ಜಿಯೋ ಬಳಕೆದಾರರಿಗೆ ಬಂಪರ್ ಆಫರ್ : ಒಂದು ರೀಚಾರ್ಜ್ನಲ್ಲಿ ಇಷ್ಟೊಂದು ಲಾಭ!
ಜಿಯೋ (Jio) ಇದ್ದರೆ ಮನರಂಜನೆಗೆ ಯಾವುದೇ ಕೊರತೆಯಿಲ್ಲ. ಜಿಯೋ (Jio Offer) ನೀಡುವ ಆಫರ್‌ಗಳನ್ನು ಬೇರೆ ಯಾವ ಟೆಲಿಕಾಂ ಕಂಪನಿಯೂ ನೀಡುವುದಿಲ್ಲ. ಹೀಗಾಗಿ, ದೇಶದಲ್ಲಿ ಜಿಯೋ ಹೆಚ್ಚು ಬಳಕೆದಾರರನ್ನು ಹೊಂದಿದೆ.
ಜಿಯೋ (ರಿಲಯನ್ಸ್ ಜಿಯೋ) ತನ್ನ ಬಳಕೆದಾರರಿಗೆ ಸದಾ ಒಂದಿಲ್ಲೊಂದು ಬಂಪರ್ ಆಫರ್‌ಗಳನ್ನು ನೀಡುತ್ತಾ ಬಂದಿದೆ. ಹೀಗಾಗಿಯೇ, ದಿಲ್ಲಿಯಿಂದಿಡಿದು ಗ್ರಾಮೀಣ ಪ್ರದೇಶದಲ್ಲಿಯೂ ಜಿಯೋ ಬಳೆಕೆದಾರರ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಇದೀಗ ಜಿಯೋ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಹೊಸ ಆಫರ್ ಪರಿಚಯಿಸಿದೆ. ಈ ಆಫರ್‌ಗಳು ಯಾವುದು? ಓಟಿಟಿಯಲ್ಲಿ ಯಾವ ಯಾವ ಚಾನಲ್ ಉಚಿತವಾಗಿ ವೀಕ್ಷಿಸಬಹುದು? ಎಷ್ಟು ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ ಹಾಗೂ ವ್ಯಾಲಿಡಿಟಿ ಎಷ್ಟು ದಿನ ಎಂಬ ನಿಮ್ಮ ಕೂತುಹಲಕ್ಕೆ ಇಲ್ಲಿದೆ ಉತ್ತರ.

ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಸೇರಿದಂತೆ ಹಲವು ಓಟಿಟಿ (OTT) ಚಾನಲ್ ವೀಕ್ಷಣೆ (ಓಟಿಟಿ ಸಬ್ಸ್ಕ್ರಿಪ್ಷನ್ ಫ್ರೀ) ಜಿಯೋ ವಿಶೇಷ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದೆ. ಗ್ರಾಹಕರು ಅನ್ಲಿಮಿಟೆಡ್ (ಅನಿಯಮಿತ) ಕರೆಗಳು, ನಿತ್ಯ 100 ಉಚಿತ ಸಂದೇಶ (SMS),2 ಜಿಬಿ ಡೇಟಾ, ದೈನಂದಿನ ಮಿತಿ ಮುಗಿದ ಬಳಿಕ 64 Kbps ವೇಗದ ಇಂಟರ್ನೆಟ್ ಸೌಲಭ್ಯಗಳನ್ನು ಪಡೆಯಬಹುದು. ಆ ಪ್ಲಾನ್‌ಗಳು ಹೀಗಿವೆ.
398 ರೂ. ಪ್ಲಾನ್: ಕೇವಲ 398 ರೂ. ರೀಚಾರ್ಜ್ ಮಾಡಿದರೇ ಜೀ5(ZEE5), ಡಿಸ್ಕವರಿ+ (Discovery+), ಸನ್ ನೆಕ್ಸ್ಟ್ (Sun NXT), ಜಿಯೋ ಸಿನಿಮಾ (Jio Cinema) ಉಚಿತವಾಗಿ ಬಳಸಬಹುದು. ಈ ಪ್ರಿಪೇಯ್ಡ್ ಯೋಜನೆಯ ವ್ಯಾಲಿಡಿಟಿ 8 ದಿನಗಳು ಮಾತ್ರ. ನಿತ್ಯ 2 ಜಿಬಿ (ಹೈಸ್ಪೀಡ್) ಡೇಟಾ, ದೈನಂದಿನ ಮಿತಿ ಮುಗಿದ ನಂತರ 64 Kbps ವೇಗದ ಇಂಟರ್ನೆಟ್ ಸೌಲಭ್ಯವನ್ನು ಪಡೆಯಬಹುದು. ಅನ್ಲಿಮಿಟೆಡ್ ಕರೆ, ನಿತ್ಯ 100 ಉಚಿತ ಸಂದೇಶದ (SMS) ಜೊತೆಗೆ ಜಿಯೋ ಟಿವಿ ಅಪ್ಲಿಕೇಶನ್‌ನಲ್ಲಿ ಅನೇಕ ಓಟಿಟಿ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತದೆ.
