ಜಿಯೋ ಫೋನ್ ಎಕ್ಸ್‌ಚೇಂಜ್ ಮೇಳ ಆರಂಭ!..ಫೋನ್ ಪಡೆಯಲು ಇವೆ 5 ಷರತ್ತುಗಳು!!

|

ಜಿಯೋ ಪ್ರಕಟಿಸಿರುವಂತೆ, ಹಳೆಯ ಯಾವುದೇ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್‌ಗೆ ಬದಲಾವಣೆ ಮಾಡಿಕೊಳ್ಳುವ ಜಿಯೋ ಎಕ್ಸ್‌ಚೇಂಜ್ ಮೇಳ (ಜುಲೈ 21) ಇಂದಿನಿಂದ ಆರಂಭವಾಗಿದೆ. ಪ್ರಸ್ತುತ ಬಳಕೆ ಮಾಡುತ್ತಿರುವ ಯಾವುದೇ ಹಳೆಯ ಫೀಚರ್ ಫೋನ್ ಅನ್ನು ನೀಡಿ ಜಿಯೋ ಫೋನಿನ ಜೊತೆಗೆ ಭರಪೂರ ಕೊಡುಗೆಗಳನ್ನು ಪಡೆಯಬಹುದಾಗಿದೆ.

ಜಿಯೋ ಫೋನ್ ಎಕ್ಸ್‌ಚೇಂಜ್ ಮೇಳ ಆರಂಭ!..ಫೋನ್ ಪಡೆಯಲು ಇವೆ 5 ಷರತ್ತುಗಳು!!

ಆದರೆ, ನಿಮಗೆ ಗೊತ್ತಾ? ಹಳೆಯ ಫೀಚರ್ ಫೋನ್ ಅನ್ನು ನೀಡಿ ಜಿಯೋ ಫೋನಿನ ಜೊತೆಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವುದು ಸುಲಭವೇನಲ್ಲ. ಏಕೆಂದರೆ, ಜಿಯೋ ತನ್ನ ನೂತನ ಪೋನ್ ಅನ್ನು ಪಡೆಯುವವರಿಗಾಗಿ ಹಲವು ಷರತ್ತುಗಳನ್ನು ವಿಧಿಸಿದೆ. ಹಾಗಾಗಿ, ಜಿಯೋ ಫೋನ್ ಎಕ್ಸ್‌ಚೇಂಜ್ ಮಾಡಿಕೊಳ್ಳಲು ಇರುವ ಷರತ್ತು ಮತ್ತು ಆಫರ್‌ಗಳ ಬಗ್ಗೆ ಮುಂದೆ ತಿಳಿಯಿರಿ.

ಎಕ್ಸ್‌ಚೇಂಜ್ ಮೇಳಕ್ಕೆ ಚಾಲನೆ!

ಎಕ್ಸ್‌ಚೇಂಜ್ ಮೇಳಕ್ಕೆ ಚಾಲನೆ!

ಇಂದಿನಿಂದ ಜಿಯೋ ಫೋನ್ ಎಕ್ಸ್‌ಚೇಂಜ್ ಆಫರ್‌ಗೆ ಚಾಲನೆ ಸಿಗುತ್ತಿದೆ. ದೇಶದಲ್ಲಿನ ಎಲ್ಲಾ ಜಿಯೋ ಸ್ಟೋರ್‌ಗಳಲ್ಲಿಯೂ ಸಹ ಜಿಯೋ ಫೋನ್ ಅನ್ನು ಹಳೆಯ ಫೀಚರ್ ಫೋನಿಗೆ ಬದಲಾಗಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದ್ದು, ಹಳೆಯ ಫೋನ್ ನೀಡಿ ಹೊಸ ಫೋನ್ ಪಡೆದುಕೊಳ್ಳಲು ಕೇವಲ 501 ರೂಪಾಯಿಗಳನ್ನು ಪಾವತಿಸಬೇಕಿದೆ.

ಈ ಫೋನ್ ಕೂಡ ಉಚಿತ!

ಈ ಫೋನ್ ಕೂಡ ಉಚಿತ!

ಹಳೆಯ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್‌ ಪಡೆಯುವಾಗ ಪಾವತಿಸುವ ಹಣವನ್ನು ಜಿಯೋ ಮತ್ತೆ ವಾಪಸ್ ಮಾಡುವುದಾಗಿ ತಿಳಿಸಿದೆ. ಈಗ ಪಾವತಿಸಿದ 501 ರೂಪಾಯಿಗಳನ್ನು ಡೆಪಾಸಿಟ್ ಎಂದು ಪರಿಗಣಿಸಲಾಗಿದ್ದು, ಮೂರು ವರ್ಷಗಳ ನಂತರ ಮತ್ತೆ 501 ರೂಪಾಯಿ ಹಣವನ್ನು ವಾಪಸ್ ನೀಡುವುದಾಗಿ ಜಿಯೋ ತಿಳಿಸಿದೆ.

