ಜಿಯೋ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ: ಏ.15ರ ವರೆಗೆ ಅನ್‌ಲಿಮಿಟೆಡ್ ಆಫರ್ ವಿಸ್ತರಣೆ!
ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ, ತನ್ನ ಜಿಯೋ ಅನ್‌ಲಿಮಿಟೆಡ್ ಆಫರ್ ಅನ್ನು ಏಪ್ರಿಲ್ 15, 2025 ರವರೆಗೆ ವಿಸ್ತರಿಸಿದೆ. IPL (Indian Premier League) 2025 ನ ವೀಕ್ಷಕರನ್ನು ಗುರಿಯಾಗಿಸಿಕೊಂಡು, ಜಿಯೋಹಾಟ್‌ಸ್ಟಾರ್ ಜೊತೆಗೆ ಈ ಅನ್‌ಲಿಮಿಟೆಡ್ ಆಫರ್ ಅನ್ನು ಮಾರ್ಚ್ ತಿಂಗಳ ಮಧ್ಯದಲ್ಲಿ ಜಿಯೋ ಘೋಷಿಸಿತ್ತು. ಈ ಕೊಡುಗೆ ಮಾರ್ಚ್ 31 ರವರೆಗೆ ಲಭ್ಯವಿದೆ ಎಂದು ತಿಳಿಸಲಾಗಿತ್ತು, ಆದರೆ ಈಗ ಇದರ ಮಾನ್ಯತೆಯನ್ನು ಏಪ್ರಿಲ್ 15, 2025 ರವರೆಗೆ ವಿಸ್ತರಿಸಲಾಗಿದೆ. ಇದರಿಂದ, ಮುಂದಿನ 15 ದಿನಗಳ ಕಾಲ ಜಿಯೋ ಗ್ರಾಹಕರು ಜಿಯೋ ಹಾಟ್‌ಸ್ಟಾರ್ ಜೊತೆಗೆ ಅನ್‌ಲಿಮಿಟೆಡ್ ಆಫರ್ ಅನ್ನು ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಹಾಗಾದರೆ, ಜಿಯೋ ಗ್ರಾಹಕರಿಗೆ ನೀಡಲಾಗಿರುವ ಈ ಅನ್‌ಲಿಮಿಟೆಡ್ ಆಫರ್ ಏನು ಎಂಬುದನ್ನು ತಿಳಿಯೋಣ ಬನ್ನಿ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ವ್ಯಾಪಕ ಆಕರ್ಷಣೆಯನ್ನು ಬಳಸಿಕೊಳ್ಳಲು ಮುಂದಾಗಿದ್ದ ರಿಲಯನ್ಸ್ ಜಿಯೋ 299 ರೂ. ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ತನ್ನೆಲ್ಲಾ ಗ್ರಾಹಕರಿಗೆ ಅನ್‌ಲಿಮಿಟೆಡ್ ಸೇವೆಗಳ ಜೊತೆಗೆ ಉಚಿತ ಐಪಿಎಲ್ ವೀಕ್ಷಣೆಯನ್ನು ಒದಗಿಸುವುದಾಗಿ ತಿಳಿಸಿತ್ತು. ಜಿಯೋವಿನ ಎಲ್ಲಾ ಗ್ರಾಹಕರು 299 ರೂ. ಮೇಲ್ಪಟ್ಟ ರೀಚಾರ್ಜ್ ಯೋಜನೆಗಳ ಜೊತೆಗೆ 90 ದಿನಗಳ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದು ಅವರಿಗೆ ಹೋಮ್ ಟಿವಿ ಅಥವಾ ಮೊಬೈಲ್ ಸಾಧನದಲ್ಲಿ 4K ರೆಸಲ್ಯೂಶನ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅನುಮತಿಸುವುದಾಗಿ ಜಿಯೋ ಹೇಳಿತ್ತು. ಜಿಯೋಸಿನೆಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಸಂಯೋಜನೆಯ ನಂತರ ಜಿಯೋಹಾಟ್‌ಸ್ಟಾರ್ ಸ್ಟ್ರೀಮಿಂಗ್ ಸೇವೆ ಆರಂಭವಾದ ನಂತರ ಈ ರೀತಿಯ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿತ್ತು.

ಜಿಯೋಹಾಟ್‌ಸ್ಟಾರ್ ಜೊತೆಗಿನ ಈ ಕೊಡುಗೆಯು ಮಾರ್ಚ್ 17 ರಿಂದ ಮಾರ್ಚ್ 31 ರವರೆಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ ಎಂದು ಜಿಯೋ ಹೇಳಿತ್ತು. ಆದರೆ, ಇದೀಗ ಈ ಕೊಡುಗೆಯ ಮಾನ್ಯತೆಯನ್ನು ಏಪ್ರಿಲ್ 15, 2025 ರವರೆಗೆ ವಿಸ್ತರಿಸಲಾಗಿದೆ. ಈ ಕೊಡುಗೆಯನ್ನು ಪಡೆಯಲು, ಅಸ್ತಿತ್ವದಲ್ಲಿರುವ ಜಿಯೋ ಸಿಮ್ ಬಳಕೆದಾರರು ಕನಿಷ್ಠ 299 ರೂ.ಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಹೊಸ ಜಿಯೋ ಸಿಮ್ ಗ್ರಾಹಕರು 299 ರೂ ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೋ ಸಿಮ್ ಪಡೆಯಬೇಕಾಗುತ್ತದೆ. ಆದರೆ, ಬೇಸರದ ವಿಷಯವೆಂದರೆ, ಕಳೆದ ಮಾರ್ಚ್ 17 ರ ಮೊದಲು ರೀಚಾರ್ಜ್ ಮಾಡಿದ ಗ್ರಾಹಕರು ಜಿಯೋವಿನ 100 ರೂ.ಗಳ ಆಡ್-ಆನ್ ಪ್ಯಾಕ್ ತೆಗೆದುಕೊಳ್ಳುವ ಮೂಲಕ ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಯೋ ಹೇಳಿದೆ.
