Home
ಸುದ್ದಿಜಾಲ

ಡೈಲಿ 2GB ಡೇಟಾ ಬಯಸೋರಿಗೆ ಯಾವ ಪ್ಲಾನ್‌ ಬೆಸ್ಟ್‌! ಇಲ್ಲಿದೆ ಮಾಹಿತಿ!

ಭಾರತದಲ್ಲಿ ಏರ್‌ಟೆಲ್‌, ಇಯೋ, ವಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಗ್ರಾಹಕರ ಅನುಕೂಲಕ್ಕಾಗಿ ದೀರ್ಘಾವಧಿ ಮಾನ್ಯತೆ ಮಾತ್ರವಲ್ಲದೆ ಅಗ್ಗದ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಕೂಡ ಪರಿಚಯಿಸಿವೆ. ಇದರಲ್ಲಿ ದೈನಂದಿನ 2GB ಡೇಟಾ ಪ್ರಯೋಜನ ನೀಡುವ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ಹೌದು, ದೈನಂದಿನ 2GB ಡೇಟಾ ಹಾಗೂ ಅನಿಯಮಿತ ಕರೆ ಪ್ರಯೋಜನ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳು ಹೆಚ್ಚು ಗಮನಸೆಳೆದಿವೆ. ಹೆಚ್ಚಿನ ಡೇಟಾ ಬಯಸೋರಿಗೆ ಈ ಪ್ಲಾನ್‌ಗಳು ಸೂಕ್ತವಾಗಿವೆ. ಇದೇ ಕಾರಣಕ್ಕೆ ಟೆಲಿಕಾಂ ಕಂಪೆನಿಗಳು ಕೂಡ ಹಲವು ಪ್ಲಾನ್‌ಗಳನ್ನು ದೈನಂದಿನ 2GB ಡೇಟಾ ಪ್ರಯೋಜನವನ್ನು ಕಲ್ಪಿಸಿವೆ. ಹಾಗಾದ್ರೆ ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂಗಳು ನೀಡುತ್ತಿರುವ ದೈನಂದಿನ 2GB ಡೇಟಾ ಪ್ಲಾನ್‌ಗಳ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೈಲಿ 2GB ಡೇಟಾ ಬಯಸೋರಿಗೆ ಯಾವ ಪ್ಲಾನ್‌ ಬೆಸ್ಟ್‌! ಇಲ್ಲಿದೆ ಮಾಹಿತಿ!

ಏರ್‌ಟೆಲ್‌ 2GB ಡೇಟಾ ಒದಗಿಸುವ ಪ್ರಿಪೇಯ್ಡ್‌ ಪ್ಲಾನ್‌ಗಳು

ಏರ್‌ಟೆಲ್‌ ಟೆಲಿಕಾಂ ಕಂಪೆನಿ ಕೂಡ ದೈನಂದಿನ ಅಧಿಕ ಡೇಟಾ ಬಯಸೋರಿಗೆ ಸೂಕ್ತವಾದ ಹಲವು ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ 2GB ಡೇಟಾ ಪ್ರಯೋಜನ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳು ಕೂಡ ಸೇರಿವೆ. ಇದರಲ್ಲಿ 319ರೂ. ಪ್ರಿಪೇಯ್ಡ್‌ ಪ್ಲಾನ್‌ ಕೂಡ ಒಂದಾಗಿದೆ. ಈ ಪ್ಲಾನ್‌ನಲ್ಲಿ ನೀವು ದೈನಂದಿನ 2GB ಡೇಟಾ ಸೌಲಭ್ಯ, ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ100 ಎಸ್‌ಎಂಎಸ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿಯನ್ನು ನೀಡಲಿದೆ.

ಏರ್‌ಟೆಲ್ 359ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್ 359ರೂ. ಪ್ರಿಪೇಯ್ಡ್‌ ಪ್ಲಾನ್‌ ಕೂಡ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ದೈನಂದಿನ 2GB ಡೇಟಾ ಸೌಲಭ್ಯ, ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ 100 ಎಸ್‌ಎಂಎಸ್‌ ಪ್ರಯೋಜನವನ್ನು ನೀಡಲಿದೆ.

ಡೈಲಿ 2GB ಡೇಟಾ ಬಯಸೋರಿಗೆ ಯಾವ ಪ್ಲಾನ್‌ ಬೆಸ್ಟ್‌! ಇಲ್ಲಿದೆ ಮಾಹಿತಿ!

