ಫಸ್ಟ್ ಸೇಲ್‌ನಲ್ಲಿ ಜಿಯೋ ಫೋನ್ 2 ಖರೀದಿಸಲು ಆಗಿಲ್ವಾ..? ಹಾಗಾದ್ರೇ ಇಂದು ಖರೀದಿಸಿ..!

ಜಿಯೋ ಫೋನ್‌ನ ಯಶಸ್ಸಿನೊಂದಿಗೆ ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಆಗಸ್ಟ್‌ನಲ್ಲಿ ಜಿಯೋ ಫೋನ್ 2 ಮೊಬೈಲ್‌ನ್ನು ಬಿಡುಗಡೆಗೊಳಿಸಿತ್ತು. ಜಿಯೋ ಫೋನ್ 2ನ ಮೊದಲ ಫ್ಲಾಷ್ ಸೇಲ್‌ನ್ನು ಆಗಸ್ಟ್ 16ಕ್ಕೆ ಜಿಯೋ ನಡೆಸಿತ್ತು. ಆಗ ಕೆಲವೇ ಕ್ಷಣಗಳಲ್ಲಿ ಜಿಯೋ ಫೋನ್ 2 ಬಿಕರಿಯಾಗಿತ್ತು. ಆಗ ಖರೀದಿಸಲಾಗದವರಿಗೆ ಜಿಯೋ ಮತ್ತೊಂದು ಅವಕಾಶವನ್ನು ನೀಡಿದೆ.
ಹೌದು, ಇಂದು ಮಧ್ಯಾಹ್ನ 12ಕ್ಕೆ ಜಿಯೋ.ಕಾಂನಲ್ಲಿ ಮತ್ತೊಮ್ಮೆ ಫ್ಲಾಷ್ ಸೇಲ್ ಆಯೋಜಿಸಿದ್ದು, ಜಿಯೋ ಫೋನ್ 2 ಖರೀದಿಸಬೇಕು ಎನ್ನುವವರಿಗೆ ಸಂತಸದ ಸುದ್ದಿಯಾಗಿದೆ. ಮತ್ತೊಂದು ಫ್ಲಾಷ್ ಸೇಲ್ ಬರುವ ಸಾಧ್ಯತೆ ಕಡಿಮೆಯಿದ್ದು, ನಂತರ ಮಾರುಕಟ್ಟೆಯಲ್ಲಿ ದೊರೆಯಲಿದೆ.

ಜಿಯೋ ಫೋನ್ನ ಮೊದಲ ಆವೃತ್ತಿಯ ಅಪ್‌ಡೇಟೆಡ್ ಆವೃತ್ತಿಯಾಗಿರುವ ಜಿಯೋ ಫೋನ್ 2ನಲ್ಲಿ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಬೆಂಬಲವಿದೆ. ಮತ್ತು ಜಿಯೋ ಫೋನ್ 2 4G VoLTE ಬೆಂಬಲಿಸಲಿದೆ. ಇಂದು ಎರಡನೇ ಫ್ಲಾಷ್ ಸೇಲ್ ಕಾಣುತ್ತಿರುವ ಜಿಯೋ ಫೋನ್ 2 ಏನೇನ್ ಫೀಚರ್ ಹೊಂದಿದೆ ಎಂಬುದರ ಮಾಹಿತಿ ಇಲ್ಲಿದೆ. ಭಾರೀ ಬೇಡಿಕೆಯಿರುವ ಜಿಯೋ ಫೋನ್ 2 ಇಂದಾದರೂ ನಿಮ್ಮ ಕೈ ಸೇರುತ್ತಾ ನೋಡಿ.

ವಿನ್ಯಾಸ
ಇಂದು ಎರಡನೇ ಫ್ಲಾಷ್ ಸೇಲ್ ಕಾಣುತ್ತಿರುವ ಹೊಸ ಜಿಯೋ ಫೋನ್ 2 ವಿನ್ಯಾಸ ಉತ್ತಮವಾಗಿದ್ದು, ಡಿಸ್‌ಪ್ಲೇ ಜಿಯೋ ಫೋನ್ನ ಮೊದಲ ಆವೃತ್ತಿಗಿಂತಲೂ ಭಿನ್ನವಾಗಿದೆ. ಜಿಯೋ ಫೋನ್ 2ನಲ್ಲಿ QWERTY ಕೀಪ್ಯಾಡ್ ಇದ್ದು, ಜತೆಗೆ 4ವೇ ನ್ಯಾವಿಗೇಷನ್ ಪ್ಯಾಡ್ ಹೊಂದಿದೆ. ಜಿಯೋ ಫೋನ್‌ನಂತೆ 2.4 ಇಂಚಿನ QVGA ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ ಹಾರಿಜಂಟಲ್ ಆಗಿದೆ. ಬ್ಲಾಕ್‌ಬೆರ್ರಿ ವಿನ್ಯಾಸದ ರೀತಿಯನ್ನು ಕಾಣಬಹುದಾಗಿದೆ.

ಸೋಷಿಯಲ್ ಮೀಡಿಯಾ
ಜಿಯೋ ಆಪ್‌ಗಳಾದ ಮೈ ಜಿಯೋ, ಜಿಯೋ ಮ್ಯೂಸಿಕ್, ಜಿಯೋ ಟಿವಿಯಂತಹ ಆಪ್‌ಗಳನ್ನು ಜಿಯೋ ಫೋನ್ 2 ಹೊಂದಿದೆ. ಇವುಗಳ ಜತೆ ಜಿಯೋ ಫೋನ್ 2ನಲ್ಲಿ ಸಾಮಾಜಿಕ ಜಾಲತಾಣದ ಆಪ್‌ಗಳಾದ ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಯೂಟ್ಯೂಬ್ ಆಪ್‌ಗಳು ಬಂದು ಸೇರಿದ್ದು, ಫೀಚರ್ ಫೋನ್‌ಗಳಲ್ಲಿ ಮತ್ತೊಂದು ಕ್ರಾಂತಿಯನ್ನು ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.

