ಹೆಚ್ಚುವರಿ ಡೇಟಾ ಬೇಕಿದ್ದಾಗ ಈ ಡೇಟಾ ಬೂಸ್ಟರ್ ಪ್ಲಾನ್‌ಗಳು ಸಹಾಯಕ
ಪ್ರಸ್ತುತ ದಿನಗಳಲ್ಲಿ ಅಧಿಕ ಡೇಟಾ ಪ್ರಯೋಜನ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಟೆಲಿಕಾಂ ಕಂಪೆನಿಗಳು ಬಳಕೆದಾರರ ಅನುಕೂಲಕ್ಕಾಗಿ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಆದರೂ ಕೂಡ ಕೆಲವು ಸಂದರ್ಭದಲ್ಲಿ ನಿಮ್ಮ ಡೇಟಾ ಪ್ಲಾನ್ ಖಾಲೆಯಾಗಿಬಿಡುತ್ತದೆ. ಇಂತಹ ಸನ್ನಿವೇಶದಲ್ಲಿ ನಿಮಗೆ ಡೇಟಾ ಪ್ಯಾಕ್ ಪ್ಲಾನ್‌ಗಳು ಅನುಕೂಲವಾಗಲಿವೆ. ಇದಕ್ಕಾಗಿಯೇ ಏರ್‌ಟೆಲ್, ವಿ, ಜಿಯೋ ಟೆಲಿಕಾಂಗಳು ಹಲವು ಆಯ್ಕೆಯ ಡೇಟಾ ಬೂಸ್ಟರ್ ಪ್ಲಾನ್‌ಗಳನ್ನು ಪರಿಚಯಿಸಿವೆ.

ಹೌದು, ನಿಮ್ಮ ಪ್ರಿಪೇಯ್ಡ್ ಪ್ಲಾನ್‌ನಲ್ಲಿರುವ ಡೇಟಾ ಖಾಲಿಯಾದಾಗ ಡೇಟಾ ಪ್ಯಾಕ್ ರೀಚಾರ್ಜ್ ಮಾಡಿಕೊಳ್ಳುವುದು ಸಾಮಾನ್ಯ. ಡೇಟಾ ಪ್ಯಾಕ್‌ಗಳು ನಿಮಗೆ ಹೆಚ್ಚುವರಿ ಡೇಟಾದ ಅವಶ್ಯಕತೆಯನ್ನು ಪೂರೈಸುತ್ತವೆ. ಇಂತಹ ಪ್ಲಾನ್‌ಗಳನ್ನ ಡೇಟಾ ಬೂಸ್ಟರ್ ಪ್ಲಾನ್ ಎಂದು ಕರೆಯಲಾಗುತ್ತದೆ. ಇಂತಹ ಡೇಟಾ ಬೂಸ್ಟರ್ ಪ್ಲಾನ್‌ಗಳಲ್ಲು ಹಲವು ಆಯ್ಕೆಗಳನ್ನು ಕಾಣಬಹುದಾಗಿದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಡೇಟಾ ಬೂಸ್ಟರ್ ಪ್ಯಾಕ್ ಅನ್ನು ಆಯ್ಕೆ ಮಾಡಬಹುದು. ಹಾಗಾದ್ರೆ ನಿಮ್ಮ ಡೇಟಾ ಅವಶ್ಯಕತೆಯನ್ನು ಪೂರೈಸುವ ಡೇಟಾ ಬೂಸ್ಟರ್ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಡೇಟಾ ಬೂಸ್ಟರ್ ಪ್ಲಾನ್‌ಗಳು
ಏರ್‌ಟೆಲ್ ಟೆಲಿಕಾಂ ತನ್ ಬಳಕೆದಾರರಿಗೆ ಹಲವು ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ಇದರಲ್ಲಿ 58ರೂ.ಬೆಲೆಯ ಡೇಟಾ ಬೂಸ್ಟರ್ ಪ್ಲಾನ್ ಕೂಡ ಒಂದಾಗಿದೆ. ಈ ಪ್ಲಾನ್‌ನಲ್ಲಿ ನೀವು 3GB ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಇನ್ನು 98ರೂ.ಗಳ ಡೇಟಾ ಬೂಸ್ಟರ್ ಪ್ಲಾನ್‌ನಲ್ಲಿ ನಿಮಗೆ 5GB ಡೇಟಾ ಸಿಗಲಿದೆ. ಜೊತೆಗೆ ವಿಂಕ್ ಮ್ಯೂಸಿಕ್ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಪಡೆಯಬಹುದಾಗಿದೆ. ಇದಲ್ಲದೆ ಏರ್‌ಟೆಲ್ ಟೆಲಿಕಾಂನಲ್ಲಿ 108ರೂ.ಬೆಲೆಯ 6GB ಡೇಟಾ ಬೂಸ್ಟರ್ ಪ್ಲಾನ್ ಸಹ ಪಡೆದುಕೊಳ್ಳಬಹುದಾಗಿದೆ. ಇನ್ನು ನಿಮಗೆ ಹೆಚ್ಚಿನ ಡೇಟಾ ಅವಶ್ಯಕತೆ ಇದ್ದರೆ ಏರ್‌ಟೆಲ್ 118ರೂ.ಗಳ ಡೇಟಾ ಬೂಸ್ಟರ್ ಪ್ಲಾನ್‌ನಲ್ಲಿ 12GB ಡೇಟಾ ಪಡೆಯಬಹುದು. ಜೊತೆಗೆ 148ರೂ. ಬೆಲೆಯ 15GB ಡೇಟಾ ಬೂಸ್ಟರ್ ಪ್ಲಾನ್ ಕೂಡ ಲಭ್ಯವಿದೆ.

