ಬಿಗ್ ಶಾಕ್! ಗ್ರಾಹಕರ ವಿರುದ್ಧ Jio ಸೇಡು.. ಈ ಪ್ಲಾನ್ 100 ರೂ. ದುಬಾರಿ.. ಯಾವಾಗ ಹೆಚ್ಚಳ?
ಜಿಯೋ ಗ್ರಾಹಕರಿಗೆ ಮತ್ತೊಂದು ಶಾಕ್! ಈ ಜಿಯೋ ರೀಚಾರ್ಜ್ ಪ್ಲಾನ್ 100 ರೂ. ದುಬಾರಿಯಾಗಲಿದೆ. ಹೌದು, ರಿಲಯನ್ಸ್ ಜಿಯೋ (Jio) ಪ್ರಾರಂಭದಲ್ಲಿ ತನ್ನ ಬಳಕೆದಾರರಿಗೆ ಉಚಿತ ಇಂಟರ್ನೆಟ್ ನೀಡಿತ್ತು. ಈಗ ಆ ನಷ್ಟವನ್ನು ಬಡ್ಡಿ ಸಮೇತ ವಸೂಲಿ ಮಾಡಲು ಮುಂದಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ರೀಚಾರ್ಜ್ ಪ್ಲಾನ್ ದರ ಹೆಚ್ಚಿಸಿಲಾಗಿತ್ತು. ಇದರಿಂದ ಜನ ಸಾಮಾನ್ಯರು ಕಕ್ಕಾಬಿಕ್ಕಿಯಾಗಿದ್ದರು. ಇದೀಗ ಮುಖೇಶ್ ಅಂಬಾನಿ (Mukesh Ambani) ಕಂಪನಿ ಜಿಯೋ ತನ್ನ 199 ರೂ.ಗಳ ಪ್ಲಾನ್‌ನ ದರವನ್ನು 100 ರೂ. ಹೆಚ್ಚಿಸುತ್ತಿದೆ. ಇನ್ಮುಂದೆ ನೀವು 299 ರೂ. ಹಣ ಪಾವತಿಸಬೇಕಿದೆ.
ವರದಿಯ ಪ್ರಕಾರ, ರಿಲಯನ್ಸ್ ಜಿಯೋ ತನ್ನ 199 ರೂ.ನ ಪೋಸ್ಟ್‌ಪೇಯ್ಡ್ ರಿಚಾರ್ಜ್ ಪ್ಲಾನ್‌ನ ದರವನ್ನು ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಈ ರೀಚಾರ್ಜ್ ಪ್ಲಾನ್‌ನ ಬೆಲೆ 100 ರೂ.ಗಳಷ್ಟು ಹೆಚ್ಚಾಗಲಿದೆ. ಬಳಿಕ ಈ ಪ್ಲಾನ್ ಪಡೆಯಲು 299 ರೂ.ಗಳನ್ನು ನೀಡಬೇಕಾಗುತ್ತದೆ. ವಿಶೇಷ ಸಂಗತಿಯೆಂದರೆ, ಜಿಯೋ ಕಂಪನಿಯು ಬೆಲೆಯನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸದೆ, 100 ರೂ.ಳಷ್ಟು ಏರಿಕೆ ಮಾಡಿದೆ.ಈ ರೀಚಾರ್ಜ್ ದರ ಯಾವಾಗ ಹೆಚ್ಚಾಗುತ್ತದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಮಾಹಿತಿಯ ಪ್ರಕಾರ, 199 ರೂ.ನ ಜಿಯೋ ರಿಚಾರ್ಜ್ ಪ್ಲಾನ್ (Jio Rs 199 Recharge Plan) ಬೆಲೆಯು ಇದೇ ಜನವರಿ 23 ರಿಂದ ಹೆಚ್ಚಾಗಲಿದೆ. ಎಲ್ಲಾ ಬಳಕೆದಾರರನ್ನು ಸ್ವಯಂಚಾಲಿತವಾಗಿ ಹೊಸ ಬೆಲೆಗೆ ಸ್ಥಳಾಂತರಿಸಲಾಗುತ್ತದೆ. ಅಂದರೆ, ಈ ದಿನದ ಬಳಿಕ, 199 ರೂ.ನ ಪೋಸ್ಟ್‌ಪೇಯ್ಡ್ ರಿಚಾರ್ಜ್ ಯೋಜನೆಯನ್ನು ಬಳಸುತ್ತಿದ್ದವರು, 299 ರೂ. ಬೆಲೆ ಪಾವತಿಸಬೇಕಿದೆ.