ಕೆಳಗಿನ ಷರತ್ತುಗಳನ್ನು ಪೂರೈಸಬೇಕಿದೆ.

ಕೆಳಗಿನ ಷರತ್ತುಗಳನ್ನು ಪೂರೈಸಬೇಕಿದೆ.

ಹೊಸ ಜಿಯೋ ಫೋನ್‌ಗೆ ನಿಮ್ಮ ಹಳೆಯ ಫೋನ್ ಅನ್ನು ಬದಲಾಯಸಲು ಈ ಷರತ್ತುಗಳನ್ನು ಪೂರೈಸಬೇಕಿದೆ. ನಿಮ್ಮ ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಕಳೆದ 3.5 ವರ್ಷಗಳ (2015) ಒಳಗೆ ಖರೀದಿಸಿದ ಮೊಬೈಲ್ ಆಗಿರಬೇಕು, ಅದು ಯಾವುದೇ 2ಜಿ, 3ಜಿ, 4ಜಿ (ನಾನ್-ವೋಲ್ಟ್) ಸಾಧನಗಳನ್ನು ವಿನಿಮಯಕ್ಕಾಗಿ ಒಪ್ಪಿಕೊಳ್ಳಲಾಗುತ್ತದೆ.

ವಿನಿಮಯ ಮಾಡಿಕೊಳ್ಳಲು ನೆನಪಿಡಿ!

ವಿನಿಮಯ ಮಾಡಿಕೊಳ್ಳಲು ನೆನಪಿಡಿ!

ಹಳೆಯ ಫೀಚರ್ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಹೋಗುವ ಮುನ್ನ ನೀವು ಈ ಅಂಶಗಳನ್ನು ನೆನಪಿನಲ್ಲಿ ಇಡಬೇಕಾಗುತ್ತದೆ. ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಹಳೆಯ ಫೋನ್ ಬ್ಯಾಟರಿ ಮತ್ತು ಚಾರ್ಜರ್ ಹೊಂದಿರಬೇಕು. MNP(ಮೊಬೈಲ್ ನಂಬರ್ ಪೋರ್ಟಬಲಿಟಿ)ಗೆ ಬದಲಾಗಲು ಹೊಸ MNP JIO ಸಂಖ್ಯೆಯಮನ್ನು ಹೊಂದಿರಬೇಕು.

ಎಕ್ಸ್‌ಚೇಂಜ್ ನಂತರ ಮುಂದೇನು?

ಎಕ್ಸ್‌ಚೇಂಜ್ ನಂತರ ಮುಂದೇನು?

ನಿಮ್ಮ ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡ ನಂತರ, ನಿಮಗೆ ಜಿಯೋ ಸ್ಟೋರ್‌ನಲ್ಲಿ ಹೊಸ ಸಿಮ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಹಳೆ ನಂಬರ್ ಅನ್ನು ನೀವು ಉಳಿಸಿಕೊಳ್ಳಲು ಬಯಸಿದರೆ, ನಿಮ್ಮ ಹಳೆಯ ನಂಬರ್‌ ಅನ್ನೇ ಜಿಯೋಗೆ ಪೋರ್ಟ್ ಮಾಡಲಾಗುತ್ತದೆ ಎಂದು ಜಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

ಏನೆಲ್ಲಾ ಆಫರ್‌ಗಳು ಲಭ್ಯ?

ಏನೆಲ್ಲಾ ಆಫರ್‌ಗಳು ಲಭ್ಯ?

ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡವರಿಗೆ, ಮಾನ್ಸೂನ್ ಆಫರ್ ಅಂಗವಾಗಿ ಜಿಯೋ ಹೊಸದಾಗಿ ಎರಡು ಆಫರ್‌ಗಳನ್ನು ನೀಡಿದೆ.! ಜಿಯೋ 594 ರೂಪಾಯಿಗಳ ಆಫರ್ ಅಥವಾ ಜಿಯೋ 99 ರೂಪಾಯಿಗಳ ಆಫರ್‌ಗಳು ಕ್ರಮವಾಗಿ, ಒಂದು ತಿಂಗಳು ಮತ್ತು ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿವೆ.

ಜಿಯೋ 594 ರೂ. ಆಫರ್!

ಜಿಯೋ 594 ರೂ. ಆಫರ್!

ಎಕ್ಸ್‌ಚೇಂಜ್ ಜಿಯೋ ಫೋನ್ ಖರೀದಿಸಿದವರಿಗೆ ಜಿಯೋ 594 ರೂಪಾಯಿಗಳಿಗೆ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಅನ್ನು ನೀಡಿದೆ. ಒಮ್ಮೆ 594 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಂಡರೆ, ಆರು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಒಟ್ಟಾರೆ 90GB ಹೈಸ್ಪೀಡ್ ಡೇಟಾವನ್ನು ಒಳಗೊಂಡಿದೆ.

