Just In
Don't Miss
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖಾಸಗಿ ಟೆಲಿಕಾಂ ಸಂಸ್ಥೆಗಳ ಪ್ಲ್ಯಾನ್‌ಗಳ ಬೆಲೆಯಲ್ಲಿ ಹೆಚ್ಚಳ!
ಇಷ್ಟು ದಿನ ಕಡಿಮೆ ದರದಲ್ಲಿ ಟಾರಿಫ್ ಪ್ಲಾನ್‌ಗಳನ್ನ ಎಂಜಾಯ್ ಮಾಡ್ತಿದ್ದ ಗ್ರಾಹಕರಿಗೆ ಟೆಲಿಕಾಂ ಕಂಪೆನಿಗಳು ಇಂದಿನಿಂದ ದರ ಸಮರದ ಶಾಕ್ ನೀಡಿವೆ. ನಷ್ಟದ ಸುಳಿಯಲ್ಲಿಸಿಲುಕಿರುವ ಟೆಲಿಕಾಂ ಸಂಸ್ಥೆಗಳು ಒಂದೊಂದಾಗಿ ದರ ಏರಿಸಿ ನಷ್ಟ ತುಂಬಿಕೊಳ್ಳುವ ಪ್ರಯತ್ನ ಮಾಡ್ತಿವೆ. ಇನ್ನು ಕೆಲವೇ ವರ್ಷಗಳಲ್ಲಿ ಗ್ರಾಹಕ ಈಗ ಪಡೆಯುತ್ತಿರುವ ಇಂಟರ್‌ನೆಟ್‌ಗೆ ಡೇಟಾಗೆ ಈಗಿನ ದುಪ್ಪಟ್ಟು, ಹಣ ತೆರುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಹೌದು ಈಗಾಗ್ಲೆ ಟೆಲಿಕಾಂ ಕ್ಷೇತ್ರದ ಕಂಪೆನಿಗಳು ನಷ್ಟದ ಸುಳಿಯಲ್ಲಿದ್ದು ಟಾರಿಫ್ ಪ್ಲ್ಯಾನ್ ಏರಿಕೆ ಮಾಡ್ತೇವೆ ಅನ್ನೋ ಸೂಚನೆ ನೀಡಿದ್ವು. ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕಡಿಮ ಧರದಲ್ಲಿ ಟಾರಿಫ್ ಪ್ಲ್ಯಾನ್ ನೀಡಿ ಬಿರುಗಾಳಿ ಎಬ್ಬಿಸಿದ್ದ ಟೆಲಿಕಾಂ ಕ್ಷೇತ್ರದ ದೈತ್ಯ ಜಿಯೋ ಕೂಡ ಡಿಸೆಂಬರ್ 6 ರಿಂದ ಟಾರಿಫ್ ಪ್ಲ್ಯಾನ್ನಲ್ಲಿ ಶೇ. 40 ರಷ್ಟು ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಆಲ್ ಇನ್ ಪ್ಲ್ಯಾನ್‌ಗಳ ಮೂಲಕ ಗ್ರಾಹಕರಿಗೆ 300% ಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ ಅಂತಾ ಜಿಯೋ ಹೇಳಿಕೊಂಡಿದೆ.

ಭಾರತೀಯ ಟೆಲಿಕಾಂ ಉದ್ಯಮವನ್ನು ಉಳಿಸಿಕೊಳುವ ಸಲುವಾಗಿ ಈ ಟ್ಯಾರಿಫ್ ಪ್ಲ್ಯಾನ್ ಹೆಚ್ಚಿಸುವುದು ಅನಿವಾರ್ಯ. ಹೀಗಾಗಿ ರಿಚಾರ್ಜ್ ಪ್ಲ್ಯಾನ್ಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಕಂಪೆನಿ ಮುಂದಾಗಿದೆ ಅಂತಾ ಜಿಯೋ ಹೇಳಿಕೊಂಡಿದೆ. ವೊಡಾಫೋನ್- ಐಡಿಯಾ ಶೇ.42 ರಷ್ಟು ಮತ್ತು ಭಾರ್ತಿ ಏರ್‌ಟೆಲ್ ಕೂಡ ಶೇ.42 ರಷ್ಟು ಸುಂಕ ಹೆಚ್ಚಳವನ್ನು ಈಗಾಗಲೇ ಘೋಷಿಸಿದ್ದು, ಇದರ ಬೆನ್ನಲ್ಲೇ ಇದೀಗ ರಿಲಯನ್ಸ್ ಜಿಯೋ ಕೂಡ 40% ರಷ್ಟು ದರ ಹೆಚ್ಚಿಸಿದೆ, ಈ ಹೊಸ ದರವು ಡಿ.6 ರಿಂದ ಜಾರಿಗೆ ಬರಲಿದೆ.

