ಹೇಗಿದೆ ಜಿಯೋ ಫೋನ್: ಕನ್ನಡದಲ್ಲೇ ಮೊದಲ ವಿಡಿಯೋ..!
ಈಗಾಗಲೇ ರೂ.500 ನೀಡಿ ಫೋನ್ ಬುಕ್ ಮಾಡಿದವರಿಗೆ ಜಿಯೋ ಫೋನ್ ಅನ್ನು ತಲುಪಿಸುವ ಕಾರ್ಯ ಶುರುವಾಗಿದ್ದು, ದೀಪಾವಳಿ ಒಳಗಾಗಿ ಈ ಫೋನ್ ಗ್ರಾಹಕರ ಕೈ ಸೇರಲಿದೆ.
ಜಿಯೋ 4G ಜಿಯೋ ಫೋನ್ ಅನ್ನು ಲಾಂಚ್ ಮಾಡಿದ್ದು, ಈಗಾಗಲೇ ಅದನ್ನು ಗ್ರಾಹಕರ ಕೈಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಈ ಕಾರ್ಯದಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಲು ಮುಂದಾಗಿರುವ ಜಿಯೋ 6 ಮಿಲಿಯನ್ ಜಿಯೋ ಫೋನ್‌ಗಳನ್ನು ಗ್ರಾಹಕರಿಗೆ ತಲುಪಲಿಸಲಿದೆ.

ಈಗಾಗಲೇ ರೂ.500 ನೀಡಿ ಫೋನ್ ಬುಕ್ ಮಾಡಿದವರಿಗೆ ಜಿಯೋ ಫೋನ್ ಅನ್ನು ತಲುಪಿಸುವ ಕಾರ್ಯ ಶುರುವಾಗಿದ್ದು, ದೀಪಾವಳಿ ಒಳಗಾಗಿ ಈ ಫೋನ್ ಗ್ರಾಹಕರ ಕೈ ಸೇರಲಿದೆ.
ಈ ಜಿಯೋ ಫೋನ್ ಕೊಳ್ಳಲು ಬಳಕೆದಾರರು ರೂ.1500 ಪಾವತಿ ಮಾಡಬೇಕಾಗಿದೆ. ಬುಕ್ಕಿಂಗ್ ಸಮಯದಲ್ಲಿ ರೂ.500 ಪಾವತಿ ಮಾಡಬೇಕಾಗಿದ್ದು, ಇದಾದ ಮೇಲೆ ಮೊಬೈಲ್ ಪಡೆಯುವ ಸಂದರ್ಭದಲ್ಲಿ ರೂ.1000 ಪಾವತಿ ಮಾಡಬೇಕಾಗಿದೆ. ಈ ಹಣವೂ ತಿರುಗಿ ಪಡೆಯಬಹುದಾಗಿದೆ.

ಈ ಹಿನ್ನಲೆಯಲ್ಲಿ ಜಿಯೋ ಫೋನ್ ಹೇಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದ್ದು, ಜಿಯೋ ಫೋನ್ ನಿಮ್ಮ ಕೈಗೆ ಸಿಗುವ ಮುನ್ನವೇ ಈ ಫೋನ್ ಹೇಗಿದೆ ಎಂಬುದನ್ನು ನೀವೆ ನೋಡಿ.


Click it and Unblock the Notifications








