ಬಿಗ್ ಶಾಕ್! ಈ ಡೇಟಾ ಪ್ಲಾನ್‌ಗಳಲ್ಲಿ ಭಾರೀ ಬದಲಾವಣೆ.. ಇವರಿಗೆ ನಷ್ಟ, ಯಾರಿಗೆಲ್ಲ ಲಾಭ?
ಜಿಯೋ ಗ್ರಾಹಕರಿಗೆ ಬಿಗ್ ಶಾಕ್! ಈ ಪ್ಲಾನ್‌ಗಳ ವ್ಯಾಲಿಡಿಟಿಯಲ್ಲಿ ಭಾರೀ ಬದಲಾವಣೆ. ಹೌದು, ರಿಲಯನ್ಸ್ ಜಿಯೋ (Reliance Jio) ಮತ್ತೊಮ್ಮೆ ತನ್ನ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದೆ. ಕಂಪನಿಯು ಕೆಲವು ದಿನಗಳ ಹಿಂದೆ ತನ್ನ ಮೌಲ್ಯ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ತನ್ನ ಬಳಕೆದಾರರನ್ನು ಕೆರಳಿಸಿತ್ತು. ಇದೀಗ, ಜಿಯೋ ತನ್ನ ಗ್ರಾಹಕರಿಗೆ 69 ರೂ. ಮತ್ತು 139 ರೂ.ಗಳ ಡೇಟಾ ಪ್ರಿಪೇಯ್ಡ್ ಯೋಜನೆಗಳ ವ್ಯಾಲಿಡಿಟಿಯನ್ನು ಬದಲಾಯಿಸಿದೆ. ಗ್ರಾಹಕರ ಡೇಟಾ ಖಾಲಿಯಾದಾಗ ಬಳಸಲಾಗುವ ಡೇಟಾ ಆಡ್ ಆನ್ ಪ್ಯಾಕ್‌ನಲ್ಲಿ ಈ ಮಹತ್ವದ ಬದಲಾವಣೆ ಮಾಡಲಾಗಿದೆ. ಬನ್ನಿ, ನೀವು ಈ ಯೋಜನೆಗಳಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು ತಿಳಿಯೋಣ.
ಬಳಕೆದಾರರು ಈ ಪ್ಲಾನ್‌ಗಳಲ್ಲಿ ಮೊದಲು, ಸಕ್ರಿಯ ಯೋಜನೆಯಂತೆಯೇ ಅದೇ ವ್ಯಾಲಿಡಿಟಿ ಪಡೆಯುತ್ತಿದ್ದರು. ಆದರೆ, ಪ್ರಸ್ತುತ ಈ ಪ್ಲಾನ್‌ಗಳಲ್ಲಿ ಸೀಮಿತ ವ್ಯಾಲಿಡಿಟಿ ನೀಡಲಾಗುತ್ತಿದೆ. ಅಂದರೆ, ಜಿಯೋ ಗ್ರಾಹಕರ ಮೂಲ ಯೋಜನೆಯ ವ್ಯಾಲಿಡಿಟಿ 84 ದಿನ ಆಗಿಳಾಗಿದ್ದರೆ, ಈ ಡೇಟಾ ಬೂಸ್ಟರ್ ಯೋಜನೆಗಳು 84 ದಿನಗಳವರೆಗೆ ಸಕ್ರಿಯವಾಗಿರುತ್ತವೆ. ಆದರೆ, ಜಿಯೋ ಈಗ ಡೇಟಾ ಬೂಸ್ಟರ್ ಯೋಜನೆಗಳ ವ್ಯಾಲಿಡಿಟಿ ಬದಲಾಯಿಸಿದೆ. ಈ ಪ್ಲಾನ್‌ಗಳಿಗೆ ಸ್ವತಂತ್ರ ವ್ಯಾಲಿಡಿಟಿ ನೀಡಿದೆ. ಇನ್ಮುಂದೆ ಈ ಯೋಜನೆಗಳ ವ್ಯಾಲಿಡಿಟಿ ಕೆಲವು ದಿನಗಳವರೆಗೆ ಮಾತ್ರ ಇರುತ್ತದೆ.

ಈ ಡೇಟಾ ಪ್ಲಾನ್‌ಗಳ ವ್ಯಾಲಿಡಿಟಿ ಬದಲಾವಣೆ
ಜಿಯೋ 69 ರೂ. ಡೇಟಾ ಪ್ಲಾನ್
ಜಿಯೋ 69 ರೂ. ಡೇಟಾ ಪ್ಲಾನ್ (Jio Rs 69 data plan) 6GB ಡೇಟಾದೊಂದಿಗೆ ಬರುತ್ತದೆ. ಮತ್ತು ಪ್ರಸ್ತುತ ಇದರ ವ್ಯಾಲಿಡಿಟಿ ಕೇವಲ 7 ದಿನಗಳು. ಬಳಕೆದಾರರು ಜಿಯೋದ ಮೂಲ ಸಕ್ರಿಯ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದ್ದರೆ ಮಾತ್ರ, ಈ ಯೋಜನೆ ಕಾರ್ಯನಿರ್ವಹಿಸುತ್ತದೆ.
