Home
ಸುದ್ದಿಜಾಲ

ಜಿಯೋ ಫೋನ್ ಮೊದಲು ಡಿಲಿವರಿಯಾಗುವುದು ಎಲ್ಲೆಲ್ಲಿ?..ಮತ್ತೆ ಬುಕ್ಕಿಂಗ್ ಯಾವಾಗ ಶುರು?!

ಜಿಯೋ ಫೋನ್‌ಗಳನ್ನು ತೈವಾನ್‌ ದೇಶದಿಂದ ಆಮದು ಮಾಡಲಾಗುತ್ತಿದೆ ಎಂದು ಎಫ್ಇ ಬ್ಯೂರೋ ತಿಳಿಸಿದೆ.!!

By Bhaskar N J

ಹೆಚ್ಚು ಪ್ರೀ ಬುಕ್ಕಿಂಗ್‌ನಿಂದಾಗಿ ಜಿಯೋ ಫೋನ್ ಪೂರ್ವ ಬುಕಿಂಗ್ ಅನ್ನು ಅಮಾನತ್ತುಗೊಳಿಸಲಾಗಿದ್ದು, ಸುಮಾರು ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ಬುಕ್ ಕಂಡ ಜಿಯೋ ಉಚಿತ 4G ಫೋನ್ ಡೆಲಿವರಿ ಬಗ್ಗೆ ಜಿಯೋಗೆ ಚಿಂತೆಯಾಗಿಬಿಟ್ಟಿದೆ.! ಹಾಗಾಗಿ, ಮೊದಲು ಬುಕ್ ಆಗಿರುವ ಫೋನ್ ವಿತರಣೆಗೆ ಜಿಯೋ ಒಲವು ತೋರಿದೆ.!!

ಈ ಬಗ್ಗೆ ಎಫ್ಇ ಬ್ಯೂರೋ ವರದಿ ಮಾಡಿದ್ದು, ವಿಪರೀತ ಪ್ರಿ ಬುಕ್ಕಿಂಗ್ ಆದ ಜಿಯೋ ಫೋನ್ ಅನ್ನು ಪ್ರತಿ ದಿನ ಒಂದು ಲಕ್ಷ ಫೋನ್‌ಗಳಂತೆ ತನ್ನ ಗ್ರಾಹಕರಿಗೆ ಡೆಲಿವರಿ ನೀಡಲು ಜಿಯೋ ನಿರ್ಧರಿಸಿದೆಯಂತೆ. ಜಿಯೋ ಫೋನ್‌ಗಳನ್ನು ತೈವಾನ್‌ ದೇಶದಿಂದ ಆಮದು ಮಾಡಲಾಗುತ್ತಿದೆ ಎಂದು ಎಫ್ಇ ಬ್ಯೂರೋ ತಿಳಿಸಿದೆ.!!

ಹಾಗಾದರೆ, ಎಫ್ಇ ಬ್ಯೂರೋ ವರದಿ ಮಾಡಿರುವಂತೆ ಜಿಯೋ ಫೋನ್ ಮೊದಲು ಡಿಲಿವರಿಯಾಗುವುದು ಎಲ್ಲೆಲ್ಲಿ? ಮತ್ತೆ ಜಿಯೋ ಫೋನ್ ಪ್ರೀ ಬುಕ್ಕಿಂಗ್ ಪುನರಾರಂಭಿಸುವುದು ಯಾವಾಗ? ಮತ್ತು ಜಿಯೋ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

 ಪ್ರೀ ಬುಕ್ಕಿಂಗ್  ಪುನರಾರಂಭ ಯಾವಾಗ?

ಪ್ರೀ ಬುಕ್ಕಿಂಗ್ ಪುನರಾರಂಭ ಯಾವಾಗ?

ಆಗಸ್ಟ್ 24 ರಂದು ಸಂಜೆ 5.30ಕ್ಕೆ ಪ್ರಾರಂಭವಾದ ಜಿಯೋ ಫೋನ್‌ ಲಕ್ಷಾಂತರ ಬುಕ್ಕಿಂಗ್ ಪಡೆದಿದೆ. ಹಾಗಾಗಿ, ಜಿಯೋ ಪ್ರೀ ಬುಕ್ಕಿಂಗ್ ಅನ್ನು ಅಮಾನತ್ತುಗೊಳಿಸಲಾಗಿದೆ. ಮತ್ತೆ ಜಿಯೋ 4ಜಿ ಫೀಚರ್ ಫೋನ್‌ಗಾಗಿ ಪೂರ್ವ ಬುಕಿಂಗ್ ಅನ್ನು ಪುನರಾರಂಭಿಸುವಾಗ ತಿಳಿಸುವುದಾಗಿ ಜಿಯೋ ಹೇಳಿದೆ.!!

