Home
ಸುದ್ದಿಜಾಲ

Airtel vs Jio vs Vi : ಪ್ರತಿದಿನ 3GB ಡೇಟಾ ಪ್ರಯೋಜನ ನೀಡುವ ಪ್ಲ್ಯಾನ್‌ಗಳು!

ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್, ಜಿಯೋ ಮತ್ತು ವಿ ಹೊಸ ದೈನಂದಿನ ಡೇಟಾ ಮಿತಿ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಪ್ರೀಪೇಯ್ಡ್‌ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸೇರಿವೆ.ಇನ್ನು ಜಿಯೋ 15, 30, 60, 90 ಮತ್ತು 365 ದಿನಗಳ ಯೋಜನೆಗಳನ್ನು ನೀಡಿದರೆ, ಏರ್‌ಟೆಲ್ ಮತ್ತು ವಿ 60 ದಿನಗಳ ಮಾನ್ಯತೆ ಹೊಂದಿರುವ ಅಧಿಕ ಡೇಟಾ ಯೋಜನೆಗಳನ್ನು ಪ್ರಾರಂಭಿಸಿವೆ.

ಜಿಯೋ

ಹೌದು, ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಸಂಸ್ಥೆಗಳು ಅಧಿಕ ಡೇಟಾ ಪ್ರಯೋಜನ ನೀಡುವ ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿವೆ. ಇದರಲ್ಲಿ ಹೆಚ್ಚಿನ ಪ್ರಿಪೇಯ್ಡ್ ಬಳಕೆದಾರರು 3GB ದೈನಂದಿನ ಡೇಟಾ ಯೋಜನೆಗಳನ್ನು ಆರಿಸಿಕೊಳ್ಳಬಹುದು. ಈ ಯೋಜನೆಗಳು 28 ದಿನಗಳು, 56 ದಿನಗಳು ಮತ್ತು 84 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆಗಳು ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಒಳಗೊಂಡಿವೆ. ಹಾಗಾದ್ರೆ ಏರ್ಟೆಲ್ ವರ್ಸಸ್ ಜಿಯೋ ವರ್ಸಸ್ ವಿ ಟೆಲಿಕಾಂಗಳಲ್ಲಿ 28 ದಿನಗಳ ಮಾನ್ಯತೆ ಮತ್ತು ದಿನನಿತ್ಯ 3GB ಡೇಟಾ ಪ್ರಯೋಜನ ನೀಡುವ ಪ್ಲ್ಯಾನ್‌ಗಳಲ್ಲಿ ಯಾವುದು ಉತ್ತಮ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ 349ರೂ, ಪ್ರಿಪೇಯ್ಡ್ ಯೋಜನೆ

ಜಿಯೋ 349ರೂ, ಪ್ರಿಪೇಯ್ಡ್ ಯೋಜನೆ

ಈ ಯೋಜನೆಯು ದಿನಕ್ಕೆ 3GB ಡೇಟಾ ಮತ್ತು ಅನಿಯಮಿತ ಆನ್-ನೆಟ್ ಕರೆ ಪ್ರಯೋಜನಗಳು ಮತ್ತು 28 ದಿನಗಳ ಮಾನ್ಯತೆ ಹಾಗೂ ಅನಿಯಮಿತ ದೇಶೀಯ ಕರೆಗಳೊಂದಿಗೆ ಬರುತ್ತದೆ. ಅಲ್ಲದೆ ಈ ಪ್ಯಾಕ್ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ನೀಡುತ್ತದೆ.

ಏರ್‌ಟೆಲ್ 398ರೂ, ಪ್ರಿಪೇಯ್ಡ್ ಯೋಜನೆ

ಏರ್‌ಟೆಲ್ 398ರೂ, ಪ್ರಿಪೇಯ್ಡ್ ಯೋಜನೆ

ಈ ಯೋಜನೆಯು ದಿನಕ್ಕೆ 3GB ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಹೆಚ್ಚುವರಿ ಪ್ರಯೋಜನಗಳಲ್ಲಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಸೇರಿದೆ. ಗ್ರಾಹಕರಿಗೆ ಉಚಿತ ಹಲೋ ಟ್ಯೂನ್ಸ್ ಮತ್ತು ಫಾಸ್ಟ್ಯಾಗ್ ವಹಿವಾಟಿನಲ್ಲಿ 150 ರೂ.ಕ್ಯಾಶ್‌ಬ್ಯಾಕ್‌ ಕೂಡ ನೀಡಲಿದೆ.

