Jio: ಏನಿದು ಜಿಯೋ ಬ್ರೈನ್: ಜಿಯೋ ನಡೆಗೆ ಟೆಲಿಕಾಂ ವಲಯವೇ ಕಂಗಾಲು!
ಟೆಲಿಕಾಂ ದೈತ್ಯ ಜಿಯೋ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಬದಲಾಗುತ್ತಿರುವ ಟೆಕ್ನಾಲಜಿ ಜಮಾನದಲ್ಲಿ AI ತಂತ್ರಜ್ಞಾನದ ಪ್ರಾಬಲ್ಯ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಿಯೋ ಬ್ರೈನ್ ಅನ್ನು ಘೊಷಣೆ ಮಾಡಲಾಗಿದೆ. ಜಿಯೋ ಬ್ರೈನ್ ಜಿಯೋ ಪ್ಲಾಟ್‌ಫಾರ್ಮ್‌ನ ಕೃತಕ ಬುದ್ಧಿಮತ್ತೆ (AI) ಮತ್ತು ಎಂಟರ್‌ಪ್ರೈಸ್‌ಗಳಿಗೆ ಮೆಷಿನ್ ಲರ್ನಿಂಗ್ (ML)ವೇದಿಕೆಯಾಗಿದೆ.
ಹೌದು, ಜಿಯೋ (jio) ಕಂಪೆನಿ ಹೊಸದಾಗಿ ಜಿಯೋ ಬ್ರೈನ್ ಅನ್ನು ಘೋಷಣೆ ಮಾಡಿದೆ. ಇದು 5G-ಸಂಯೋಜಿತ ಸೇವೆಯಾಗಿದ್ದು, ಟೆಲಿಕಾಂ ನೆಟ್‌ವರ್ಕ್‌ಗಳು, ಎಂಟರ್‌ಪ್ರೈಸ್ ನೆಟ್‌ವರ್ಕ್‌ಗಳನ್ನು ಸಕ್ರಿಯಗೊಳಿಸಲಿದೆ. ಜೊತೆಗೆ ಉದ್ಯಮ-ನಿರ್ದಿಷ್ಟ IT ಪರಿಸರಗಳನ್ನು ನಿಯಮಿತ ಕಾರ್ಯಾಚರಣೆಗಳಲ್ಲಿ ML ಪರಿಕರಗಳನ್ನು ಕಾರ್ಯಗತಗೊಳಿಸಲಿದೆ. ಹಾಗಾದ್ರೆ ಜಿಯೋ ಬ್ರೈನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಏನಿದು ಜಿಯೋ ಬ್ರೈನ್?
ಜಿಯೋ ಬ್ರೈನ್ ಪ್ಲಾಟ್‌ಫಾರ್ಮ್ AI ಮತ್ತು ML-ಚಾಲಿತ ವ್ಯವಸ್ಥೆಯಾಗಿದ್ದು, ಉದ್ಯಮಗಳಿಗೆ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಾಚರಣೆಗಳನ್ನು ನಡೆಸಲು ಅನುವು ಮಾಡಿಕೊಡಲಿದೆ. ಇಂದಿನ ದಿನಗಳಲ್ಲಿ AI ಟೆಕ್ನಾಲಜಿ ಎಲ್ಲೆಡೆ ಪ್ರಭಾವ ಬೀರುತ್ತಿದೆ. ಇದರ ಅಂಗವಾಗಿಯೇ ಜಿಯೋ ಬ್ರೈನ್ ಘೋಷಣೆ ಆಗಿದೆ. ಇದರ ಮೇನ್ ಹೈಲೈಟ್ ಏನೆಂದರೆ ಇದು ಎಂಟರ್‌ಪ್ರೈಸ್ ಮತ್ತು ಎಲ್‌ಎಲ್‌ಎಂ ಸೇವಾ ಫೀಚರ್ಸ್ ಆಗಿ ತನ್ನ ಗ್ರಾಹಕರಿಗೆ ಉತ್ಪಾದಕ AI ಫೀಚರ್ಸ್‌ಗಳನ್ನು ಹತೋಟಿಗೆ ತರಲು ಅನುವು ಮಾಡಿಕೊಡುತ್ತದೆ.
ಜಿಯೋ ಬ್ರೈನ್ ಕಾರ್ಯನಿರ್ವಹಣೆ ಏನು?
