Home
ಸುದ್ದಿಜಾಲ

ಧಮಾಕಾ ಆಫರ್! 500GB ಡೇಟಾ.. 200 ದಿನಗಳ ವ್ಯಾಲಿಡಿಟಿ.. ಒಂದೇ ದಿನ ಮಾತ್ರ!

ಜಿಯೋ ಬಳಕೆದಾರರಿಗೆ ಇಲ್ಲಿದೆ ಸೂಪರ್ ಆಫರ್‌! ಬರೋಬ್ಬರಿ 500GB ಡೇಟಾ ಸಿಗುತ್ತೆ, ಅದೂ ಸಹ 200 ದಿನಗಳ ವ್ಯಾಲಿಡಿಟಿ. ಈಗಲೇ ರೀಚಾರ್ಜ್ ಮಾಡಿ. ಯಾಕಂದ್ರೆ, ಈ ರೀಚಾರ್ಜ್ ಪ್ಲಾನ್ ನಾಳೆಯೇ ಕೊನೆಗೊಳ್ಳಲಿದೆ. ಹೌದು, ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇತ್ತೀಚೆಗೆ ನ್ಯೂ ಇಯರ್ ಆಫರ್ ಅಡಿಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಈ ಯೋಜನೆಯು 200 ದಿನಗಳ ವ್ಯಾಲಿಡಿಟಿ ಹೊಂದಿದೆ. ನೀವು 500GB ಡೇಟಾದ ಲಾಭ ಪಡೆಯಬಹುದು. ಆದರೆ, ಈ ಆಫರ್ ನಾಳೆಯೇ ಕೊನೆಗೊಳ್ಳಲಿದೆ. ಈ ಪ್ಲಾನ್‌ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು, ಈ ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಸೀಮಿತ ಅವಧಿಗೆ ಮಾತ್ರ ಪರಿಚಯಿಸಲಾಗಿದೆ. ಪ್ರತಿ ವರ್ಷದಂತೆ, ಈ ಬಾರಿಯೂ ಜಿಯೋ ಹೊಸ ವರ್ಷದ ವೆಲ್‌ಕಮ್ ಪ್ಲಾನ್‌ 2025 ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಬೆಲೆ 2025 ರೂ. ಆಗಿದೆ. ಆದರೆ, ಈ ಆಫರ್ ಜನವರಿ 31ರವರೆಗೆ ಮಾತ್ರ ಲಭ್ಯವಿರುತ್ತದೆ. ನೀವು ದೀರ್ಘಾವಧಿಯ ಯೋಜನೆಯನ್ನು ಹುಡುಕುತ್ತಿದ್ದರೆ, ಇದು ಉತ್ತಮ ಆಯ್ಕೆಯಾಗಿದೆ. ಬನ್ನಿ, ಈ ಯೋಜನೆಯು ಯಾವೆಲ್ಲಾ ಪ್ರಯೋಜನಗಳನ್ನು ಹೊಂದಿದೆ ಎನ್ನುವುದನ್ನು ತಿಳಿಯೋಣ.

ಧಮಾಕಾ ಆಫರ್! 500GB ಡೇಟಾ.. 200 ದಿನಗಳ ವ್ಯಾಲಿಡಿಟಿ.. ಒಂದೇ ದಿನ ಮಾತ್ರ!

ಜಿಯೋ 2025 ರೂ. ರೀಚಾರ್ಜ್ ಪ್ಲಾನ್

ಪ್ರಿಪೇಯ್ಡ್ ಗ್ರಾಹಕರು ಈ ಯೋಜನೆಯಲ್ಲಿ 200 ದಿನಗಳವರೆಗೆ ಅನ್‌ಲಿಮಿಟೆಡ್ 5G ಇಂಟರ್ನೆಟ್ ಮತ್ತು ಅನ್‌ಲಿಮಿಟೆಡ್ ಕಾಲ್‌ ಸೌಲಭ್ಯಗಳನ್ನು ಪಡೆಯಬಹುದು. ಆದರೆ, 4G ಸಂಪರ್ಕವನ್ನು ಹೊಂದಿರುವವರು
ಪ್ರತಿನಿತ್ಯ 2.5GB ಡೇಟಾದ ಪ್ರಯೋಜನ ಪಡೆಯುತ್ತಾರೆ. ನೀವು ಸಂಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 500GB ಡೇಟಾ ಬಳಸಬಹುದು. ಹಾಗೆಯೇ ನಿತ್ಯ 100 ಎಸ್‌ಎಂಎಸ್‌ ಸೌಲಭ್ಯಗಳನ್ನು ಸಹ ಪಡೆಯಬಹುದು.

