ಜಿಯೋವಿನ ಹೊಸ ಆಫರ್ ಘೋಷಣೆ!..ಟೆಲಿಕಾಂಗೆ ಭಾರಿ ಶಾಕ್!!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದ್ದ ರಿಲಯನ್ಸ್ ಜಿಯೋ ನೂತನ ಟ್ಯಾರಿಫ್ ಪ್ಲ್ಯಾನ್‌ಗಳನ್ನು ಘೋಷಿಸಿದ್ದು, ನೂತನ ಆಫರ್‌ಗಳ ರಿಲಯನ್ಸ್ ಜಿಯೋ 4ಜಿ ಡೇಟಾ ಸೇವೆಯಲ್ಲಿ ಶೇಕಡಾ 15ರಷ್ಟು ಬೆಲೆ ಏರಿಕೆ ಕಂಡುಬಂದಿದೆ.!!
ಟೆಲಿಕಾಂ ಕಂಪೆನಿಗಳ ಇಂಟರ್‌ಕನೆಕ್ಟ್ ಚಾರ್ಜ್ ದರವು 14 ಪೈಸೆಯಿಂದ 6 ಪೈಸೆಗೆ ಇಳಿದ ನಂತರ ಜಿಯೋವಿನ ಬೆಲೆಗಳು ಮತ್ತಷ್ಟು ಕಡಿಮೆಯಾಗುತ್ತವೆ ಎನ್ನುವ ಗ್ರಾಹಕರ ನಿರೀಕ್ಷೆ ಇದೀಗ ಸುಳ್ಳಾಗಿದ್ದು, ಇತರ ಟೆಲಿಕಾಂಗಳಂತೆ ಜಿಯೋ ತನ್ನ ಆಫರ್ ಬೆಲೆಗಳನ್ನು ಹೆಚ್ಚಿಸುವ ಮೂಲಕ ಜನರಿಗೆ ಶಾಕ್ ನೀಡಿದೆ.!!
ಹೌದು, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದ್ದ ರಿಲಯನ್ಸ್ ಜಿಯೋ ನೂತನ ಟ್ಯಾರಿಫ್ ಪ್ಲ್ಯಾನ್‌ಗಳನ್ನು ಘೋಷಿಸಿದ್ದು, ನೂತನ ಆಫರ್‌ಗಳ ರಿಲಯನ್ಸ್ ಜಿಯೋ 4ಜಿ ಡೇಟಾ ಸೇವೆಯಲ್ಲಿ ಶೇಕಡಾ 15ರಷ್ಟು ಬೆಲೆ ಏರಿಕೆ ಕಂಡುಬಂದಿದೆ.!! ಹಾಗಾದರೆ, ಯಾವೆಲ್ಲಾ ಆಫರ್ ಏನೆಲ್ಲಾ ಬೆಲೆ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

309, 399, ಮತ್ತು 459!!
ಜಿಯೋವಿನ ಅತ್ಯುತ್ತಮ ಪ್ಲಾನ್ ಎಂದು ಜನಪ್ರಿಯವಾಗಿರುವ 84 ದಿನಗಳು ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಸೇವೆಗಳ ಬಲೆ ಮೊದಲು 309ರೂ, ನಂತರ 399ರೂ ಹಾಗೂ ಪ್ರಸ್ತುತ 459ರೂಪಾಯಿಗಳಾಗಿವೆ.! ಪ್ರತಿಭಾರಿಯೂ ಜಿಯೋ ತನ್ನ ಆಫರ್ ಬೆಲೆಯನ್ನು ಹೆಚ್ಚಿಸಿದೆ.!!

