"ಜಿಯೋ ಫೋನ್" ಅಧಿಕೃತ ಬುಕ್ಕಿಂಗ್ ಮತ್ತೆ ಆರಂಭ!.48 ರೂ.ಗೆ 28ದಿನ ಅನ್‌ಲಿಮಿಟೆಡ್ ಸೇವೆ ಘೋಷಣೆ!!
ಕಮ್ ಆನ್ ಇಂಡಿಯಾ' ಎಂಬ ಸ್ಲೋಗನ್ ಮೂಲಕ ಜಿಯೋ ಫೋನ್ ಅಧಿಕೃತ ಬುಕ್ಕಿಂಗ್ ಮತ್ತೆ ಆರಂಭವಾಗಲಿದ್ದು, ಕೇವಲ 48 ರೂಪಾಯಿಗಳಿಗೆ ಜಿಯೋ ಸಂಪೂರ್ಣ ಸೇವೆಯನ್ನು ಈ ಫೋನ್ ಜೊತೆಗೆ ಪಡೆಯಬಹುದಾಗಿದೆ.!!
ಭಾರತದ ನಂಬರ್ ಒನ್ ಫೋನ್ ಪಟ್ಟವನ್ನು ಪಡೆದ ಜಿಯೋ ಫೋನ್ ಬುಕ್ಕಿಂಗ್ ಮತ್ತೆ ಆರಂಭವಾಗಿದೆ.! 'ಕಮ್ ಆನ್ ಇಂಡಿಯಾ' ಎಂಬ ಸ್ಲೋಗನ್ ಮೂಲಕ ಜಿಯೋ ಫೋನ್ ಅಧಿಕೃತ ಬುಕ್ಕಿಂಗ್ ಮತ್ತೆ ಆರಂಭವಾಗಲಿದ್ದು, ಕೇವಲ 48 ರೂಪಾಯಿಗಳಿಗೆ ಜಿಯೋ ಸಂಪೂರ್ಣ ಸೇವೆಯನ್ನು ಈ ಫೋನ್ ಜೊತೆಗೆ ಪಡೆಯಬಹುದಾಗಿದೆ.!!
48 ರೂಪಾಯಿಗಳಿಗೆ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್ ಸೇವೆಗಳನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಜಿಯೋ ಹೊಸದಾಗಿ ಆಫರ್ ನೀಡಿದೆ. ಆದರೆ, ಮೊಬೈಲ್ ಬುಕ್ಕಿಂಗ್‌ಗಾಗಿ 1500 ರೂ. ಹಣವನ್ನು ಒಮ್ಮೆಲೆ ಪಾವತಿಸುವಂತಹ ವ್ಯವಸ್ಥೆಯನ್ನು ಜಾರಿಗೆ ತಂದಿದೆ..!!

ಕೇವಲ 48 ರೂಪಾಯಿಗಳಿಗೆ ತಿಂಗಳ ಸೇವೆ ಮತ್ತು ಉಚಿತ 4G ಫೋನ್ ನೀಡುತ್ತಿರುವ ಜಿಯೋಯಿಂದಾಗಿ ಟೆಲಿಕಾಂ ಮತ್ತೆ ಹೆದರಿದೆ.! ಹಾಗಾದರೆ, ಜಿಯೋ ಫೋನ್ ಬುಕ್ ಮಾಡುವುದು ಹೇಗೆ? ಟೆಲಿಕಾಂನಲ್ಲಿ ಆಗುತ್ತಿರುವ ಬದಲಾವಣೆಗಳೇನು? ಮತ್ತು ಜಿಯೋ ಫೋನ್ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ಪ್ರಪಂಚದ ಟೆಲಿಕಾಂನಲ್ಲಿಯೇ ಮೊದಲು!!
ಉಚಿತ 4G ಫೀಚರ್ ಫೋನ್ ನೀಡುವುದರ ಜೊತೆಗೆ, ಕೇವಲ 48 ರೂಪಾಯಿಗಳಿಗೆ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್ ಸೇವೆಗಳನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಿರುವುದು ಇಡೀ ಪ್ರಪಂಚದ ಟೆಲಿಕಾಂನಲ್ಲಿಯೇ ಮೊದಲಾಗಿದೆ.!!

