ಜಿಯೋ ಪ್ರೈಮ್ ಸದಸ್ಯರಾಗಲಿಲ್ಲವೆಂದರೆ ಆಗುವುದೇನು..? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...!
ಸದ್ಯ 6 ತಿಂಗಳ ಉಚಿತ ಸೇವೆಯ ನಂತರ ಜಿಯೋ ತನ್ನ ಸೇವೆಗಳಿಗೆ ದರವನ್ನು ವಿಧಿಸಲು ಮುಂದಾಗಿದ್ದು, ಇದಕ್ಕಾಗಿ ತನ್ನ ಗ್ರಾಹಕರಿಗೆ ಪ್ರೈಮ್ ಸದಸ್ಯತ್ವವನ್ನು ಪಡೆಯುವಂತೆ ಮಾಡಲು ಮುಂದಾಗಿದೆ.
ಉಚಿತ ಸೇವೆಯ ನಂತರ ಜಿಯೋ ತನ್ನ ಸೇವೆಗಳಿಗೆ ದರವನ್ನು ವಿಧಿಸಲು ಮುಂದಾಗಿದ್ದು, ಇದಕ್ಕಾಗಿ ತನ್ನ ಗ್ರಾಹಕರಿಗೆ ಪ್ರೈಮ್ ಸದಸ್ಯತ್ವವನ್ನು ನೀಡುವ ಮೂಲಕ ಹೊಸ ರೀತಿಯ ಆಫರ್ ತ್ವರೆ ಮಾಡಿದೆ. ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭದಲ್ಲಿ ಪ್ರೋಷನ್‌ಗಾಗಿ ಮೊದಲ ಮೂರು ತಿಂಗಳು ಉಚಿತ ಡೇಟಾ ಮತ್ತು ಕರೆ ಸೇವೆಯನ್ನು ನೀಡಿತು.

ಓದಿರಿ: ನೀವಿನ್ನು ಜಿಯೋ ಪ್ರೈಮ್ ಸದಸ್ಯರಾಗಿಲ್ಲವೇ..? ಹಾಗಿದ್ದರೆ ನೀವು ಈ ಸ್ಟೋರಿ ಓದಲೇ ಬೇಕು
ಮೊದಲ ಮೂರು ತಿಂಗಳ ಉಚಿತ ಸೇವೆಯ ನಂತರ ಮತ್ತೆ ಮೂರು ತಿಂಗಳ ಕಾಲ ಉಚಿತ ಸೇವೆಯನ್ನು ವಿಸ್ತರಿಸಿತ್ತು. ಸದ್ಯ 6 ತಿಂಗಳ ಉಚಿತ ಸೇವೆಯ ನಂತರ ಜಿಯೋ ತನ್ನ ಸೇವೆಗಳಿಗೆ ದರವನ್ನು ವಿಧಿಸಲಿದೆ.

ಸದಸ್ಯತ್ವವನ್ನು ಪಡೆಯಲು ಇಚ್ಛಿಸುತ್ತಿಲ್ಲವೇ..?
ಜಿಯೋ ಮಾರ್ಚ್ 31ರ ವರಗೆ ರೂ.99 ನೀಡಿ ಪ್ರೈಮ್ ಸದಸ್ಯತ್ವವನ್ನು ಪಡೆಯುವಂತೆ ತನ್ನ ಗ್ರಾಹಕರಿಗೆ ಕರೆ ನೀಡಿದೆ. 99 ರೂ. ನೀಡಿ ಸದಸ್ಯರಾದವರಿಗೆ ಒಂದು ವರ್ಷಗಳ ಕಾಲ 'ಹ್ಯಾಪಿ ನ್ಯೂ ಇಯರ್' ಸೇವೆಯನ್ನು ಅನುಭವಿಸುವ ಅವಕಾಶವನ್ನು ಮಾಡಿಕೊಡುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಗ್ರಾಹಕರು 303 ರೂಗಳನ್ನು ಪಾವತಿ ಮಾಡಬೇಕಾಗಿದೆ. ಆದರೆ ಹಲವು ಜಿಯೋ ಗ್ರಾಹಕರು ಈ ಪ್ರೈಮ್ ಸದಸ್ಯತ್ವವನ್ನು ಪಡೆಯಲು ಇಚ್ಛಿಸುತ್ತಿಲ್ಲ. ಹಾಗಾಗಿ ಪ್ರೈಮ್ ಸದಸ್ಯರಾಗದೆ ಉಳಿದರೆ ಏನಾಗುವುದು..?

