Jio: ಹ್ಯಾಪಿ ನ್ಯೂ ಇಯರ್ ಆಫರ್ 2024 ಘೋಷಿಸಿದ ಜಿಯೋ! ಆಫರ್ ಕೇಳಿದ್ರೆ ಅಚ್ಚರಿ ಪಡ್ತೀರಾ!
ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ "ಹ್ಯಾಪಿ ನ್ಯೂ ಇಯರ್ ಆಫರ್ 2024" ಅನ್ನು ಘೋಷಿಸಿದೆ. ಈ ಮೂಲಕ ಜಿಯೋ ಬಳಕೆದಾರರು ಹೊಸ ವರ್ಷದ ಪ್ರಯುಕ್ತ ಭರ್ಜರಿ ಆಫರ್ ಪಡೆದುಕೊಳ್ಳಬಹುದಾಗಿದೆ. ಇನ್ನು ಜಿಯೋ ನ್ಯೂ ಇಯರ್ ಆಫರ್ ಪ್ರಯುಕ್ತ ತನ್ನ ಹಳೆಯ ಇಯರ್ ಪ್ಲಾನ್ ಅನ್ನು ಹೊಸದಾಗಿ ರಿಫ್ರೆಶ್ ಮಾಡಿದೆ.
ಹೌದು, ಜಿಯೋ ಟೆಲಿಕಾಂ ಹೊಸ ವರ್ಷದ ಪ್ರಯುಕ್ತ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ರಿಫ್ರೆಶ್ ಮಾಡಿದೆ. ಈ ಪ್ಲಾನ್ ಹೊಸ ವರ್ಷದ ಪ್ರಯುಕ್ತ ರೀಚಾರ್ಜ್ ಮಾಡಿಕೊಂಡರೆ ನಿಮಗೆ ಹೆಚ್ಚುವರಿಯಾಗಿ 24 ದಿನಗಳ ವ್ಯಾಲಿಡಿಟಿಯ ಪ್ರಯೋಜನವನ್ನು ಒದಗಿಸುತ್ತದೆ. ಹಾಗಾದ್ರೆ ಜಿಯೋ ಟೆಲಿಕಾಂ ಹೊಸ ವರ್ಷದ ಆಫರ್‌ನಲ್ಲಿ ರಿಫ್ರೆಶ್ ಮಾಡಿರುವ ಪ್ರಿಪೇಯ್ಡ್ ಪ್ಲಾನ್ ಯಾವುದು? ಪ್ಲಾನ್‌ನ ಪ್ರಯೋಜನಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ 2024
ಜಿಯೋ ಹೊಸ ವರ್ಷದ ಪ್ರಯುಕ್ತ 2,999ರೂ ಬೆಲೆಯ ವಾರ್ಷಿಕ ಪ್ರಿಪೇಯ್ಡ್ ಬೆಲೆಯನ್ನು ರಿಫ್ರೆಶ್ ಮಾಡಿದೆ. ಇದರಿಂದ 365 ದಿನಗಳ ಮಾನ್ಯತೆ ಹೊಂದಿರುವ ಈ ಪ್ಲಾನ್ 24 ದಿನಗಳ ಹೆಚ್ಚುವರಿ ಮಾನ್ಯತೆ ನೀಡಲಿದೆ. ಇದರಿಂದ ಈ ಪ್ಲಾನ್ ಒಟ್ಟಾರೆ 389 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಅಂದರೆ ಜಿಯೋ ಟೆಲಿಕಾಂ ಹೊಸ ವರ್ಷದ ಆಫರ್‌ನಲ್ಲಿ 2,999ರೂ ಯೋಜನೆಗೆ 24 ದಿನದ ವ್ಯಾಲಿಡಿಟಿ ವೋಚರ್ ಅನ್ನು ಸೇರ್ಪಡೆ ಮಾಡಿದೆ. ಈ ಪ್ಲಾನ್ ಅನ್ನು ಜಿಯೋದ ಪ್ರಿಪೇಯ್ಡ್ ಪ್ಲಾನ್ ಪೇಜ್ ಮೂಲಕ ಅದರ ವೆಬ್‌ಸೈಟ್‌ನಲ್ಲಿ ಅಥವಾ MyJio ಅಪ್ಲಿಕೇಶನ್ ಮೂಲಕ ಖರೀದಿಸಬಹುದು.