ಜಿಯೋ 2GB ಡೇಟಾ ಒದಗಿಸುವ ಪ್ರಿಪೇಯ್ಡ್‌ ಪ್ಲಾನ್‌ಗಳು

ರಿಲಯನ್ಸ್ ಜಿಯೋ ಕೂಡ ದೈನಂದಿನ 2GB ಡೇಟಾ ನೀಡುವ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಲ್ಲಿ 249ರೂ. ಪ್ರಿಪೇಯ್ಡ್‌ ಪ್ಲಾನ್‌ ಅಗ್ಗದ ಬೆಲೆಯ ಪ್ಲಾನ್‌ ಎನಿಸಿಕೊಂಡಿದೆ. ಈ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ದೈನಂದಿನ 2GB ಡೇಟಾ ಜೊತೆಗೆ ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ 100 ಎಸ್‌ಎಂಎಸ್‌ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದು 23 ದಿನಗಳ ಮಾನ್ಯತೆಯನ್ನು ಹೊಂದಿದೆ.

ಜಿಯೋ 299ರೂ. ಪ್ರಿಪೇಯ್ಡ್‌ ಪ್ಲಾನ್‌
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿನಿತ್ಯ 2GB ಡೇಟಾ, ಅನಿಯಮಿತ ಕರೆ ಪ್ರಯೋಜನ ಮತ್ತು ಡೈಲಿ 100 ಎಸ್‌ಎಂಎಸ್‌ ಸೌಲಭ್ಯ ಲಭ್ಯವಾಗಲಿದೆ.

ಡೈಲಿ 2GB ಡೇಟಾ ಬಯಸೋರಿಗೆ ಯಾವ ಪ್ಲಾನ್‌ ಬೆಸ್ಟ್‌! ಇಲ್ಲಿದೆ ಮಾಹಿತಿ!

ವಿ ಟೆಲಿಕಾಂ 2GB ಡೇಟಾ ಒದಗಿಸುವ ಪ್ರಿಪೇಯ್ಡ್‌ ಪ್ಲಾನ್‌ಗಳು

ವೊಡಾಫೋನ್ ಐಡಿಯಾ ಕೂಡ ಪ್ರತಿನಿತ್ಯ 2GB ಡೇಟಾ ನೀಡುವ ವಿವಿಧ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಲ್ಲಿ 319ರೂ.ಪ್ರಿಪೇಯ್ಡ್‌ ಪ್ಲಾನ್‌ ಜನಪ್ರಿಯತೆ ಪಡೆದುಕೊಂಡಿದೆ. ಈ ಪ್ಲಾನ್‌ ಒಂದು ತಿಂಗಳ ಅವಧಿಯ ಮಾನ್ಯತೆಯನ್ನು ಹೊಂದಿದೆ. ಈ ಸಮಯದಲ್ಲಿ ಡೈಲಿ 2GB ಡೇಟಾ ಒದಗಿಸುವುದಲ್ಲದೆ, ಅನಿಯಮಿತ ಕರೆ ಹಾಗೂ ಡೈಲಿ 100 ಎಸ್‌ಎಂಎಸ್‌ ಸೇವೆಯನ್ನು ನೀಡಲಿದೆ.

ಏರ್‌ಟೆಲ್‌ vs ಜಿಯೋ vs ವಿ: ದಿನ 2GB ಡೇಟಾ ಬಯಸೋರಿಗೆ ಯಾವ ಪ್ಲಾನ್‌ ಬೆಸ್ಟ್‌?

ಕೇವಲ ಒಂದು ತಿಂಗಳ ಅವಧಿಯ ಪ್ಲಾನ್‌ ಸರ್ಚ್‌ ಮಾಡುತ್ತಿದ್ದರೆ ರಿಲಯನ್ಸ್ ಜಿಯೋದ 299ರೂ. ಪ್ಲಾನ್‌ ಸೂಕ್ತವಾಗಿದೆ. ಈ ಪ್ಲಾನ್‌ ಅಗ್ಗದ ಬೆಲೆಯಲ್ಲಿ ಲಭ್ಯವಾಗುವುದಲ್ಲದೆ, 28 ದಿನಗಳ ವ್ಯಾಲಿಡಿಟಿಯನ್ನು ಸಹ ನೀಡಲಿದೆ. ಹೆಚ್ಚಿನ ವ್ಯಾಲಿಡಿಟಿ ಬಯಸೋರಿಗೆ ಜಿಯೋದ 533ರೂ. ಪ್ಲಾನ್‌ ಬೆಸ್ಟ್‌ ಚಾಯ್ಸ್‌ ಎನಿಸಲಿದೆ.

Best Mobiles in India

English summary
Here, we will be comparing pre-paid plans from Jio, Airtel and Vi that come with 2GB of mobile data per day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+