ವೊಡಾಫೋನ್ ಐಡಿಯಾ ತನ್ನ ಪರಿಷ್ಕೃತ ಪ್ರಿಪೇಯ್ಡ್ ಸುಂಕವನ್ನು ಇದೇ ಡಿ.3ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಿದೆ. ನವೀಕರಿಸಿದ ವೊಡಾಫೋನ್ ಯೋಜನೆಗಳು ರೂ. 149 ಮತ್ತು ರೂ. 2,399. ಇದಲ್ಲದೆ, ಟೆಲ್ಕೊ ಅನಿಯಮಿತ ಪ್ರಿಪೇಯ್ಡ್ ಯೋಜನೆಯನ್ನು 19ರೂ ಗಳಿಗೆ ವೊಡಾಫೋನ್ ಐಡಿಯಾ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ಎರಡು ದಿನಗಳವರೆಗೆ 150MB ಡೇಟಾದಂತಹ ಪ್ರಯೋಜನಗಳನ್ನು ನೀಡಲು ನಿರ್ಧರಿಸಲಾಗಿದೆ.

ಏರ್ಟೆಲ್ ಕೂಡ ಡಿ.1 ರಂದು ಪರಿಷ್ಕೃತ ಸುಂಕ ಯೋಜನೆಗಳನ್ನು ಪ್ರಕಟಿಸಿದ್ದು, ಇದು ಡಿ.3ರಿಂದ ಅನ್ವಯವಾಗಲಿದೆ. ಪರಿಷ್ಕೃತ ಏರ್‌ಟೆಲ್ ಯೋಜನೆಗಳು ರೂ. 19 ಮತ್ತು ರೂ. 1,699. ಹೊಸ ಯೋಜನೆಗಳು ದಿನಕ್ಕೆ 50 ಪೈಸೆಗಳ ವ್ಯಾಪ್ತಿಯಲ್ಲಿ ದಿನಕ್ಕೆ 2.85 ರೂ.ಆಗಲಿದೆ. ಇನ್ನು ಉಚಿತವಾಗಿದ್ದ ವಾಯಿಸ್ ಕಾಲ್‌ಗಳಿಗೆ ಜಿಯೋ ಈಗಾಗಲೇ ಶುಲ್ಕ ವಿಧಿಸಿದೆ. ಇನ್ನು ಇಂಟರ್‌ನೆಟ್ ಸೇವೆಯ ದರ ಸುಮಾರು 42%ದಷ್ಟು ಏರಿಕೆಯಾಗಿದ್ದು ಟಾರಿಫ್ ಪ್ಲ್ಯಾನ್ 40% ರಷ್ಟು ದರ ಹೆಚ್ಚಿಸಿದೆ.

ಹಾಗೇ ನೋಡಿದ್ರೆ ಮೊಬೈಲ್ ಡೇಟಾ ಶುಲ್ಕಗಳು ವಿಶ್ವದ ನಾನಾ ಕಡೆಗಿಂತ ಭಾರತದಲ್ಲಿ ಮಾತ್ರ ಅತ್ಯಂತ ಕಡಿಮೆ ದರದಲ್ಲಿವೆ. ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಡೇಟಾ ಸೇವೆಗಳ ಅಗತ್ಯಕ್ಕೆ ಅನುಸಾರವಾಗಿ ಚಂದಾದಾರರಿಗೆ ಇಷ್ಟು ದಿನ ಕಡಿಮೆ ಬೆಲೆಗೆ ಪ್ರಯೋಜನಗಳನ್ನು ನೀಡಲಾಗುತ್ತಿತ್ತು. ಆದರೆ ಯಾವಾಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಕಂಪನಿಗಳ ಟೆಲಿಕಾಂ ಕಂಪೆನಿಗಳು ಸರಕಾರಕ್ಕೆ ಲೈಸೆನ್ಸ್ ಶುಲ್ಕ ನೀಡಬೇಕು ಅಂತಾ ಹೇಳಿತ್ತು.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190