857 ರೂ. ಪ್ಲಾನ್: ಎರಡನೇ ಯೋಜನೆ 857 ರೂ. ಆಗಿದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ನಿಮ್ಮ ಮೊಬೈಲ್ 5ಜಿ ಸಪೋರ್ಟ್ ಮಾಡಿದರೆ ಅನ್ಲಿಮಿಟೆಡ್ 5ಜಿ ಡೇಟಾದ ಲಾಭವನ್ನು ಕೂಡ ಪಡೆಯಬಹುದು. ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ (Jio Cloud) ಬಳಕೆ ಮಾಡಬಹುದು.
1,099 ರೂ. ಪ್ಲಾನ್: ಮೂರನೇ ಯೋಜನೆ 1,099 ರೂ. ಆಗಿದೆ. ಇದು ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದೆ. 2 ಜಿಬಿ ಡೇಟಾ (ಮಿತಿ ಮುಗಿದ ನಂತರ 64 Kbps ಇಂಟರ್ನೆಟ್) ಲಭ್ಯವಿದೆ. ವಿಶೇಷವಾಗಿ ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರರಾಗಬಹುದು. ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ನಂತರ ಜಿಯೋ ಅಪ್ಲಿಕೇಶನ್‌ಗಳನ್ನು ಬಳಸಬಹುದು.
1,198 ರೂ. ಪ್ಲಾನ್: ಇದು ಜಿಯೋ ಬಳಕೆದಾರರಿಗೆ ನೀಡಿರುವ 4ನೇ ಪ್ರಿಪೇಯ್ಡ್ ಯೋಜನೆ. ಇದಕ್ಕೂ 84 ದಿನಗಳ ವ್ಯಾಲಿಡಿಟಿ ಇದೆ. ಜಿಯೋ ಸಿನಿಮಾ ಪ್ರೀಮಿಯಮ್ ಜೊತೆಗೆ 5ಜಿ ಡೆಟಾ ಪಡೆಯಬಹುದು. ಅಲ್ಲದೇ, 3 ತಿಂಗಳವರೆಗೆ ಪ್ರೈಮ್ ವಿಡಿಯೋ ಮೊಬೈಲ್, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್, ಸೋನಿ LIV, ಜೀ5, ಲಯನ್ಸ್ಗೇಟ್ ಪ್ಲೇ (Lionsgate Play) ಸೇರಿದಂತೆ ಇತೆರ ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರರಾಗಬಹುದು.
3,227 ರೂ. ಪ್ಲಾನ್: ಕೊನೆಯದಾಗಿ 3,227 ರೂ.ನ ವಾರ್ಷಿಕ ಸಬ್‌ಸ್ಕ್ರಿಪ್ಶನ್ ಯೋಜನೆ ಇದಾಗಿದೆ. ಈ ಪ್ರಿಪೇಯ್ಡ್ ಯೋಜನೆಯಡಿ ಗ್ರಾಹಕರು ವರ್ಷವಿಡೀ ಲಾಭ ಪಡೆಯಬಹುದು. ಜೊತೆಗೆ ಒಂದು ವರ್ಷದ ವಿಶೇಷ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆ ಲಭ್ಯವಿದೆ. ಅಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಅಪ್ಲಿಕೇಶನ್‌ಗಳನ್ನು ಕೂಡ ಉಚಿತವಾಗಿ ಬಳಕೆ ಮಾಡಬಹುದು.
ಒಟ್ನಲ್ಲಿ, ಇತ್ತೀಚಿನ ದಿನಗಳಲ್ಲಿ ಓಟಿಟಿ ಚಾನಲ್‌ಗಳ ಬೆಲೆ ಹೆಚ್ಚಾಗಿದೆ. ಇದು ಬಳಕೆದಾರರ ಜೇಬಿಗೆ ಕತ್ತರಿ ಹಾಕಿದೆ. ಇದರಿಂದ ಗ್ರಾಹಕರು ಯಾವುದೇ ರೀತಿಯ ಚಂದಾದಾರಿಕೆ ಪಡೆಯಲು ಮನಸ್ಸು ಮಾಡುತ್ತಿಲ್ಲ. ಇದನ್ನು ಮನಗಂಡಿರುವ ಜಿಯೋ, ಈ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು ನಿಮಗೆ ಇಷ್ಟ ಆದರೆ ಕೂಡಲೇ ರೀಚಾರ್ಜ್ ಮಾಡಿ, ಯೋಜನೆಯ ಲಾಭ ಪಡೆಯಬಹುದು.d


Click it and Unblock the Notifications








