Home
ಸುದ್ದಿಜಾಲ

ಭಾರತದ ಅಗ್ರ ಟೆಲಿಕಾಂ ಆಗುವತ್ತ 'ಜಿಯೋ' ದಾಪುಗಾಲು!..3ನೇ ಸ್ಥಾನಕ್ಕೆ ಏರ್‌ಟೆಲ್!

ದೇಶದ ಮೊಬೈಲ್ ಮಾರುಕಟ್ಟೆಯ ದಿಕ್ಕನ್ನೇ ಬದಲಿಸಿದ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆ, ಈ ಮೇ ತಿಂಗಳಲ್ಲಿ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯವ ಮೂಲಕ ಗ್ರಾಹಕರ ಲೆಕ್ಕಾಚಾರದಲ್ಲಿ 2ನೇ ಸ್ಥಾನಕ್ಕೇರಿದೆ. ತನ್ನ ಪ್ರತಿಸ್ಪರ್ಧಿ ಭಾರ್ತಿ ಏರ್‌ಟೆಲ್‌ ಕಂಪೆನಿಯನ್ನು ಅನ್ನು 3ನೇ ಸ್ಥಾನಕ್ಕೆ ದೂಡಿರುವ ಜಿಯೋ, ವರ್ಷದೊಳಗಾಗಿ ಮೊದಲ ಸ್ಥಾನಕ್ಕೆ ಬರುವ ನಿರೀಕ್ಷೆಯಿದೆ.

ಭಾರತದ ಅಗ್ರ ಟೆಲಿಕಾಂ ಆಗುವತ್ತ 'ಜಿಯೋ' ದಾಪುಗಾಲು!..3ನೇ ಸ್ಥಾನಕ್ಕೆ ಏರ್‌ಟೆಲ್!

ಹೌದು, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 387.6 ಮಿಲಿಯನ್ ಗ್ರಾಹಕರನ್ನು ಹೊಂದಿರುವ ವೊಡಾಫೋನ್‌-ಐಡಿಯಾ ಸಂಸ್ಥೆಯು ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. 322.98 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಿಯೋ 2ನೇ ಸ್ಥಾನದಲ್ಲಿದ್ದರೆ, 320.38 ಮಿಲಿಯನ್ ಬಳಕೆದಾರರರಿಂದ ಏರ್‌ಟೆಲ್ 3ನೇ ಸ್ಥಾನದಲ್ಲಿದೆ.

ಏಪ್ರಿಲ್‌ನಿಂದ ಮೇ ತಿಂಗಳ ಅಂತ್ಯದ ವೇಳೆಗೆ, ಜಿಯೋ 8.2 ಮಿಲಿಯನ್ ಬಳಕೆದಾರರನ್ನು ಸೇರಿಸಿಕೊಂಡುಒಟ್ಟು 32.2 ಕೊಟಿ ವೈರ್‌ಲೆಸ್ ಗ್ರಾಹಕರನ್ನು ಹೊಂದಿದ್ದರೆ, 387.6 ಮಿಲಿಯನ್ ಗ್ರಾಹಕರನ್ನು ಹೊಂದಿರುವ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಎರಡೂ ಸಂಸ್ಥೆಗಳು ಕಳೆದ ಎರಡೂ ತಿಂಗಳಲ್ಲೂ ಬಳಕೆದಾರರನ್ನು ಕಳೆದುಕೊಂಡಿವೆ ಎಂದು ತಿಳಿದುಬಂದಿದೆ.

ಭಾರತದ ಅಗ್ರ ಟೆಲಿಕಾಂ ಆಗುವತ್ತ 'ಜಿಯೋ' ದಾಪುಗಾಲು!..3ನೇ ಸ್ಥಾನಕ್ಕೆ ಏರ್‌ಟೆಲ್!

ಜಿಯೋ ತನ್ನ ನೆಟ್‌ವರ್ಕ್‌ನಲ್ಲಿ ಕಡಿಮೆ-ಪಾವತಿಸುವ ಬಳಕೆದಾರರನ್ನು ಸೇರಿಸುವ ಮೂಲಕ ತನ್ನ ಚಂದಾದಾರರ ಸಂಖ್ಯೆಯನ್ನು ವಿಸ್ತರಿಸುತ್ತಲೇ ಇರುವುದರಿಂದ, ಪ್ರತಿಸ್ಪರ್ಧಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಗೆಟ್ಟಿವೆ. ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವನ್ನು ಪಡೆಯುವ ಸಲುಬವಾಗಿ ಆರಂಭಿಸಿದ ಕನಿಷ್ಟ ರೀಚಾರ್ಜ್ ಆಯ್ಕೆ ಕೂಡ ಅವುಗಳಿಗೆ ಶಾಪವಾಗಿದೆ.

ಕಳೆದ 11 ತಿಂಗಳುಗಳಲ್ಲಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡೂಚಂದಾದಾರರನ್ನು ಕಳೆದುಕೊಂಡಿವೆ. ಮೇ ತಿಂಗಳಲ್ಲಿ, ಏರ್‌ಟೆಲ್ 1.5 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡರೆ, ವೊಡಾಫೋನ್ ಐಡಿಯಾ 5.7 ಮಿಲಿಯನ್ ಚಂದಾದಾರರಿಂದ ದೂರವಾಗಿದೆ. ಇದು ಭಾರತದ ಅಗ್ರ ಟೆಲಿಕಾಂ ಆಗುವತ್ತ ಜಿಯೋ ದಾಪುಗಾಲು ಎಂದು ವಿಶ್ಲೇಷಿಸಲಾಗಿದೆ.

Best Mobiles in India

English summary
As of May end, Reliance Jio had 322.98 million users, against Bharti Airtel’s 320.38 million users. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+