509 ರೂ. ವ್ಯಾಲಿಡಿಟಿ ಇಳಿಕೆ!!
ಜಿಯೋವಿನ 509 ರೂ.ಗಳ ಪ್ಲ್ಯಾನ್‌ನಲ್ಲಿಯೂ ಸಹ ಕಡಿತವುಂಟಾಗಿದ್ದು, ಈ ಹಿಂದೆಯಿದ್ದ 56 ವ್ಯಾಲಿಡಿಟಿಯನ್ನು ಕೇವಲ 49 ದಿನಗಳಗೆ ಸೀಮಿತವಾಗಲಿದೆ. ಹಾಗೆಯೇ ಒಟ್ಟು ಡೇಟಾ 112ಜಿಬಿಯಿಂದ 98ಜಿಬಿಗೆ ಇಳಿಕೆಯಾಗಿದ್ದು, ಈ ಆಫರ್ ಬೆಲೆಯೂ 15% ಅಷ್ಟು ಕಡಿಮೆಯಾಗಿರುವುದನ್ನು ನಾವು ನೋಡಬಹುದು.!!

ಸ್ಪೀಡ್ ಡೇಟಾ ಇಳಿಕೆ!!
399 ರೂ ಪ್ಲಾನ್ ಬೆಲೆ ಹೆಚ್ಚಾಗಿದ್ದರೆ, 509 ರೂ. ವ್ಯಾಲಿಡಿಟಿ ಇಳಿಕೆಯಾಗಿದೆ. ಹಾಗೆಯೇ, 999 ರೂ. ಪ್ಲ್ಯಾನ್ ಅಡಿಯಲ್ಲಿ 60ಜಿಬಿ ವರೆಗೆ ಮಾತ್ರ ಹೈಸ್ಪೀಡ್ ಡೇಟಾ ವೇಗ ಸಿಗಲಿದ್ದು, ನಂತರ ಡೇಟಾ ವೇಗವು ಕಡಿಮೆಯಾಗಲಿದೆ ಎಂದು ಜಿಯೋ ಆಫರ್ ಮೂಲಕ ತಿಳಿಯಬಹುದು.!!

ಟೆಲಿಕಾಂಗೆ ಶಾಕ್!!
ಇಂಟರ್‌ಕನೆಕ್ಟ್ ಚಾರ್ಜ್ ದರವು 14 ಪೈಸೆಯಿಂದ 6 ಪೈಸೆಗೆ ಇಳಿದ ನಂತರ ಜಿಯೋ ಇನ್ನು ಕಡಿಮೆ ಬೆಲೆಗೆ ಆಫರ್‌ಗಳನ್ನು ಪ್ರಕಟಿಸುತ್ತದೆ ಎಂದು ಇತರ ಟೆಲಿಕಾಂಗಳು ಅಂದುಕೊಂಡಿದ್ದವು. ಆದರೆ, ಜಿಯೋ ತನ್ನ ಆಫರ್‌ಗಳ ಬೆಲೆಯನ್ನು ಶೇ15% ಹೆಚ್ಚಿಸಿ ಇತರ ಟೆಲಿಕಾಂಗಳಿಗೆಶಾಕ್ ನೀಡಿದೆ.!!

149 ರೂ.ಪ್ಲಾನ್‌ಗೆ ಧಮಾಕ!!
ಎಲ್ಲಾ ಆಫರ್‌ಗಳಲ್ಲಿ ಜನರಿಗೆ ಶಾಕ್ ನೀಡಿರುವ ಜಿಯೋ 149 ರೂ.ಗಳ ಪ್ಲ್ಯಾನ್ ಅಡಿಯಲ್ಲಿ4ಜಿ ಡೇಟಾ ನೀಡಿ ಗಮನ ಸೆಳೆದಿದೆ. 28 ದಿನಗಳ ವರೆಗೆ ಹಿಂದೆಯಿದ್ದ 149 ರೂ.ಗಳ ಪ್ಲ್ಯಾನ್ ಅಡಿಯಲ್ಲಿ ಮೊದಲು ಕೇವಲ 2ಜಿಬಿ ಡೇಟಾ ಮಾತ್ರ ದೊರೆಯುತ್ತಿತ್ತು.!!


Click it and Unblock the Notifications