ಜಿಯೋ ಡೇಟಾ ಬೂಸ್ಟರ್ ಪ್ಲಾನ್‌ಗಳು
ಜಿಯೋ ಟೆಲಿಕಾಂ ನಿಮಗೆ ನಾಲ್ಕು ಡೇಟಾ ಬೂಸ್ಟರ್ ಪ್ಲಾನ್‌ಗಳನ್ನು ನೀಡುತ್ತದೆ. ಇದರಲ್ಲಿ 15ರೂ. ಪ್ಲಾನ್‌ನಲ್ಲಿ 1GB ಡೇಟಾವನ್ನು, 25ರೂ.ಗಳಿಗೆ 2GB ಡೇಟಾವನ್ನು, 61 ಮತ್ತು 121ರೂ.ಗಳಿಗೆ 12GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಜಿಯೋ ಟೆಲಿಕಾಂನಲ್ಲಿ 181ರೂ.ಬೆಲೆಯಲ್ಲಿ 30GB ಡೇಟಾವನ್ನು, 241ರೂ.ಬೆಲೆಯಲ್ಲಿ 40GB ಡೇಟಾವನ್ನು ಮತ್ತು 301ರೂ.ಬೆಲೆಯಲ್ಲಿ 50GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಮೈಜಿಯೋ ಅಪ್ಲಿಕೇಶನ್‌ನಲ್ಲಿನ 'ನೋ ಡೈಲಿ ಲಿಮಿಟ್' ಟ್ಯಾಬ್‌ನಲ್ಲಿ 30 ದಿನಗಳವರೆಗೆ 25GB ಡೇಟಾವನ್ನು ನೀಡುವ 296ರೂ. ಬೆಲೆಯ ಡೇಟಾ ಬೂಸ್ಟರ್ ಪ್ಲಾನ್ ಕೂಡ ಲಭ್ಯವಿದೆ.