ಕ್ಯಾಮೆರಾ
ರಿಲಾಯನ್ಸ್‌ನ ಜಿಯೋ ಫೋನ್ 2ನಲ್ಲಿ 2 MP ಬ್ಯಾಕ್ ಕ್ಯಾಮೆರಾ ಮತ್ತು ಮುಂದೆ 0.3 MP (VGA) ಕ್ಯಾಮೆರಾ ಇದೆ. ವಿಡಿಯೋ ರೆಕಾರ್ಡಿಂಗ್ ಮಾಡುವ ಫೀಚರ್ ಇದೆ. ಈ ಕ್ಯಾಮೆರಾ ಮೂಲಕ ಬಳಕೆದಾರರು ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ.

KaiOS
ಜಿಯೋ ಫೋನ್ 2ನಲ್ಲಿ KaiOS ಅಳವಡಿಸಲಾಗಿದೆ. ಈ ಒಎಸ್ ಆಪ್‌ಡೇಟ್ ಆದಂತೆ ಫೋನ್ ಇನ್ನಷ್ಟು ಸ್ಮಾರ್ಟ್ ಆಗಲಿದೆ ಎನ್ನುತ್ತಾರೆ. ಆದ್ದರಿಂದ ಭವಿಷ್ಯದಲ್ಲಿ ಜಿಯೋ ಫೋನ್ 2ನಲ್ಲಿ ಹೆಚ್ಚಿನ ಆಯ್ಕೆಗಳು ದೊರೆಯಲಿದೆ. ಈಗಾಗಲೇ ಅನೇಕ ಫೀಚರ್ ಫೋನ್‌ಗಳು ಇದೇ ರೀತಿಯ ಆಪರೇಟಿಂಗ್ ಸಿಸ್ಟಮ್‌ನ್ನು ಬಳಸುತ್ತಿವೆ.

ಎರಡು ಸಿಮ್
ಜಿಯೋ ಫೋನ್2ನಲ್ಲಿ ಎರಡು ಸಿಮ್ ಕಾರ್ಡ್ ಸ್ಲಾಟ್ ನೀಡಲಾಗಿದೆ. ಜಿಯೋ ಫೋನ್‌ನಲ್ಲಿ ಕೇವಲ ಒಂದು ಸಿಮ್ ಕಾರ್ಡ್ ಸ್ಲಾಟ್ ನೀಡಲಾಗಿತ್ತು. ಅದರಲ್ಲಿ ಜಿಯೋ ಸಿಮ್ ಮಾತ್ರ ಬಳಕೆ ಮಾಡುವ ಅವಕಾಶವಿತ್ತು. ಜಿಯೋ ಫೋನ್ 2ನ ಒಂದು ಸ್ಲಾಟ್‌ನಲ್ಲಿ ಜಿಯೋ ಸಿಮ್ ಮತ್ತು ಇನ್ನೊಂದು ಸ್ಲಾಟ್‌ನಲ್ಲಿ ಬೇರೆ ನೆಟ್‌ವರ್ಕ್ ಸಿಮ್ ಬಳಸಬಹುದು.

ಮತ್ತೀತರ ಫೀಚರ್ಸ್
ಜಿಯೋ ಫೋನ್ 2 512MB RAM ಮತ್ತು 4GB ಸ್ಟೋರೆಜ್ ಹೊಂದಿದೆ. ಮೆಮೊರಿಯನ್ನು microSD ಕಾರ್ಡ್ ಮೂಲಕ 128GBವರೆಗೆ ವಿಸ್ತರಿಸಬಹುದಾಗಿದೆ. 4G VoLTE, VoWi-Fi, Bluetooth, GPS, NFC ಮತ್ತುFM ರೇಡಿಯೋ ಹೊಂದಿದೆ. ಗೂಗಲ್ ಅಸಿಸ್ಟಂಟ್‌ಗೆ ಸಹಾಯವಾಗುವಂತಹ ವಾಯ್ಸ್ ಕಮಾಂಡ್ ಬಟನ್ ಹೊಂದಿದೆ. ಮತ್ತು ಜಿಯೋ ಫೋನ್ 2 2000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ
ಜಿಯೋ ಫೋನ್ನ ಮೊದಲ ಆವೃತ್ತಿ ಕೇವಲ ರೂ.1500ಕ್ಕೆ ಲಭ್ಯವಿತ್ತು. ಆದರೆ ಜಿಯೋ ಫೋನ್ 2 2,999 ರೂ. ಬೆಲೆ ಹೊಂದಿದೆ. ಯಾವುದೇ ಹ್ಯಾಂಡ್‌ಸೆಟ್ ರಿಫಂಡ್ ಇಲ್ಲ. ಹ್ಯಾಂಡ್‌ಸೆಟ್ ಖರೀದಿ ಮಾಡಿದ 5 ರಿಂದ 7 ದಿನಗಳಲ್ಲಿ ಕೈ ಸೇರಲಿದೆ. ಬಳಕೆದಾರರು 4G ಫೀಚರ್ ಫೋನ್‌ಗೆ ರೂ.49, ರೂ.99 ಮತ್ತು ರೂ.153ಗಳ ರಿಚಾರ್ಜ್ ಮಾಡಿಸಿಕೊಳ್ಳುವ ಆಯ್ಕೆಯಿದೆ.


Click it and Unblock the Notifications