ಇನ್ನು ಈ ಕ್ಲೌಡ್-ಲೋಕಲ್ ಪ್ಲಾಟ್‌ಫಾರ್ಮ್ 500ಕ್ಕೂ ಹೆಚ್ಚು REST API ಗಳು ಮತ್ತು ಡೇಟಾ API ಗಳನ್ನು ಹೊಂದಿದೆ. ಇದರಿಂದ ಕಂಪನಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ML ಸೇವೆಗಳನ್ನು ಕ್ರಿಯೆಟ್ ಮಾಡುವುದಕ್ಕೆ ಅನುಮತಿಸಲಿದೆ. ಇದನ್ನು ನೂರಾರು ಇಂಜಿನಿಯರ್‌ಗಳು ಸತತ ಎರಡು ವರ್ಷಗಳ ಸಂಶೋಧನಾ ಅವಧಿಯ ನಂತರ ಕ್ರಿಯೆಟ್ ಮಾಡಲಾಗಿದೆ ಎಂದ ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಈ ಪ್ರಕಟಣೆಗೆ ಲಗತ್ತಿಸಲಾದ ಡಾಕ್ಯುಮೆಂಟ್ ಪ್ಲಾಟ್‌ಫಾರ್ಮ್ನಲ್ಲಿ "ಉದ್ಯಮದ ಮೊದಲ 5G- ಇಂಟಿಗ್ರೇಟೆಡ್ ML ಪ್ಲಾಟ್‌ಫಾರ್ಮ್" ಎಂದು ಹೈಲೈಟ್ ಮಾಡಲಾಗಿದೆ. ಸದ್ಯ ಜಿಯೋ ಬ್ರೈನ್ ಹೊಸ 5G ಸೇವೆಗಳನ್ನು ಕ್ರಿಯೆಟ್ ಮಾಡುವುದಕ್ಕೆ, ಉದ್ಯಮಗಳನ್ನು ಪರಿವರ್ತಿಸುವುದಕ್ಕೆ ಹಾಗೂ ನೆಟ್‌ವರ್ಕ್‌ಗಳನ್ನು ಆಪ್ಟಿಮೈಜ್ ಮಾಡಲು ಸಹಾಯ ಮಾಡಲಿದೆ. ಇದರೊಂದಿಗೆ 6G ಅಭಿವೃದ್ಧಿಗೆ ವೇದಿಕೆಯನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ಏಕೆಂದರೆ ಇದರಲ್ಲಿ ML ಪ್ರಮುಖ ಸಾಮರ್ಥ್ಯವಾಗಿದೆ ಎಂದು ಜಿಯೋ ಹೇಳಿಕೊಂಡಿದೆ.
ಜಿಯೋ ಬ್ರೈನ್‌ನ ವಿಶೇಷತೆ ಏನು?
ಜಿಯೋ ಬ್ರೈನ್‌ನ ಕೆಲವು ಗಮನಾರ್ಹ ಕೊಡುಗೆಗಳಲ್ಲಿ LLM ಸೇವೆಯು ಕೂಡ ಒಂದಾಗಿದೆ. ಚಿತ್ರಗಳು, ವೀಡಿಯೊಗಳು, ಪಠ್ಯ, ದಾಖಲೆಗಳು ಮತ್ತು ಭಾಷಣಕ್ಕಾಗಿ ಸುಧಾರಿತ AI ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಪ್ಲಗ್-ಅಂಡ್-ಪ್ಲೇ ಆರ್ಕಿಟೆಕ್ಚರ್‌ನೊಂದಿಗೆ ಕ್ಲೌಡ್-ಲೋಕಲ್ ಸಲ್ಯೂಶನ್, ಡೇಟಾ ಏಕೀಕರಣ ಸಾಮರ್ಥ್ಯಗಳು, ಮಲ್ಟಿ AI/ ML ಎಂಬೆಡೆಡ್ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ಗಳನ್ನು ಹೊಂದಿದೆ.

ಇದು ML ಚೈನಿಂಗ್, ಹೈಪರ್‌ಪ್ಯಾರಾಮೀಟರ್ ಟ್ಯೂನಿಂಗ್, ಫೀಚರ್ ಇಂಜಿನಿಯರಿಂಗ್‌ನಂತಹ ಕೋರ್ ML ಸಾಮರ್ಥ್ಯಗಳನ್ನು ಸಹ ಹೊಂದಿದೆ. ಈ ಎಲ್ಲಾ ಸೇವೆಗಳನ್ನು ಒಟ್ಟಿಗೆ ಅಥವಾ ಪ್ರತ್ಯೇಕ ಸೇವೆಗಳಾಗಿ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಿದೆ. ಜೊತೆಗೆ ಪ್ಲಾಟ್‌ಫಾರ್ಮ್ ಅನ್ನು ಅಳೆಯಲು ಮತ್ತು ಹೆಚ್ಚಿನ ಮೌಲ್ಯವನ್ನು ಸೇರಿಸಲು AI ಮತ್ತು ML ಸಂಶೋಧಕರೊಂದಿಗೆ ಸಹಯೋಗಿಸಲು ಮುಕ್ತವಾಗಿದೆ ಎಂದು ಜಿಯೋ ಸಂಸ್ಥೆ ಹೇಳಿಕೊಂಡಿದೆ. ಆದರೆ ಜಿಯೋ ಬ್ರೈನ್ ಬಿಡುಗಡೆ ದಿನಾಂಕದ ಬಗ್ಗೆ ಯಾವುದೆ ಮಾಹಿತಿಯನ್ನು ಜಿಯೋ ಕಂಪೆನಿ ಬಹಿರಂಗಪಡಿಸಿಲ್ಲ.


Click it and Unblock the Notifications