ಉಚಿತ ಸೇವೆಗಳು ಇರುವುದಿಲ್ಲ:
ಜಿಯೋ ಪ್ರೈಮ್ ಸದಸ್ಯತ್ವ ಪಡೆಯದೆ ಇರುವವರಿಗೆ ಉಚಿತ ಕರೆ ಮಾಡುವ ಮತ್ತು ಸ್ವೀಕರಿಸುವ ಅವಕಾಶವಿರಲಿದೆ ಎಂದು ತಿಳಿದುಕೊಂಡರೆ ಅದು ಸುಳ್ಳು, ನೀವು ಪಡೆಯುವ ಪ್ರತಿ ಸೇವೆಗೂ ದುಡ್ಡು ನೀಡಲೇಬೇಕು. ಅದುವೇ ಪ್ರೈಮ್ ಸದಸ್ಯರು ನೀಡುವ 10 ಪಟ್ಟು ಹೆಚ್ಚು ಹಣವನ್ನು ಪಾವತಿ ಮಾಡಬೇಕು.

90 ದಿನದೊಳಗೆ ರೀಚಾರ್ಜ್ ಮಾಡಿಸಲೇ ಬೇಕು:
ನೀವು ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆಯದೆ ಹಾಗೆ ಉಳಿದಲ್ಲಿ. ಮಾರ್ಚ್ 31ರ ಒಳಗೆ ಪಡೆಯದೆಹೋದರೆ ನೀವು ಕೇವಲ ಉಚಿತ ಎಸ್‌ಎಂಎಸ್ ಮತ್ತು ಕೆರೆಯನ್ನು ಸ್ವೀಕರಿಸಲು ಮಾತ್ರ ಸಾಧ್ಯವಾಗುತ್ತದೆ ಅಷ್ಟೆ. ಅಲ್ಲದೇ 90 ದಿನಗಳ ಕಾಲ ಯಾವುದೇ ರೀಚಾರ್ಜ್ ಮಾಡಿಸಲಿಲ್ಲ ಎಂದರೆ ನಿಮ್ಮ ನಂಬರ್ ಡಿಸ್‌ಕನೆಕ್ಟ್ ಆಗಲಿದೆ.

ಪ್ರೈಮ್ ಸದಸ್ಯರಾಗಿಯೂ ರೀಜಾರ್ಜ್ ಮಾಡಿಸಲಿಲ್ಲ ಎಂದರೆ?
ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಿ ಪ್ರತಿ ತಿಂಗಳು 303 ರೂ ರಿಚಾರ್ಜ್ ಮಾಡಿಸಲಿಲ್ಲ ಎಂದರೆ ನಿಮ್ಮ ಉಚಿತ ಸೇವೆಯನ್ನು ತಡೆಯಹಿಡಿಯಲಾಗುತ್ತದೆ. ಅಲ್ಲದೇ ನೀವು ಕರೆ ಮತ್ತು ಮೇಸೆಜ್ ಸ್ವೀಕರಿಸಬಹುದಾಗಿದೆ. ಅಲ್ಲದೇ 90 ದಿನಗಳ ನಂತರ ನಿಮ್ಮ ಸೇವೆ ನಿಷ್ಕ್ರಿಯವಾಗಲಿದೆ.

ಪ್ರೈಮ್ ಸದಸ್ಯರಲ್ಲವರಿಗೂ ಪ್ಲಾನ್‌ಗಳಿದೆ:
ಜಿಯೋ ಬಳಕೆದಾರೆಲ್ಲರೂ ಪ್ರೈಮ್ ಸದಸ್ಯರಾಗ ಬೇಕೆಂಬುವ ನಿಯಮವೇನು ಇಲ್ಲ. ಪ್ರೈಮ್ ಸದಸ್ಯರಾಗಿಯೂ ನೀವು ಜಿಯೋ ಸೇವೆಯನ್ನ ಪಡೆಯಬಹುದು. ಆದರೆ ಪ್ರೈಮ್ ಸದಸ್ಯರು 10 ರೂ.ಗಳಿಗೆ 1GB ಡೇಟಾ ಪಡೆದರೆ ನಾನ್ ಪ್ರೈಮ್ ಸದಸ್ಯರು 1GB ಡೇಟಾಗಾಗಿ 50 ರೂ ಪಾವತಿ ಮಾಡಬೇಕಾಗುತ್ತದೆ.