ಜಿಯೋ 99 ರೂ. ಆಫರ್!

ಜಿಯೋ 99 ರೂ. ಆಫರ್!

ಎಕ್ಸ್‌ಚೇಂಜ್ ಜಿಯೋ ಫೋನ್ ಖರೀದಿಸಿದವರಿಗೆ ಜಿಯೋ ನೀಡಿರುವ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಇದಾಗಿದೆ. 99 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ ಒಂದು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 0.5GB ಸ್ಪೀಡ್ ಡೇಟಾ ದೊರೆಯಲಿದೆ.

ಆಗಸ್ಟ್ 15 ಕ್ಕೆ ಅಪ್‌ಡೇಟ್!

ಆಗಸ್ಟ್ 15 ಕ್ಕೆ ಅಪ್‌ಡೇಟ್!

ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ಗಳನ್ನು ಸಹ ಈಗ ಜಿಯೋ ಫೋನಿನಲ್ಲಿ ಬಳಸಬಹುದಾಗಿದ್ದು, ಆಗಸ್ಟ್ 15 ಕ್ಕೆ ಜಿಯೋ ಫೋನ್ ಅಪ್‌ಡೇಟ್ ಆಗಲಿದೆ ಎಂದು ಜಿಯೋ ತಿಳಿಸಿದೆ. ಹಳೆಯ ಮತ್ತು ಈಗ ನೀಡಿರುವ ಎಲ್ಲಾ ಫೋನ್‌ಗಳಲ್ಲಿಯೂ ಹೊಸ ಅಪ್‌ಡೇಟ್ ಸಿಗಲಿದೆ ಎಂದು ಜಿಯೋ ಸ್ಪಷ್ಟಪಡಿಸಿದೆ.

ಮೊಬೈಲ್‌ ಮೆಮೊರಿಗೆ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಲು ಇದು ಬೆಸ್ಟ್ ಟ್ರಿಕ್ಸ್!!

ಮೊಬೈಲ್‌ ಮೆಮೊರಿಗೆ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಲು ಇದು ಬೆಸ್ಟ್ ಟ್ರಿಕ್ಸ್!!

ಯೂಟ್ಯೂಬ್ ವಿಡಿಯೋಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದೇ ವೀಕ್ಷಿಸಬೇಕಾದರೆ ಅವುಗಳನ್ನು ಮೊದಲು ಡೌನ್ ಲೋಡ್ ಮಾಡಿಕೊಳ್ಳಬೇಕು. ಯೂಟ್ಯೂಬ್ ಆಪ್‌ನಲ್ಲಿರುವ ಆಫ್ ಲೈನ್ ಫೋಲ್ಡರ್‌ನಲ್ಲಿ ನೀವು ನೇರವಾಗಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ನೋಡಬಹುದಾದ ಮತ್ತು ಡಿಲೀಟ್ ಮಾಡಬಹುದು ಆಯ್ಕೆ ನಿಮಗೆಲ್ಲಾ ತಿಳಿದಿರಬಹುದು.
ಯೂಟ್ಯೂಬ್ ವಿಡಿಯೊ ಪ್ಲೇ ಮಾಡಿ ಆ ವಿಡಿಯೊದ ಕೆಳಗೆ ಶೇರ್ ಬಟನ್‌ನ ಪಕ್ಕದಲ್ಲಿಯೇ ಡೌನ್ ಲೋಡ್ ಬಟನ್ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ವಿಡಿಯೊ ಡೌನ್ ಲೋಡ್ ಆಗುತ್ತದೆ. ಹೀಗೆ ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿದ ವಿಡಿಯೊಗಳನ್ನು ಕಂಪ್ಯೂಟರ್‌ಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಈ ವಿಡಿಯೊಗಳನ್ನು ನಿಮ್ಮ ಮೊಬೈಲ್‌ನಲ್ಲಿ ಮಾತ್ರ ವೀಕ್ಷಿಸಬಹುದು.

