಲ ಜನರನ್ನು ಇಂಟರ್‌ನೆಟ್‌ ಬಳಕೆಗೆ ತರಬೇಕೆನ್ನುವ ಗುರಿಯನ್ನು ಜಿಯೋ ಹೊಂದಿದೆ.

Best Mobiles in India

English summary
Jio might soon launch 2 new Jio 5G smartPhones in India: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+