ಟೆಲಿಕಾಂಗೆ ಭಾರಿ ಪೆಟ್ಟು!!
ಜಿಯೋ ಫೋನ್ ಈ ಪರಿಯಾಗಿ ಬುಕ್ ಆಗುತ್ತಿರುವುದರಿಂದ ಏರ್‌ಟೆಲ್ ಮತ್ತು ಇತರ ಟೆಲಿಕಾಂ ಕಂಪೆನಿಗಳು ಕಂಗಾಲಾಗಿವೆ.! ಇತರ ಕಂಪೆನಿಗಳೆಲ್ಲವೂ ತಮ್ಮ 4G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ವೇಳೆಗಾಗಲೇ ಜಿಯೋ ನೀಡಿರುವ ಹೊಡೆತದಿಂದ ಟೆಲಿಕಾಂ ಪ್ರಪಂಚಕ್ಕೆ ಮತ್ತೆ ಭಾರಿ ಪೆಟ್ಟು ಬೀಳುವ ಸಂಭವವಿದೆ.!!

ಹಣ ವಾಪಸ್‌ನಲ್ಲಿ ಬದಲಾವಣೆ ಇಲ್ಲ.!!
1500 ರೂ. ಹಣವನ್ನು ಒಮ್ಮೆಲೆ ಪಾವತಿಸಲು ಕೇಳಿಕೊಳ್ಳುತ್ತಿರುವ ಜಿಯೋ ಪಾವತಿಸಿದ ಹಣವನ್ನು ಹಿಂದಿರುಗಿಸುವ ವಿಷಯದಲ್ಲಿ ಜಿಯೋ ಯಾವುದೇ ಬದಲಾವಣೆ ಮಾಡಿಲ್ಲ. 12 ತಿಂಗಳ ನಂತರ 1000ರೂ.ಗಳನ್ನು ಹಾಗೂ 24 ತಿಂಗಳ ನಂತರ 500 ರೂ.ಗಳನ್ನು ಜಿಯೋ ವಾಪಸ್ ನೀಡುವುದಾಗಿ ಹೇಳಿದೆ.!


ಈಗಲೇ ಬುಕ್ ಮಾಡಿದವರಿಗೆ ಫೋನ್!!
ಕೇವಲ 48 ರೂಪಾಯಿಗಳಿಗೆ ಜಿಯೋ ಸಂಪೂರ್ಣ ಸೇವೆಯನ್ನು ಪಡೆಯಬಹುದಾಗಿರುವುದರಿಂದ ಜಿಯೋ ಫೋನ್ ಬುಕ್ಕಿಂಗ್‌ಗೆ ಜನರು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿಯೇ, ಬುಕ್ಕಿಂಗ್ ಶುರುವಾದ ನಂತರ ಈಗಾಗಲೇ 30 ಲಕ್ಷಕ್ಕಿಂತ ಜಿಯೋ ಫೋನ್‌ಗಳು ಬುಕ್ ಆಗಿರುವ ಮಾಹಿತಿ ಇರುವುದರಿಂದ ಕೂಡಲೇ ಜಿಯೋ ಫೋನ್ ಬುಕ್ ಮಾಡಿ.!!

ಜಿಯೋ ಫೋನ್ ಬುಕ್ ಮಾಡುವುದು ಹೇಗೆ?
www.jio.com ಗೆ ಭೇಟಿ ನೀಡಿದರೆ ಮುಖ ಪುಟದಲ್ಲಿಯೇ ಜಿಯೋ ಫೋನ್ ಮಾರಾಟದ ಮಾಹಿತಿ ಸಿಗುತ್ತದೆ. ಅಲ್ಲಿ "ಆರ್ಡರ್ ನೌ" ಆಯ್ಕೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ ಆನ್‌ಲೈನ್ ಪೇಮೆಂಟ್ ಮಾಡಲು ಕೇಳಿಕೊಳ್ಳುತ್ತದೆ. ನಂತರ ನಿಮ್ಮ ವಿಳಾಸ ನೀಡಿದರೆ ಸಾಕು ಜಿಯೋ ಫೋನ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ.!!

ಜಿಯೋ ಫೋನ್ ಫೀಚರ್ಸ್ ಏನು?
2.4 ಇಂಚಿನ QVGA ಡಿಸ್‌ಪ್ಲೇಯನ್ನು ಹೊಂದಿರುವ ಜಿಯೋ 4G ಫೀಚರ್ ಫೋನ್ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಫೀಚರ್ ಫೋನ್ ಆದರೂ ಸ್ಮಾರ್ಟ್‌ಪೋನ್‌ನಲ್ಲಿ ನಿರ್ವಹಿಸಬಹುದಾದ ಎಲ್ಲಾ ಕಾರ್ಯಗಳನ್ನು ಈ ಫೋನ್ ಮೂಲಕ ನಿರ್ವಹಿಸಬಹುದಾದ ಈ ಪೋನ್ ಅನ್ನು ಭಾರತದ ಬೆಸ್ಟ್ ಫೋನ್ ಎಂದು ಹೇಳಬಹುದು.!!


Click it and Unblock the Notifications