ವಿ 401ರೂ, ಪ್ರಿಪೇಯ್ಡ್ ಯೋಜನೆ

ವಿ 401ರೂ, ಪ್ರಿಪೇಯ್ಡ್ ಯೋಜನೆ

Vi ನ ಈ ಪ್ರಿಪೇಯ್ಡ್ ಯೋಜನೆ 33GB ದೈನಂದಿನ ಡೇಟಾವನ್ನು 28 ದಿನಗಳವರೆಗೆ ನೀಡುತ್ತದೆ ಮತ್ತು ದಿನಕ್ಕೆ 100 SMS ನೀಡುತ್ತದೆ. ಇದು ಡಿಸ್ನಿ + ಹಾಟ್‌ಸ್ಟಾರ್‌ಗೆ 16GB ಹೆಚ್ಚುವರಿ ಡೇಟಾ ಮತ್ತು 1 ವರ್ಷದ ವಿಐಪಿ ಚಂದಾದಾರಿಕೆಯನ್ನು ನೀಡುತ್ತದೆ. ಇದು ಹೈಸ್ಪೀಡ್ ರಾತ್ರಿಯ ಇಂಟರ್ನೆಟ್, ವಾರಾಂತ್ಯದ ರೋಲ್‌ಓವರ್ ಡೇಟಾ ಲಾಭ, ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.

ಜಿಯೋ  401ರೂ ಪ್ರಿಪೇಯ್ಡ್ ಯೋಜನೆ

ಜಿಯೋ 401ರೂ ಪ್ರಿಪೇಯ್ಡ್ ಯೋಜನೆ

ಈ ಯೋಜನೆಯು 28 ದಿನಗಳವರೆಗೆ 903GB ಡೇಟಾವನ್ನು ನೀಡುತ್ತದೆ, ಇದು ಹೆಚ್ಚುವರಿ 6GB ಡೇಟಾದೊಂದಿಗೆ ದಿನಕ್ಕೆ 33GB ಡೇಟಾಗೆ ಬರುತ್ತದೆ. ಈ ಯೋಜನೆಯು ಜಿಯೋದಿಂದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ದೇಶೀಯ ಕರೆಗಳನ್ನು ತರುತ್ತದೆ. ಈ ಯೋಜನೆಯು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ 1 ವರ್ಷದ ವಿಐಪಿ ಚಂದಾದಾರಿಕೆಯನ್ನು ನೀಡುತ್ತದೆ.

Vi 405ರೂ, ಪ್ರಿಪೇಯ್ಡ್ ಯೋಜನೆ

Vi 405ರೂ, ಪ್ರಿಪೇಯ್ಡ್ ಯೋಜನೆ

ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ 90GB ಡೇಟಾವನ್ನು ನೀಡುತ್ತದೆ ಅಂದರೆ ಹೆಚ್ಚುವರಿ 6GB ಯೊಂದಿಗೆ ದಿನಕ್ಕೆ 3GB ಡೇಟಾ ನೀಡಲಿದೆ. ಈ ಯೋಜನೆಯು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಬರುತ್ತದೆ. ಈ ಯೋಜನೆಯು ZEE5 ಪ್ರೀಮಿಯಂಗೆ 1 ವರ್ಷದ ಪ್ರವೇಶವನ್ನು ನೀಡುತ್ತದೆ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ. ಟೆಲ್ಕೋಗಳು 56 ದಿನಗಳು ಮತ್ತು 94 ದಿನಗಳ ಮಾನ್ಯತೆಯೊಂದಿಗೆ 3GB ದೈನಂದಿನ ಡೇಟಾ ಯೋಜನೆಗಳನ್ನು ಸಹ ನೀಡುತ್ತಿವೆ.

56 ದಿನಗಳ ಮಾನ್ಯತೆ ಹೊಂದಿರುವ ಪ್ಲ್ಯಾನ್‌ಗಳು

56 ದಿನಗಳ ಮಾನ್ಯತೆ ಹೊಂದಿರುವ ಪ್ಲ್ಯಾನ್‌ಗಳು

ಏರ್‌ಟೆಲ್ 568 ರೂ.ಗಳ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು 56 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಇದು 3 ಜಿಬಿ ದೈನಂದಿನ ಡೇಟಾ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ಗೆ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಗಳ ಇತರ ಪ್ರಯೋಜನಗಳಲ್ಲಿ ಉಚಿತ ಹೆಲೋಟೂನ್‌ಗಳು, ವಿಂಕ್ ಮ್ಯೂಸಿಕ್, ಅಪೊಲೊ 24 | 7 ಆರೈಕೆ ಮತ್ತು ಫಾಸ್ಟ್ಯಾಗ್‌ಗೆ ಉಚಿತ ಪ್ರವೇಶವಿದೆ.

ಯೋಜನೆಯನ್ನು

ಇನ್ನು 56 ದಿನಗಳ ಮಾನ್ಯತೆಯೊಂದಿಗೆ 3GB ದೈನಂದಿನ ಡೇಟಾವನ್ನು ನೀಡುವ ಯಾವುದೇ ಪ್ರಿಪೇಯ್ಡ್ ಯೋಜನೆಯನ್ನು ಜಿಯೋ ಹೊಂದಿಲ್ಲ. ಆದರೆ ವಿ ಟೆಲಿಕಾಂ 601 ರೂ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತದೆ. ಇದು 3GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳು ಹೆಚ್ಚಿನ ವೇಗದ ರಾತ್ರಿಯ ಡೇಟಾ, ವಾರಾಂತ್ಯದ ರೋಲ್‌ಓವರ್ ಲಾಭ ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ಒಳಗೊಂಡಿವೆ.

Best Mobiles in India

English summary
Airtel, Jio and Vi offer 3GB daily data with unlimited calling and SMS benefits.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+