ನೀವು ಈಗಾಗಲೇ ಜಿಯೋ ಗ್ರಾಹಕರಾಗಿದ್ದರೆ ಮತ್ತು ಸಕ್ರೀಯ ರೀಚಾರ್ಜ್ ಪ್ಲಾನ್ ಜೊತೆಗೆ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಹೊಂದಿಲ್ಲದಿದ್ದರೆ, ನಿಮಗಾಗಿ 100 ರೂಪಾಯಿಯ ಹೊಸ ರೀಚಾರ್ಜ್ ಯೋಜನೆ ಲಭ್ಯವಿದೆ. ಈ ಯೋಜನೆಯು ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. 100 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 90 ದಿನಗಳ ಅವಧಿಗೆ ಜಾಹೀರಾತು-ಬೆಂಬಲಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ, ರಿಲಯನ್ಸ್ ಜಿಯೋ ಬಳಕೆದಾರರು ಸ್ಟ್ರೀಮಿಂಗ್ ಸೇವೆಯ ಮಾಸಿಕ ಅಥವಾ ವಾರ್ಷಿಕ ಚಂದಾದಾರರಾಗದೆ ಜಾಹೀರಾತು-ಬೆಂಬಲಿತ ವಿಷಯವನ್ನು ಉಚಿತವಾಗಿ ವೀಕ್ಷಿಸಬಹುದು.
ಈ ಯೋಜನೆಯು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಜಿಯೋ ಗ್ರಾಹಕರು 5 ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಪಡೆಯುತ್ತಾರೆ. ಆದರೆ, ಹೈ-ಸ್ಪೀಡ್ ಡೇಟಾ ಮುಗಿದ ನಂತರ, ಡೇಟಾ ಡೌನ್‌ಲೋಡ್ ವೇಗ 64 ಕೆಬಿಪಿಎಸ್‌ಗೆ ಇಳಿಯುತ್ತದೆ. ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಮೊಬೈಲ್ ಅಥವಾ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಜಿಯೋ ತಿಳಿಸಿದೆ. ಜಿಯೋ ಹಾಟ್‌ಸ್ಟಾರ್‌ನ ಜಾಹೀರಾತು ಬೆಂಬಲಿತ ಯೋಜನೆಯು ಪ್ರಸ್ತುತ ತಿಂಗಳಿಗೆ 149 ರೂ. ಬೆಲೆಯಲ್ಲಿ ಲಭ್ಯವಿದೆ, ಇದರಲ್ಲಿ 720p ರೆಸಲ್ಯೂಶನ್‌ನಲ್ಲಿ ಒಂದು ಮೊಬೈಲ್ ಸಾಧನದಲ್ಲಿ ವಿಷಯ ಸ್ಟ್ರೀಮಿಂಗ್ ನೀಡಲಾಗುತ್ತದೆ. ಉನ್ನತ-ಮಟ್ಟದ ಜಿಯೋಹಾಟ್‌ಸ್ಟಾರ್ ಪ್ರೀಮಿಯಂ ಯೋಜನೆಗೆ ತಿಂಗಳಿಗೆ 299 ರೂ. ಮತ್ತು ವರ್ಷಕ್ಕೆ 1,499 ರೂ. ಪಾವತಿ ಮಾಡಬೇಕಾಗುತ್ತದೆ.
ಹೆಚ್ಚಿನ ಡೇಟಾ ಮತ್ತು ಸಮಾನ ಪ್ರಯೋಜನಗಳನ್ನು ಹೊಂದಿರುವ ರೀಚಾರ್ಜ್ ಆಯ್ಕೆ ಮಾಡಲು ಬಯಸುವವರು ಜಿಯೋ 195 ಪ್ರಿಪೇಯ್ಡ್ ಯೋಜನೆಯನ್ನು ಪರಿಗಣಿಸಬಹುದು. ಕ್ರಿಕೆಟ್ ಡಾಟಾ ಪ್ಯಾಕ್ ಎಂದು ಪರಿಚಯಿಸಲ್ಪಟ್ಟ ಈ ಯೋಜನೆಯು 15 ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಒಳಗೊಂಡಿದೆ, ಆದರೆ ಇತರ ಪ್ರಯೋಜನಗಳು ಒಂದೇ ರೀತಿಯಲ್ಲಿರುತ್ತವೆ. ಧ್ವನಿ ಕರೆ ಮತ್ತು ಎಸ್‌ಎಂಎಸ್‌ಗಳಿಗೆ ಅಗತ್ಯವಿದ್ದರೆ, 949 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಬಹುದು, ಇದು 90 ದಿನಗಳ ಅವಧಿಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಂಎಸ್ ಮತ್ತು ದಿನಕ್ಕೆ 2 ಜಿಬಿ ಡೇಟಾವನ್ನು ಒದಗಿಸುತ್ತದೆ. ಜಿಯೋ ಹಾಟ್‌ಸ್ಟಾರ್‌ನ ಜಾಹೀರಾತು ಬೆಂಬಲಿತ ಯೋಜನೆಯೊಂದಿಗೆ ಹೋಲಿಸಿದರೆ, ಈ ರೀಚಾರ್ಜ್ ಯೋಜನೆಯು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.


Click it and Unblock the Notifications