ವೊಡಾಫೋನ್ ಐಡಿಯಾ ಡೇಟಾ ಬೂಸ್ಟರ್ ಪ್ಲಾನ್‌ಗಳು
ವೋಡಾಫೋನ್ ಐಡಿಯಾ ಟೆಲಿಕಾಂ ಕೂಡ ತನ್ನ ಬಳಕೆದಾರರಿಗೆ ಹಲವು ಆಯ್ಕೆಯ ಡೇಟಾ ಬೂಸ್ಟರ್ ಪ್ಲಾನ್‌ಗಳನ್ನು ನೀಡುತ್ತಿದೆ. ಆದರೆ ಈ ಪ್ಲಾನ್‌ಗಳು ನೀವು ಈಗಾಗಲೇ ಹೊಂದಿರುವ ಪ್ರಿಪೇಯ್ಡ್ ಪ್ಲಾನ್‌ಗಳ ಮಾನ್ಯತೆಗೆ ಹೊಂದಿಕೆಯಾಗುವುದಿಲ್ಲ. ಬದಲಿಗೆ, ತಮ್ಮದೇ ಆದ ಮಾನ್ಯತೆಯನ್ನು ಹೊಂದಿರುತ್ತವೆ. ಇದರಲ್ಲಿ 19ರೂ. ಪ್ಲಾನ್ 1GB ಡೇಟಾ ಪ್ರಯೋಜನ ನೀಡಲಿದ್ದು, 24 ಗಂಟೆಗಳವರೆಗೆ ಮಾನ್ಯವಾಗಿರುತ್ತದೆ. 48 ರೂ. ಬೆಲೆಯ ಡೇಟಾ ಬೂಸ್ಟರ್ ಪ್ಲಾನ್ 2GB ಡೇಟಾವನ್ನು ನೀಡಲಿದ್ದು 21 ದಿನಗಳ ಮಾನ್ಯತೆ ಹೊಂದಿದೆ. 58ರೂ. ಬೆಲೆಯ ಪ್ಲಾನ್ ನಿಮಗೆ 3GB ಡೇಟಾವನ್ನು ನೀಡಲಿದ್ದು 28 ದಿನಗಳವರೆಗೆ ಮಾನ್ಯತೆ ನೀಡಲಿದೆ. ಇದಲ್ಲದೆ 98ರೂ ಬೆಲೆಗೆ 9GB ಡೇಟಾ ನೀಡಲಿದ್ದು 21 ದಿನಗಳ ಮಾನ್ಯತೆ ಪಡೆದುಕೊಂಡಿದೆ. ಇದರೊಂದಿಗೆ ಇನ್ನು ಹೆಚ್ಚಿನ ಡೇಟಾ ಬಯಸೋರಿಗೆ 118ರೂ ಬೆಲೆಯ ಪ್ಲಾನ್ ಲಭ್ಯವಿದೆ. ಈ ಪ್ಲಾನ್ 12GB ಡೇಟಾವನ್ನು ನೀಡಲಿದ್ದು 28 ದಿನಗಳ ಮಾನ್ಯತೆ ಹೊಂದಿದೆ. 298ರೂ. ಬೆಲೆಯ ಪ್ಲಾನ್ 28 ದಿನಗಳವರೆಗೆ 50Gb ಡೇಟಾವನ್ನು ನೀಡಲಿದೆ. ಇದಲ್ಲದೆ ನಿಮಗೆ ಪ್ರತಿನಿತ್ಯ 2GB ಡೇಟಾ ಪ್ರಯೋಜನ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳ ಬಗ್ಗೆ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಜಿಯೋ ಟೆಲಿಕಾಂ 249ರೂ ಪ್ರಿಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂ 249ರೂ ಪ್ರಿಪೇಯ್ಡ್ ಪ್ಲಾನ್ 23 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಸಮಯದಲ್ಲಿ ಪ್ರತಿನಿತ್ಯ 2GBಡೇಟಾ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಜಿಯೋ ಟು ಜಿಯೋ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನವನ್ನು ಸಹ ನೀಡಲಿದೆ. ಹಾಗೆಯೇ ಪ್ರತಿದಿನ 100ಎಸ್‌ಎಮ್‌ಎಸ್ ಸೇವೆ ಕೂಡ ಲಭ್ಯವಿದೆ.
ಜಿಯೋ 299ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಸಂದರ್ಭದಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ನಂತಹ ಸೇವೆಗಳು ಸಹ ಲಭ್ಯ.

ಏರ್‌ಟೆಲ್ 359ರೂ. ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 359ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ದೈನಂದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.
ಏರ್‌ಟೆಲ್ 549ರೂ. ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 549ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ದೈನಂದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.

ವಿ ಟೆಲಿಕಾಂ 359ರೂ. ಪ್ರಿಪೇಯ್ಡ್ ಪ್ಲಾನ್
ವಿ ಟೆಲಿಕಾಂ 359ರೂ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿನಿತ್ಯ 2GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ 100 ಎಸ್‌ಎಂಎಸ್ ಪ್ರಯೋಜನ ಕೂಡ ಲಭ್ಯವಿದೆ. ಇದಲ್ಲದೆ ವಿ ಮೂವಿಸ್, ಲೈವ್‌ಟಿವಿ ಯಂತಹ ಪ್ರಯೋಜನಗಳನ್ನು ನೀಡಲಿದೆ.
ವಿ ಟೆಲಿಕಾಂ 539ರೂ. ಪ್ರೀಪೇಯ್ಡ್‌ಪ್ಲಾನ್
ವಿ ಟೆಲಿಕಾಂ 539ರೂ. ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ.


Click it and Unblock the Notifications








