ಆಗಸ್ಟ್ 15ರಿಂದ ಮಾರಾಟಕ್ಕೆ 'ಜಿಯೋಫೋನ್ 2'..ಆನ್‌ಲೈನಿನಲ್ಲಿ ಖರೀದಿ ಹೇಗೆ?
ಜಿಯೋಫೋನ್ ಹೆಸರಿನಲ್ಲಿ ಭಾರತದಲ್ಲಿ ಮೊಟ್ಟ ಮೊದಲ 4G ಫೀಚರ್ ಫೋನ್ ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಮುಖೇಶ್ ಅಂಬಾನಿ ಒಡೆತನದ ಜಿಯೋ ಇದೇ ಆಗಸ್ಟ್ 15 ರಿಂದ 'ಜಿಯೋಫೋನ್ 2 'ಅನ್ನು ಮಾರಾಟ ಮಾಡುತ್ತಿದೆ. ಬೇಸಿಕ್ ಫೋನ್‌ಗಳಿಗಿಂತ ಹೆಚ್ಚು, ಸ್ಮಾರ್ಟ್‌ಫೋನ್‌ಗಿಂತ ಕಡಿಮೆ ಫೀಚರ್ಸ್ ಹೊಂದಿರುವ' ಜಿಯೋಫೋನ್ 2' ಈಗ ಸುದ್ದಿ ಕೇಂದ್ರದಲ್ಲಿದೆ.
ಇದೇ 15 ನೇ ತಾರೀಖಿನಿಂದ ಭಾರತದ ಮಾರುಕಟ್ಟೆಯಲ್ಲಿ ಜಿಯೋಫೋನ್ 2 ಮಾರಾಟ ಆರಂಭವಾಗಲಿದ್ದು, 2,999 ರೂಪಾಯಿಗಳ ಬೆಲೆಯನ್ನು ಹೊತ್ತು ಮಾರುಕಟ್ಟೆಗೆ ಕಾಲಿಡುತ್ತಿರುವ 'ಜಿಯೋಫೋನ್ 2' ಮೊಬೈಲ್ ಮಾರುಕಟ್ಟೆಯ ಕುತೋಹಲಕ್ಕೆ ಕಾರಣವಾಗಿದೆ. ಮೊದಲ ಜಿಯೋಫೋನ್ ಯಶಸ್ಸಿನ ಅಲೆ 'ಜಿಯೋಫೋನ್ 2' ಪೋನಿಗೆ ಸಿಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಜಿಯೋಫೋನ್2ಗೆ ಬರಬಹುದಾದ ಬೇಡಿಕೆಯನ್ನು ಬಹುಬೇಗ ಪೂರೈಸುವ ಸಲುವಾಗಿ ಆಗಸ್ಟ್ 15 ರಿಂದ ಆನ್‌ಲೈನಿನಲ್ಲಿ ಮೊದಲು ಜಿಯೋಫೋನ್ 2 ಮಾರಾಟ ಆರಂಭವಾಗಲಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಹಾಗಾದರೆ, ಜಿಯೋಫೋನ್2 ಅನ್ನು ಮೊದಲು ಖರೀದಿಸುವುದು ಹೇಗೆ? ಮತ್ತು ಜಿಯೋಫೋನ್ 2 ಪೋನಿನ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಜಿಯೋಫೋನ್2 ಖರೀದಿ ಹೇಗೆ?
ಜಿಯೋ.ಕಾಮ್ ಮತ್ತು ಜಿಯೋ ಆಪ್ ಮೂಲಕ ಜಿಯೋಫೋನ್2 ಅನ್ನು ಮೊದಲು ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆಗಸ್ಟ್ 15 ರಂದು ಜಿಯೋವಿನ ಅಫಿಷಿಯಲ್ ವೆಬ್‌ಸೈಟ್ ತೆರೆದರೆ ಜಿಯೋಫೋನ್2 ಫೋನ್ ಅನ್ನು ಬುಕ್ ಮಾಡುವ ಆಯ್ಕೆ ಕಾಣಿಸಲಿದೆ. ಬುಕ್ ಮಾಡಿದ 2 ರಿಂದ 3 ದಿನಗಳ ಒಳಗಾಗಿ ಫೋನ್ ಕೈ ಸೇರಲಿದೆ.

ವಿನ್ಯಾಸ ಮತ್ತು ಡಿಸ್‌ಪ್ಲೇ
ಹೊಸ ಜಿಯೋ ಫೋನ್ 2 ವಿನ್ಯಾಸ ಮತ್ತು ಡಿಸ್‌ಪ್ಲೇನಲ್ಲಿ ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿದೆ. QWERTY ಕೀಪ್ಯಾಡ್ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಜಿಯೋ ಫೋನ್ 2 ಹೊಂದಿದೆ. ಆದರೆ, ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು 2.4 ಇಂಚ್ ಡಿಸ್‌ಪ್ಲೇ ಹೊಂದಿವೆ.