ಇದನ್ನು ನೋಡಿದರೆ ಪ್ರೈಮ್ ಸದಸ್ಯರಾಗುವುದೇ ಸೂಕ್ತ:
ಜಿಯೋ ಹೇಳುವಂತೆ ಗ್ರಾಹಕರಿಗೆ ಉಚಿತ ಸೇವೆಗಳ ಹೆಸರಿನಲ್ಲಿ ಯಾವುದೇ ಮೋಸ ಮಾಡುತ್ತಿಲ್ಲ. ಅಲ್ಲದೇ ಜಿಯೋ ನೀಡುತ್ತಿರುವ ಬೆಲೆಗೆ ಯಾವ ಕಂಪನಿಗಳು ಇಷ್ಟು ಮೊತ್ತದ ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ನೀಡುತ್ತಿಲ್ಲ. ನೀಡಿದ್ದರೂ ಅದಕ್ಕೆ ನೂರಾರು ಷರತ್ತುಗಳನ್ನು ವಿಧಿಸುವುದಲ್ಲದೇ ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳನ್ನು ನೋಡಬಹುದಾಗಿದೆ. ಹಾಗಾಗಿ ಜಿಯೋ ಪ್ರೈಮ್ ಸದಸ್ಯತ್ವ ಪಡೆಯವುದು ಗ್ರಾಹಕರಿಗೆ ಲಾಭವನ್ನೇ ಮಾಡಿಕೊಡಲಿದೆ.

303 ರೂ. ಪ್ಲಾನ್ ಉತ್ತಮವಾಗಿದೆ:
ಜಿಯೋ ತನ್ನ ಪ್ರೈಮ್ ಸದಸ್ಯರಿಗೆ ನೀಡಲು ಮುಂದಾಗಿರುವ ಸೇವೆಯೂ ಬೇರೆಯಾವುದೇ ಕಂಪನಿಗಳು ನೀಡುತ್ತಿಲ್ಲ. 28 ದಿನಗಳ ಅವಧಿಗೆ ಪ್ರತಿ ದಿನವೂ ಯಾವುದೇ ನಿಯವಿಲ್ಲದೇ 1GB ಡೇಟಾವನ್ನು ಹಾಗೂ ಅನಿಯಮಿತ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ. ಅಲ್ಲದೇ ಡೇಟಾ ಸಾಲಲಿಲ್ಲ ಎಂದರೆ 10 ರೂಗೆ 1 GB ಡೇಟಾವನ್ನು ಕೊಡುತ್ತಿದೆ. ಇದು ಗ್ರಾಹಕರಿಗೆ ಹೊರೆ ಆಗುವುದಿಲ್ಲ.

499 ರೂ ಪ್ಲಾನ್ ಬೆಸ್ಟ್:
ಜಿಯೋ ತನ್ನ ಪ್ರೈಮ್ ಸದಸ್ಯರಿಗೆ 10ಕ್ಕೂ ಹೆಚ್ಚಿನ ಆಫರ್‌ಗಳನ್ನು ನೀಡಲು ಮುಂದಾಗಿದ್ದು, ಇದರಲ್ಲಿ ಬೆಸ್ಟ್ ಎಂದರೆ 499 ರೂ ಪ್ಲಾನ್ . ಪ್ರತಿ ನಿತ್ಯ 28 ದಿನಗಳ ಅವಧಿಗೆ 2GB 4G ಡೇಟಾವನ್ನು ನೀಡಲಿದ್ದು, ಜೊತೆಗೆ ಉಚಿತ ಕರೆ ಸೇವೆಯೂ ದೊರೆಯಲಿದ್ದು, ಇದು ಬೇರೆ ಯಾವುದೇ ನೆಟ್‌ವರ್ಕ್ ನಲ್ಲಿಯೂ ಈ ಆಫರ್ ಲಭ್ಯವಿಲ್ಲ ಎಂದು ಹೇಳಬಹುದು.


Click it and Unblock the Notifications