2,150 ರೂ. ಮೌಲ್ಯದ ವೋಚರ್‌ ಮತ್ತು ಕೂಪನ್‌ ಲಭ್ಯ

ಡೇಟಾ ಮತ್ತು ಕರೆ ಸೌಲಭ್ಯದ ಹೊರತಾಗಿ, ಜಿಯೋ ಈ ಹೊಸ ಯೋಜನೆಯಲ್ಲಿ ವಿವಿಧ ಕೂಪನ್‌ಗಳನ್ನು ಸಹ ನೀಡುತ್ತದೆ. ನೀವು 500 ರೂ.ಗಳ ಅಜಿಯೊ ಕೂಪನ್ ಪಡೆಯಬಹುದು. ಇದನ್ನು ಕನಿಷ್ಠ 2,500 ರೂ. ಶಾಪಿಂಗ್ ಮೌಲ್ಯದಲ್ಲಿ ಬಳಸಬಹುದು. ಇದಲ್ಲದೆ, 499 ರೂ. ಅಥವಾ ಅದಕ್ಕಿಂತ ಹೆಚ್ಚಿನ ಸ್ವಿಗ್ಗಿ ಆರ್ಡಳಿಗೆ 150 ರೂ. ವೋಚರ್ ಲಭ್ಯವಿದೆ. ಮೊಬೈಲ್ ಅಪ್ಲಿಕೇಶನ್ ಮತ್ತು Easemytrip.com ವೆಬ್‌ಸೈಟ್‌ನಲ್ಲಿ ಫ್ಲೈಟ್ ಬುಕಿಂಗ್‌ಗೆ 1,500 ರೂ. ರಿಯಾಯಿತಿ ಸಿಗುತ್ತದೆ. ಈ ಕೂಪನ್‌ MyJio ಅಪ್ಲಿಕೇಶನ್‌ನಲ್ಲಿ ಸಿಗುತ್ತದೆ. ಇದು ಆಂಡ್ರಾಯ್ಡ್‌ (Android) ಮತ್ತು ಐಓಎಸ್‌ (iOS) ಎರಡರಲ್ಲೂ ಲಭ್ಯವಿದೆ.

ಒಟ್ಟಾರೆ, ಜಿಯೋ ಗ್ರಾಹಕರಿಗೆ ಇದು ಸೂಪರ್ ಡೇಟಾ ಪ್ಲಾನ್ ಆಗಿದೆ. ಈ ಬೊಂಬಾಟ್ ಆಫರ್‌ ನಾಳೆಯೇ ಮುಗಿಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಜಿಯೋ ಹೊಸ ವರ್ಷದ ಆಫರ್ 2025 ಅನ್ನು ನೀಡಿದೆ. ನೀವು, ಜನವರಿ 31 ರ ಒಳಗೆ ಈ ಆಫರ್‌ನ ಲಾಭ ಪಡೆಯಬಹುದು. ಲಾಂಗ್ ವ್ಯಾಲಿಡಿಟಿ ಪ್ಲಾನ್ ಹುಡುಕುತ್ತಿದ್ದರೆ, ಇದು ಒಳ್ಳೆಯ ಆಯ್ಕೆಯಾಗಿದೆ.

ಕಡಿಮೆ ಬೆಲೆಗೆ ಹೊಸ ಯೋಜನೆ ಬಿಡುಗಡೆ

ಜಿಯೋ ಇತ್ತೀಚೆಗೆ ಎರಡು ಹೊಸ ರಿಚಾರ್ಜ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 84 ಮತ್ತು 365 ದಿನಗಳ ವ್ಯಾಲಿಡಿಟಿ ಹೊಂದಿವೆ. ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಸೌಲಭ್ಯವುಳ್ಳ ಈ ಎರಡೂ ಹೊಸ ಪ್ಲಾನ್‌ಗಳು ಜೊಯೋ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿವೆ. ಈ ಹೊಸ ಯೋಜನೆಗಳನ್ನು 458 ರೂ. ಮತ್ತು 1,958 ರೂ.ಗಳ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಜಿಯೋ (Jio) ಹೆಚ್ಚು ಕಾಲ್‌ ಮತ್ತು ಎಸ್‌ಎಸಂಎಸ್‌ ಬಳಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಮೂಲಕ TRAI ಹೊಸ ನಿಯಮಗಳನ್ನು ಪಾಲಿಸಿದೆ. ಈ ಎರಡೂ ಪ್ಲಾನ್‌ಗಳಲ್ಲಿ ಇಂಟರ್ನೆಟ್ ಡೇಟಾ ಸೌಲಭ್ಯ ಇರುವುದಿಲ್ಲ.

Best Mobiles in India

English summary
Jio Recharge Plan: This Jio recharge that gives 500GB data will be discontinued Tomorrow, recharge now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+