ಜಿಯೋ 2,999ರೂ ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು ಏನು?
ಹೊಸ ವರ್ಷದ ಆಫರ್‌ನಲ್ಲಿ 24 ಹೆಚ್ಚುವರಿ ದಿನಗಳ ವ್ಯಾಲಿಡಿಟಿ ದೊರೆಯಲಿದೆ. ಈ ಅವಧಿಯಲ್ಲಿಯೂ ಸಹ ಈ ಪ್ಲಾನ್‌ನ ಪ್ರಯೋಜನಗಳು ಉಳಿದ ಅವಧಿಯಲ್ಲಿ ಲಭ್ಯವಿರುವಂತೆಯೇ ಇರುತ್ತದೆ. ಇನ್ನು ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದೈನಂದಿನ 100 ಉಚಿತ SMS ಪ್ರಯೋಜನ ನೀಡಲಿದೆ. ಇದಲ್ಲದೆ ಪ್ರತಿ ದಿನ 2.5GB ಡೇಟಾ ಸೌಲಭ್ಯ ಕೂಡ ದೊರೆಯಲಿದೆ. ಈ ಯೋಜನೆಯು ಅನಿಯಮಿತ 5G ಡೇಟಾವನ್ನು ಸಹ ಅನುಮತಿಸುತ್ತದೆ.

ಇದಲ್ಲದೆ ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಜಿಯೋಟಿವಿ, JioCinema ಮತ್ತು JioCloud ಗೆ ಪ್ರವೇಶವನ್ನು ನೀಡಲಿದೆ. JioTV ಪ್ರೀಮಿಯಂ ಚಂದಾದಾರಿಕೆಯು ಒಂದೇ ಯೋಜನೆಯಡಿಯಲ್ಲಿ 14 ವಿಭಿನ್ನ OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.
ಇನ್ನು ಜಿಯೋ ಟೆಲಿಕಾಂ ಇತ್ತೀಚಿಗೆ 909ರೂ ಬೆಲೆಯ ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ 100 SMS ಸಂದೇಶಗಳ ಜೊತೆಗೆ ಪ್ರತಿದಿನ 2GB ಹೆಚ್ಚಿನ ವೇಗದ ಡೇಟಾವನ್ನು ನೀಡುತ್ತದೆ. ಇದರೊಂದಿಗೆ ಹಲವು ಪ್ರಯೋಜನಗಳನ್ನು ಸಹ ಈ ಪ್ಲಾನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಪ್ರಿಪೇಯ್ಡ್ ಪ್ಲಾನ್ 84 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. ಈ ಅವಧಿಯಲ್ಲಿ ಪ್ರತಿನಿತ್ಯ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು ಹಾಗೂ ಡೈಲಿ 100 SMS ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಪ್ಲಾನ್‌ನಲ್ಲಿ Sony Liv ಮತ್ತು Zee5 ಸೇರಿದಂತೆ ವಿವಿಧ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಕೂಡ ದೊರೆಯಲಿದೆ. ಇದಲ್ಲದೆ, JioCinema, JioTV ಮತ್ತು JioCloud ಸೇರಿದಂತೆ Jio ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಇನ್ನು ದೈನಂದಿನ ಡೇಟಾ ಪ್ರಯೋಜನ ಮುಗಿದ ನಂತರ ಗ್ರಾಹಕರು 40Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಪ್ರವೇಶಿಸಬಹುದು.


Click it and Unblock the Notifications








