Home
ಸುದ್ದಿಜಾಲ

ಏರ್‌ಟೆಲ್‌ಗೆ ಭಾರಿ ಮೊತ್ತ ಪಾವತಿಸಿದ ಜಿಯೋ!!.__ ಕೋಟಿ ಲಾಸ್!?

ಇಂಟರ್ ಕನೆಕ್ಟ್ ಯೂಸೇಜ್ ಜಾರ್ಜ್ ಸೇವಾ ಶುಲ್ಕವಾಗಿ ಸಾವಿರಾರು ಕೋಟಿ ಹಣವನ್ನು ಇತರ ಟೆಲಿಕಾಂಗಳಿಗೆ ಜಿಯೋಗೆ ಪಾವತಿಸಿದೆ.!

By Bhaskar N J

ಅತ್ಯಂತ ಕಡಿಮೆ ಬೆಲೆಯಲ್ಲಿ ಸೇವೆ ನೀಡಿ ಜನರಿಗೆ ಹತ್ತಿರವಾಗಿರುವ ಟೆಲಿಕಾಂ ಕಂಪೆನಿ ಜಿಯೋಗೆ ಸೆಪ್ಟೆಂಬರ್‌ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 271 ಕೋಟಿ ರೂ.ನಿವ್ವಳ ನಷ್ಟವಾಗಿದೆ.!! ಈ ಬಗ್ಗೆ ಜಿಯೋ ಮಾಹಿತಿ ಬಿಡುಗಡೆ ಮಾಡಿದ್ದು, ಒಟ್ಟು 6150 ಕೋಟಿ ರೂ.ಆದಾಯ ಗಳಿಸಿದ್ದರೂ ಸಹ ಜಿಯೋ ಒಟ್ಟು 271 ಕೋಟಿ ರೂ.ನಿವ್ವಳ ನಷ್ಟ ಅನುಭವಿಸಿದೆ.!!

ಇಂಟರ್ ಕನೆಕ್ಟ್ ಯೂಸೇಜ್ ಜಾರ್ಜ್(ಐಯುಸಿ) ನಿಂದಾಗಿ ಜಿಯೋಗೆ ನಷ್ಟವಾಗಿದೆ ಎಂದು ಹೇಳಲಾಗಿದ್ದು, ಇಂಟರ್ ಕನೆಕ್ಟ್ ಯೂಸೇಜ್ ಜಾರ್ಜ್ ಸೇವಾ ಶುಲ್ಕವಾಗಿ ಸಾವಿರಾರು ಕೋಟಿ ಹಣವನ್ನು ಇತರ ಟೆಲಿಕಾಂಗಳಿಗೆ ಜಿಯೋಗೆ ಪಾವತಿಸಿದೆ.! ಹಾಗಾದರೆ, ಜಿಯೋ ಪಾವತಿಸಿರುವ ಹಣ ಎಷ್ಟು? ಲಾಸ್ ಆಗಿದ್ದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋಗೆ ಲಾಸ್ ಆಗಿದ್ದು ಹೇಗೆ?

ಜಿಯೋಗೆ ಲಾಸ್ ಆಗಿದ್ದು ಹೇಗೆ?

ನಾವು ಕರೆಗೆಂದೇ ಪ್ರತ್ಯೇಕವಾಗಿ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ಈ ಮೊದಲು ಹೇಳಿತ್ತು. ಹಾಗಾಗಿ, ಇದೇ ಕಾರಣದಿಂದಾಗಿ ಜಿಯೋ ನಷ್ಟ ಅನುಭವಿಸಿದೆ ಎನ್ನಲಾಗಿದೆ.!!

ಜಿಯೋ ಪಾವತಿಸಿದ ಹಣವೆಷ್ಟು?

ಜಿಯೋ ಪಾವತಿಸಿದ ಹಣವೆಷ್ಟು?

ವರ್ಷದ ಮೊದಲ ತ್ರೈಮಾಸಿಕದಲ್ಲಿ ಇಂಟರ್ ಕನೆಕ್ಟ್ ಯೂಸೇಜ್ ಜಾರ್ಜ್ ಸೇವಾ ಶುಲ್ಕವಾಗಿ 480 ಕೋಟಿ ರೂ.ಗಳನ್ನು ಏರ್‌ಟೆಲ್‌ಗೆ ಪಾವತಿಸಿದ್ದ ಜಿಯೋ ಮತ್ತೆ ಇದೀಗ ಅದಕ್ಕಿಂತ ಹೆಚ್ಚಿನ ಹಣವನ್ನು ಏರ್‌ಟೆಲ್‌ಗೆ ಪಾವತಿಸಿದೆ.! 1300 ಕೋಟಿಗಿಂತಲೂ ಹೆಚ್ಚು ಹಣವನ್ನು ಏರ್‌ಟೆಲ್ ಸೇರಿ ಇತರ ಕಂಪೆನಿಗಳಿಗೆ ಎರಡನೇ ತ್ರೈಮಾಸಿಕದಲ್ಲಿ ಜಿಯೋ ಪಾವತಿಸಿದೆ ಎನ್ನಲಾಗಿದೆ.!!