ಜಿಯೋ 139 ರೂ. ಡೇಟಾ ಪ್ಲಾನ್
ಜಿಯೋ 139 ರೂ. ಡೇಟಾ ಪ್ಲಾನ್ (Jio Rs 139 data plan) 12GB ಡೇಟಾದೊಂದಿಗೆ ಬರುತ್ತದೆ. ಈ ಪ್ಲಾನ್‌ನ ವ್ಯಾಲಿಡಿಟಿ 69 ರೂ. ಯೋಜನೆಯಂತೆಯೇ ಇರುತ್ತದೆ. ಅಂದರೆ 7 ದಿನಗಳ ವ್ಯಾಲಿಡಿಟಿ. ಜಿಯೋದ ಮೂಲ ಸಕ್ರಿಯ ಯೋಜನೆಯೂ ಅಗತ್ಯವಿದ್ದರೆ ಮಾತ್ರ, ಈ ಯೋಜನೆ ಕಾರ್ಯನಿರ್ವಹಿಸುತ್ತದೆ.
ವಿಶೇಷವೆಂದರೆ, ಜಿಯೋದ ಈ ಡೇಟಾ ಬೂಸ್ಟರ್ ಯೋಜನೆಗಳಲ್ಲಿ, ಬಳಕೆದಾರರ ಮೂಲ ಯೋಜನೆಯಂತೆಯೇ ವ್ಯಾಲಿಡಿಟಿ ನೀಡುವ ಎರಡು ಡೇಟಾ ವೋಚರ್‌ಗಳು ಮಾತ್ರ ಇದ್ದವು. ಆದಾಗ್ಯೂ, ಪ್ರಸ್ತುತ ಗ್ರಾಹಕರು ಈ ಪ್ಲಾನ್‌ಗಳಲ್ಲಿ ನೀಡಲಾದ ಡೇಟಾವನ್ನು 7 ದಿನಗಳಲ್ಲಿ ಬಳಸಬೇಕಾಗುತ್ತದೆ. ಇದನ್ನು ಮಾಡದಿದ್ದರೆ ಡೇಟಾ ಸ್ವಯಂಚಾಲಿತವಾಗಿ ಕಳೆದುಹೋಗುತ್ತದೆ.
ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗಾಗಿ 448 ರೂ. ಮತ್ತು 1,748 ರೂ.ಗಳ ಎರಡು ಹೊಸ ವಾಯ್ಸ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ, ಇದರೊಂದಿಗೆ 479 ರೂ.ಗಳ ಯೋಜನೆಯನ್ನು ತೆಗೆದುಹಾಕಲಾಗಿದೆ. ಈ ಜಿಯೋ ಪ್ಲಾನ್ ಸ್ಥಗಿತಗೊಳಿಸಿದ್ದಕ್ಕೆ ಜಿಯೋ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಳಕೆದಾರರು ತಮ್ಮ ಎಕ್ಸ್ (X) ಖಾತೆಯಲ್ಲಿ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಬಳಕೆದಾರರು ಜಿಯೋವನ್ನು ಬಹಿಷ್ಕರಿಸುವ ಮತ್ತು ಬೇರೆ ಸಿಮ್‌ಗೆ ಪೋರ್ಟ್ ಆಗುವ ಬಗ್ಗೆಯೂ ಮಾತನಾಡುತ್ತಿದ್ದಾರೆ.
479 ರೂ. ಯೋಜನೆ ಮರಳಿ ಬರುತ್ತಾ?
ಕಂಪನಿಯ ಮೌಲ್ಯ ವಿಭಾಗದಲ್ಲಿ ಜಿಯೋ 479 ರೂ. ಯೋಜನೆಯನ್ನು ಪಟ್ಟಿ ಮಾಡಲಾಗಿದೆ. ಈ ಯೋಜನೆಯೊಂದಿಗೆ, ಕಂಪನಿಯು 189 ರೂ. ಮತ್ತು 1,899 ರೂ. ಪ್ಲಾನ್ ಅನ್ನು ತೆಗೆದುಹಾಕಿತ್ತು. ಆದರೆ, ಇತ್ತೀಚೆfಎ 189 ರೂ.ಗಳ ಯೋಜನೆಯನ್ನು ಮತ್ತೆ ಪ್ರಾರಂಭಿಸಿದೆ. ಪ್ರಸ್ತುತ, ಕಂಪನಿಯು 189 ರೂ. ಯೋಜನೆಯಂತೆಯೇ 479 ರೂ. ಯೋಜನೆಯನ್ನು ಪುನಃ ತರುತ್ತದೆಯೇ ಅಥವಾ ಇಲ್ಲವೇ? ಎಂಬುದು ಜಿಯೋ ಬಳಕೆದಾರರ ಪ್ರಶ್ನೆಯಾಗಿದೆ. ಮುಖೇಶ್ ಅಂಬಾನಿ ಅವರು ಗ್ರಾಹಕರಿಗೆ ಸಿಹಿಸುದ್ದಿ ನೀಡುತ್ತಾರೆಯೇ? ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications








