Home
ಸುದ್ದಿಜಾಲ

ಕ್ವಿಕರ್ ಜೊತೆಗೂ ಕೈಜೋಡಿಸಿದ ಜಿಯೋ: 4ಜಿ ಫೋನ್ ಖರೀದಿಗೆ 2,200 ರೂ.ಕ್ಯಾಷ್ ಬ್ಯಾಕ್!!

ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಇದೀಗ ಭಾರತೀಯ ಜಾಹೀರಾತು ಪೋರ್ಟಲ್ ಆಗಿರುವ ಕ್ವಿಕರ್ ಜೊತೆಗೆ ಕೈಜೋಡಿಸಿದೆ ಮತ್ತು ಗ್ರಾಹಕರಿಗೆ ಉತ್ತಮ ಕ್ಯಾಷ್ ಬ್ಯಾಕ್ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಹೌದು ಕ್ವಿಕರ್ ನಲ್ಲಿ ಯಾರು ನವೀಕರಿಸಿದ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುತ್ತಾರೋ ಅವರಿಗೆ ಉತ್ತಮ ಕ್ಯಾಷ್ ಬ್ಯಾಕ್ ಅವಕಾಶಗಳು ಇನ್ನು ಮುಂದೆ ಲಭ್ಯವಾಗುತ್ತದೆ.

2,200 ರುಪಾಯಿ ಕ್ಯಾಷ್ ಬ್ಯಾಕ್:

2,200 ರುಪಾಯಿ ಕ್ಯಾಷ್ ಬ್ಯಾಕ್:

ಭಾರತದಲ್ಲಿ ಹೊಸ 4ಜಿ ವೋಲ್ಟ್ ಸ್ಮಾರ್ಟ್ ಫೋನ್ ನ್ನು ಬಳಕೆದಾರರು ಖರೀದಿ ಮಾಡಲು ಉತ್ತಮ ಅವಕಾಶವಿದೆ. ಇದೀಗ ಜಿಯೋ ಸಹಭಾಗಿತ್ವದಿಂದಾಗಿ ಕ್ವಿಕರ್ ನಲ್ಲಿ 4ಜಿ ಅನೇಬಲ್ಡ್ ಆಗಿರುವ ಸ್ಮಾರ್ಟ್ ಫೋನ್ ಮಾದರಿಗಳು 2,200 ರುಪಾಯಿಯ ಕ್ಯಾಷ್ ಬ್ಯಾಕ್ ನಲ್ಲಿ ಲಭ್ಯವಾಗುತ್ತದೆ.

ಎರಡು ಪ್ರೀಪೇಯ್ಡ್ ಪ್ಯಾಕ್ ಗಳಿಗೆ ಮಾತ್ರವೇ ಲಭ್ಯ:

ಎರಡು ಪ್ರೀಪೇಯ್ಡ್ ಪ್ಯಾಕ್ ಗಳಿಗೆ ಮಾತ್ರವೇ ಲಭ್ಯ:

ಮೊದಲಿನಂತೆಯೇ 2,200 ರುಪಾಯಿ ಕ್ಯಾಷ್ ಬ್ಯಾಕ್ ಜಿಯೋ ರೀಚಾರ್ಜ್ ಗಳಾದ ರುಪಾಯಿ 198, ರುಪಾಯಿ 299 ರ ಪ್ರೀಪೇಯ್ಡ್ ಪ್ಯಾಕ್ ಗಳಿಗೆ ಮಾತ್ರವೇ ಲಭ್ಯವಾಗುತ್ತದೆ.

ಆಫರ್ ಪಡೆದುಕೊಳ್ಳಲು ಹೀಗೆ ಮಾಡಿ:

ಆಫರ್ ಪಡೆದುಕೊಳ್ಳಲು ಹೀಗೆ ಮಾಡಿ:

ಈ ಆಫರ್ ನ್ನು ಪಡೆದುಕೊಳ್ಳುವುದಕ್ಕಾಗಿ , ಕಂಪೆನಿಯ ಮಾರ್ಕೆಟ್ ಪ್ಲೇಸ್ ಆಗಿರುವ ಕ್ವಿಕ್ಕರ್ ಬಜಾರ್ ನ ಅಧಿಕೃತ ಜಿಯೋ ಕ್ವಿಕರ್ ಆಫರ್ ಪೇಜ್ ನಲ್ಲಿ ಅರ್ಹ ಸ್ಮಾರ್ಟ್ ಫೋನ್ ನ್ನು ಖರೀದಿಸಬೇಕು. ಒಮ್ಮೆ ಫೋನ್ ಖರೀದಿ ನಡೆದ ನಂತರ, ನೀವು ಹೊಸ ಜಿಯೋ ಪ್ರೀಪೇಯ್ಡ್ ಸಿಮ್ ಅಥವಾ ನಿಮ್ಮಲ್ಲಿ ಈಗಾಗಲೇ ಲಭ್ಯವಿರುವ ಜಿಯೋ ಸಿಮ್ ನ್ನು ಅದರಲ್ಲಿ ಹಾಕಬೇಕು.ನಂತರ ನಿಮ್ಮ ಸಿಮ್ ಗೆ 198 ರುಪಾಯಿ ಅಥವಾ 299 ರುಪಾಯಿ ಪ್ಯಾಕ್ ನ್ನು ರೀಚಾರ್ಜ್ ಮಾಡಬೇಕು. ನಂತರ ನೀವು 2,200 ರುಪಾಯಿ ಕ್ಯಾಷ್ ಬ್ಯಾಕ್ ನ್ನು ಹಲವು ವೋಚರ್ ಗಳ ರೂಪದಲ್ಲಿ ಪಡೆಯುತ್ತೀರಿ. ಈ ಜಿಯೋ ವೋಚರ್ ಗಳು ಮೈಜಿಯೋ ಅಕೌಂಟಿನಲ್ಲಿ ಲಭ್ಯವಿರುತ್ತದೆ.

ಯಾವ ಬ್ರ್ಯಾಂಡ್ ನ ಫೋನ್ ಗಳನ್ನು ಖರೀದಿಸಬೇಕು:

ಯಾವ ಬ್ರ್ಯಾಂಡ್ ನ ಫೋನ್ ಗಳನ್ನು ಖರೀದಿಸಬೇಕು:

ಬಳಕೆದಾರರು ವಿವೋ, ಮೊಟರೋಲಾ, ಆಪಲ್, ನೋಕಿಯಾ, ಕೂಲ್ ಪ್ಯಾಡ್ ಅಥವಾ ಇನ್ನೂ ಹಲವು ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳ ಖರೀದಿಸಿಗೆ ಅವಕಾಶವಿರುತ್ತದೆ. ಈ ಆಫರ್ ನವೆಂಬರ್ 29,2018 ರಿಂದ ಫೆಬ್ರವರಿ 25,2019 ರ ವರೆಗೆ ಲಭ್ಯವಿರುತ್ತದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

198 ರೀಚಾರ್ಜ್ ಪ್ಲಾನ್ ನ ಸೌಲಭ್ಯಗಳು:

198 ರೀಚಾರ್ಜ್ ಪ್ಲಾನ್ ನ ಸೌಲಭ್ಯಗಳು:

198 ರುಪಾಯಿ ರೀಚಾರ್ಜ್ ಪ್ಲಾನ್ ನಲ್ಲಿ 2ಜಿಬಿ 4ಜಿ ಡಾಟಾ ಪ್ರತಿ ದಿನ, ಅನಿಯಮಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿದಿನ ಉಚಿತ ಮತ್ತು ಜಿಯೋ ಸ್ಯೂಟ್ಸ್ ಮತ್ತು ಆಪ್ಸ್ ಗೆ ಉಚಿತ ಆಕ್ಸಿಸ್ ಲಭ್ಯವಿರುತ್ತದೆ.

299 ಪ್ಲಾನ್ ನ ಸೌಲಭ್ಯಗಳು:

ಇನ್ನೊಂದೆಡೆ 299 ರುಪಾಯಿ ರೀಚಾರ್ಜ್ ಪ್ಲಾನ್ ನಲ್ಲಿ 3ಜಿಬಿ 4ಜಿ ಡಾಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿದಿನ, ಜಿಯೋ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಲಭ್ಯವಿರುತ್ತದೆ.

ಜಿಯೋ ಫುಟ್ ಬಾಲ್ ಆಫರ್ ನಂತೆಯೇ ಇದೆ:

ಈ ವರ್ಷದ ಫೆಬ್ರವರಿಯಲ್ಲಿ ರಿಲಯನ್ಸ್ ಜಿಯೋ ಸಂಸ್ಥೆ ಜಿಯೋ ಫುಟ್ ಬಾಲ್ ಆಫರ್ ನ್ನು ನೀಡಿತ್ತು. ಇದರ ಅನುಸಾರ ಜಿಯೋ 4ಜಿ ಸ್ಮಾರ್ಟ್ ಫೋನ್ ಖರೀದಿದಾರರಿಗೆ 2,200 ರುಪಾಯಿ ಇನ್ಸೆಂಟ್ ಕ್ಯಾಷ್ ಬ್ಯಾಕ್ ನ್ನು ನೀಡಿತ್ತು ಮತ್ತು ನಂತರ ಜಿಯೋ ಸಿಮ್ ನ್ನು ಅದರಲ್ಲಿ ಆಕ್ಟಿವೇಟ್ ಮಾಡಿಕೊಳ್ಳಬೇಕಿತ್ತು.ಇತ್ತೀಚೆಗೆ ಈ ಟೆಲಿಕಾಂ ಆಪರೇಟರ್ ಪ್ರಮುಖ ಕಂಪೆನಿಗಳ ಜೊತೆಗೆ ಟೈಅಪ್ ಮಾಡಿಕೊಂಡಿದೆ. ಸ್ಯಾಮ್ ಸಂಗ್, ಶಿಯೋಮಿ, ಆಸೂಸ್, ಮೊಟೋರೋಲಾ, ನೋಕಿಯಾ, ಎಲ್ ಜಿ, ಮೈಕ್ರೋಮ್ಯಾಕ್ಸ್, ಪಾನಸಾನಿಕ್, ಹುವಾಯಿ, ಬ್ಲಾಕ್ ಬೆರ್ರಿ ಇತ್ಯಾದಿ ಕಂಪೆನಿಗಳು ಇದರಲ್ಲಿ ಸೇರಿವೆ.

Best Mobiles in India

English summary
Jio Rs. 2,200 Cashback Now Valid on Purchase of Quikr Assured Refurbished 4G VoLTE Phones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+