ಜಿಯೋದ ಈ ಪ್ಲ್ಯಾನ್‌ಗಳು ಅಮೆಜಾನ್ ಪ್ರೈಮ್ ವೀಡಿಯೋಗೆ ಉಚಿತ ಚಂದಾದಾರಿಕೆ ನೀಡಲಿವೆ!
ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ತನ್ನ ಚಂದಾದಾರರಿಗೆ ವಿವಿಧ ಬೆಲೆಯಲ್ಲಿ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಪ್ಲ್ಯಾನ್‌ಗಳ ಚಂದಾದಾರಿಕೆಯಲ್ಲಿ ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುವ ಹಲವಾರು ಯೋಜನೆಗಳನ್ನು ಹೊಂದಿದೆ. ಇನ್ನು ಈ ಪ್ಲ್ಯಾನ್‌ಗಳು ಹೆಚ್ಚಿನ ವೇಗದ ಡೇಟಾ ಮತ್ತು ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತವಾಗಿ ಪ್ರವೇಶವನ್ನು ಹೊಂದಿವೆ. ಅಲ್ಲದೆ ಕೆಲವು ಪ್ರಿಪೇಯ್ಡ್ ಪ್ಲ್ಯಾನ್‌ಗಳು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ನೀಡಲಿವೆ.

ಹೌದು, ರಿಲಯನ್ಸ್ ಜಿಯೋ ಕಂಪೆನಿ ಪರಿಚಯಿಸಿರುವ ಹಲವು ಪ್ಲ್ಯಾನ್‌ಗಳು ಹೆಚ್ಚುವರಿಯಾಗಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ಪ್ರವೇಶವನ್ನು ನೀಡಲಿವೆ. ನೀವು ಈಗಾಗಲೇ ಈ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗಿಲ್ಲದಿದ್ದರೆ ಮತ್ತು ಪ್ಯಾಕೇಜ್‌ನ ಒಂದು ಭಾಗವಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಉಚಿತವಾಗಿ ನೀಡುವ ರಿಲಯನ್ಸ್ ಜಿಯೋ ಪ್ಲ್ಯಾನ್‌ಗಳನ್ನು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಪ್ಲ್ಯಾನ್‌ಗಳು!
ರಿಲಯನ್ಸ್‌ನ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶಿಸಲು ಬಂಡಲ್ ಯೋಜಿಸಿದೆ. ಜಿಯೋನ ಸ್ವಂತ ಜಿಯೋ ಟಿವಿ, ಜಿಯೋ ಸಿನಿಮಾದಂತಹ ಸ್ವದೇಶಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ನೀವು ಪ್ರವೇಶವನ್ನು ಪಡೆಯುತ್ತೀರಿ. ಮೂರು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ನಿಮಗೆ ಪ್ರವೇಶವನ್ನು ನೀಡುವ ಐದು ಜಿಯೋಪೋಸ್ಟ್‌ಪೇಯ್ಡ್ ಯೋಜನೆಗಳಿವೆ.

ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 399ರೂ ಪ್ಲ್ಯಾನ್
ಇದು ಬಳಕೆದಾರರಿಗೆ ಲಭ್ಯವಿರುವ ಅಗ್ಗದ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಯಾಗಿದೆ. ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಎಂಬ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ. ಈ ಪ್ಲಾನ್ 75GB ಡೇಟಾವನ್ನು ಗರಿಷ್ಠ 200GB ಡೇಟಾ ರೋಲ್‌ಓವರ್‌ನೊಂದಿಗೆ ನೀಡುತ್ತದೆ. 75GB ಡೇಟಾ ಮಿತಿಯನ್ನು ದಾಟಿದ ನಂತರ, ಬಳಕೆದಾರರು 10/GB ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಹ ನೀಡುತ್ತದೆ. ಈ ಎಲ್ಲದರ ಜೊತೆಗೆ, ಅಮೆಜಾನ್ ಪ್ರೈಮ್ ವೀಡಿಯೋ ಚಂದಾದಾರಿಕೆಗೆ ಪ್ರವೇಶವು 1 ವರ್ಷಕ್ಕೆ ಮಾನ್ಯವಾಗಿರುತ್ತದೆ.

ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 599ರೂ, ಪ್ಲ್ಯಾನ್
ಈ ಯೋಜನೆಯು ಬಿಲ್ಲಿಂಗ್ ಚಕ್ರದಲ್ಲಿ ಗರಿಷ್ಠ 100GB ಡೇಟಾವನ್ನು ಮತ್ತು ಗರಿಷ್ಠ 200GB ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ. 100GB ಮಿತಿ ಮುಗಿದ ನಂತರ ಬಳಕೆದಾರರಿಗೆ ಪ್ರತಿ GBಗೆ 10ರೂ ಶುಲ್ಕ ವಿಧಿಸಲಾಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಹೆಚ್ಚುವರಿ ಕುಟುಂಬ ಸದಸ್ಯರೊಂದಿಗೆ JioPostpaid ಸಂಪರ್ಕವನ್ನು ಬಳಸಿಕೊಂಡು ಹಂಚಿಕೊಳ್ಳಬಹುದು. ಈ ಯೋಜನೆಯು OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶದೊಂದಿಗೆ ಬರುತ್ತದೆ.

ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 799ರೂ, ಪ್ಲ್ಯಾನ್
ಜಿಯೋ 799ರೂ ಯೋಜನೆಯು ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 150GB ಡೇಟಾ ಮತ್ತು 200GB ಡೇಟಾ ರೋಲ್‌ಓವರ್ ಅನ್ನು ಒದಗಿಸುತ್ತದೆ. ಯೋಜನೆಯ ಲಾಭವನ್ನು ಕುಟುಂಬ ಯೋಜನೆಯಡಿಯಲ್ಲಿ ಎರಡು ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು.

ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 999ರೂ, ಪ್ಲ್ಯಾನ್
ಇದು ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 200GB ನೀಡುತ್ತದೆ ಮತ್ತು ಕುಟುಂಬ ಯೋಜನೆಯಡಿ ಮೂರು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುತ್ತದೆ. ಈ ಪ್ಲಾನ್ ಅಡಿಯಲ್ಲಿ ಗರಿಷ್ಠ ಡೇಟಾ ರೋಲ್ಓವರ್ 500GB ಆಗಿದೆ, ಇತರ ಅಗ್ಗದ ಯೋಜನೆಗಳಲ್ಲಿ 200GB ಯಿಂದ ಹೆಚ್ಚಾಗಿದೆ.

ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ 1,499ರೂ, ಪ್ಲ್ಯಾನ್
ಇದು ಅತ್ಯಂತ ದುಬಾರಿ ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಪ್ಲಾನ್ ಮತ್ತು ಇದು ಬಿಲ್ಲಿಂಗ್ ಸೈಕಲ್‌ನಲ್ಲಿ 300GB ಡೇಟಾವನ್ನು ಹೊಂದಿದೆ. ₹ 999 ಯೋಜನೆಯಂತೆ ಬಳಕೆದಾರರು ಮುಂದಿನ ಬಿಲ್ಲಿಂಗ್ ಚಕ್ರಕ್ಕೆ ಗರಿಷ್ಠ 500GB ಯನ್ನು ಸಾಗಿಸಬಹುದು. ಆದಾಗ್ಯೂ, ಈ ಯೋಜನೆಯು ಯಾವುದೇ ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಕುಟುಂಬ ಯೋಜನೆಯಡಿಯಲ್ಲಿ ನೀಡುವುದಿಲ್ಲ.

ಡಿಸ್ನಿ + ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ನೀಡುವ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಗಳು
ಕೆಲವೇ ಕೆಲವು ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಗಳು ಬಳಕೆದಾರರಿಗೆ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಡಿಸ್ನಿ+ ಹಾಟ್‌ಸ್ಟಾರ್‌ಗೆ ಉಚಿತವಾಗಿ ನಿಮಗೆ ಪ್ರವೇಶ ನೀಡುವಂತಹವುಗಳು ಇಲ್ಲಿವೆ.
401 ರೂ, ಪ್ಲ್ಯಾನ್
598 ರೂ, ಪ್ಲ್ಯಾನ್
777 ರೂ, ಪ್ಲ್ಯಾನ್
2,599 ರೂ, ಪ್ಲ್ಯಾನ್


Click it and Unblock the Notifications








