Home
ಸುದ್ದಿಜಾಲ

ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಕೈಗೆಟಕುವ ಬೆಲೆಯ ಜಿಯೋ ಆಂಡ್ರಾಯ್ಡ್‌ ಫೋನ್‌!

ಜಿಯೋ ಭಾರತದ ಟೆಲಿಕಾಂ ವಲಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿ ಗ್ರಾಹಕರ ನೆಚ್ಚಿನ ಟೆಲಿಕಾಂ ಬ್ರಾಂಡ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಜಿಯೋ ಕಂಪೆನಿ ಟೆಲಿಕಾಂ ವಲಯ ಮಾತ್ರವಲ್ಲದೆ ಇತರೆ ವಲಯಗಳಲ್ಲಿಯೂ ತನ್ನ ಪಾಲುದಾರಿಕೆಯನ್ನ ನಿಧಾನವಾಗಿ ವಿಸ್ತಾರ ಮಾಡಿಕೊಳ್ಳುತ್ತಿದೆ. ಈಗಾಗಲೇ ಜಿಯೋ ಹ್ಯಾಡ್‌ಸೆಟ್‌ ಫೋನ್ ಪರಿಚಯಿಸಿರುವ ರಿಲಯನ್ಸ್ ಜಿಯೋ ಈ ವರ್ಷದ ಕೊನೆಯಲ್ಲಿ ಕೈಗೆಟುಕುವ ಆಂಡ್ರಾಯ್ಡ್ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಜಿಯೋ

ಹೌದು, ರಿಲಯನ್ಸ್‌ ಜಿಯೋ ಕಂಪೆನಿ ಈ ವರ್ಷದ ಕೊನೆಯಲ್ಲಿ ಜಿಯೋ ಆಂಡ್ರಾಯ್ಡ್‌ ಫೋನ್‌ ಪರಿಚಯಿಸಲಿದೆ ಎನ್ನಲಾಗ್ತಿದೆ. ಅಲ್ಲದೆ ಲಬ್ಯ ಮಾಹಿತಿಯ ಪ್ರಕಾರ 10 ಕೋಟಿ ಯುನಿಟ್‌ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ದತೆ ನಡೆದಿದೆ ಎನ್ನಲಾಗಿದೆ. ಇನ್ನು ಈ ಫೋನ್‌ನ ಕಡಿಮೆ-ವೆಚ್ಚದ ಭಾಗವು ಜಿಯೋಗೆ ಅನುಕೂಲವಾಗಲಿದೆ, ಅಲ್ಲದೆ ಫೋನ್‌ ಜೊತೆಗೆ ಡೇಟಾ ಪ್ಯಾಕ್‌ ಪ್ಲ್ಯಾನ್‌ ಅನ್ನು ಸಹ ನೀಡುವ ಪ್ಲ್ಯಾನ್‌ ರೂಪಿಸಲಾಗಿದೆ.

ಆಂಡ್ರಾಯ್ಡ್

ಇನ್ನು ಹೊಸ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಓಎಸ್ ಅಭಿವೃದ್ಧಿಪಡಿಸಲು ಜಿಯೋ ಗೂಗಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಎಂಟ್ರಿ ಲೆವೆಲ್ 4G ಸ್ಮಾರ್ಟ್‌ಫೋನ್‌ಗಳ ಜೊತೆಗೆ ಎಂಟ್ರಿ ಲೆವೆಲ್ 5G ಸ್ಮಾರ್ಟ್‌ಫೋನ್ ತಯಾರಿಸಲು ಎರಡು ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ. ಮತ್ತು ಈ ಪಾಲುದಾರಿಕೆಯ ಮೊದಲ ಡಿವೈಸ್‌ ಅನ್ನು ಕೆಲವು ತಿಂಗಳುಗಳಲ್ಲಿ ಅನಾವರಣಗೊಳಿಸಬಹುದು. ಈಗಾಗಲೇ ಜಿಯೋ ಎರಡು ಮೂರು ವರ್ಷಗಳ ಹಿಂದೆ ತನ್ನ ಮೊದಲ 4G ಫೀಚರ್ ಫೋನ್‌ ಬಿಡುಗಡೆ ಮಾಡಿ ಉತ್ತಮ ಬೇಡಿಕೆ ಪಡೆದುಕೊಂಡಿತ್ತು. ಇದೇ ಕಾರಣಕ್ಕೆ ಇದೀಗ ಜಿಯೋ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ ಎನ್ನಲಾಗಿದೆ.

ಚೀನಾದ ಮೊಬೈಲ್ ದೈತ್ಯರಿಗೆ ಸೆಡ್ಡು ಹೊಡೆಯಲಿದೆ ಜಿಯೋ

ಚೀನಾದ ಮೊಬೈಲ್ ದೈತ್ಯರಿಗೆ ಸೆಡ್ಡು ಹೊಡೆಯಲಿದೆ ಜಿಯೋ

ಇನ್ನು ದೇಶದಲ್ಲಿ ಖರೀದಿದಾರರ ಆಸಕ್ತಿಯನ್ನು ನಿರ್ಧರಿಸುವಲ್ಲಿ ಬೆಲೆ ಯಾವಾಗಲೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಗುಣಲಕ್ಷಣವು ಚೀನಾದ ಶಿಯೋಮಿ, ವಿವೊ ಮತ್ತು ಒಪ್ಪೊದಂತಹ ಬ್ರ್ಯಾಂಡ್‌ಗಳಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಸಹಾಯ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಚೀನಾದ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಸ್ಫರ್ಧೆಯೊಡ್ಡುವ ಮತ್ತು ಜಿಯೋ ಫೋನ್‌ಗಳಿಗೆ ಬಲವಾದ ಅಡಿಪಾಯವನ್ನು ನಿರ್ಮಿಸಲು ಸಹಾಯ ಮಾಡುವುದು ಜಿಯೋದ ಪ್ಲ್ಯಾನ್‌ ಆಗಿದೆ. ಈ ಮೂಲಕ ಸ್ಥಳೀಯ ಬ್ರ್ಯಾಂಡ್‌ಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ಜಿಯೋ

ಇದೇ ಕಾರಣಕ್ಕೆ ಜಿಯೋ ಸಂಸ್ಥೆ ಸ್ಮಾರ್ಟ್‌ಫೋನ್‌ ವಲಯಕ್ಕೆ ಎಂಟ್ರಿ ನೀಡುವುದು ಚೀನಾದ ಶಿಯೋಮಿ ಮತ್ತು ಒಪ್ಪೊಗೆ ಕಳವಳವನ್ನ ಉಂಟು ಮಾಡಲಿದೆ ಎಂದು ಹೇಳಲಾಗ್ತಿದೆ. ಸದ್ಯಕ್ಕೆ, ಈ ವರ್ಷದಿಂದಲೇ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಜಿಯೋ ತಯಾರಾದರೆ ಚೀನಾ ಕಂಪೆನಿಗಳಿಗೆ ಗೇಟ್‌ಪಾಸ್‌ ಗ್ಯಾರಂಟಿ ಎಂದು ಹೇಳಲಾಗ್ತಿದೆ.

Best Mobiles in India

English summary
Reliance Jio is reportedly set to launch affordable Android phones later this year. The telco may use its partnership with Google to make this happen.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+