Jio ಜದೀಪಾವಳಿ ಡಬಲ್ ಆಫರ್ ಬಗ್ಗೆ ಇಲ್ಲಿದೆ ಪೂರ್ತಿ ಡೀಟೆಲ್ಸ್!!
3.78 ಶತಕೋಟಿ ಜಿಬಿ ಡೇಟಾ ಬಳಕೆ!!

3.78 ಶತಕೋಟಿ ಜಿಬಿ ಡೇಟಾ ಬಳಕೆ!!

ಸೆಪ್ಟೆಂಬರ್‌ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ ಜಿಯೋ 13.8 ಕೋಟಿ ಗ್ರಾಹಕರನ್ನು ಹೊಂದಿದ್ದು, ಇದೇ ಅವದಿಯಲ್ಲಿ ಜಿಯೋವಿನ 3.78 ಶತಕೋಟಿ ಜಿಬಿ ವೈರ್‌ಲೆಸ್ ಡೇಟಾ ಬಳಕೆಯಾಗಿದೆ.! ಆದರೆ, ಜಿಯೋವಿನಿಂದ ಎಷ್ಟು ಕಾಲ್‌ಗಳು ಇತರ ಟೆಲಿಕಾಂಗಳ ನಡುವೆ ವಿನಿಮಯವಾಗಿವೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.!!

ಮಾರುಕಟ್ಟೆಯ ಪಾಲು ಹೆಚ್ಚಳ.!!

ಮಾರುಕಟ್ಟೆಯ ಪಾಲು ಹೆಚ್ಚಳ.!!

ಭಾರತದಲ್ಲಿ ಅತಿ ಹೆಚ್ಚು 4G ಬಳಕೆದಾರರನ್ನು ಹೊಂದಿರುವ ಜಿಯೋ 2G ಮತ್ತು 3G ಮಾರುಕಟ್ಟೆಯ ಕೊರತೆ ಅನುಭವಿಸುತ್ತಿದೆ.! ಭಾರತದ ಒಟ್ಟಾರೆ ಟೆಲಿಕಾಂನಲ್ಲಿ ಜಿಯೋ (10.83%) ನಾಲ್ಕನೆ ಸ್ಥಾನ ಪಡೆದಿದ್ದು, ಏರ್‌ಟೆಲ್ 23.70%, ವೊಡಾಫೋನ್ 17.74% ಮತ್ತು ಐಡಿಯಾ 16.34% ಟೆಲಿಕಾಂಗಳು ಮೊದಲು ಮೂರು ಸ್ಥಾನದಲ್ಲಿವೆ.!!

ಹೊಸ ಐಯುಸಿ ಜಾರಿಯಾಗಿದೆ!!

ಹೊಸ ಐಯುಸಿ ಜಾರಿಯಾಗಿದೆ!!

ಜಿಯೋ ಬಂದ ನಂತರ ಟ್ರಾಯ್ ಐಯುಸಿ ದರವನ್ನು ಕಡಿಮೆ ಮಾಡಿದ್ದು, ಟ್ರಾಯ್ ಪ್ರತಿ ನಿಮಿಷಕ್ಕೆ 6 ಪೈಸೆ ಐಯುಸಿ ದರವನ್ನು ನಿಗದಿ ಪಡಿಸಿದೆ. ಇದೇ ಅಕ್ಟೋಬರ್ 1ರಿಂದ ಕಡಿಮೆ ದರದ ಐಸಿಯು ದರ ಜಾರಿಗೆ ಬಂದಿದ್ದು, 2020ರ ಜನವರಿ ನಂತರ ಐಯುಸಿಯನ್ನು ಸಂಪೂರ್ಣವಾಗಿ ತೆಗೆಯಲು ಟ್ರಾಯ್ ಮುಂದಾಗಿದೆ.!!

Best Mobiles in India

English summary
Jio posted a net loss of Rs 270.59 crore for the quarter ended September.to know more visit to kannada.gixbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+