Jio: ಉಚಿತ ನೆಟ್‌ಫ್ಲಿಕ್ಸ್, 5G ಇಂಟರ್ನೆಟ್, 84 ದಿನ ಕಿರಿಕಿರಿ ಇರಲ್ಲ! ಇದು ಅಗ್ಗದ ಯೋಜನೆ
Jio Recharge Plan: ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಮಧ್ಯೆ ಸದಾ ಪೈಪೋಟಿ ಏರ್ಪಡುತ್ತಲೇ ಇರುತ್ತದೆ. ಜಿಯೋ ಕಂಪನಿಯು ಹೆಚ್ಚಾಗಿ ಗ್ರಾಹಕರಿಗೆ ಕೈಗೆಟುಕುವ ಯೋಜನೆಗಳನ್ನು ತರಲು ಪ್ರಯತ್ನಿಸುತ್ತದೆ. ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಹೊಸ ಆಫರ್‌ಗಳನ್ನು ನೀಡುತ್ತಲೇ ಇರುತ್ತದೆ. ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದರೆ, ಜಿಯೋ ನಿಮಗಾಗಿ ಉಚಿತ ನೆಟ್‌ಫ್ಲಿಕ್ಸ್‌ನೊಂದಿಗೆ ಜಿಯೋದ ಅಗ್ಗದ ಯೋಜನೆಯನ್ನು ತಂದಿದೆ.
ಹೌದು, ರಿಲಯನ್ಸ್ ಜಿಯೋ (Jio) ಪೋರ್ಟ್‌ಫೋಲಿಯೊದಲ್ಲಿ ಹಲವು ಪ್ರಿಪೇಯ್ಡ್ ಪ್ಲಾನ್‌ಗಳಿವೆ. ಕಂಪನಿಯು ಈ ಯೋಜನೆಗಳ ಮೂಲಕ ತನ್ನ ಗ್ರಾಹಕರಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ನಾವೀಗ, ಉಚಿತ ನೆಟ್‌ಫ್ಲಿಕ್ಸ್‌ನೊಂದಿಗೆ ಅಗ್ಗದ ಪ್ಲಾನ್ ಕುರಿತು ಹೇಳುತ್ತಿದ್ದೇವೆ. ಇದು ಜಿಯೋದ 1299 ರೂ. ಯೋಜನೆಯಾಗುದೆ. ಈ 84 ದಿನಗಳ ವ್ಯಾಲಿಡಿಯೊಂದಿಗೆ ಬರುತ್ತದೆ. ನೀವು ಜಿಯೋ ಬಳಕೆದಾರರಾಗಿದ್ದರೆ, 2GB ದೈನಂದಿನ ಅನ್‌ಲಿಮಿಟೆಡ್ 5G ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗಳಂತಹ ಪ್ರಯೋಜನಗಳನ್ನು ಸಹ ಪಡೆಯಬಹುದು.

ಓಟಿಟಿ (OTT) ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ನೀವು ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಲು ಇಷ್ಟಪಡುತ್ತಿದ್ದರೆ, ಜಿಯೋದ ಈ ಪ್ಲಾನ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ರಿಲಯನ್ಸ್ ಜಿಯೋದ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಲಭ್ಯವಿದೆ. ಜಿಯೋದ ಈ ಯೋಜನೆಯು ಅನ್‌ಲಿಮಿಟೆಡ್ ಕರೆ ಮತ್ತು 5G ಡೇಟಾವನ್ನು ನೀಡುತ್ತದೆ. ಜಿಯೋದ ಈ ಉಚಿತ ನೆಟ್‌ಫ್ಲಿಕ್ಸ್ ಯೋಜನೆಯಲ್ಲಿ ನೀವು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.
ಉಚಿತ ನೆಟ್‌ಫ್ಲಿಕ್ಸ್‌ನೊಂದಿಗೆ ಮೊದಲ ರೀಚಾರ್ಜ್ ಪ್ಲಾನ್
ಜಿಯೋದ 1,299 ರೂ.ಗಳ ರೀಚಾರ್ಜ್ ಯೋಜನೆಯಲ್ಲಿ ಕಂಪನಿಯು ನೆಟ್‌ಫ್ಲಿಕ್ಸ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯನ್ನು (ಮಾನ್ಯತೆ) ಹೊಂದಿದೆ. ಈ ಯೋಜನೆಯೊಂದಿಗೆ ಲಭ್ಯವಿರುವ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಅನ್‌ಲಿಮಿಟೆಡ್ ಕರೆ ಜೊತೆಗೆ ನೀವು ನಿತ್ಯ 100 ಎಸ್‌ಎಂಎಸ್ (SMS) ಸಹ ಲಭ್ಯವಿದೆ.