ಜಿಯೋ ಫೋನ್ ಮೊದಲು ಡಿಲಿವರಿಯಾಗುವುದು ಎಲ್ಲೆಲ್ಲಿ?

ಜಿಯೋ ಫೋನ್ ಮೊದಲು ಡಿಲಿವರಿಯಾಗುವುದು ಎಲ್ಲೆಲ್ಲಿ?

ದೆಹಲಿ, ಮುಂಬೈ, ಕೊಲ್ಕತ್ತಾ, ಹೈದರಾಬಾದ್ ಮತ್ತು ಅಹಮದಾಬಾದ್‌ ನಗರಗಳಲ್ಲಿ ಜಿಯೋ ಫೋನ್ ಮೊದಲು ಸಿಗಲಿವೆ ಎಂದು ಎಫ್ಇ ಬ್ಯೂರೋ ಹೇಳಿದ್ದು, ಜಿನ್ಸ್ ಲಾಜಿಸ್ಟಿಕ್ಸ್ ಕಂಪೆನಿಗಳ ಮೂಲಕ ಈ ಸ್ಥಳಗಳಲ್ಲಿಯೇ ಜಿಯೋ ಫೋನ್ ವಿತರಣೆಯಾಗಬಹುದು ಎಂದು ಎಫ್ಇ ಬ್ಯೂರೋ ಅಭಿಪ್ರಾಯಪಟ್ಟಿದೆ.!!

ಜಿಯೋ ಫೋನ್ ಫೀಚರ್ಸ್.!!

ಜಿಯೋ ಫೋನ್ ಫೀಚರ್ಸ್.!!

ಜಿಯೋ ಫೋನ್ 2 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು ಮುಂದೆ ವಿಜಿಎ ​​ಕ್ಯಾಮರಾವನ್ನು ಸಪೋರ್ಟ್ ಮಾಡಲಿದೆ. SD ಕಾರ್ಡ್ ಬಳಸಿ 128GB ವರೆಗೆ ಮೆಮೊರಿ ವಿಸ್ತರಿಸುವ ಆಯ್ಕೆಯನ್ನು ಹೊಂದಿರುವ ಫೋನ್ 512 MB RAM ಮತ್ತು 4 GB ಆಂತರಿಕ ಸಂಗ್ರಹವನ್ನು ಹೊಂದಿರುತ್ತದೆ. ಹ್ಯಾಂಡ್ಸೆಟ್ 2,000 mAh ಬ್ಯಾಟರಿಯೊಂದಿಗೆ, 2.4 ಇಂಚಿನ ಸ್ಕ್ರೀನ್ ಹೊಂದಿದೆ.!!

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಜಿಯೋ ಫೋನ್ ಇತರ ಸೇವೆ!!

ಜಿಯೋ ಫೋನ್ ಇತರ ಸೇವೆ!!

ಕೇವಲ 153 ರೂಪಾಯಿಗಳಿಗೆ ಪ್ರತಿ ತಿಂಗಳು ಅನ್‌ಲಿಮಿಟೆಡ್ ಸೇವೆಯನ್ನು ಜಿಯೋ ಮೂಲಕ ಪಡೆಯಬಹುದಾಗಿದ್ದು, ಜಿಯೋ ಉಚಿತ ಫೋನ್‌ ಮೂಲಕ ಗ್ರಾಹಕರು ಇನ್ನು ಹೆಚ್ಚಿನ ಸೇವೆಯನ್ನು ಪಡೆಯಲಿಬಹುದು. ,ಜಿಯೋ ಫೋನ್ ಅನ್ನು ಟಿವಿಗೆ ಕನೆಕ್ಟ್ ಮಾಡಬಹುದಾದ ಹಲವು ಅತ್ಯಾಧುನಿಕ ಆಯ್ಕೆಗಳು ಜಿಯೋ ಫೋನ್‌ನಲ್ಲಿವೆ.

Best Mobiles in India

English summary
After the heavy rush, Jio Phone pre booking has been suspended. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+