Home
ಸುದ್ದಿಜಾಲ

ಜಿಯೋದಿಂದ ಮತ್ತೊಂದು ಹೊಸ ಸೇವೆ: ಆಡ್ ಲೋಕದಲ್ಲಿ ಅಲ್ಲೋಕ ಕಲ್ಲೋಲ..!

By Srinidhi

ಸಾಕಷ್ಟು ಹೊಸ ಪ್ರಯತ್ನಗಳಿಗೆ ಮುಂದಾಗಿರುವ ರಿಲಯನ್ಸ್ ಜಿಯೋ, ಆದಾಯ ಕ್ರೋಢಿಕರಣಕ್ಕೆ ಮುಂದಾಗಿದೆ. 65 ಮಿಲಿಯನ್‌ಗೂ ಹೆಚ್ಚು ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಜಿಯೋ, ಈಗಾಗಲೇ 'ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್', ಕೆಬಿಸಿ ಕಾರ್ಯಕ್ರಮವನ್ನು ಮನೆಮನೆಗೆ ತಲುಪಿಸಿದೆ. 'ಜಿಯೋ ಕೌನ್ ಬನೇಗಾ ಕರೋಡ್‌ಪತಿ ಪ್ಲೇ ಅಲಾಂಗ್' ಮುಂತಾದ ಆಟಗಳಿಂದ ಹೆಸರುಮಾಡಿ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಜಿಯೋದಿಂದ ಮತ್ತೊಂದು ಹೊಸ ಸೇವೆ: ಆಡ್ ಲೋಕದಲ್ಲಿ ಅಲ್ಲೋಕ ಕಲ್ಲೋಲ..!

ಈಗ ಹೊಸದಾಗಿ ಜಿಯೋ ಸ್ಕ್ರೀನ್ಸ್ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಭಾರತದಲ್ಲಿ ಮನರಂಜನೆ ಆಧರಿತ ಗೇಮಿಫಿಕೇಶನ್‌ನ ಸಮಗ್ರ ಸೇವೆ ಒದಗಿಸುವ ಕೆಲವೇ ಸಂಸ್ಥೆಗಳ ಮುಂಚುಣಿಯಲ್ಲಿ ನಿಲ್ಲಲು ಮುಂದಾಗಿದ್ದು, ಮನರಂಜನೆಯಲ್ಲಿ ಜಿಯೋ ಬಿಟ್ಟರೆ ಮತ್ತೊಂದಿಲ್ಲ ಎನ್ನುವ ಮಟ್ಟಕ್ಕೆ ಬೆಳೆಯಲು ಯೋಜನೆಯನ್ನು ರೂಪಿಸಿದೆ.

ಪಾಲುದಾರಿಕೆ:

ಪಾಲುದಾರಿಕೆ:

ಭಾರತದ ಅತಿದೊಡ್ಡ ಡಿಜಿಟಲ್ ಎಂಗೇಜ್‌ಮೆಂಟ್ ವೇದಿಕೆ ರೂಪಿಸಲಿರುವ ಜಿಯೋ ಇದಕ್ಕಾಗಿ ಹಲವಾರು ಪಾಲುದಾರಿಕೆ ಮಾಡಿಕೊಂಡಿದೆ. ಪ್ರಸರಣ ಸಂಸ್ಥೆಗಳಿಗೆ ಡಿಜಿಟಲ್ ಇಂಟರಾಕ್ಟಿವಿಟಿ ಸಾಧ್ಯವಾಗಿಸಲಿರುವ ಜಿಯೋ ಸ್ಕ್ರೀನ್ಸ್, ವಿಕ್ಷಕರನ್ನು ಪ್ರತಿಕ್ರಿಯಾತ್ಮಕ ಹಾಗೂ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹಿಸಲಿದೆ.

ನೇರ ಪ್ರಸಾರ:

ನೇರ ಪ್ರಸಾರ:

ಜಿಯೋ ಸ್ಕ್ರೀನ್ಸ್ ಸೇವೆಲ್ಲಿ ನೇರಪ್ರಸಾರ ಸಾಧ್ಯವಿದ್ದು, ಇದರಲ್ಲಿ ಪ್ರಸರಣ ಸಂಸ್ಥೆ ಹಾಗೂ ವೀಕ್ಷಕರ ನಡುವಿನ ಸಂವಹನಕ್ಕೆ ಅವಕಾಶ ಮಾಡಿಕೊಡಲಿದೆ. ಆ ಮೂಲಕ ವೀಕ್ಷಕರು ಕಾರ್ಯಕ್ರಮಗಳನ್ನು ಹೆಚ್ಚು ಆಸಕ್ತಿಯಿಂದ ವೀಕ್ಷಿಸುವಂತೆ, ಅತ್ತ ಆಕರ್ಷಿತರಾಗಿ ಮಾಡಲು ಸಾಧ್ಯವಾಗಲಿದೆ.

ಜಾಹಿರಾತಿನ ಹೊಸ ಮುಖ:

ಜಾಹಿರಾತಿನ ಹೊಸ ಮುಖ:

ಜಿಯೋ ಸ್ಕ್ರೀನ್ಸ್ ವೇದಿಕೆ ಗ್ರಾಹಕರಿಗೆ ವೈಯಕ್ತಿಕ ಮಟ್ಟದ ಸೇವೆ ನೀಡುವ ತನ್ನ ಆಧುನಿಕ ಸಾಮರ್ಥ್ಯದಿಂದಾಗಿ ಹೆಚ್ಚಿನ ಆಕರ್ಷಣೆಯನ್ನೂ ಜಾಹೀರಾತುಗಳಿಗೆ ಹೊಸ ಅವಕಾಶಗಳನ್ನೂ ಒದಗಿಸಲಿದೆ.

TV ಮತ್ತು ಮೊಬೈಲ್:

TV ಮತ್ತು ಮೊಬೈಲ್:

ಡ್ಯುಯಲ್ ಸ್ಕ್ರೀನ್ ಅನುಭವ ನೀಡಲಿದ್ದು, TV ಹಾಗೂ ಮೊಬೈಲುಗಳಲ್ಲಿ ಪ್ರದರ್ಶಿಸಲಾಗುವ ಜಾಹೀರಾತುಗಳಿಗೆ ಹೊಸ ವ್ಯಾಖ್ಯಾನ ನೀಡಲಿದೆ. ಅಲ್ಲದೇ ಇದರಿಂದ ಹೆಚ್ಚಿನ ಪ್ರಮಾಣದ ಆದಾಯದ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ.

ಜಿಯೋ ಇಂಟರಾಕ್ಟ್:

ಜಿಯೋ ಇಂಟರಾಕ್ಟ್:

ಜಿಯೋ ಇಂಟರಾಕ್ಟ್ ನಂತರದಲ್ಲಿ ಜಿಯೋ ಪರಿಚಯಿಸುತ್ತಿರುವ ಇಂತಹ ಎರಡನೇ ಬ್ರಾಂಡ್-ಎಂಗೇಜ್‌ಮೆಂಟ್ ವೇದಿಕೆಯಾಗಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಐ) ಆಧರಿತ ಪ್ರಪಂಚದ ಮೊತ್ತಮೊದಲ ಬ್ರಾಂಡ್ ಎಂಗೇಜ್‌ಮೆಂಟ್ ವೇದಿಕೆ ಜಿಯೋಇಂಟರಾಕ್ಟ್ ಅನ್ನು ಜಿಯೋ ಕಳೆದ ವಾರವಷ್ಟೇ ಪರಿಚಯಿಸಿತ್ತು.

Best Mobiles in India

English summary
Jio Screenz Two-Way Conversation Platform Between Broadcasters and Viewers. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+