ಇಲ್ಲಿ ಇರುವ ಮತ್ತೊಂದು ತೊಂದರೆ ಎಂದರೆ, ಯೂಟ್ಯೂಬ್‌ನಲ್ಲಿನ ಎಲ್ಲಾ ವಿಡಿಯೋಗಳನ್ನು ನಾವು ಡೌನ್‌ಲೋಡ್ ಮಾಡಲು ಅವಕಾಶವಿಲ್ಲ. ಹಾಗಾಗಿ, ಯೂಟ್ಯೂಬ್‌ನಲ್ಲಿನ ಪ್ರತಿಯೊಂದು ವಿಡಿಯೋಗಳನ್ನು ನಾವು ಬೇರೆಯವರಿಗೂ ಶೇರ್ ಮಾಡುವಂತೆ ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಟ್ರಿಕ್ಸ್ ಅನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಹಂತ 1:

ಹಂತ 1:

ಯೂಟ್ಯೂಬ್ ತೆರೆದು ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊವನ್ನು ಹುಡುಕಿ. ನಂತರ, ವೀಡಿಯೊವನ್ನು ಪ್ಲೇ ಮಾಡಿ ವಿರಾಮಗೊಳಿಸಿ.ವಿಡಿಯೋ ಕಳೆಗೆ ನೀವು ಶೇರ್ ಅನ್ನು ಕಾಣುತ್ತೀರಾ (ಮೇಲಿನ ಚಿತ್ರವನ್ನು ನೋಡಿ. )

ಹಂತ 2:

ಹಂತ 2:

ಅಲ್ಲಿ ಶೇರ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನೀವು ಲಿಂಕ್ ನಕಲಿಸಲು ಒಂದು ಆಯ್ಕೆಯನ್ನು ಕಾಣುತ್ತೀರಾ. ಅದನ್ನು ಕ್ಲಿಕ್ ಮಾಡಿ ಮತ್ತು ಲಿಂಕ್ ಅನ್ನು ನಕಲಿಸಿ (ಚಿತ್ರ ನೋಡಿ).

ಹಂತ 3:

ಹಂತ 3:

ಲಿಂಕ್ ಅನ್ನು ನಕಲಿಸಿದ ನಂತರ, ನಿಮ್ಮ ಕ್ರೋಮ್ ಬ್ರೌಸರ್ ತೆರೆಯಿರಿ. ಹೊಸ ಟ್ಯಾಬ್ ತೆರೆದು, ಆ ಟ್ಯಾಬ್‌ನಲ್ಲಿ ನೀವು ನಕಲಿಸಿಕೊಂಡ ಲಿಂಕ್ ಅನ್ನು ಪೇಸ್ಟ್ ಮಾಡಿ.

ಹಂತ 4:

ಹಂತ 4:

ಈಗ ಆ ವೀಡಿಯೊ ಬ್ರೌಸರ್‌ನಲ್ಲಿ ತೆರೆಯುತ್ತದೆ. ಯಾವುದೇ ಸಮಸ್ಯೆ ಇದ್ದರೆ, ಬ್ರೌಸರ್ ಆಯ್ಕೆಯಲ್ಲಿ, ಸೆಟ್ಟಿಂಗ್ ಅನ್ನು ಡೆಸ್ಕ್‌ಟಾಪ್ ವೀಕ್ಷಣೆ ಮೋಡ್‌ಗೆ ಬದಲಾಯಿಸಿ.

ಹಂತ 5:

ಹಂತ 5:

ಈ ಹಂತ ಪ್ರಮುಖವಾಗಿದ್ದು, ಪೇಸ್ಟ್ ಮಾಡಿರುವ ಯೂಟ್ಯೂಬ್ ಲಿಂಕ್‌ನಲ್ಲಿ 'y' ಅಕ್ಷರದ ಹಿಂದಿನ (http://m.) ಎಲ್ಲಾ ಅಕ್ಷರಗಳನ್ನು ಅಳಿಸಿ. (ಮೇಲಿನ ಚಿತ್ರ ನೋಡಿ)

ಹಂತ 7:

ಹಂತ 7:

http://m ಅಕ್ಷರಗಳನ್ನು ಅಳಿಸಿದ ನಂತರ, ಈಗ ಅದೇ ಸ್ಥಳದಲ್ಲಿ 'ಎಸ್ಎಸ್' (ss) ಅಕ್ಷರಗಳನ್ನು ಟೈಪ್ ಮಾಡಿ.

ಹಂತ 8:

ಹಂತ 8:

'Ss' ಟೈಪ್ ಮಾಡಿದ ನಂತರ, ಲಿಂಕ್ ಸರ್ಚ್ ಮಾಡಿರಿ. ಈಗ ನೀವು ಈ ರೀತಿಯ ಹೊಸ ಸೈಟ್‌ಗೆ ತೆರೆದುಕೊಳ್ಳುತ್ತೀರಾ.

ಹಂತ 9:

ಹಂತ 9:

ಈಗ ನೀವು 360p ಅಥವಾ 480p ಅಥವಾ ಇತ್ಯಾದಿಗಳಲ್ಲಿ ಮೊಬೈಲ್‌ಗೆ ನೇರವಾಗಿ ಯೂಟ್ಯೂಬ್ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಚಿತ್ರ ನೋಡಿ!

Best Mobiles in India

English summary
Jio Phone Monsoon Hungama Exchange Offer Goes Live, Offers Jio Phone at Rs. 501 Effectively. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X