ಮೆಮೊರಿ ಮತ್ತು ಒಎಸ್
ಜಿಯೋ ಫೋನ್ 2 ಮೆಮೊರಿ ವಿಚಾರದಲ್ಲೂ ವಿಭಿನ್ನವಾಗಿಲ್ಲ. ಜಿಯೋ ಫೋನ್‌ನಂತೆಯೇ 512MB RAM ಮತ್ತು 4GB ಆಂತರಿಕ ಸ್ಟೊರೇಜ್ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ. ಸಾಫ್ಟ್‌ವೇರ್‌ನಲ್ಲಿ ನೋಡುವುದಾದರೆ ಎರಡು ಫೋನ್‌ಗಳು KaiOS ಹೊಂದಿವೆ.

ಕ್ಯಾಮೆರಾ
ಜಿಯೋ ಫೋನ್ 2 ಜಿಯೋ ಫೋನ್‌ನಂತೆಯೇ ಕ್ಯಾಮೆರಾ ಫೀಚರ್ ಹೊಂದಿದ್ದು, 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಹೊಂದಿದೆ. ಎರಡು ಫೋನ್‌ಗಳು ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಫೀಚರ್ ಫೋನ್‌ನಲ್ಲಿ ಉತ್ತಮ ಫೀಚರ್ ಹೊಂದಿದೆ.

ಆಪ್‌ಗಳು ಇವೆ!
ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು ಮೊಬೈಲ್‌ಗಳು ಜಿಯೋ ಆಪ್‌ಗಳಾದ ಮೈ ಜಿಯೋ, ಜಿಯೋ ಮ್ಯೂಸಿಕ್, ಜಿಯೋ ಟಿವಿಯಂತಹ ಆಪ್‌ಗಳನ್ನು ಒಳಗೊಳ್ಳಲಿವೆ. ಆದರೆ ಜಿಯೋ ಫೋನ್ 2 ರಲ್ಲಿ ಈ ಆಪ್‌ಗಳನ್ನು ಹೊರತುಪಡಿಸಿ ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ನಂತಹ ಆಪ್‌ಗಳು ಇರಲಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ಸಂಪರ್ಕ ಮತ್ತು ಬ್ಯಾಟರಿ
ಸಂಪರ್ಕದ ವಿಚಾರಕ್ಕೆ ಬಂದರೆ ಜಿಯೋ ಫೋನ್ 2 ವಿಭಿನ್ನವಾಗಿದ್ದು, ಡ್ಯುಯಲ್ ಸಿಮ್‌ಗೆ ಬೆಂಬಲ ಮತ್ತು ವೋವೈ-ಫೈ ಫೀಚರ್ ಹೊಂದಿದೆ. ಇವೆರಡು ಫೀಚರ್‌ಗಳು ಜಿಯೋ ಫೋನ್‌ನಲ್ಲಿ ಇದ್ದಿಲ್ಲ. ಮತ್ತು ಜಿಯೋ ಫೋನ್‌ನ ಉಳಿದ ಫೀಚರ್‌ಗಳಾದ 4G ವೋಲ್ಟ್ ಬೆಂಬಲ, ಎಫ್‌ಎಂ ರೇಡಿಯೋ, ವೈ-ಫೈ, ಜಿಪಿಎಸ್ ಮತ್ತು ಎನ್‌ಎಫ್‌ಸಿ ಫೀಚರ್‌ಗಳನ್ನು ಹೊಂದಿದೆ.

ಬೆಲೆ ಎಷ್ಟು?
2016ರಲ್ಲಿ ಜಿಯೋ ಫೋನ್ ಕೇವಲ 1500 ರೂ. ಗಳಿಗೆ ಲಭ್ಯವಿತ್ತು. ಅದು ಸಹ 3 ವರ್ಷದ ನಂತರ ಮರುಪಾವತಿಯಾಗುತ್ತಿತ್ತು. ಆದರೆ, ಜಿಯೋ ಫೋನ್ 2ನ್ನು ಜಿಯೋ ಫೋನ್‌ಗೆ ಹೋಲಿಕೆ ಮಾಡಿ ನೋಡಿದರೆ ಬೇಲೆ ಸ್ವಲ್ಪ ಹೆಚ್ಚಾಯಿತು ಎನ್ನಬಹುದು. ಜಿಯೋ ಫೋನ್ 2 ಮೊಬೈಲ್‌ನ ಆರಂಭಿಕ ಬೆಲೆ 2,999 ರೂ. ಇದೆ. ರಿಲಾಯನ್ಸ್ ಜಿಯೋ ನಂತರದ ದಿನಗಳಲ್ಲಿ ಈ ಫೋನ್‌ಗೂ ಮರುಪಾವತಿಯ ಆಫರ್ ನೀಡಿದರೆ ಅಚ್ಚರಿಪಡಬೇಕಾಗಿಲ್ಲ.


Click it and Unblock the Notifications