ಈ ಯೋಜನೆಯೊಂದಿಗೆ ಜಿಯೋ ಬಳಕೆದಾರರು ಪ್ರತಿದಿನ 2 GB ಅನ್‌ಲಿಮಿಟೆಡ್ 5G ಡೇಟಾವನ್ನು ಪಡೆಯಬಹುದು. ಇದರ ಹೊರತಾಗಿ ಈ ಪ್ಲಾನ್‌ನೊಂದಿಗೆ ಲಭ್ಯವಿರುವ ಇತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇದು ಜಿಯೋ ಟಿವಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾಗೆ ಪ್ರವೇಶವನ್ನು ಒದಗಿಸುತ್ತದೆ.
- Jio ಯೋಜನೆ: ಜಿಯೋದ 1,299 ರೂ.ಗಳ ರೀಚಾರ್ಜ್ ಪ್ಲಾನ್
- ಪ್ರಯೋಜನಗಳು: ಅನ್‌ಲಿಮಿಟೆಡ್ ನಿಯಮಿತ ಕರೆ, ಪ್ರತಿನಿತ್ಯ 2 GB ಡೇಟಾ, ಅನ್‌ಲಿಮಿಟೆಡ್ 5G, ನಿತ್ಯ 100 ಎಸ್‌ಎಂಎಸ್, Netflix, Jio TV, Jio Cloud ಮತ್ತು Jio ಸಿನಿಮಾ.
- ವ್ಯಾಲಿಡಿಟಿ: 84 ದಿನಗಳು
ಉಚಿತ ನೆಟ್‌ಫ್ಲಿಕ್ಸ್‌ನೊಂದಿಗೆ 2ನೇ ರೀಚಾರ್ಜ್ ಪ್ಲಾನ್
ಜಿಯೋದ 1,799 ರೂ.ಗಳ ಯೋಜನೆಯಲ್ಲಿ ಜಿಯೋ ಬಳಕೆದಾರರು, ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಸಹ ಪಡೆಯಬಹುದು. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅನ್‌ಲಿಮಿಟೆಡ್ ಕರೆ ಸೌಲಭ್ಯದೊಂದಿಗೆ, ಈ ಯೋಜನೆಯಲ್ಲಿ ಪ್ರತಿನಿತ್ಯ 100 ಎಸ್‌ಎಂಎಸ್ ಲಭ್ಯವಿದೆ.
ಡೇಟಾ ಬಗ್ಗೆ ಹೇಳುವುದಾದರೆ, ಜಿಯೋದ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿನಿತ್ಯ 3GB ಅನ್‌ಲಿಮಿಟೆಡ್ 5G ಡೇಟಾ ಲಭ್ಯವಿದೆ. ಈ ಯೋಜನೆಯೊಂದಿಗೆ, ಜಿಯೋ ಟಿವಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾಗೆ ಉಚಿತ ಪ್ರವೇಶವೂ ಲಭ್ಯವಿದೆ.
- Jio ಯೋಜನೆ: ಜಿಯೋದ 1,799 ರೂ.ಗಳ ಪ್ಲಾನ್
- ಪ್ರಯೋಜನಗಳು: ಅನ್‌ಲಿಮಿಟೆಡ್ ಕರೆ, ಪ್ರತಿನಿತ್ಯ 3 GB ಡೇಟಾ, ಅನ್‌ಲಿಮಿಟೆಡ್ 5G, ನಿತ್ಯ 100 ಎಸ್‌ಎಂಎಸ್, Netflix, Jio TV, Jio Cloud ಮತ್ತು Jio ಸಿನಿಮಾ.
- ವ್ಯಾಲಿಡಿಟಿ: 84 ದಿನಗಳು
399 ರೂ.ಗಳ ರೀಚಾರ್ಜ್ ಪ್ಲಾನ್
ಜಿಯೋದ ಅಲ್ಪಾವಧಿಯ ಯೋಜನೆಗಳ ಪೈಕಿ 399 ರೂ. ರೀಚಾರ್ಜ್ ಪ್ಲಾನ್ ಸಹ ಒಂದಾಗಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಸಿಗಲಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ 70 GB ಡೇಟಾ ಲಭ್ಯವಿದೆ. ಇದರ ಜೊತೆಗೆ, ಅನ್‌ಲಿಮಿಟೆಡ್ ಕರೆ, ಪ್ರತಿನಿತ್ಯ 100 ಎಸ್ಎಂಎಸ್ ಸಹ ದೊರೆಯುತ್ತದೆ. ಜಿಯೋ ಸಿನಿಮಾ, ಜಿಯೋ ನ್ಯೂಸ್ ಅಪ್ಲಿಕೇಶನ್ ಸಹ ಲಭ್ಯವಿದೆ.


Click it and Unblock the Notifications