ಜಿಯೋ 299 ರೂ. ಪ್ಲಾನ್ ಪ್ರಯೋಜನಗಳು
ಈ ಯೋಜನೆಯ ಬೆಲೆಯನ್ನು ಹೆಚ್ಚಿಸುವ ಮೂಲಕ ಕಂಪನಿಯು ರೀಚಾರ್ಜ್ ಅನ್ನು ಮತ್ತಷ್ಟು ದುಬಾರಿಗೊಳಿಸಿದೆ. ಆದರೆ, ಇದರಲ್ಲಿ ಲಭ್ಯವಿರುವ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ 199 ರೂ.ಗೆ ಲಭ್ಯವಿದ್ದ ಪ್ರಯೋಜನಗಳು, ಸದ್ಯ 100 ರೂ. ಹೆಚ್ಚಳವಾಗಿದ್ದರೂ, ಇದೇ ಪ್ರಯೋಜನಗಳು 299 ರೂ. ಪ್ಲಾನ್‌ನಲ್ಲಿ ಲಭ್ಯವಿರುತ್ತವೆ.
ಜಿಯೋ 299 ರೂ. ಯೋಜನೆ ಪ್ರಯೋಜನಗಳು
ಜಿಯೋ ಬಳಕೆದಾರರು ಯಾವುದೇ ಸಂಖ್ಯೆಗೆ ಉಚಿತ ವಾಯ್ಸ್ ಕಾಲ್ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ರೋಮಿಂಗ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಜಿಯೋ ನೆಟ್‌ವರ್ಕ್ ಸೇರಿದಂತೆ ಇತರೆ ಕಂಪನಿಗಳ ಸಂಖ್ಯೆಗಳಲ್ಲಿ ಅವುಗಳ ಬಳಕೆ ಉಚಿತವಾಗಿರುತ್ತದೆ. ಇದರೊಂದಿಗೆ, ಯಾವುದೇ ದೈನಂದಿನ ಮಿತಿಯಿಲ್ಲದೆ ಬರುವ ಪ್ಲಾನ್‌ನಲ್ಲಿ ಜಿಯೋ ಒಟ್ಟು 25GB ಹೈ ಸ್ಪೀಡ್ ಡೇಟಾ ನೀಡುತ್ತದೆ. ನೀವು ಪ್ರತಿದಿನ 100 ಎಸ್‌ಎಂಎಸ್‌ನ (SMS) ಲಾಭ ಸಹ ಪಡೆಯಬಹುದು.
ಜಿಯೋ 349 ರೂ. ಪ್ಲಾನ್
ಜಿಯೋ 199 ರೂ. ಪ್ಲಾನ್ ದರ ಹೆಚ್ಚಳವಾದ ಬಳಿಕ, ಇನ್ಮುಂದೆ 299 ರೂ. ಆಗಲಿದೆ. ಈ ಯೋಜನೆಯು ಹಳೆಯ ಗ್ರಾಹಕರಿಗೆ ಮಾತ್ರ ಮುಂದುವರಿಯುತ್ತದೆ. ಹೊಸ ಜಿಯೋ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ 349 ರೂ.ನ ಅಗ್ಗದ ಯೋಜನೆ ಇದೆ. ಈ ಪ್ಲಾನ್‌ನಲ್ಲಿ ನೀವು 30 GB 5G ಡೇಟಾ ಪಡೆಯಬಹುದು. ಇದರೊಂದಿಗೆ ಉಚಿತ ಅನ್‌ಲಿಮಿಟೆಡ್ ಕಾಲ್ಸ್ ಮತ್ತು ಪ್ರತಿನಿತ್ಯ 100 ಉಚಿತ ಎಸ್‌ಎಂಎಸ್ ಸಹ ಲಭ್ಯವಿದೆ.
ಒಟ್ಟಾರೆಯಾಗಿ, ಜಿಯೋ ತನ್ನ ಗ್ರಾಹಕರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. 199 ರೂ.ನ ಈ ಯೋಜನೆಯು 100 ರೂ. ಹೆಚ್ಚಳವಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇನ್ಮುಂದೆ 199 ರೂ. ಬದಲಿಗೆ 299 ರೂ.ಗಳನ್ನು ಪಾವತಿಸಬೇಕು. ಆದರೆ, ಪ್ಲಾನಿನಲ್ಲಿ ಅನ್‌ಲಿಮಿಟೆಡ್ ಕಾಲ್, 25GB ಹೈ ಸ್ಪೀಡ್ ಡೇಟಾ, ಉಚಿತ ನ್ಯಾಷಿನಲ್ ರೋಮಿಂಗ್ ಮತ್ತು ನಿತ್ಯ 100 ಎಸ್‌ಎಂಎಸ್ ಲಭ್ಯವಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.


Click it and Unblock the Notifications








